ಇತ್ತೀಚಿನ ದಿನಗಳಲ್ಲಿ ಸಿನಿಮಾ ನಾಯಕಿಯರು ಅಥವಾ ಸೆಲೆಬ್ರಿಟಿಗಳು ಫೋಟೋಶೂಟ್ ಮಾಡಿಸಿಕೊಳ್ಳುತ್ತಿರುವ ಟ್ರೆಂಡ್ ಹೆಚ್ಚುತ್ತಿದೆ. ಅದರಲ್ಲೂ ನಟಿಯರ ಬೋಲ್ಡ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ಹವಾ ಸೃಷ್ಟಿಸುತ್ತಿದೆ. ಇದೀಗ ಮಂಗಳೂರು ಬ್ಯೂಟಿ ಮೇಘಾ ಶೆಟ್ಟಿ ಹೊಸ ಫೋಟೋಶೂಟ್ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಸೆಟ್ ಮಾಡಿದ್ದಾರೆ. ಹೊಸ ಫೋಟೋಶೂಟ್ನಲ್ಲಿ ಸಖತ್ ಹಾಟ್ & ಬೋಲ್ಡ್ ಆಗಿ ಮೇಘಾ ಮಿಂಚಿದ್ದಾರೆ.


ಬೂದು ಬಣ್ಣದ ಉಡುಗೆಯಲ್ಲಿ ನಟಿ ಕಾಣಿಸಿಕೊಂಡಿದ್ದಾರೆ. ಕ್ಯಾಮೆರಾ ಕಣ್ಣಿಗೆ ಮಸ್ತ್ ಆಗಿ ಪೋಸ್ ನೀಡಿದ್ದಾರೆ. ಮೇಘಾ ಶೆಟ್ಟಿ ಹೊಸ ಅವತಾರ ನೋಡಿ ಅಭಿಮಾನಿಗಳು, ನಮಗೆ ಹಳೆಯ ಮೇಘಾ ಶೆಟ್ಟಿ ಬೇಕು ಎಂದು ಕಾಮೆಂಟ್ ಮಾಡಿದ್ರೆ, ಇನ್ನೂ ಕೆಲವರು ಯಾವ ಬಾಲಿವುಡ್ ನಟಿಗೂ ನೀವು ಕಮ್ಮಿಯಿಲ್ಲ ಎಂದು ಮೆಚ್ಚುಗೆ ಸೂಚಿಸಿದ್ದಾರೆ. ಟ್ರೆಂಡಿಂಗ್ ಬಟ್ಟೆಯಲ್ಲಿ ಸಖತ್ ಫೋಟೋಶೂಟ್ ಮಾಡಿಸಿಕೊಂಡಿರುವ ಮೇಘಾ ಶೆಟ್ಟಿ ಅವುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ದೊಡ್ಮನೆ ಕುಡಿ ವಿನಯ್ ರಾಜ್ಕುಮಾರ್ ನಟನೆಯ ‘ಗ್ರಾಮಾಯಣ’ ಸಿನಿಮಾಗೆ ಮೇಘಾ ಶೆಟ್ಟಿ ನಾಯಕಿಯಾಗಿ ಸೆಲೆಕ್ಟ್ ಆಗಿದ್ದಾರೆ. ಅಕ್ಟೋಬರ್ ಮೊದಲ ವಾರದಿಂದ ಸಿನಿಮಾ ಶೂಟಿಂಗ್ ಆರಂಭವಾಗಲಿದೆ. ಧನ್ವೀರ್ ಗೌಡ ಜೊತೆ ಕೈವ ಸಿನಿಮಾ, ಆಪರೇಷನ್ ಲಂಡನ್ ಕೆಫೆ ಸಿನಿಮಾಗಳನ್ನ ನಟಿ ಮುಗಿಸಿ ಕೊಟ್ಟಿದ್ದಾರೆ. ಈ ಸಿನಿಮಾಗಳಲ್ಲಿ ಹೀರೋಯಿನ್ ಆಗಿ ನಟಿಸಿದ್ದಾರೆ. ಸದ್ಯ, ಮೇಘಾ ಶೆಟ್ಟಿ ಹಸಿಬಿಸಿ ಫೋಟೋಗಳು ಟ್ರೆಂಡಿಂಗ್ ನಲ್ಲಿವೆ.