ಟಾಲಿವುಡ್ ನಟ ನಾಗ ಚೈತನ್ಯ ಮದುವೆ ಡಿಸೆಂಬರ್ 4 ರಂದು ಹೈದರಾಬಾದ್ನಲ್ಲಿ ನಡೆಯುತ್ತಿದೆ. ಇದು ನಾಗಚೈತನ್ಯ ಅವರಿಗೆ ಎರಡನೇ ಮದುವೆ, ಮೊದಲ ಮದುವೆಯಷ್ಟೇ ಅದ್ದೂರಿಯಾಗಿ ಎರಡನೇ ಮದುವೆ ಮಾಡಿಕೊಳ್ಳುತ್ತಿದ್ದಾರೆ. ಹೈದರಾಬಾದ್ನ ಅನ್ನಪೂರ್ಣ ಸ್ಟುಡಿಯೋದಲ್ಲಿ ನಾಗಚೈತನ್ಯ ಶೋಭಿತಾ ಧೂಲಿಪಾಲ ಅವರನ್ನು ಮದುವೆ ಆಗುತ್ತಿದ್ದಾರೆ. ಈಗಾಗಲೇ ಇಬ್ಬರ ಮನೆಯಲ್ಲಿ ಮದುವೆ ಸಂಭ್ರಮ ಶುರುವಾಗಿದೆ. ಶುಕ್ರವಾರ ಹಳದಿ ಫಂಕ್ಷನ್ ನೆರವೇರಿದೆ. ವಿಪರ್ಯಾಸ ಎಂದರೆ ಶುಕ್ರವಾರ ನಾಗಚೈತನ್ಯ ಖುಷಿಯಾಗಿ ಹಳದಿ ಶಾಸ್ತ್ರದಲ್ಲಿ ಭಾಗಿಯಾದರೆ ಮತ್ತೊಂದೆಡೆ ಮಾಜಿ ಪತ್ನಿ ಸಮಂತಾ, ತಂದೆ ನಿಧನದ ದುಃಖದಲ್ಲಿದ್ದಾರೆ.
ಸಮಂತಾ ತಂದೆ ಜೋಸೆಫ್ ಪ್ರಭು ಗುರುವಾರ ನಿಧನರಾಗಿದ್ದಾರೆ. ಜೋಸೆಫ್, ಹೃದಯಾಘಾತದಿಂದ ನಿಧನರಾಗಿದ್ದಾರೆ. ಒಂದೆಡೆ ಸಮಂತಾ, ತನ್ನ ತಂದೆ ಅಗಲಿದ ನೋವಿನಲ್ಲಿದ್ದರೆ, ಇತ್ತ ನಾಗಚೈತನ್ಯ ಹಾಗೂ ಕುಟುಂಬದವರು ಖುಷಿ ಖುಷಿಯಾಗಿ ಮದುವೆ ಸಂಭ್ರಮದಲ್ಲಿ ಮುಳುಗಿದ್ದಾರೆ. ಸಮಂತಾ ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಬ್ರೇಕಿಂಗ್ ಹಾರ್ಟ್ ಎಮೋಜಿಯೊಂದಿಗೆ ತಂದೆ ಅಗಲಿದ ನೋವನ್ನು ಹಂಚಿಕೊಂಡಿದ್ದಾರೆ. ಸಮಂತಾ ತಂದೆ ಜೋಸೆಫ್ ಪ್ರಭು ಆಂಗ್ಲೋ ಇಂಡಿಯನ್, ಎಷ್ಟೋ ಸಂದರ್ಶನಗಳಲ್ಲಿ ತಮ್ಮ ತಂದೆಯ ಬಗ್ಗೆ ಹೇಳಿಕೊಂಡಿದ್ದರು. ಕಾರಣಾಂತರಗಳಿಂದ ತಂದೆಯೊಂದಿಗೆ ಮನಸ್ತಾಪ ಇದ್ದರೂ ತಮ್ಮ ಕಷ್ಟದ ದಿನಗಳಲ್ಲಿ ಅವರು ತಮ್ಮನ್ನು ಎಷ್ಟು ಪ್ರೋತ್ಸಾಹಿಸುತ್ತಿದ್ದರು, ತನಗೆ ಎಷ್ಟು ಧೈರ್ಯ ತುಂಬುತ್ತಿದ್ದರು ಎಂಬುದನ್ನು ಹೇಳಿಕೊಂಡಿದ್ದರು. ಸಮಂತಾ ಲವ್ ಮ್ಯಾರೇಜ್ ಮಾಡಿಕೊಂಡಾಗ ಖುಷಿಯಿಂದ ಹಾರೈಸಿದ್ದ ಜೋಸೆಫ್ ರುತ್ ಪ್ರಭು, ಆಕೆಗೆ ಡಿವೋರ್ಸ್ ಆದ ವರ್ಷದ ನಂತರ ಮದುವೆ ಫೋಟೋ ಹಂಚಿಕೊಂಡು ವ್ಯಥೆ ಪಟ್ಟಿದ್ದರು.

ಸಮಂತಾ ಹಾಗೂ ನಾಗಚೈತನ್ಯ ಜೊತೆಗಿರುವ ಫೋಟೋಗಳನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದ ಜೋಸೆಫ್, ಬಹಳ ಹಿಂದೆ, ಒಂದು ಕಥೆ ಇತ್ತು, ಅದು ಇನ್ನು ಮುಂದೆ ಅಸ್ತಿತ್ವದಲ್ಲಿಲ್ಲ! ಆದ್ದರಿಂದ, ನಾವು ಹೊಸ ಕಥೆ, ಹೊಸ ಅಧ್ಯಾಯವನ್ನು ಪ್ರಾರಂಭಿಸೋಣ ಎಂದು ಬರೆದುಕೊಂಡಿದ್ದರು. ಈ ಪೋಸ್ಟ್ಗೆ ಅನೇಕರು ಪ್ರತಿಕ್ರಿಯಿಸಿದ್ದರು. ಹೆದರಬೇಡಿ ನಾವೆಲ್ಲಾ ಸಮಂತಾ ಬೆಂಬಲಕ್ಕೆ ಇದ್ದೇವೆ. ಎಂದಿದ್ದರು. ಇದೀಗ ಜೋಸೆಫ್ ನಿಧನರಾಗಿದ್ದಾರೆ. ಸಮಂತಾ ತಂದೆ ನಿಧನಕ್ಕೆ ನೆಟಿಜನ್ಸ್ ಕೂಡಾ ಪ್ರತಿಕ್ರಿಯಿಸಿ ನಿಮ್ಮ ಕುಟುಂಬಕ್ಕೆ ದುಃಖ ಭರಿಸುವ ನೋವನ್ನು ಆ ದೇವರು ನಿಮಗೆ ಕೊಡಲಿ ಎಂದು ಧೈರ್ಯ ತುಂಬಿದ್ದಾರೆ.
ಮಧ್ಯವ ವರ್ಗದ ಕುಟುಂಬದಲ್ಲಿ ಜನಿಸಿದ್ದ ಸಮಂತಾ ರುತ್ ಪ್ರಭು, ಜೀವನದಲ್ಲಿ ಏನಾದರೂ ಸಾಧಿಸಬೇಕು ಎಂದು ಕನಸು ಕಂಡಿದ್ದವರು. 50 ಲಕ್ಷ ಬ್ಯಾಂಕ್ ಬ್ಯಾಲೆನ್ಸ್, ಒಳ್ಳೆ ಗಂಡ, ಇಷ್ಟು ಇದ್ದರೆ ಸುಖವಾಗಿ ಜೀವನ ನಡೆಸಬಹುದು ಎಂದು ಅಸೆ ಪಟ್ಟವರು, ಆದರೆ ಎಂದಿಗೂ ಆಕೆ ಸಿನಿಮಾ ರಂಗಕ್ಕೆ ಬರಬೇಕು ಎಂದುಕೊಂಡಿರಲಿಲ್ಲ. ಆಕಸ್ಮಿಕವಾಗಿ ಚಿತ್ರರಂಗಕ್ಕೆ ಬಂದ ಸಮಂತಾ 2010 ರಲ್ಲಿ ಏಮ್ ಮಾಯಮ್ ಚೇಸಾವೆ ಚಿತ್ರದ ಮೂಲಕ ಟಾಲಿವುಡ್ಗೆ ಎಂಟ್ರಿ ಕೊಟ್ಟರು. ಮೊದಲ ಸಿನಿಮಾ ನಾಯಕ ನಾಗಚೈತನ್ಯ ಜೊತೆ ಸಮಂತಾಗೆ ಲವ್ ಆಗಿ, ಈ ಜೋಡಿ 7 ವರ್ಷ ಪ್ರೀತಿಸಿದರು.
2017 ಜನವರಿಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡ ಈ ಜೋಡಿ ಅದೇ ವರ್ಷ ಅಕ್ಟೋಬರ್ 6 ರಂದು ಹಿಂದೂ ಸಂಪ್ರದಾಯದ ಪ್ರಕಾರ ಮದುವೆ ಆದರು, ಅಕ್ಟೋಬರ್ 7 ರಂದು ಕ್ರೈಸ್ತ ಸಂಪ್ರದಾಯದಂತೆ ಮತ್ತೊಮ್ಮೆ ಮದುವೆ ಆದರು. ಇದ್ದರೆ ಸಮಂತಾ ಹಾಗೂ ನಾಗಚೈತನ್ಯ ದಂಪತಿಯಂತೆ ಇರಬೇಕು ಎಂದು ಎಲ್ಲರೂ ಅಂದುಕೊಳ್ಳುತ್ತಿರುವಾಗಲೇ ಯಾರೂ ಊಹಿಸದಂತೆ ಈ ಜೋಡಿ 2021 ಜುಲೈನಲ್ಲಿ ಡಿವೋರ್ಸ್ ಘೋಷಿಸಿದರು. ಈ ವಿಚಾರವಂತೂ ಅಭಿಮಾನಿಗಳಿಗೆ ಬಹಳ ಶಾಕ್ ನೀಡಿತ್ತು. ವಿಚ್ಛೇದನ ಅನೌನ್ಸ್ ಆದಾಗ ನಾಗಚೈತನ್ಯ ಅಭಿಮಾನಿಗಳು ಸಮಂತಾರನ್ನು ದೂರಿದ್ದರು. ಆದರೆ ನಾಗಚೈತನ್ಯ ಶೋಭಿತಾ ಜೊತೆ ಅಫೇರ್ನಿಂದಲೇ ಬಹುಶಃ ಸಮಂತಾ, ನಾಗಚೈತನ್ಯನಿಂದ ದೂರ ಆಗಿರುವುದು ಎಂದು ಈಗ ನೆಟಿಜನ್ಸ್ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.