ಇತ್ತೀಚಿನ ದಿನಗಳಲ್ಲಿ ದೆಹಲಿ ಮೆಟ್ರೋದಲ್ಲಿ ದಿನಿತ್ಯ ನಡೆಯುವ ಒಂದಿಲ್ಲೊಂದು ಅಸಭ್ಯ ವರ್ತನೆಗಳು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗುತ್ತಲೇ ಇದೆ. ಇದೀಗ ಜೋಡಿಯೊಂದು ದೆಹಲಿ ಮೆಟ್ರೋದಲ್ಲಿ ಅಸಭ್ಯವಾಗಿ ನಡೆದುಕೊಂಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋ ನೋಡಿದ ಸಾರ್ವಜನಿಕರು ತೀವ್ರ ಆಕ್ರೋಶಗೊಂಡಿರುವುದಲ್ಲದೇ, ಇಂತಹ ಕಾಮುಕ ಜೋಡಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ದೆಹಲಿ ಪೊಲೀಸರನ್ನು ಆಗ್ರಹಿಸಿದ್ದಾರೆ. ಹಾಗಿದ್ದರೆ ಈ ಜೋಡಿ ಅಂತಹದ್ದೇನು ಮಾಡಿದ್ದಾರೆ?, ಇದಕ್ಕೆ ದೆಹಲಿ ಮೆಟ್ರೋ ನೀಡಿರುವ ಉತ್ತರವೇನು? ಬನ್ನಿ ನೋಡೋಣ.

ವಿಡಿಯೋದಲ್ಲಿ ಏನಿದೆ?
ಸದ್ಯ, ಈ ಅಶ್ಲೀಲ ವರ್ತನೆಯ ವಿಡಿಯೋ ವೈರಲ್ ಆಗುತ್ತಿದ್ದು, ಈ ಅಸಭ್ಯ ವರ್ತನೆ ತೋರಿರುವ ಜೋಡಿಗಳ ಪಕ್ಕದಲ್ಲಿ ಕುಳಿತ ವ್ಯಕ್ತಿ ವಿಡಿಯೋ ಮಾಡಿ ಹರಿ ಬಿಟ್ಟಿದ್ದಾರೆ ಎನ್ನಲಾಗುತ್ತಿದೆ. ವಿಡಿಯೋದಲ್ಲಿ ಪ್ರೇಮಿಗಳಿಬ್ಬರು ಕುಳಿತಲ್ಲೇ ಒಬ್ಬರನ್ನೊಬ್ಬರು ಪರಸ್ಪರ ತಬ್ಬಿಕೊಂಡು ಲಿಪ್ ಲಾಕ್ ಮಾಡುವುದು, ಚುಂಬಿಸುವುದನ್ನು ಕಾಣಬಹುದು. ಇವರ ಅಕ್ಕ ಪಕ್ಕದಲ್ಲಿ ಸಹ ಪ್ರಯಾಣಿಕರಿದ್ದರೂ ಕೂಡ ಯಾವುದೇ ಅಂಜಿಕೆಯಿಲ್ಲದೆ ಈ ಜೋಡಿ ಅಸಭ್ಯ ವರ್ತನೆ ತೋರಿದ್ದಾರೆ. ಸಾಮಾಜಿ ಜಾಲತಾಣದಲ್ಲಿ ವಿಡಿಯೋ ವೈದ್ಯಕೀಯ ವೈರಲ್ ಆಗುತ್ತಿದ್ದಂತೆ, ಇವರ ಮೇಲೆ ಕ್ರಮ ಜರುಗಿಸುವಂತೆ ಒತ್ತಾಯ ಕೇಳಿ ಬರುತ್ತಿದೆ.
ಈ ಘಟನೆಯ ವಿಡಿಯೋ ಎಲ್ಲೆಡೆ ಕಾಡ್ಗಿಚ್ಚಿನಂತೆ ಹಬ್ಬಿದಾಗ ಎಚ್ಚೆತ್ತಕೊಂಡ ದೆಹಲಿ ಮೆಟ್ರೋ ಸಾರ್ವಜನಿಕರಿಗೆ ಈ ಬಗ್ಗೆ ಉತ್ತರ ನೀಡಿದ್ದು, ‘ವೈರಲ್ ಆಗುತ್ತಿರುವ ವಿಡಿಯೋ ಬಗ್ಗೆ ವಿಷಾಧಿಸುತ್ತೇವೆ. ಈ ಬಗ್ಗೆ ಪರಿಶೀಲನೆ ನಡೆಸಿದ್ದೇವೆ. ಆದರೆ ಇಂತಹ ಅಶ್ಲೀಲ ವರ್ತನೆ ನಡೆದಿರುವ ಬಗ್ಗೆ ಯಾವುದೇ ಮಾಹಿತಿಗಳು ಲಭ್ಯವಾಗಿಲ್ಲ’ ಎಂದು ಅಸಭ್ಯ ವರ್ತನೆ ತೋರಿರುವ ಜೋಡಿಗಳ ಬಗ್ಗೆ ಮೃದು ದೋರಣೆ ತೋರಿದೆ. ಮೆಟ್ರೋ ಹೇಳಿಕೆಗೆ ಸಾರ್ವಜನಿಕ ವಲಯದಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
ಈ ಬಗ್ಗೆ ಮಾತನಾಡಿರುವ ಮೆಟ್ರೋ ಒ್ರಯಾಣಿಕರೊಬ್ಬರು,’ ದೆಹಲಿ ಮೆಟ್ರೋದಲ್ಲಿ ಇಂತಹ ಅಸಭ್ಯ ಹಾಗೂ ಅಶ್ಲೀಲ ವರ್ತನೆಗಳು ದಿನದಿಂದ ದಿನಕ್ಕೆ ಎಗ್ಗಿಲ್ಲದೆ ನಡೆಯುತ್ತಲೇ ಇದೆ. ಈ ಬಗ್ಗೆ ಯಾವುದೇ ಕ್ರಮಗಳನ್ನು ಮೆಟ್ರೋ ಜರುಗಿಸುತ್ತಿಲ್ಲ. ಈ ಹಿಂದೆಯೂ ಕೂಡ ಪ್ರೇಮಿಗಳು ಸಹ ಪ್ರಯಾಣಿಕರು ಇರುವಾಗಲೇ ಕಿಸ್ಸಿಂಗ್, ರೋಮ್ಯಾನ್ಸ್ ನಡೆಸಿದ್ದಾರೆ. ಈ ರೀತಿ ನಡೆಯುತ್ತಿದ್ದರೆ ಮೆಟ್ರೋ ಹತ್ತುವುದಕ್ಕೆ ಮುಜುಗರವಾಗುತ್ತದೆ’ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.