ಬೆಂಗಳೂರು ನಗರದಲ್ಲಿ ಓಡಾಡುವವರಿಗೆ ಟ್ರಾಫಿಕ್ ಕಷ್ಟ ಎಂಥದ್ದು ಎಂದು ಚೆನ್ನಾಗಿಯೇ ಗೊತ್ತಿರುತ್ತದೆ. ಅದರಲ್ಲೂ ಮೈಸೂರು ರಸ್ತೆಯಲ್ಲಿ ಸದಾ ಟ್ರಾಫಿಕ್ ಇದ್ದೇ ಇರುತ್ತದೆ. ಮೈಸೂರಿನ ಕಡೆಗೆ ಹೋಗುವವರು ಮಾತ್ರವಲ್ಲ, ಸುತ್ತ ಮುತ್ತ ಬರುವ ಊರುಗಳು ಹಾಗೆಯೇ ರಾಜ ರಾಜೇಶ್ವರಿ ನಗರ, ಕೆಂಗೇರಿ, ಈ ಕಡೆ ಹೋಗಬೇಕಿರುವವರು ಕೂಡ ಮೈಸೂರ್ ರೋಡ್ ಕಡೆಯಿಂದಲೇ ಹೋಗಬೇಕು. ಆದರೆ ಈ ಮಾರ್ಗದಲ್ಲಿ ಯಾವಾಗಲೂ ಟ್ರಾಫಿಕ್ ಇರೋ ಕಾರಣ ದೀಪಾಂಜಲಿ ನಗರ ಇಂದ ಕೆಂಗೇರಿ ತಲುಪಲು ಕನಿಷ್ಠ 50 ನಿಮಿಷದಿಂದ 1 ಗಂಟೆಯಷ್ಟು ಸಮಯ ಬೇಕು.. ಈ ಸಮಸ್ಯೆ ಪರಿಹಾರ ಮಾಡಲು ಹೊಸ ರೋಡ್ ನಿರ್ಮಾಣ ಆಗಲಿದೆ..
9ಕಿಮೀ ಉದ್ದದ ನೈಸ್ ಲಿಂಕ್ ರೋಡ್ ನಿರ್ಮಾಣ ಆಗಲಿದ್ದು, ಈ ರೋಡ್ ಇಂದ ಟ್ರಾಫಿಕ್ ಅಬ್ಬರ ಇಲ್ಲದೇ, ಸುಲಭವಾಗಿ ಕೆಂಗೇರಿ ರೀಚ್ ಆಗಬಹುದು. ದೀಪಾಂಜಲಿ ನಗರ ಜಂಕ್ಷನ್ ಇಂದ 9ಕಿಮೀ ಉದ್ದದ ರಸ್ತೆ ನಿರ್ಮಾಣ ಆಗಲಿದೆ. ಈ ಒಂದು ನಿರ್ಮಾಣ ಆಗುವುದರಿಂದ ಮೈಸೂರ್ ರೋಡ್, ನಾಯಂಡಹಳ್ಳಿ, ಕೆಂಗೇರಿ ಈ ಮಾರ್ಗದ ಟ್ರಾಫಿಕ್ ಕಡಿಮೆ ಆಗುವುದರ ಜೊತೆಗೆ ಹೊಸಕೆರೆಹಳ್ಳಿ, ಪಿಇಎಸ್ ಕಾಲೇಜು ಕಡೆಗಿನ ಟ್ರಾಫಿಕ್ ಕೂಡ ಕಡಿಮೆ ಆಗುತ್ತದೆ. ಈ ರೋಡ್ ನಲ್ಲಿ ನೀವು ಪ್ರಯಾಣಿಸಿದರೆ 5 ಸಿಗ್ನಲ್ ದಾಟುವ ಪ್ರಮೇಯವೇ ಬರುವುದಿಲ್ಲ. ಆರ್.ಆರ್ ನಗರ ಜಂಕ್ಷನ್, ಬೆಂಗಳೂರು ಯೂನಿವರ್ಸಿಟಿ, ಪಟ್ಟಣಗೆರೆ ಹಾಗೂ ಇನ್ನು ಎರಡು ಜಂಕ್ಷನ್ ಇಂದ ಫ್ರೀ..
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ಈ ರೋಡ್ ನಲ್ಲಿ ಪ್ರಯಾಣ ಮಾಡಿದರೆ, ಟ್ರಾಫಿಕ್ ಇಲ್ಲದೆಯೇ 20 ನಿಮಿಷಗಳ ಒಳಗೆ ದೀಪಾಂಜಲಿ ನಗರ ಇಂದ ಕೆಂಗೇರಿಯ ಗಣಪತಿ ದೇವಸ್ಥಾನದವರೆಗು ರೀಚ್ ಆಗಬಹುದು. ಇದಷ್ಟೇ ಅಲ್ಲದೆ ದೀಪಾಂಜಲಿ ನಗರ ಹಾಗೂ ಬನಶಂಕರಿ ಮಾರ್ಗದಲ್ಲಿ ಓಡಾಡುವವರಿಗೆ ಮತ್ತೊಂದು ಗುಡ್ ನ್ಯೂಸ್ ಇದೆ. ಈ ಮಾರ್ಗದಲ್ಲಿ ಒಂದೂವರೆ ಕಿಮೀ ಉದ್ದದ ಮತ್ತೊಂದು ಲಿಂಕ್ ರೋಡ್ ಶುರುವಾಗಲಿದ್ದು, ಇಲ್ಲಿ ನೀವು ಹಣ ಪಾವತಿ ಮಾಡದೇ, ದೀಪಾಂಜಲಿ ನಗರ ಇಂದ ಪಿಇಸ್ ಕಾಲೇಜಿನವರೆಗು ಪ್ರಯಾಣ ಮಾಡಬಹುದು. ವಿಜಯನಗರ, ಪಿಇಎಸ್ ಕಾಲೇಜ್, ಚಾಮರಾಜಪೇಟೆ ಈ ಕಡೆ ಓಡಾಡುವ ಜನರು ಹೆಚ್ಚಿದ್ದಾರೆ.
ಇನ್ನು ಮೈಸೂರು ಮಾರ್ಗದ ಕಡೆಗೆ ಓಡಾಡುವವರು ಕೂಡ ಹೆಚ್ಚು ಜನರು ಇರುತ್ತಾರೆ. ಅಂಥವರಿಗೆಲ್ಲಾ ನೈಸ್ ರೋಡ್ ಮೂಲಕ ಉಪಯೋಗ ಆಗಲಿದೆ. ಟ್ರಾಫಿಕ್ ಗಳಲ್ಲಿ ಸಿಕ್ಕಿಕೊಳ್ಳದೇ, ಪಿಇಸ್ ಕಾಲೇಜ್ ವರೆಗು 10 ನಿಮಿಷಗಳಲ್ಲಿ, ಕೆಂಗೇರಿ ವರೆಗು 20 ನಿಮಿಷಗಳಲ್ಲಿ ಜನರು ರೀಚ್ ಆಗಬಹುದು ಎಂದು ನೈಸ್ ಸಂಸ್ಥೆ ಮಾಹಿತಿ ನೀಡಿದೆ. ಈ ಒಂದು ಲಿಂಕ್ ರೋಡ್ ಇಂದ ಜನರಿಗೆ ಎಷ್ಟು ಅನುಕೂಲ ಆಗಲಿದೆ ಎಂದರೆ, ಮೈಸೂರ್ ರೋಡ್ ನಲ್ಲಿ ಉಂಟಾಗುವ 30% ಟ್ರಾಫಿಕ್ ಅನ್ನು ಕಡಿಮೆ ಮಾಡುತ್ತದೆ. ಈ ರೀತಿಯಾಗಿ ಜನರ ಟೈಮ್ ಉಳಿತಾಯ ಆಗಲಿದೆ, ಸಮಯಕ್ಕೆ ಸರಿಯಾಗಿ ಜಾಗವನ್ನು ತಲುಪಬಹುದು.
ನೈಸ್ ಸಂಸ್ಥೆಯ ಈ ನಿರ್ಧಾರ ಬೆಂಗಳೂರಿನಲ್ಲಿ ವಾಸ ಮಾಡುವವರಿಗೆ ಹಾಗೂ ಬೆಂಗಳೂರಿಗೆ ಕೆಲಸದ ನಿಮಿತ್ತ ಬಂದು ಹೋಗುವವರಿಗೆ, ವಿದ್ಯಾರ್ಥಿಗಳಿಗೆ ಎಲ್ಲರಿಗೂ ಅನುಕೂಲ ಆಗಲಿದೆ. ಬೆಂಗಳೂರಿನ ಜನರಿಗೆ ಇರುವ ಮೇಜರ್ ಸಮಸ್ಯೆಯೇ ಟ್ರಾಫಿಕ್. ಈ ಒಂದು ಸಮಸ್ಯೆ ಕಡಿಮೆಯಾದರೆ, ಜನರ ಜೀವನ ಬಹಳ ಸುಲಭವಾಗಿ ಆನಂದವಾಗಿ, ಯಾವುದೇ ಟೆನ್ಷನ್ ಇಲ್ಲದೆಯೇ ಸಾಗುತ್ತದೆ. ಹಾಗಾಗಿ ಈ ನೈಸ್ ರೋಡ್ ಬಹಳ ಮುಖ್ಯವಾಗಿದ್ದು, ಈ ರೋಡ್ ಬೇಗ ನಿರ್ಮಾಣ ಆದರೆ ಟ್ರಾಫಿಕ್ ಸಮಸ್ಯೆ ಬೇಗ ಸರಿ ಹೋಗುತ್ತದೆ.



