ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಅವರು ಮದುವೆ ವಿಚಾರಕ್ಕೆ ಭಾರಿ ಸುದ್ದಿಯಾಗುತ್ತಾರೆ. ಅನುಶ್ರೀ ಅವರು 30 ದಾಟಿದ್ದರೂ ಇನ್ನು ಮದುವೆಯಾಗಿಲ್ಲ ಎನ್ನುವ ಬಗ್ಗೆ ಕಾರ್ಯಕ್ರಮಗಳಲ್ಲಿ ಕೂಡ ತಮಾಷೆ ಮಾಡೋದನ್ನ ನೋಡಿದ್ದೇವೆ. ಎಲ್ಲಾ ಯೂಟ್ಯೂಬ್ ಚಾನೆಲ್ ಗಳಲ್ಲಿ ಅನುಶ್ರೀ ಮದುವೆ ಸುದ್ದಿ ಹೈಲೈಟ್ ಆಗುತ್ತಲೇ ಇರುತ್ತದೆ. ಈ ಬಗ್ಗೆ ಅನುಶ್ರೀ ಸಹ ಮಾತನಾಡಿ ಹಲವು ಸಾರಿ ಜೋಕ್ ಮಾಡಿ ನಕ್ಕಿದ್ದಾರೆ. ಆದರೆ ಈಗ ಅನುಶ್ರೀ ಮದುವೆ ಸುದ್ದಿ ಸೀರಿಯಸ್ ಆಗಿದೆ. ಅನುಶ್ರೀ ಅವರ ಮದುವೆ ಮುಂದಿನ ವರ್ಷ ನಡೆಯಲಿದ್ದು, ಇನ್ನು 3 ತಿಂಗಳು ಮಾತ್ರ ಬಾಕಿ ಇದೆ ಎಂದು ಹೇಳಲಾಗುತ್ತಿದೆ.

ಹೌದು, ಅನುಶ್ರೀ ಅವರ ಮದುವೆ ಬಗ್ಗೆ ಈಗ ಹೊಸ ಸುದ್ದಿ ಸಿಕ್ಕಿದೆ. ಅನುಶ್ರೀ ಅವರು ಇನ್ನು ಮೂರು ತಿಂಗಳುಗಳಲ್ಲಿ ಮದುವೆ ಆಗುತ್ತಾರೆ ಎನ್ನಲಾಗುತ್ತಿದೆ. ಈ ವಿಷಯ ರಿವೀಲ್ ಆಗಿರುವುದು ಅನುಶ್ರೀ ಅವರ ಯೂಟ್ಯೂಬ್ ಚಾನೆಲ್ ನಲ್ಲಿ. ಹೌದು, ಅನುಶ್ರೀ ಅವರ ಯೂಟ್ಯೂಬ್ ಚಾನೆಲ್ ಸಿಕ್ಕಾಪಟ್ಟೆ ಫೇಮಸ್. ಹಲವು ಸಿನಿಮಾಗಳ ಪ್ರೊಮೋಷನ್, ಸೆಲೆಬ್ರಿಟಿಗಳ ಸಂದರ್ಶನ ಎಲ್ಲವೂ ಇವರ ಯೂಟ್ಯೂಬ್ ಚಾನೆಲ್ ನಲ್ಲಿ ನಡೆಯುತ್ತದೆ. ಅದೇ ರೀತಿ ಕಾಮಿಡಿ ಕಿಲಾಡಿಗಳು ಟೀಮ್ ಸಂದರ್ಶನ ಸಹ ಮಾಡಿದ್ದರು ಅನುಶ್ರೀ. ನಯನ, ಜಗ್ಗ, ಗಿಲ್ಲಿನಟ ಇವರೆಲ್ಲರು ಈ ಸಂದರ್ಶನದಲ್ಲಿ ಪಾಲ್ಗೊಂಡಿದ್ದರು.
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ಸಂದರ್ಶನದ ನಡುವೆ ಅನುಶ್ರೀ ಮದುವೆ ವಿಷಯ ಸಹ ಚರ್ಚೆಗೆ ಬಂದಿದೆ. ಅನು ಅಕ್ಕ ನೀವು ಈಗಾಗಲೇ ಫಿಕ್ಸ್ ಆಗಿದ್ದೀರಾ ಎಂದು ಕೇಳಿದ್ದಕ್ಕೆ ಉತ್ತರ ಕೊಟ್ಟ ಅನುಶ್ರೀ, ಹೌದು ನಾನು ಫಿಕ್ಸ್ ಆಗಿದ್ದೀನಿ ಎಂದಿದ್ದಾರೆ. ಆಗ ಗಿಲ್ಲಿ ಹಾಗಿದ್ರೆ ಫ್ರಬ್ರವರಿಯಲ್ಲಿ ಮದುವೇನಾ ಎಂದು ಕೇಳಿದ್ದಾರೆ. ಅದಕ್ಕೆ ಉತ್ತರ ಕೊಟ್ಟ ಅನುಶ್ರೀ, ನಾನು ಅಪ್ಪು ಫ್ಯಾನ್ ಮಾರ್ಚ್ ನಲ್ಲಿ ಮದುವೆ ಆಗ್ತೀನಿ ಎಂದು ಹೇಳಿದ್ದಾರೆ. ಈ ಮಾತು ಕೇಳಿ ಎಲ್ಲರೂ ಖುಷಿಯಾದರು. ಅನುಶ್ರೀ ಅವರ ಮಾತಿನ ಅನುಸಾರ ಮದುವೆಗೆ ಉಳಿದಿರುವುದು ಇನ್ನು 3 ತಿಂಗಳು ಮಾತ್ರ, ಅಪ್ಪು ಅವರ ಹುಟ್ಟುಹಬ್ಬದ ದಿನವೇ ಅನುಶ್ರೀ ಮದುವೆ ನಡೆಯಬಹುದು ಎಂದು ಹೇಳಲಾಗುತ್ತಿದೆ.

ಆದರೆ ಅನುಶ್ರೀ ಅವರು ಮದುವೆ ಆಗುವ ಹುಡುಗ ಯಾರು ಅನ್ನೋ ವಿಷಯ ಮಾತ್ರ ರಿವೀಲ್ ಆಗಿಲ್ಲ. ಅನುಶ್ರೀ ಅವರು ಹೊಸ ವರ್ಷಕ್ಕೆ ತಮ್ಮ ಭಾವಿ ಪತಿಯನ್ನು ತೋರಿಸಬಹುದು ಎಂದು ಸಹ ಹೇಳಲಾಗುತ್ತಿದೆ. ಅದರ ಈ ವಿಷಯಗಳನ್ನು ಖುದ್ದು ಅನುಶ್ರೀ ಅವರೇ ತಳ್ಳಿ ಹಾಕಿದ್ದಾರೆ. ಒಟ್ಟಿನಲ್ಲಿ ಅನುಶ್ರೀ ಮದುವೆ ಯಾವಾಗ ಅನ್ನೋ ಪ್ರಶ್ನೆ ಇನ್ನು ಪ್ರಶ್ನೆಯಾಗಿಯೇ ಉಳಿದು ಹೋಗಿದೆ. ಎಲ್ಲರಿಗೂ ಇರೋ ಪ್ರಶ್ನೆ ಅನುಶ್ರೀ ಮದುವೆ ಯಾವಾಗ ಎಂದು? ಆ ದಿನ ಯಾವಾಗ ಬರುತ್ತದೋ ಎಂದು ಕಾದು ನೋಡಬೇಕು. ಇನ್ನು ಅನುಶ್ರೀ ಅವರ ಬಗ್ಗೆ ಹೇಳೋದಾದರೆ, ಇವರು ಮೂಲತಃ ಮಂಗಳೂರಿನವರು.
ಲೋಕಲ್ ಟಿವಿ ಚಾನೆಲ್ ನಲ್ಲಿ ನಿರೂಪಣೆ ಶುರು ಮಾಡಿದ ಅನುಶ್ರೀ, ಬೆಂಗಳೂರಿಗೆ ಬಂದು, ಸಿಗುತ್ತಿದ್ದ ಸಣ್ಣ ಪುಟ್ಟ ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡು, ಇಂದು ರಾಜ್ಯದ ನಂಬರ್ 1 ಆಂಕರ್ ಎಂದು ಹೆಸರು ಮಾಡಿದ್ದಾರೆ. ಜೀಕನ್ನಡ ವಾಹಿನಿಯ ಒಂದಷ್ಟು ಕಾರ್ಯಕ್ರಮಗಳನ್ನು ನಿರೂಪಣೆ ಮಾಡುತ್ತಾರೆ. ಅಷ್ಟೇ ಅಲ್ಲದೇ, ಸಿನಿಮಾಗಳಿಗೆ ಸಂಬಂಧಿಸಿದ ಹಲವು ಈವೆಂಟ್ ಗಳಿಗೆ ಅನುಶ್ರೀ ಅವರೇ ಬೇಕು ಎಂದು ಅವರಿಂದಲೇ ನಿರೂಪಣೆ ಮಾಡಿಸುತ್ತಾರೆ. ಇವರು ತಮಾಷೆ ಇಂದ ಮಾತನಾಡುವ ಶೈಲಿ ಎಲ್ಲರಿಗೂ ತುಂಬಾ ಇಷ್ಟವಾಗುತ್ತದೆ. ಇದು ಅನುಶ್ರೀ ಅವರ ಪ್ಲಸ್ ಪಾಯಿಂಟ್ ಆಗಿದೆ.