ಟಾಲಿವುಡ್ ಹಿರಿಯ ನಟ ನರೇಶ್ ಹಾಗೂ ಕನ್ನಡ ಚಿತ್ರರಂಗದ ನಟಿ ಪವಿತ್ರಾ ವರ್ಷಗಳ ಹಿಂದಷ್ಟೇ ಸಾಕಷ್ಟು ಗಲಭೆ, ಗಲಾಟೆಗಳ ನಡುವೆ ವಿವಾಹವಾಗಿದ್ದರು. ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಜನ ಇವರ ನಡೆಯನ್ನು ಟೀಕಿಸಿದ್ದರು. ಇದೀಗ ಇವರಿಬ್ಬರ ಬದುಕಿನ ನೈಜ್ಯ ಕತೆ ಎನ್ನಲಾದ ‘ಮತ್ತೆ ಮದುವೆ’ ಸಿನಿಮಾದಲ್ಲಿ ಇವರು ನಟಿಸಿದ್ದು. ದೇಶದಾದ್ಯಂತ ಈ ಜೋಡಿ ಚಿತ್ರದ ಪ್ರಚಾರದಲ್ಲಿ ತೊಡಗಿದೆ. ಆದರೆ ಈಗ ಪ್ರಚಾರಾರ್ಥವಾಗಿಯೇ ಪವಿತ್ರಾ-ನರೇಶ್ ಸುದ್ದಿಯಲ್ಲಿದ್ದಾರೆ. ಹೌದು ಇತ್ತೀಚೆಗೆ ನಡೆದ ಸಮಾರಂಭವೊಂದರಲ್ಲಿ ಸಾವಿರಾರು ಜನರ ಮುಂದೆಯೇ ಈ ಜೋಡಿ ವೇದಿಕೆಯ ಮೇಲೆ ಲಿಪ್ಲಾಕ್ ಮಾಡಿದ್ದು, ವಿಡಿಯೋ ವೈರಲ್ ಆಗಿದೆ.
ನರೇಶ್-ಪವಿತ್ರಾ ಜೋಡಿಯ ಮದುವೆ ರಾಜ್ಯ ಮಾತ್ರವಲ್ಲದೇ ಇಡೀ ದೇಶದಲ್ಲಿ ಸುದ್ದಿಯಾಗಿದ್ದ ವಿಚಾರ. ಇದೀಗ ಇವರಿಬ್ಬರು ‘ಮತ್ತೆ ಮದುವೆ’ ಸಿನಿಮಾದ ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದು, ದೇಶದ ಪ್ರಮುಖ ನಗರಗಳಾದ ಬೆಂಗಳೂರು, ಚೆನ್ನೈ, ಕೊಚ್ಚಿ ಮುಂತಾದೆಡೆ ಪ್ರಚಾರ ನಡೆಸುತ್ತಿದ್ದಾರೆ. ಈಗಾಗಲೇ ಮತ್ತೆ ಮದುವೆ ಚಿತ್ರದ ಟೀಸರ್ ಮತ್ತು ಟ್ರೇಲರ್ ಬಿಡುಗಡೆಯಾಗಿದ್ದು ಟೀಸರ್ ನಲ್ಲೂ ಪವಿತ್ರಾ ಹಾಗೂ ನರೇಶ್ ಲಿಪ್ ಲಾಕ್ ಮಾಡುವ ದೃಶ್ಯವಿದೆ. ಇದೀಗ ಮತ್ತೆ ಅದೇ ವಿಚಾರವಾಗಿ ಈ ಜೋಡಿ ಸುದ್ದಿಯಲ್ಲಿದೆ.
ಇತ್ತೀಚೆಗೆ ‘ಮತ್ತೆ ಮದುವೆ’ ಚಿತ್ರದ ಅದ್ದೂರಿ ಫ್ರೀ-ರಿಲೀಸ್ ಇವೆಂಟ್ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಈ ಜೋಡಿ ‘ಮತ್ತೆ ಮದುವೆ’ ಚಿತ್ರದ ರೊಮ್ಯಾಂಟಿಕ್ ಹಾಡೊಂದಕ್ಕೆ ಹೆಜ್ಜೆ ಹಾಕುತ್ತಾ, ರೊಮ್ಯಾಂಟಿಕ್ ಮೂಡ್ ಗೆ ಜಾರಿದೆ. ಇದೇ ಸಂಧರ್ಭ ನರೇಶ್ ಅವರು ಪವಿತ್ರಾರನ್ನು ಬಿಗಿದಪ್ಪಿ ತುಟಿಗೆ ತುಟಿ ಸೇರಿಸಿ ಮುತ್ತಿಕ್ಕಿದ್ದಾರೆ. ಈ ಜೋಡಿ ವೇದಿಕೆಯ ಮೇಲೆ ಲಿಪ್ ಲಾಕ್ ಮಾಡಿದ ಹಸಿಬಿಸಿ ವಿಡಿಯೋ ಸದ್ಯ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಅಗುತ್ತಿದೆ.