ಬಿಗ್ ಬಾಸ್ ಮನೆ ಎಂದಮೇಲೆ ಅಲ್ಲಿ ಜಗಳ, ಕೋಪ, ಮುನಿಸು, ಕೂಗಾಟ, ಹಾರಾಟ ಎಲ್ಲವು ಇದ್ದೇ ಇರುತ್ತದೆ. ಈ ಎಲ್ಲಾ ಭಾವನೆಗಳು ಇದ್ದರೇನೇ ಅದು ಬಿಗ್ ಬಾಸ್ ಮನೆ ಆಗೋದು. ಪ್ರತಿ ಸೀಸನ್ ನಲ್ಲೂ ಇದೆಲ್ಲಾ ಇರುವುದು ಸಹಜ. ಅದೇ ರೀತಿ ಈ ಸೀಸನ್ ನಲ್ಲಿ ಕೂಡ ಜಗಳ, ಕೋಪ ಎಲ್ಲವೂ ಇದೆ. ಪ್ರತಿ ಸೀಸನ್ ನಲ್ಲೂ ಮಹಿಳೆಯರ ವಿರುದ್ಧ ಧ್ವನಿ ಎತ್ತುವ ವಿಚಾರ ನಡೆಯುತ್ತಲೇ ಇರುತ್ತದೆ. ಅದೇ ರೀತಿ ಈಗ ಟಾಸ್ಕ್ ನಡುವೆ ಗೌತಮಿ ಜಾಧವ್ ಅವರು ಗೋಲ್ಡ್ ಸುರೇಶ್ ಅವರ ವಿರುದ್ಧ ಸಿಡಿದೆದ್ದಿದ್ದಾರೆ. ಗಂಡು ಮಕ್ಕಳಿಗೆ ಮಾತ್ರ ಅಲ್ಲ, ಹೆಣ್ಣುಮಕ್ಕಳಿಗೂ ಪ್ರೈವೇಟ್ ಪಾರ್ಟ್ ಇರುತ್ತದೆ ಎಂದು ಹೇಳಿದ್ದಾರೆ.

ಹೌದು, ಬಿಗ್ ಬಾಸ್ ಮನೆಯಲ್ಲಿ ಈ ವಾರ ಕೊಟ್ಟಿರುವುದು ಜೋಡಿ ಟಾಸ್ಕ್, ಈ ಜೋಡಿಗಳನ್ನ ಮಾಡಿರುವುದು ಕೂಡ ಬಿಗ್ ಬಾಸ್. ಸ್ಪರ್ಧಿಗಳಿಗೆ ಇಷ್ಟವಿರಲಿ, ಇಲ್ಲದಿರಲಿ ತಮ್ಮ ಜೋಡಿಯ ಜೊತೆಗೆ ಇರಬೇಕು. ಅವರಿಬ್ಬರನ್ನು ಒಟ್ಟಿಗೆ ಇರುವ ಹಾಗೆ ಮಾಡಲಾಗಿದೆ. ಟಾಸ್ಕ್ ಗಳನ್ನು ಸಹ ಇಬ್ಬರೂ ಜೊತೆಯಾಗಿ ಮಾಡಬೇಕು. ಈ ವಾರ ಈ ಜೋಡಿಯ ಟಾಸ್ಕ್ ಬಹಳ ಇಂಟರೆಸ್ಟಿಂಗ್ ಆಗಿದೆ ಎಂದರೆ ತಪ್ಪಲ್ಲ. ಈ ವೇಳೆ ಬಿಗ್ ಬಾಸ್ ಜೋಡಿಗಳಿಗೆ ಒಂದು ಟಾಸ್ಕ್ ನೀಡಿದರು. ಮೂರು ಜೋಡಿಗಳು ಸ್ಟ್ಯಾಚ್ಯು ಗಳ ಹಾಗೆ ನಿಲ್ಲಬೇಕು. ಯಾವುದೇ ಭಂಗಿಯಲ್ಲಾದರು ಸರಿ ನಿಲ್ಲಬಹುದು.
ಇನ್ನುಳಿದವರು ಆ ಜೋಡಿಗಳನ್ನು ಮುಟ್ಟದೆಯೇ ಅವರು ಮೇಲೆದ್ದು, ಫೌಲ್ ಆಗುವ ಹಾಗೆ ಮಾಡಬೇಕು. ಇದರಲ್ಲಿ ಅತೀ ಕಡಿಮೆ ಫೌಲ್ ನೋಡುವ ಜೋಡಿ, 100 ಪಾಯಿಂಟ್ಸ್ ಪಡೆದು, ಮೊದಲ ಸ್ಥಾನದಲ್ಲಿ ಗೆಲ್ಲುತ್ತದೆ. ಎರಡನೇ ಅತಿಹೆಚ್ಚು ಫೌಲ್ ಮಾಡಿದವರಿಗೆ 50 ಪಾಯಿಂಟ್ಸ್ ಜೊತೆಗೆ 2ನೇ ಸ್ಥಾನ, ಅತಿಹೆಚ್ಚು ಫೌಲ್ ಮಾಡಿದವರಿಗೆ 0 ಪಾಯಿಂಟ್ಸ್ ಎಂದು ರೂಲ್ಸ್ ನೀಡಲಾಯಿತು. ಈ ಟಾಸ್ಕ್ ನಲ್ಲಿ ಸ್ವಲ್ಪವೂ ಜಗ್ಗದೇ, 100 ಪಾಯಿಂಟ್ಸ್ ಪಡೆದು ಗೆದ್ದಿದ್ದು ಧರ್ಮ ಕೀರ್ತಿ ರಾಜ್ ಹಾಗೂ ಐಶ್ವರ್ಯ ಸಿಂಧೋಗಿ ಜೋಡಿ. ಇನ್ನು ಭವ್ಯ ಮತ್ತು ಮಂಜಣ್ಣ ಮತ್ತೊಂದು ಜೋಡಿ ಆಗಿದ್ದರು.

ಇವರಿಬ್ಬರು ಸ್ಟ್ಯಾಚು ಆಗಿ ನಿಂತಿದ್ದಾಗ, ಇವರನ್ನು ಫೌಲ್ ಮಾಡಿಸುವ ಕೆಲಸವನ್ನು ಗೋಲ್ಡ್ ಸುರೇಶ್ ಜೋಡಿಗೆ ನೀಡಲಾಯಿತು. ಫೌಲ್ ಆಗಬಾರದು ಎಂದು ಭವ್ಯ ತುಂಬಾ ಪ್ರಯತ್ನ ಪಡುತ್ತಿದ್ದರು, ಭವ್ಯ ಅವರಿಗೆ ಹೇಗಾದರು ಮಾಡಿ ಫೌಲ್ ಮಾಡಲೇಬೇಕು ಎನ್ನುವ ಕಾರಣಕ್ಕೆ ಗೋಲ್ಡ್ ಸುರೇಶ್ ಅವರು ಭವ್ಯ ಅವರಿಗೆ ಜೋರಾಗಿ ನೀರನ್ನು ಎರಚುವುದಕ್ಕೆ ಶುರು ಮಾಡಿದರು, ನೋವಾದರು ಕೂಡ, ಭವ್ಯ ಅವರು ಫೌಲ್ ಮಾಡದೆಯೇ, ಕಣ್ಣೀರು ಹಾಕುತ್ತಿದ್ದರು. ಇದನ್ನು ನೋಡಿದ ಗೌತಮಿ ಅವರಿಗೆ ಸಿಕ್ಕಾಪಟ್ಟೆ ಸಿಟ್ಟು ಬಂದಿತು. ಕೂಡಲೇ ಜೋರಾಗಿ ಮಾತನಾಡೋದಕ್ಕೆ ಶುರು ಮಾಡಿ, ಗೋಲ್ಡ್ ಸುರೇಶ್ ಅವರನ್ನು ತರಾಟೆಗೆ ತೆಗೆದುಕೊಂಡರು ನಟಿ ಗೌತಮಿ.
ಗಂಡು ಮಕ್ಕಳಿಗೆ ಮಾತ್ರ ಅಲ್ಲ ಹೆಣ್ಣುಮಕ್ಕಳಿಗೂ ಪ್ರೈವೇಟ್ ಪಾರ್ಟ್ಸ್ ಇರುತ್ತದೆ ಗೋಲ್ಡ್ ಸುರೇಶ್ ಅವರೇ, ನೀರು ಹಾಕೋವಾಗ ನೋಡಿಕೊಂಡು ಹಾಕಿ ಎಂದು ಗುಡುಗಿದರು ಗೌತಮಿ. ಇದರಿಂದ ಗೋಲ್ಡ್ ಸುರೇಶ್ ಅವರಿಗೆ ಮೊದಲು ಅವಮಾನ ಆದಂತೆ ಅನ್ನಿಸಿ, ವಾದ ಮಾಡುವುದಕ್ಕೆ ಶುರು ಮಾಡಿದರು. ಆದರೆ ನಂತರ ಅವರು ಮಾಡಿದ್ದು ಎಂದು ಅನ್ನಿಸಿ ಸುಮ್ಮನಾದರು.. ಗೌತಮಿ ಅವರು ಈ ಹಿಂದೆ ಕೂಡ ಹೆಣ್ಣುಮಕ್ಕಳ ಪರವಾಗಿ ನಿಂತಿದ್ದಾರೆ, ಮಾತನಾಡಿದ್ದಾರೆ. ಈಗಲು ಸಹ ಅದೇ ರೀತಿ ಭವ್ಯಾ ಅವರಿಗೆ ನೋವಾಗುವುದನ್ನು ಸಹಿಸದೆ, ಗೋಲ್ಡ್ ಸುರೇಶ್ ಅವರನ್ನು ತರಾಟೆಗೆ ತೆಗೆದುಕೊಂಡರು..