ಕನ್ನಡ ಚಿತ್ರರಂಗದಲ್ಲಿ ಇತ್ತೀಚಿನ ವರ್ಷಗಳಲ್ಲಿ ಬಹಳಷ್ಟು ಹೊಸ ಪ್ರತಿಭೆಗಳು ಬೆಳಕಿಗೆ ಬಂದಿವೆ. ಹಲವರು ಭರವಸೆ ಮೂಡಿಸಿ, ಜನರ ಪ್ರೀತಿ ಮತ್ತು ಪ್ರೋತ್ಸಾಹ ಪಡೆದುಕೊಂಡಿದ್ದಾರೆ. ಅಂಥ ನಟರಲ್ಲಿ ನಮ್ಮ ಉತ್ತರ ಕರ್ನಾಟಕದ ಮೂಲದ ನವೀನ್ ಶಂಕರ್ ಸಹ ಇದ್ದಾರೆ. ಇವರು ಒಬ್ಬ ಅಪರೂಪದ ಪ್ರತಿಭೆ, ಹೀರೋ ವಿಲ್ಲನ್ ಎರಡು ಪಾತ್ರಕ್ಕೂ ಒಪ್ಪುವ, ಎರಡು ಪಾತ್ರಗಳಲ್ಲಿ ಅದ್ಭುತವಾಗಿ ನಟಿಸುವಂಥ ಕಲಾವಿದ. ಇವರು ಆಯ್ಕೆ ಮಾಡಿಕೊಳ್ಳುವ ಸಿನಿಮಾಗಳು, ಪಾತ್ರಗಳು ಎಲ್ಲವೂ ಜನರಿಗೆ ಬಹಳ ಇಷ್ಟವಾಗಿದೆ. ಈ ನಟ ಇದೀಗ ಹಾರ್ಟ್ ಅಟ್ಯಾಕ್ ಇಂದ ಜಸ್ಟ್ ಮಿಸ್ ಆಗಿದ್ದಾರೆ. ಈ ರೀತಿ ಆಗಿದ್ದು ಸಿನಿಮಾಗಾಗಿ..
ನವೀನ್ ಶಂಕರ್ ಅವರು ಹೊಂದಿಸಿ ಬರೆಯಿರಿ, ಕ್ಷೇತ್ರಪತಿ, Gultoo ಈ ಸಿನಿಮಾಗಳಲ್ಲಿ ಹೀರೋ ಆಗಿ ನಟಿಸಿದ್ದಾರೆ. ಈ ಎಲ್ಲಾ ಸಿನಿಮಾಗಳು ಸೂಪರ್ ಸಕ್ಸಸ್ ಕಂಡಿವೆ. ನವೀನ್ ಶಂಕರ್ ಅವರಿಗೆ ಒಳ್ಳೆಯ ಹೆಸರು, ಅಭಿಮಾನಿ ಬಳಗ ಮತ್ತು ಜನಪ್ರಿಯತೆಯನ್ನು ಕೂಡ ತಂದುಕೊಟ್ಟಿದೆ. ಜೊತೆಗೆ ಕೆಲವು ಸಿನಿಮಾಗಳಲ್ಲಿ ವಿಲ್ಲನ್ ಆಗಿಯೂ ನಟಿಸಿ, ಉತ್ತಮ ಅಭಿನಯದ ಮೂಲಕ ಜನರಿಗೆ ಇಷ್ಟವಾಗಿದ್ದಾರೆ ನವೀನ್. ಇವರು ನಟಿಸಿರುವ ಮತ್ತೊಂದು ಸಿನಿಮಾ ನೋಡಿದವರು ಏನಂತಾರೆ. ಈ ಸಿನಿಮಾ ಟ್ರೈಲರ್ ಬಿಡುಗಡೆ ಆಗಿದ್ದು, ಸಿನಿಮಾ ಕೆಲವೇ ದಿನಗಳಲ್ಲಿ ತೆರೆಕಾಣಲಿದೆ. ಟ್ರೈಲರ್ ನೋಡಿದವರಿಗೆ ಒಂದು ಆಶ್ಚರ್ಯ ಅಂತೂ ಇತ್ತು.

ಅದು ನವೀನ್ ಶಂಕರ್ ಅವರ ಲುಕ್. ಬಹಳ ವರ್ಕೌಟ್ ಮಾಡಿ, ತೂಕ ಇಳಿಸಿ, ಪೂರ್ತಿಯಾಗಿ Transform ಆಗಿದ್ದಾರೆ ನವೀನ್ ಶಂಕರ್. ಇವರನ್ನು ನೋಡಿದ ಕೂಡಲೇ ಇಷ್ಟೊಂದು ತೂಕವನ್ನ ಹೇಗೆ ಇಳಿಸಿಕೊಂಡಿದ್ದಾರೆ. ತುಂಬಾ ಡಯೆಟ್ ಮಾಡೋದರಿಂದ ಆರೋಗ್ಯಕ್ಕೆ ತೊಂದರೆ ಅಗೋದಿಲ್ಲವಾ ಎಂದು ಪ್ರಶ್ನೆ ಬಂದಿರುವುದು ನಿಜ. ಸಿನಿಮಾ ಪ್ರೊಮೋಷನ್ ಗಾಗಿ ಮಾಡಿರುವ ಇಂಟರ್ವ್ಯೂ ಒಂದರಲ್ಲಿ ಇದೇ ಪ್ರಶ್ನೆಯನ್ನ ನವೀನ್ ಶಂಕರ್ ಅವರಿಗೆ ಕೇಳಿದ್ದು, ಅದಕ್ಕೆ ಅವರು ಡಯೆಟ್ ಬಗ್ಗೆ ಹಾಗೂ ಆ ವಿಷಯದಲ್ಲಿ ಅವರಿಗೆ ಆದ ಅನುಭವದ ಬಗ್ಗೆ ಕೆಲವು ವಿಚಾರಗಳನ್ನು ತಿಳಿಸಿದ್ದಾರೆ, ಹಾರ್ಟ್ ಅಟ್ಯಾಕ್ ಇಂದ ಜಸ್ಟ್ ಮಿಸ್ ಆಗಿರುವ ವಿಷಯವನ್ನು ಹಂಚಿಕೊಂಡಿದ್ದಾರೆ.

ಡಯೆಟ್ ಹೆಚ್ಚಾಗಿ ಮಾಡಿ, ಹಾರ್ಟ್ ಬೀಟ್ ಸ್ಲೋ ಆದ ಕಾರಣ ಡಾಕ್ಟರ್ ಹತ್ತಿರ ಹೋದಾಗ, ಅವರು ಎಲ್ಲಾ ಟೆಸ್ಟ್ ಗಳನ್ನು ಮಾಡಿಸಿ, ಮೊದಲಿಗೆ ಹೆಚ್ಚಾಗಿ ಏನನ್ನು ಹೇಳಲಿಲ್ಲವಂತೆ. ಚೆನ್ನಾಗಿ ತಿನ್ನಿ ಡಯೆಟ್ ಎಲ್ಲಾ ಬಿಟ್ಟುಬಿಡಿ ಎಂದರಂತೆ. ನಂತರ ಮೆಸೇಜ್ ಮಾಡಿ, ಇದು ಬ್ರೆಡಿಕಾರ್ಡಿಯಾ, ಫಸ್ಟ್ ಡಿಗ್ರಿ ಆಫ್ ಸ್ಟ್ರೋಕ್ ನೀವು ಇನ್ನು ಹೀಗೆ ಇದ್ದು, ಕಡೆಗಣಿಸಿ, ಡಯೆಟ್ ಮಾಡಿಕೊಂಡೆ ಇದ್ದಿದ್ದರೆ, ಇಲ್ಲಿಗೆ ಬರದೇ ಹೋಗಿದ್ದರೆ ಹಾರ್ಟ್ ಅಟ್ಯಾಕ್ ಆಗುವ ಸಾಧ್ಯತೆ ಇತ್ತು ಎಂದು ಡಾಕ್ಟರ್ ಹೇಳಿದರಂತೆ. ತಕ್ಷಣವೇ ಡಯೆಟ್ ಎಲ್ಲ ಬಿಟ್ಟು, ಚೆನ್ನಾಗಿ ತಿನ್ನೋಕೆ ಶುರು ಮಾಡಿ ಎಂದು ಹೇಳಿದರಂತೆ ಡಾಕ್ಟರ್. ನವೀನ್ ಶಂಕರ್ ಅವರು ಡಾಕ್ಟರ್ ಎದುರು ಏನು ಹೇಳದೇ, ಸರಿ ಎಂದು ಹೇಳಿ ಬಂದರಂತೆ.
ಆದರೆ ಅಷ್ಟೆಲ್ಲಾ ಕಷ್ಟಪಟ್ಟು, ತಯಾರಿ ಮಾಡಿಕೊಂಡು ಅರ್ಧಕ್ಕೆ ಬಿಡೋಕಾಗಲ್ಲ ಎಂದು ಮುಂದಿನ 8 ಗಂಟೆಗಳ ಕಾಲ ಶೂಟಿಂಗ್ ಮಾಡಿ ಮುಗಿಸಿ, ನಂತರ ಚೆನ್ನಾಗಿ ತಿನ್ನೋದಕ್ಕೆ ಶುರು ಮಾಡಿದರಂತೆ. ಈಗಿನ ಹೀರೋಗಳಿಗೆ ಸಿನಿಮಾ ಮೇಲೆ ಇರುವ ಪ್ಯಾಷನ್ ನೋಡಿ ಎಷ್ಟು ಸಂತೋಷ ಆಗುತ್ತದೆಯೋ ಅದೇ ರೀತಿ ಅವರು ತಮ್ಮ ದೇಹ ದಂಡಿಸಿ ಮಾಡುವ ಈ ಡಯೆಟ್, ಜಿಮ್ ಇದನ್ನೆಲ್ಲ ನೋಡಿದರೆ ಸ್ವಲ್ಪ ಭಯ ಸಹ ಆಗುತ್ತದೆ. ಇದನ್ನೆಲ್ಲಾ ಮಾಡುತ್ತಾ, ಆರೋಗ್ಯಕ್ಕೆ ಏನಾದರೂ ಹೆಚ್ಚು ಕಮ್ಮಿ ಮಾಡಿಕೊಂಡರೆ ಏನು ಮಾಡಬೇಕು? ನಾಯಕರು ಅವರ ಆರೋಗ್ಯದ ಬಗ್ಗೆ ಸಹ ಹೆಚ್ಚು ಗಮನ ಕೊಡಬೇಕು.