ಈಗಿನ ಪ್ರಪಂಚ ಹೇಗಿದೆ ಅಂದ್ರೆ ಹೆಚ್ಚಿನ ಜನರು ಗೆದ್ದೆತ್ತಿನ ಬಾಲ ಹಿಡಿಯುವಂಥ ವರ್ಗಕ್ಕೆ ಸೇರಿದವರು ಎಂದರೆ ತಪ್ಪಲ್ಲ. ಯಾರಲ್ಲಿ ಜಯ ಇರುತ್ತದೆ, ಯಾರು ಟ್ಯಾಲೆಂಟೆಡ್ ಆಗಿರುತ್ತಾರೆ ಅವರ ಹಿಂದೆ ಎಲ್ಲರೂ ಹೋಗುತ್ತಾರೆ. ಆದರೆ ಹಿಂದೆ ಅದೇ ರೀತಿ ಇದ್ದು, ಕಷ್ಟದಲ್ಲಿರುವ ಜೀವಿಗಳನ್ನ, ವ್ಯಕ್ತಿಗಳನ್ನ ಜನರು ಹಾಗೂ ಸಹಾಯ ಮಾಡುತ್ತೇನೆ ಎಂದವರು ಸಹ ಮರೆತೇ ಬಿಡುತ್ತಾರೆ. ಇದೇ ವಿಪರ್ಯಾಸ, ಈ ರೀತಿ ಘಟನೆಗಳು ನಡೆದಾಗ ಮನುಷ್ಯರು ಮಾನವೀಯತೆಯನ್ನು ಮರೆತು ಬಿಟ್ಟಿದ್ದಾರೆ ಎಂದು ಅನ್ನಿಸದೇ ಇರದು. ಇದೀಗ ಇಂಥದ್ದೇ ಒಂದು ಘಟನೆ ನಡೆದಿದ್ದು, ಕಳೆದ ವರ್ಷ ಬಿಗ್ ಬಾಸ್ ಶೋ ರನ್ನರ್ ಅಪ್ ಆಗಿದ್ದ ಡ್ರೋನ್ ಪ್ರತಾಪ್ ಕಷ್ಟದಲ್ಲಿರುವ ಆ ಕುಟುಂಬಕ್ಕೆ ಸಹಾಯ ಮಾಡಿ, ಮಾನವೀಯತೆ ತೋರಿಸುವ ಮೂಲಕ ಜನರಿಗೆ ಮಾದರಿ ಆಗಿದ್ದಾರೆ. ಪ್ರತಾಪ್ ಬಗ್ಗೆ ತಪ್ಪಾಗಿ ಮಾತಾನಡುತ್ತಿದ್ದವರು ಈಗಲಾದರೂ ಈ ಹುಡುಗನ ಬಗ್ಗೆ ಅರ್ಥ ಮಾಡಿಕೊಳ್ಳಬೇಕು.

ಕೆಲ ಸಮಯದ ಹಿಂದೆ ಜೀಕನ್ನಡ ವಾಹಿನಿಯ ಸರಿಗಮಪ ಶೋ ಮೂಲಕ ಬೆಳಕಿಗೆ ಬಂದ ಅಂಧಗಾಯಕಿ ಮಂಜಮ್ಮ. ಇವರಿಗೆ ದೃಷ್ಟಿ ಇಲ್ಲದೇ ಹೋದರು ಸಹ, ಇವರ ಪ್ರತಿಭೆ ಹಾಡುವ ಶೈಲಿ ಅದ್ಭುತ. ಜಡ್ಜ್ ಗಳಿಂದ, ಜನರಿಂದ ಮೆಚ್ಚುಗೆ ಪಡೆದಿದ್ದ ಮಂಜಮ್ಮ ಅವರಿಗೆ ಸರಿಗಮಪ ಶೋ ಇಂದ ಜನರ ಪ್ರೀತಿ ಸಿಕ್ಕಿತು. ಅಕ್ಕ ತಂಗಿಯರಿಬ್ಬರು ಇದ್ದ ಇವರ ಕುಟುಂಬಕ್ಕೆ ಶೋ ನಡೆಯುವ ವೇಳೆ ಎಲ್ಲರಿಂದ ಸಹಾಯ ಸಿಕ್ಕಿತ್ತು. ನಟ ಜಗ್ಗೇಶ್ ಅವರು ಇವರಿಬ್ಬರು ಸೇಫ್ ಆಗಿ ಬದುಕಲು ಮನೆ ಕಟ್ಟಿಸಿಕೊಡುವುದಾಗಿ ಮಾತು ಕೊಟ್ಟು, ಆ ಮಾತನ್ನು ಉಳಿಸಿಕೊಂಡರು. ಇವರಿಬ್ಬರಿಗೆ ಮನೆ ಕಟ್ಟಿಸಿಕೊಟ್ಟರು. ಬಡತನದಲ್ಲಿ ಕಷ್ಟದಲ್ಲಿದ್ದ ಇವರಿಗೆ ಆ ಮನೆಯಿಂದ ಬಹಳ ಸಹಾಯ ಆಗಿದ್ದಂತೂ ನಿಜ. ಆದರೆ ಇವರ ಬದುಕು ಹೆಚ್ಚು ದಿವಸಗಳ ಕಾಲ ಉಳಿಯಲಿಲ್ಲ .
ಸರಿಗಮಪ ಶೋ ಮುಗಿದ ನಂತರ ಮಂಜಮ್ಮ ಅವರು ಅಥವಾ ಅವರ ಸಹೋದರಿ ಇಬ್ಬರು ಸಹ ಎಲ್ಲಿಯೂ ಹೊರಗಡೆ ಕಾಣಿಸಿಕೊಳ್ಳಲಿಲ್ಲ. ಯಾವುದೇ ಮಾಧ್ಯಮಗಳಲ್ಲಿ ಸಹ ಇವರು ಕಾಣಿಸಿಕೊಂಡಿದ್ದು ಕಡಿಮೆ. ಜನರು ಸಹ ಇವರನ್ನು ಮರೆತುಬಿಟ್ಟರು. ಸುದ್ದಿಯಲ್ಲಿ ಇರುವಾಗ ಮಾತ್ರ ಅಲ್ಲವೇ ಎಲ್ಲರಿಗೂ ಆ ವ್ಯಕ್ತಿಗಳ ನೆನಪಾಗುವುದು. ನಂತರ ಮರೆತು ಹೋಗುತ್ತದೆ. ಮಂಜಮ್ಮ ಅವರ ವಿಷಯದಲ್ಲಿ ಆಗಿದ್ದು ಸಹ ಅದೇ ರೀತಿ. ಮಂಜಮ್ಮ ಅವರು ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಆಸ್ಪತ್ರೆಗೆ ಸೇರಿಸಿ ಅವರಿಗೆ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಯಾವ ಚಿಕಿತ್ಸೆ ಕೂಡ ಫಲ ನೀಡದೆ, ಮಂಜಮ್ಮ ಅವರು ಇತ್ತೀಚೆಗೆ ಬೆಂಗಳೂರಿನ ವಿಕ್ಟೊರಿಯಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಈ ವಿಚಾರ ಮಾಧ್ಯಮಗಳಲ್ಲಿ ವೈರಲ್ ಆಯಿತು. ಆದರೆ ಇವರನ್ನು ಭೇಟಿ ಮಾಡಿ, ಸಹಾಯ ಮಾಡಿದವರಂತೂ ಕಡಿಮೆ.

ಹೌದು, ಈಗ ಮಂಜಮ್ಮ ಇಲ್ಲವಾಗಿರುವ ಕಾರಣ ಅವರ ಸಹೋದರಿಯ ಜೀವನ ಇನ್ನು ಕಷ್ಟದ ಪರಿಸ್ಥಿತಿ ತಲುಪಿದೆ. ಇವರನ್ನು ನೋಡಿಕೊಳ್ಳೋರು ಯಾರು? ಇವರಿಗೆ ಸಹಾಯ ಮಾಡೋದು ಯಾರು ಎನ್ನುವ ಪ್ರಶ್ನೆ ಶುರುವಾಗಿದೆ. ಇವರು ಸಹ ಅಂಧೇ ಆಗಿರುವ ಕಾರಣ ಇವರನ್ನು ಹೆಚ್ಚು ಕಾಳಜಿ ಇಂದ ನೋಡಿಕೊಳ್ಳಬೇಕು. ಇವರಿಗೆ ಸಹಾಯದ ಅವಶ್ಯಕತೆ ತುಂಬಾ ಇದೆ. ಬೇರೆ ಯಾರು ಇವರನ್ನು ಭೇಟಿ ಮಾಡಿ, ಸಹಾಯ ಮಾಡಿದ್ದನ್ನು ಕಂಡಿಲ್ಲ, ಆದರೆ ಇದೀಗ ಡ್ರೋನ್ ಪ್ರತಾಪ್ ಅವರು ಮಾತ್ರ ಮಂಜಮ್ಮ ಅವರ ಕುಟುಂಬವನ್ನು ಭೇಟಿ ಮಾಡಿ, ಅವರ ಜೊತೆಗೆ ಸ್ವಲ್ಪ ಸಮಯ ಕಳೆದು ತಮ್ಮಿಂದ ಆದ ಸಹಾಯ ಮಾಡಿದ್ದಾರೆ. ಈ ವಿಡಿಯೋ ಒಂದನ್ನು ಪ್ರತಾಪ್ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ಇದರಿಂದ ಪ್ರತಾಪ್ ಅವರಿಗೆ ಜನರಿಂದ ಮೆಚ್ಚುಗೆಯ ಸುರಿಮಳೆ ಸಿಗುತ್ತಿದೆ.
ಮಂಜಮ್ಮ ಅವರ ಮನೆಗೆ ಹೋಗಿರುವ ಪ್ರತಾಪ್ ಅವರು ಮಂಜಮ್ಮ ಅವರ ಫೋಟೋಗೆ ಹೂವಿನ ಹಾರ ಹಾಕಿ, ಗೌರವ ಸಲ್ಲಿಸಿದ್ದಾರೆ. ಬಳಿಕ ಮಂಜಮ್ಮ ಅವರ ಸಹೋದರಿ ಜೊತೆಗೆ ಸ್ವಲ್ಪ ಸಮಯ ಮಾತನಾಡಿದ್ದು ಆಗ ಕೆಲವು ವಿಷಯಗಳು ಬೆಳಕಿಗೆ ಬಂದಿದೆ. ಅದೇನು ಎಂದರೆ ಮಂಜಮ್ಮ ಅವರ ಸಹೋದರಿ ಅವರು ಈಗ 5 ತಿಂಗಳ ಗರ್ಭಿಣಿ, ಆದರೆ ಅವರಿಗೆ ಗೆಡ್ಡೆ ಇದೆ ಎಂದು ಸಹ ವೈದ್ಯರು ತಿಳಿಸಿದ್ದು, ಮುಂದಿನ ತಿಂಗಳು ಆಪರೇಷನ್ ಮಾಡಿಸಬೇಕು ಎಂದು ಡಾಕ್ಟರ್ ಹೇಳಿದ್ದಾರಂತೆ. ಅವರ ಯೋಗಕ್ಷೇಮ ವಿಚಾರಿಸಿ, ಎಲ್ಲಾ ವಿಷಯವನ್ನು ತಿಳಿದುಕೊಂಡ ಪ್ರತಾಪ್ ಅವರು ಅವರ ಕುಟುಂಬಕ್ಕೆ ಹಣ ಸಹಾಯ ಮಾಡಿದ್ದಾರೆ. ನೀವು ಮತ್ತ ನಿಮ್ಮ ಮಗು ಚೆನ್ನಾಗಿರಬೇಕು ಎಂದಿದ್ದಾರೆ ಪ್ರತಾಪ್. ಇನ್ನು ಮಂಜಮ್ಮ ಅವರ ಕುಟುಂಬ ನೀವು ನಮ್ಮ ಪಾಲಿನ ದೇವರು ಎಂದಿದ್ದಾರೆ..
ಮಂಜಮ್ಮ ಅವರ ಸಹೋದರಿಯ ಗಂಡ, ಪ್ರತಾಪ್ ಅವರ ಕೈಮುಗಿದು ಧನ್ಯವಾದ ತಿಳಿಸಿದ್ದಾರೆ. ಅದಕ್ಕೆ ಪ್ರತಾಪ್ ಹಾಗೆಲ್ಲಾ ಏನು ಇಲ್ಲ, ನೀವೆಲ್ಲರೂ ಚೆನ್ನಾಗಿದ್ದರೆ ಸಾಕು ಎಂದಿದ್ದಾರೆ. ಇದರಿಂದ ಮಂಜಮ್ಮ ಅವರಿಗೆ ಸಂತೋಷ ಆಗಿರಬಹುದು ಎಂದು ಕ್ಯಾಪ್ಶನ್ ಬರೆದುಕೊಂಡಿದ್ದಾರೆ ಪ್ರತಾಪ್. ಡ್ರೋನ್ ಪ್ರತಾಪ್ ಅವರ ಬಗ್ಗೆ ಜನರಿಗೆ ಇದ್ದ ಅಭಿಪ್ರಾಯವೇ ಬೇರೆ. ಆದರೆ ಈಗ ಜನರ ಕಷ್ಟಕ್ಕೆ ಮಿಡಿಯುತ್ತಿರುವ ಪ್ರತಾಪ್ ಎಲ್ಲರಿಗೂ ಇಷ್ಟವಾಗಿದ್ದಾರೆ. ಬಿಗ್ ಬಾಸ್ ವಿನ್ನರ್ ಕಾರ್ತಿಕ್ ಎಲ್ಲಿಗೆ ಹೋದ ಎಂದು ಪ್ರಶ್ನೆ ಮಾಡುತ್ತಿದ್ದಾರೆ ಜನರು. ಪ್ರತಾಪ್ ಅವರು ಮಾಡಿದ ಈ ಕೆಲಸಕ್ಕೆ ಮಂಜಮ್ಮ ಅವರ ಕುಟುಂಬದ ಬ್ಯಾಂಕ್ ಅಕೌಂಟ್ ಡೀಟೇಲ್ಸ್ ಕೊಡಿ, ನಮ್ಮಿಂದ ಆದಷ್ಟು ಸಹಾಯವನ್ನು ನಾವು ಮಾಡುತ್ತೇವೆ ಎಂದು ಜನರು ಸಹ ಮುಂದೆ ಬಂದಿದ್ದಾರೆ..

ಕಷ್ಟದಲ್ಲಿರುವ ಒಬ್ಬ ವ್ಯಕ್ತಿ ಗೆಲ್ಲುತ್ತಾನೆ ಅಂದರೆ ಆತನಿಗೆ ಸಪೋರ್ಟ್ ಮಾಡೋಕೆ ಮುಂದೆ ಬರುವ ಜನರು, ಕೆಲ ಸಮಯದ ನಂತರ ಆತ ಎಲ್ಲಿಯೂ ಕಾಣಿಸಿಕೊಂಡಿಲ್ಲ ಎಂದಾಗ ಮರೆತೇ ಬಿಡುತ್ತಾರೆ. ಇನ್ನು ಸಹಾಯಹಸ್ತ ನೀಡುತ್ತೇನೆ ಎನ್ನುವ ದೊಡ್ಡ ವ್ಯಕ್ತಿಗಳು ಸಹ ಅವರನ್ನು ಮರೆತುಬಿಡುತ್ತಾರೆ. ಕಷ್ಟದಲ್ಲಿ ಇರುವವರು ಕಷ್ಟದಲ್ಲಿಯೇ ಇದ್ದು, ಕಷ್ಟಪಡುತ್ತಲೇ ಪ್ರಾ*ಣ ಬಿಡುವ ಹಂತವನ್ನು ತಲುಪುತ್ತಾರೆ. ಆದರೆ ಯಾರಿಗೂ ಅವರ ಬಗ್ಗೆ ಗೊತ್ತೇ ಇರುವುದಿಲ್ಲ. ಇಂಥ ಕಹಿ ಘಟನೆಗಳು ನಡೆದುಹೋದ ಮೇಲೆ ಆದರೂ ಅವರಿಗೆ ನಮ್ಮಿಂದ ಆದಷ್ಟು ಸಹಾಯ ಮಾಡೋಣ. ಪ್ರತಾಪ್ ಅವರ ಕಾರ್ಯಕ್ಕೆ ಮೆಚ್ಚುಗೆ ಸೂಚಿಸೋಣ. ಮುಂದಿನ ದಿನಗಳಲ್ಲಿ ಪ್ರತಾಪ್ ಅವರಿಂದ ಇನ್ನಷ್ಟು ಜನರಿಗೆ ಸಹಾಯ ಆಗಲಿ.