ಸೋಷಿಯಲ್ ಮೀಡಿಯಾದಲ್ಲಿ ರೀಲ್ಸ್ ಹಾಕೋ ಮೂಲಕ ವೈರಲ್ ಆಗಿರುವವರಲ್ಲಿ ಕಿಪಿ ಕೀರ್ತಿ ಸಹ ಒಬ್ಬರು. ಇವರ ಬಗ್ಗೆ ನೆಗಟಿವ್ ಕಾಮೆಂಟ್ಸ್ ಬರೆಯುವವರೆ ಹೆಚ್ಚು. ರೀಲ್ಸ್ ಗಳಲ್ಲಿ ಈಕೆ ಮಾತನಾಡೋದನ್ನ ನೋಡಿ ನಾವೆಲ್ಲರೂ ಹಾಗೆ ಅಂದುಕೊಂಡಿರುತ್ತೇವೆ. ಜನರು ಕೂಡ ನೀನ್ಯಾಕಮ್ಮ ಬಂದೆ ಎಂದು ಬಯ್ಯುತ್ತಾರೆ. ಆದರೆ ಕಿಪಿ ಕೀರ್ತಿ ನಿಜ ಜೀವನದಲ್ಲಿ ಪಟ್ಟಿರುವ ಕಷ್ಟಗಳನ್ನ ಕೇಳಿದರೆ ಎಂಥವರಿಗೂ ಬೇಸರ ಆಗುವುದು ಖಂಡಿತ. ಕಿಪಿ ಕೀರ್ತಿ ಟಿವಿ ಸಂದರ್ಶನ ಒಂದರಲ್ಲಿ ಪಾಲ್ಗೊಂಡಿದ್ದು, ತಮ್ಮ ಲೈಫ್ ಬಗ್ಗೆ ಅನೇಕ ವಿಚಾರಗಳನ್ನು ತಿಳಿಸಿದ್ದಾರೆ..
ಇನ್ಸ್ಟಾಗ್ರಾಮ್ ಓಪನ್ ಮಾಡಿದರೆ ಹಾಯ್ ಜನರೇ, ಹೇಳಿ ಜನರೇ ಎನ್ನುವ ಕಿಪಿ ಕೀರ್ತಿ ವಿಡಿಯೋ ಕಣ್ಣಿಗೆ ಬೀಳುತ್ತದೆ. ಈಕೆ ದಿನಾಲೂ ಒಂದಷ್ಟು ರೀಲ್ಸ್ ಪೋಸ್ಟ್ ಮಾಡುತ್ತಾ, ತಮ್ಮ ಜೀವನದಲ್ಲಿ ನಡೆಯುವ ಎಲ್ಲಾ ವಿಚಾರಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಆಗಾಗ ಲೈವ್ ಬಂದು, ತಮ್ಮ ಲೈಫ್ ಬಗ್ಗೆ ತಿಳಿಸಿ, ಜನರು ಹೇಳೋ ಮಾತಿಗೆ, ಕಾಮೆಂಟ್ಸ್ ಗಳಿಗೆ ರಿಪ್ಲೈ ಕೊಡುವುದು ಉಂಟು. ಕಿಪಿ ಕೀರ್ತಿಯನ್ನ ನೋಡಿದರೆ ಒಳ್ಳೆ ಮಿಡ್ಲ್ ಸ್ಕೂಲ್ ಹುಡುಗಿ ಅಂತ ಅನ್ನಿಸುತ್ತಾರೆ, ಆದರೆ ಈಕೆ ಪಿಯುಸಿ ಓದಿ ಮುಂದೆ ಒಳ್ಳೇ ಹಂತಕ್ಕೆ ತಲುಪಬೇಕು ಎಂದು ಕನಸು ಕಟ್ಟಿಕೊಂಡಿರುವ ಹುಡುಗಿ.

ಕಿಪಿ ಕೀರ್ತಿ ಇತ್ತೀಚೆಗೆ ಒಂದು ಸಂದರ್ಶನದಲ್ಲಿ ಪಾಲ್ಗೊಂಡಿದ್ದು, ತಾವು ಅನುಭವಿಸಿರುವ ಕಷ್ಟದ ಬಗ್ಗೆ ಮಾತನಾಡಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಕಿಪಿ ಕೀರ್ತಿ ತಂದೆಯನ್ನು ಕಳೆದುಕೊಂಡಿದ್ದಾರೆ, ತಾಯಿಯೇ ಅವರನ್ನು ಸಾಕಿ ನೋಡಿಕೊಳ್ಳುತ್ತಿರುವುದು. ಇವರ ಅಜ್ಜಿ ಮತ್ತು ಚಿಕ್ಕಪ್ಪ ಕಿಪೀ ಮತ್ತು ಅವರ ತಾಯಿಗೆ ತುಂಬಾ ತೊಂದರೆ ಕೊಟ್ಟಿದ್ದಾರಂತೆ. ತಂದೆ ಮನೆಯಿಂದ ಬರಬೇಕಾದ ಆಸ್ತಿಯನ್ನು ಸರಿಯಾಗಿ ಕೊಡದೇ, ಸ್ವಲ್ಪ ಮಾತ್ರ ಕೊಟ್ಟು, ಎಲ್ಲಾ ಆಸ್ತಿಯನ್ನು ಅವರ ಚಿಕ್ಕಪ್ಪ ತೆಗೆದುಕೊಂಡಿದ್ದಾರಂತೆ. ಚಿಕ್ಕವಳಿದ್ದಾಗ ಕಿಪಿ ಹೆಚ್ಚಾಗಿ ಬೆಕ್ಕುಗಳ ಜೊತೆಗೆ ಮಾತನಾಡುತ್ತಿದ್ದರಂತೆ, ಅದನ್ನು ನೋಡಿ ವಿಡಿಯೋ ಮಾಡಿಕೊಂಡು..
ಇವಳು ಹುಚ್ಚಿ ಎಂದು ಎಲ್ಲರಿಗೂ ತೋರಿಸಿ ಹೇಳುತ್ತಿದ್ದರಂತೆ. ಕಿಪಿ ಕೀರ್ತಿ ಆಗ ಚಿಕ್ಕವಳಾಗಿದ್ದ ಕಾರಣ ಆಕೆಗೆ ಏನು ಅರ್ಥವಾಗುತ್ತಿರಲಿಲ್ಲ. ಪಿಯುಸಿ ಪಾಸ್ ಆದ ನಂತರ ಇದೆಲ್ಲಾ ಏನು ಎಂದು ಅರ್ಥವಾಯಿತಂತೆ. ತನ್ನ ತಾಯಿ ತನ್ನನ್ನು ತುಂಬಾ ಕಷ್ಟಪಟ್ಟು ನೋಡಿಕೊಳ್ಳುತ್ತಿದ್ದು, ಮುಂದೆ ತಮ್ಮ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು, ಒಳ್ಳೇ ಹೆಸರು ಮಾಡಬೇಕು ಚೆನ್ನಾಗಿ ಹಣ ಸಂಪಾದನೆ ಮಾಡಬೇಕು ಎಂದು ಕಿಪಿ ಕೀರ್ತಿಗೆ ಆಸೆ ಇದೆ. ಅದೇ ದಾರಿಯಲ್ಲಿ ಸಾಗುತ್ತಿರುವುದಾಗಿ ತಿಳಿಸಿದ್ದಾರೆ ಕಿಪಿ ಕೀರ್ತಿ. ಸೋಷಿಯಲ್ ಮೀಡಿಯಾ ಮೂಲಕ ಈಕೆಗೆ ಜನಪ್ರಿಯತೆ ಏನೋ ಇದೆ, ಜೀಕನ್ನಡದ ಕಾಮಿಡಿ ಕಿಲಾಡಿಗಳು ಶೋಗೆ ಬಂದಿದ್ದರು.
ಹಾಗೆಯೇ ಇನ್ಸ್ಟಾಗ್ರಾಮ್ ನಲ್ಲಿ 1.64 ಲಕ್ಷ ಫಾಲೋವರ್ಸ್ ಇದ್ದಾರೆ. ರೀಲ್ಸ್, ಲೈವ್ ಎಂದು ಬ್ಯುಸಿ ಆಗಿರುವ ಕಿಪಿ ಕೀರ್ತಿ ಬ್ರ್ಯಾಂಡ್ ಪ್ರೊಮೋಷನ್ ಗಳನ್ನು ಸಹ ಮಾಡುತ್ತಾರೆ. ಇವುಗಳ ಮೂಲಕ ಹಣ ಸಂಪಾದನೆ ಶುರು ಮಾಡಿರುವ ಕಿಪಿ ಕೀರ್ತಿಗೆ ಲೈಫ್ ನಲ್ಲಿ ಇನ್ನು ದೊಡ್ಡ ದೊಡ್ಡ ಆಸೆಗಳಿವೆ. ನಾವು ಸೋಶಿಯಲ್ ಮೀಡಿಯಾದಲ್ಲಿ ಇವರನ್ನು ನೋಡಿ, ಕೆಟ್ಟದಾಗಿ ಕಾಮೆಂಟ್ ಮಾಡಿ ಅವಮಾನ ಮಾಡುವ ಮೊದಲು ಅವರು ಸಹ ನಮ್ಮ ಹಾಗೆ ಮನುಷ್ಯರು, ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವುದು ಅವರವರ ಇಷ್ಟ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಇನ್ಮೇಲೆ ಆದರೂ ಟ್ರೋಲ್ ಮಾಡೋದು ಬಿಟ್ಟು, ಚೆನ್ನಾಗಿ ಮಾತಾಡೋಕೆ ಪ್ರಯತ್ನ ಪಡೋಣ..