ನಟ ಉಪೇಂದ್ರ ಅವರು ನಮ್ಮ ದೇಶ ಕಂಡ ಅದ್ಭುತ ನಿರ್ದೇಶಕರಲ್ಲಿ ಒಬ್ಬರು. ಇವರು ಹೆಚ್ಚಾಗಿ ಸಿನಿಮಾ. ನಿರ್ದೇಶನ ಮಾಡುತ್ತಿಲ್ಲ ಎನ್ನುವ ಬೇಸರ ಅವರ ಅಭಿಮಾನಿಗಳಲ್ಲಿ ಇತ್ತು, ಇದೀಗ ಇವತ್ತು ಉಪೇಂದ್ರ ಅವರು ನಿರ್ದೇಶನ ಮಾಡಿರುವ ಬಹುನಿರೀಕ್ಷಿತ ಸಿನಿಮಾ ಯುಐ ವಿಶ್ವಾದ್ಯಂತ ತೆರೆಕಂಡಿದೆ. ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಸಿನಿಮಾ ತೆರೆಕಂಡಿದ್ದು, ಉಪೇಂದ್ರ ಅವರ ಸಿನಿಮಾಗೆ ಅಭಿಮಾನಿಗಳಿಂದ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. ಈ ನಡುವೆ ಹೈದರಾಬಾದ್ ಪ್ರೊಮೋಷನ್ ವೇಳೆ ನಡೆದಿರುವ ಒಂದು ಘಟನೆ ಎಲ್ಲೆಡೆ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಉಪೇಂದ್ರ ಅವರು ತರ್ಲೆ ನನ್ಮಗ, ಓಂ, ಶ್ ಸಿನಿಮಾಗಳ ನಿರ್ದೇಶನ ಮಾಡಿದ ನಂತರ ಅವರು ಹೀರೋ ಆಗಿ ಲಾಂಚ್ ಆದರು. ಆ ಸಿನಿಮಾವನ್ನು ಅವರೇ ನಿರ್ದೇಶನ ಮಾಡಿದರು. ಅದೇ ಎ ಸಿನಿಮಾ. ಈ ಸಿನಿಮಾದಲ್ಲಿ ಉಪೇಂದ್ರ ಅವರು ಒಂದು ಅದ್ಭುತವಾದ ಕಥೆಯನ್ನು ಜನರಿಗೆ ನೀಡಿದರು. ಈಗಲೂ ಕೂಡ ಎ ಸಿನಿಮಾದ ಹಾಡುಗಳು, ಡೈಲಾಗ್ ಗಳು ಫೇಮಸ್, ವೈರಲ್ ಆಗುತ್ತದೆ ಎಂದು ನಮಗೆಲ್ಲಾ ಗೊತ್ತೇ ಇದೆ. ಸೋಶಿಯಲ್ ಮೀಡಿಯಾದಲ್ಲಿ ಈಗಲೂ ಎ ಸಿನಿಮಾ ಡೈಲಾಗ್ ಗಳು ಟ್ರೆಂಡ್ ಆಗುತ್ತಿರುವುದನ್ನು ನೋಡುತ್ತೇವೆ. ಈ ಸಿನಿಮಾದ ಶುರುವಿನಲ್ಲಿ ಒಂದು ಮರೆಯಲಾಗದ ದೃಶ್ಯವಿದೆ.

ಗಂಡ ಹೆಂಡತಿ ಜಗಳ ಆಡುತ್ತಾ ಇರುತ್ತಾರೆ, ಉಪೇಂದ್ರ ಅವರು ಬಂದು ಅವರಿಬ್ಬರನ್ನು ಶೂ*ಟ್ ಮಾಡಿಬಿಡುತ್ತಾರೆ. ಆಗ ಅವರಿಬ್ಬರ ಮಗ ಆರೇಳು ವರ್ಷದ ಹುಡುಗ ಕೂತು ಅಳುತ್ತಿರುತ್ತಾನೆ. ಆ ಹುಡುಗನ ಬಳಿ ಹೋಗುವ ಉಪೇಂದ್ರ ಅವರು, ಪ್ರಪಂಚ ತುಂಬಾ ದೊಡ್ಡದಾಗಿದೆ, ಹೋಗು ನಿನಗೆ ಇಷ್ಟಬಂದ ಹಾಗೆ ಬದುಕೋ ಹೋಗು ಎಂದು ಹೇಳುತ್ತಾರೆ.. ಆಗ ಆ ಹುಡುಗ ಅಲ್ಲಿಂದ ಎದ್ದು ಓಡಿ ಹೋಗುತ್ತಾನೆ. ಈ ಹುಡುಗನ ದೃಶ್ಯ ಅಷ್ಟೇ ಇದ್ದದ್ದು, ಆದರೆ ಇದೇ ಹುಡುಗ ಹೈದರಾಬಾದ್ ನಲ್ಲಿ ಉಪೇಂದ್ರ ಅವರನ್ನು ಭೇಟಿ ಮಾಡಿದ್ದಾನೆ. ಉಪೇಂದ್ರ ಅವರು ಹೈದರಾಬಾದ್ ಗೆ ಯುಐ ಸಿನಿಮಾ ಪ್ರೊಮೋಷನ್ ಗಾಗಿ ಹೋಗಿದ್ದರು, ನಟ ರಾಣಾ ದಗ್ಗುಬಾಟಿ ಸೇರಿದಂತೆ ಅಲ್ಲಿನ ಎಲ್ಲರೂ ಯುಐ ಸಿನಿಮಾಗೆ ಸಪೋರ್ಟ್ ಮಾಡಿದ್ದಾರೆ..
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ಯುಐ ಸಿನಿಮಾ ತಂಡ ಪ್ರೆಸ್ ಮೀಟ್ ಮಾಡಿತು. ಬಳಿಕ ಉಪೇಂದ್ರ ಅವರು ಹೈದರಾಬಾದ್ ನ ಕೆಲವು ಸೋಶಿಯಲ್ ಮೀಡಿಯಾ Influencer ಗಳ ಜೊತೆಗೆ ಮಾತುಕತೆ ನಡೆಸಿದರು. ಈ ಮಾತುಕತೆ ನಡೆಯುವ ವೇಳೆ, ಒಬ್ಬ ಹುಡುಗ ಎದ್ದು ನಿಂತು, ಎ ಸಿನಿಮಾದಲ್ಲಿ ಓಡಿ ಹೋಗುವ ಹುಡುಗ ನಾನೇ ಎಂದು ಹೇಳಿದ್ದಾನೆ. ಮೊದಲಿಗೆ ಉಪೇಂದ್ರ ಅವರಿಗೆ ಆತ ಹೇಳುತ್ತಿರೋದು ಏನು ಎಂದು ಅರ್ಥವಾಗಲಿಲ್ಲ, ಬಳಿಕ ಆ ಹುಡುಗ ದೃಶ್ಯದ ಬಗ್ಗೆ ವಿವರಿಸಿ ಹೇಳಿ, ಆಗ ಓಡಿ ಹೋಗುವ ದೃಶ್ಯದಲ್ಲಿ ನಟಿಸಿದ ಪುಟ್ಟ ಹುಡುಗ ನಾನೇ ಎಂದು ಉಪೇಂದ್ರ ಅವರ ಬಳಿ ಹೇಳಿದ್ದು, ಉಪೇಂದ್ರ ಅವರಿಯೇ 25 ವರ್ಷಗಳ ನಂತರ ಆ ಹುಡುಗನನ್ನು ನೋಡಿ, ಆಶ್ಚರ್ಯ ಉಂಟಾಗಿದೆ.. ಅವರು ಅದೇ ರೀತಿ ಪ್ರತಿಕ್ರಿಯೆ ನೀಡಿದ್ದಾರೆ..

ಆವತ್ತು ಓಡಿ ಹೋದವರು ಇವತ್ತು ಇಲ್ಲಿ ಪ್ರತ್ಯಕ್ಷ ಆಗಿದ್ದೀರಾ, ಆಗಿಂದ ಈಗಿನವರೆಗೂ ಓಡ್ತಾನೆ ಇದ್ದೀರಾ ಎಂದು ಹೇಳಿದ್ದಾರೆ. ಅಲ್ಲಿದ್ದ ಎಲ್ಲರೂ ಸಹ ಹುಡುಗನನ್ನು ನೋಡಿ ಆಶ್ಚರ್ಯ ಪಟ್ಟಿದ್ದಾರೆ. ಒಟ್ಟಿನಲ್ಲಿ ನಡೆದ ಈ ಘಟನೆ ಎಲ್ಲರಿಗೂ ಶಾಕ್ ನೀಡಿತು. ಒಂದು ಪುಟ್ಟ ಪಾತ್ರವೇ ಆದರೂ, ತಂದೆ ತಾಯಿ ಮಕ್ಕಳನ್ನ ಹೇಗೆ ನೋಡಿಕೊಳ್ಳಬೇಕು, ತಂದೆ ತಾಯಿಯ ನಡವಳಿಕೆ ಮಕ್ಕಳ ಮನಸ್ಸಿನ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಅನ್ನೋದನ್ನ ತೋರಿಸಿಕೊಡುವ ದೃಶ್ಯ ಆಗಿತ್ತು ಅದು. ಯುಐ ಸಿನಿಮಾದಲ್ಲಿ ಸಹ ಇಂಥದ್ದೇ ಒಂದು ದೃಶ್ಯ ಇದೆಯಂತೆ. ಅಭಿಮಾನಿಗಳು ಯುಐ ಸಿನಿಮಾವನ್ನ ಹೇಗೆ ಡೀಕೋಡ್ ಮಾಡ್ತಾರೆ ಅನ್ನೋದನ್ನ ನೋಡೋಕೆ ಉಪೇಂದ್ರ ಅವರು ಸಹ ಕಾಯ್ತಿದ್ದಾರೆ..



