ಕನ್ನಡ ಚಿತ್ರರಂಗದ ಪ್ರಮುಖ ಸಿನಿಮಾ ಕುಟುಂಬಗಳಲ್ಲಿ ಸರ್ಜಾ ಫ್ಯಾಮಿಲಿ ಕೂಡ ಒಂದು. ದಶಕಗಳಿಂದಲೂ ಈ ಕುಟುಂಬದ ಕಲಾವಿದರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ವರ್ಷಗಳ ಹಿಂದೆ ಚಿರಂಜೀವಿ ಸರ್ಜಾ ಅಕಾಲಿಕವಾಗಿ ಮರಣ ಹೊಂದಿದ ನಂತರ ಕುಟುಂಬದಲ್ಲಿ ಒಂದಿಷ್ಟು ಕಲಹಗಳಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಚಿರಂಜೀವಿ ಪತ್ನಿ ಮೇಘನಾರಾಜ್ ಹಾಗೂ ಧ್ರುವ ಸರ್ಜಾ ಸಂಬಂಧದ ಬಗ್ಗೆಯೂ ಸಾಕಷ್ಟು ಪೋಸ್ಟ್ ಗಳು ಹರಿದಾಡುತ್ತಿತ್ತು. ಇದೀಗ ಎಲ್ಲ ಪ್ರಶ್ನೆಗಳಿಗೂ ಮೇಘನಾರಾಜ್ ಉತ್ತರ ನೀಡಿದ್ದಾರೆ.

ಯೂಟ್ಯೂಬ್ ಚಾನೆಲ್ ವೊಂದಕ್ಕೆ ಸಂದರ್ಶನ ನೀಡಿದ ಮೇಘನಾರಾಜ್ ಅವರು, ‘ಧ್ರುವ ಮತ್ತು ನನ್ನ ನಡುವಿನ ಸಂಬಂಧ ಯಾರಿಗೂ ಅರ್ಥವಾಗಲ್ಲ. ಚಿರು, ಧ್ರುವ ಮತ್ತು ನನಗೆ ಮಾತ್ರ ಅದು ತಿಳಿದಿದೆ. ಧ್ರುವ ಅದನ್ನು ಎಲ್ಲಿಯೂ ಹೇಳಿಕೊಳ್ಳುವುದಿಲ್ಲ ಅದರ ಅವಶ್ಯಕತೆಯೂ ಇಲ್ಲ. ತತ್ಸಮ-ತತ್ಭವ ಸಿನಿಮಾದ ಟೀಸರ್ ನೋಡಿ ಧ್ರುವ ಎಕ್ಸೈಟ್ ಆಗಿದ್ದಾನೆ. ಸಿನಿಮಾದ ಬಗ್ಗೆ ನಾವು ಸಾಕಷ್ಟು ವಿಚಾರ ಚರ್ಚೆ ನಡೆಸಿದ್ದೇನೆ.
ನನ್ನ ಮತ್ತು ಧ್ರುವ ಸಂಬಂಧದ
ಬಗ್ಗೆ ಯಾರಿಗೂ ಅರ್ಥ ಮಾಡಿಸುವ ಅವಶ್ಯಕತೆ ಇಲ್ಲ. ನಾವು ಪಬ್ಲಿಕ್ ಫಿಗರ್ ಗಳು ಅಂದ ಮೇಲೆ ಜನರಿಗೆ ನಮ್ಮ ಬಗ್ಗೆ ಕುತೂಹಲ ಇದ್ದೇ ಇರುತ್ತದೆ. ಆದರೆ ನಮ್ಮ ಪರ್ಸನಲ್ ವಿಚಾರಗಳನ್ನು ಟಾರ್ಗೆಟ್ ಮಾಡಿ ಅವುಗಳನ್ನು ಕೆದಕುವುದು ತಪ್ಪು. ಯಾವುದು ಪಬ್ಲಿಕ್ ಆಗಿರಬೇಕು, ಯಾವುದು ಪರ್ಸನಲ್ ಆಗಿರಬೇಕು ಎಂಬುದು ನನಗೆ ಗೊತ್ತಿದೆ’ ಎಂದು ಅವರು ತಿಳಿಸಿದ್ದಾರೆ.
ಇನ್ನೂ ತಮ್ಮ ಫ್ಯಾಮಿಲಿ ಬಗ್ಗೆ ಮಾತನಾಡಿದ ಮೇಘನಾ, ‘ಹಬ್ಬ ಹಾಗೂ ವಿಶೇಷ ದಿನಗಳಲ್ಲಿ ನಾನು ಅತ್ತೆ ಮಾವನ ಮನೆಗೆ ಹೋಗಿ ಬರುತ್ತೇನೆ. ಬೇಕೆಂದಾಗ ಕರೆ ಮಾಡಿ ಮಾತನಾಡುತ್ತೇನೆ. ಸಮಾಜ ಏನೆಂದುಕೊಳ್ಳುತ್ತದೆ ಎಂದು ನಾನು ಯೋಚಿಸುವುದಿಲ್ಲ. ಅಂತಹ ಸಮಾಜದಲ್ಲಿ ನಾನು ಬೆಳೆದವಳೂ ಅಲ್ಲ. ನನಗೆ ಎಲ್ಲಿ ನೆಮ್ಮದಿ ಇದೆಯೋ ಅಲ್ಲಿಗೆ ಹೋಗುತ್ತೆನೆ. ನನಗೂ ಒಂದು ಫ್ರೆಂಡ್ಸ್ ಗ್ಯಾಂಗ್ ಇದೆ ಅವರೊಂದಿಗೂ ಇರುತ್ತೇನೆ’ ಎಂದು ಗಾಸಿಪ್ ಗಳಿಗೆ ಮೇಘನಾರಾಜ್ ತೆರೆ ಎಳೆದಿದ್ದಾರೆ.