ಕನ್ನಡ ರಾಪರ್ ಚಂದನ್ ಶೆಟ್ಟಿ ಅವರು ಇತ್ತೀಚೆಗೆ ವಿಚ್ಛೇದನ ಪಡೆದು ಸಿಕ್ಕಾಪಟ್ಟೆ ಸುದ್ದಿಯಾಗಿದ್ದರು. 2020ರಲ್ಲಿ ನಿವೇದಿತಾ ಗೌಡ ಅವರೊಡನೆ ಮೈಸೂರಿನಲ್ಲಿ ಮದುವೆ ಆಗಿದ್ರು ಚಂದನ್ ಶೆಟ್ಟಿ. ಆದರೆ ಇವರ ದಾಂಪತ್ಯ ಜೀವನ ಹೆಚ್ಚು ಕಾಲ ಉಳಿಯಲಿಲ್ಲ. ಈ ವರ್ಷ ಜೂನ್ ತಿಂಗಳಿನಲ್ಲಿ ಇಬ್ಬರು ಪರಸ್ಪರ ನಿರ್ಧಾರದ ಕಾರಣ ವಿಚ್ಛೇದನ ಪಡೆದರು. ಇಬ್ಬರು ದೂರವಾದ ಬಳಿಕ ನಿವೇದಿತಾ ಏನೋ ತುಂಬಾ ಬ್ಯುಸಿ ಆಗಿದ್ದಾರೆ, ಆಲ್ಬಮ್ ಸಾಂಗ್ ಗಳಲ್ಲಿ ನಟಿಸುತ್ತಾ, ಸಿನಿಮಾ ಎಂಟ್ರಿ ಕೊಡೋಕೆ ತಯಾರಿ ಮಾಡಿಕೊಳ್ಳುತ್ತಾ ಬಿಡುವಿಲ್ಲದೇ ಬ್ಯುಸಿ ಆಗಿದ್ದಾರೆ. ಹೀಗಿರುವಾಗ ಚಂದನ್ ಶೆಟ್ಟಿ ಏನು ಮಾಡ್ತಿದ್ದಾರೆ ಅನ್ನೋ ಕುತೂಹಲ ಎಲ್ಲರಲ್ಲೂ ಇದೆ. ಅದಕ್ಕೀಗ ಉತ್ತರ ಸಿಕ್ಕಿದ್ದು, ಚಂದನ್ ಶೆಟ್ಟಿ ಲೈಫ್ ಎಂಜಾಯ್ ಮಾಡುತ್ತಲಿದ್ದಾರೆ.
ಈಗ ಸಿಂಗಲ್ ಆಗಿರುವ ಚಂದನ್ ಶೆಟ್ಟಿ ಅವರು, ಡಿಪ್ರೆಷನ್ ಗೆ ಹೋಗಿದ್ದಾರಾ? ಏನಾಗಿದೆ ಅವರ ಪರಿಸ್ಥಿತಿ ಅನ್ನೋ ಆತಂಕ, ಕಾಳಜಿ ಎಲ್ಲರಲ್ಲೂ ಇದೆ. ಇದರ ಬಗ್ಗೆ ಚಂದನ್ ಶೆಟ್ಟಿ ಅವರು ಬಹಿರಂಗವಾಗಿ ಎಲ್ಲಿಯು ಮಾತನಾಡಿಲ್ಲ, ಆದರೆ ತಾವು ಲೈಫ್ ಎಂಜಾಯ್ ಮಾಡುತ್ತಾ, ಚೆನ್ನಾಗಿರುವುದನ್ನು ಸೋಶಿಯಲ್ ಮೀಡಿಯಾ ಮೂಲಕ ತೋರಿಸಿದ್ದಾರೆ. ಚಂದನ್ ಶೆಟ್ಟಿ ಅವರು ವಿಮಾನ ಹಾರಿಸುತ್ತಿರುವ ವಿಡಿಯೋ ಒಂದನ್ನು ಶೇರ್ ಮಾಡಿಕೊಂಡಿದ್ದು, ಸಧ್ಯಕ್ಕೆ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಎಲ್ಲರೂ ಚಂದನ್ ಶೆಟ್ಟಿ ಅವರು ಕೂಡ ತಾನು ಯಾರಿಗೂ ಕಡಿಮೆ ಇಲ್ಲ ಎನ್ನುವಂತೆ ಲೈಫ್ ಎಂಜಾಯ್ ಮಾಡ್ತಿರೋದನ್ನ ನೋಡಿ, ಸಂತೋಷಪಟ್ಟಿದ್ದಾರೆ..
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ಚಂದನ್ ಶೆಟ್ಟಿ ಅವರು ವಿದೇಶ ಪ್ರವಾಸಕ್ಕೆ ಹೋಗಿದ್ದು, ಸಿಡ್ನಿಯಲ್ಲಿ ಈ ಸಾಹಸ ಮಾಡಿದ್ದಾರೆ. ಸಿಡ್ನಿಯಲ್ಲಿ ವಿಮಾನ ಹಾರಿಸಿರುವ ಚಂದನ್ ಶೆಟ್ಟಿ, ಬಾಲ್ಯದ ಕನಸೊಂದು ನನಸಾಯಿತು ಎಂದು ಕ್ಯಾಪ್ಶನ್ ನಲ್ಲಿ ಬರೆದುಕೊಂಡಿದ್ದಾರೆ. ಚಂದನ್ ಅವರು ಈ ವಿಡಿಯೋ ಶೇರ್ ಮಾಡುತ್ತಿದ್ದ ಹಾಗೆ, ನಾನಾ ರೀತಿಯ ಕಾಮೆಂಟ್ಸ್ ಗಳು ಬರುತ್ತಿದೆ. ಶೆಟ್ರು ಹೀಗೆ ಇರಿ, ಯಾರ ಬಗ್ಗೆಯು, ಯಾವುದರ ಬಗ್ಗೆಯೂ ತಲೆ ಕೆಡಿಸಿಕೊಳ್ಳಬೇಡಿ ಅಂತಿದ್ದಾರೆ ಫ್ಯಾನ್ಸ್. ವಿಚ್ಛೇದನ ಪಡೆದರೆ ಏನು, ಫ್ಯಾನ್ಸ್ ಮಾತ್ರ ಚಂದನ್ ಅವರ ಕೈಬಿಟ್ಟಿಲ್ಲ. ಏಕೆಂದರೆ ಚಂದನ್ ಶೆಟ್ಟಿ ಒಳ್ಳೆಯ ಹುಡುಗ ಎಂದು ಎಲ್ಲರಿಗೂ ಗೊತ್ತಿದೆ. ಆದರೆ ಪರಿಸ್ಥಿತಿ ಹಾಗಿದ್ದ ಕಾರಣ ವಿಚ್ಛೇದನ ಪಡೆಯುವ ಹಂತಕ್ಕೆ ತಲುಪಿತು.
ಚಂದನ್ ಶೆಟ್ಟಿ ಅವರು ಮ್ಯೂಸಿಕ್ ಕಂಪೋಸರ್ ಆಗಿ, ಲಿರಿಸಿಸ್ಟ್ ಆಗಿ, ಗಾಯಕನಾಗಿ ಗುರುತಿಸಿಕೊಂಡಿದ್ದಾರೆ. ಆದರೆ ಅದಷ್ಟೇ ಅಲ್ಲ, ಇವರು ಸಿನಿಮಾದಲ್ಲಿ ನಾಯಕನಾಗಿ ಕೂಡ ನಟಿಸುತ್ತಿದ್ದಾರೆ. ಚಂದನ್ ಶೆಟ್ಟಿ ಅಭಿನಯದ ಸಿನಿಮಾ ಇತ್ತೀಚೆಗೆ ಸೆಟ್ಟೇರಿತ್ತು, ಸಿನಿಮಾ 80ರ ದಶಕದ ಬ್ಯಾಕ್ ಡ್ರಾಪ್ ಹೊಂದಿದ್ದು, ಒಳ್ಳೆಯ ಕಥೆ ಇದೆ ಎಂದು ಶೆಟ್ರು ಹೇಳಿದ್ದರು. ಇವರು ಹೀರೋ ಆಗಿ ನಟಿಸುತ್ತಿರೋ ಸಿನಿಮಾ ಬಗ್ಗೆ ಇನ್ನೂ ಕೂಡ ಯಾವುದೇ ಅಪ್ಡೇಟ್ ಸಿಕ್ಕಿಲ್ಲ. ಆದಷ್ಟು ಬೇಗ ಅವರ ಸಿನಿಮಾ ಬಿಡುಗಡೆ ಆಗಲಿ ಎಂದು ಅಭಿಮಾನಿಗಳು ಕೂಡ ಕಾಯುತ್ತಿದ್ದಾರೆ. ಇನ್ನು ಚಂದನ್ ಅವರ ಎರಡು ಮೂರು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
ಇತ್ತ ನಿವೇದಿತಾ ಗೌಡ ಕೂಡ ತಮ್ಮ ಕೆರಿಯರ್ ನಲ್ಲಿ ಬಿಡುವಿಲ್ಲದೆ ಬ್ಯುಸಿ ಆಗಿದ್ದಾರೆ. ಇತ್ತೀಚೆಗೆ ಅವರ ಆಲ್ಬಮ್ ಸಾಂಗ್ ಸಿಕ್ಕಾಪಟ್ಟೆ ಸೌಂಡ್ ಮಾಡಿತ್ತು, ಕನ್ನಡ ಮತ್ತು ತೆಲುಗು ಎರಡು ಭಾಷೆಯಲ್ಲಿ ಆಲ್ಬಮ್ ಸಾಂಗ್ ಬಿಡುಗಡೆ ಮಾಡಲಾಗಿತ್ತು. ಹಾಗೆಯೇ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುವ ನಿವೇದಿತಾ ಗೌಡ, ಹಲವು ರೀಲ್ಸ್ ಗಳನ್ನು ಶೇರ್ ಮಾಡಿ, ಅವುಗಳ ಮೂಲಕ ಕೂಡ ವೈರಲ್ ಆಗಿದ್ದರು. ಒಟ್ಟಿನಲ್ಲಿ ಇವರಿಬ್ಬರು ಜೊತೆಯಾಗಿ ಜೀವನ ನಡೆಸುತ್ತಿಲ್ಲದೇ ಹೋದರು, ಸಿಕ್ಕಾಪಟ್ಟೆ ಸುದ್ದಿ ಆಗುತ್ತಿರುವುದಂತೂ ನಿಜ. ಆದರೆ ಟ್ರೋಲ್ ಆಗ್ತಿರೋದು ಯಾರು ಅಂತ ನಿಮಗೆ ಗೊತ್ತಿದೆಯಲ್ಲ.