ದಕ್ಷಿಣ ಭಾರತದ ಖ್ಯಾತ ನಟಿ ಸಮಂತಾ ಅವರು ಇಂದು ಪ್ಯಾನ್ ಇಂಡಿಯಾ ಸ್ಟಾರ್. ಸಮಂತಾ ಅವರ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಸಮಂತಾ ಅವರು ಹಲವು ಶೋಗಳು ಇಂಟರ್ವ್ಯೂಗಳಲ್ಲಿ ಪಾಲ್ಗೊಳ್ಳುತ್ತಾರೆ, ಇವರ ಸಿಟಾಡೆಲ್ ವೆಬ್ ಸೀರೀಸ್ ಸೂಪರ್ ಹಿಟ್ ಆಗಿ, ಸಮಂತಾ ಅವರಿಗೆ ಒಳ್ಳೆಯ ಹೆಸರನ್ನು ತಂದುಕೊಟ್ಟಿದೆ. ಇದೆಲ್ಲ ಒಂದು ಕಡೆಯಾದರೆ, ಸಮಂತಾ ಅವರ ವೈಯಕ್ತಿಕ ಜೀವನದ ಬಗ್ಗೆ ಆಗುವ ಚರ್ಚೆಗಳು ಮತ್ತೊಂದು ಕಡೆ. ಸಮಂತಾ ಅವರು ವಿಚ್ಛೇದನ ಪಡೆದು 3 ವರ್ಷದ ಮೇಲಾಗಿದೆ. ಅವರ ಮಾಜಿ ಪತಿ ನಾಗಚೈತನ್ಯ ಈಗಾಗಲೇ ಮತ್ತೊಂದು ಮದುವೆ ಆಗಿದ್ದಾರೆ. ಆದರೆ ಇವರಿಬ್ಬರ ಬಗ್ಗೆ ಈಗಲು ಚರ್ಚೆಗಳು ನಡೆಯುತ್ತದೆ.

ಸಮಂತಾ ಹಾಗೂ ನಾಗಚೈತನ್ಯ ಇಬ್ಬರು ಸಹ ಪ್ರೀತಿಸಿ ಮದುವೆಯಾದರು. ಐದಾರು ವರ್ಷಗಳ ಕಾಲ ಪ್ರೀತಿಸಿ ಮದುವೆಯಾದ ಈ ಜೋಡಿ, ಹೆಚ್ಚು ಸಮಯ ಜೊತೆಯಾಗಿ ಇರಲಿಲ್ಲ. ಮದುವೆಯಾಗಿ 4 ವರ್ಷ ತುಂಬುವುದರ ಒಳಗೆ ಇಬ್ಬರು ವಿಚ್ಛೇದನ ಪಡೆದರು. ಇವರಿಬ್ಬರು ದೂರವಾಗಲು ಕಾರಣ ಏನು ಎಂದು ಅವರಿಗೆ ಮಾತ್ರ ಗೊತ್ತಿರುತ್ತದೆ. ಆದರೆ ನೆಟ್ಟಿಗರು ಮತ್ತು ಅವರ ಅಭಿಮಾನಿಗಳು ಇದಕ್ಕೆ ಕಾರಣ ಏನಿರಬಹುದು ಎಂದು ಚರ್ಚೆ ಮಾಡುತ್ತಲೇ ಇರುತ್ತಾರೆ. ನಾಗಚೈತನ್ಯ ಸಮಂತಾ ಅವರ ಜೊತೆಗೆ ಇದ್ದಾಗಲೇ ಶೋಭಿತಾ ಅವರ ಜೊತೆ ಡೇಟಿಂಗ್ ಮಾಡುತ್ತಿದ್ದರು, ಅದೇ ಕಾರಣಕ್ಕೆ ಇಬ್ಬರು ದೂರ ಆಗಿರೋದು ಎನ್ನಲಾಗುತ್ತಿದೆ.
ಆದರೆ ಅಸಲಿ ವಿಷಯ ಏನು ಎನ್ನುವುದು ಅವರಿಗೆ ಮಾತ್ರ ಗೊತ್ತಿರುತ್ತದೆ. ಇಬ್ಬರು ಬೇರೆ ಆಗಿದ್ದು ಆಯಿತು, ಶೋಭಿತಾ ಅವರ ಜೊತೆಗೆ ನಾಗಚೈತನ್ಯ ಮದುವೆ ಆಗಿದ್ದು ಆಯಿತು. ಅವರಿಬ್ಬರು ಈಗ ಚೆನ್ನಾಗಿಯೇ ಇದ್ದಾರೆ. ಆದರೆ ಸಮಂತಾ ಅವರು ನೋವಿನಲ್ಲೇ ಇದ್ದಾರೆ. ಸಮಂತಾ ಅವರು ತಂದೆಯನ್ನು ಕಳೆದುಕೊಂಡರು, ಅವರ ಆರೋಗ್ಯದಲ್ಲಿ ಕೂಡ ಕೆಲ ಸಮಸ್ಯೆ ಇದೆ. ಏನೇ ಆದರು ಅವರವರ ಜೀವನವನ್ನು ಅವರವರೆ ನೋಡಿಕೊಳ್ಳುತ್ತಿದ್ದಾರೆ. ಆದರೆ ಸೋಷಿಯಲ್ ಮೀಡಿಯಾದಲ್ಲಿ ಇವರಿಬ್ಬರ ಬಗ್ಗೆ ಚರ್ಚೆ ನಡೆಯುತ್ತಲೇ ಇರುತ್ತದೆ. ಚೈತನ್ಯ ಏನೋ ಸಮಂತಾ ಅವರಿಂದ ವಿಚ್ಛೇದನ ಪಡೆದ ಬಳಿಕ ಶೋಭಿತಾ ಅವರನ್ನು ಮದುವೆಯಾಗಿ ಸುಖವಾಗಿ ಸಂಸಾರ ಮಾಡುತ್ತಿದ್ದಾರೆ. ಇತ್ತೀಚೆಗೆ ಇಬ್ಬರೂ ಫೋಟೋಶೂಟ್ ಕೂಡ ಮಾಡಿಸಿದರು.

ಆದರೆ ಸಮಂತಾ ಅವರು ಇನ್ನೂ ಅದೇ ನೋವಿನಲ್ಲಿ ಇದ್ದಾರೆ, ಸಮಂತಾ ಅವರು ಇನ್ನು ಅದರಿಂದ ಹೊರಬಂದಿಲ್ಲ ಎನ್ನುವ ಸುದ್ದಿಗಳು ಇತ್ತೀಚೆಗೆ ಕೇಳಿಬಂದಿದ್ದವು. ಆದರೆ ಇದೀಗ ಸಮಂತಾ ಅವರ ಬಗ್ಗೆ ಬೇರೆಯದೇ ವಿಚಾರ ಕೇಳಿಬರುತ್ತದೆ. ಕೆಲವು ತಿಂಗಳುಗಳಿಂದ ಈ ಸುದ್ದಿ ಕೂಡ ವೈರಲ್ ಆಗುತ್ತಿತ್ತು. ಆದರೆ ಅದಕ್ಕೆ ಸ್ಪಷ್ಟನೆ ಸಿಕ್ಕಿರಲಿಲ್ಲ, ಈಗ ಅದೇ ರೀತಿಯ ಮತ್ತೊಂದು ಸುದ್ದಿ ಸಹ ಕೇಳಿಬಂದಿದ್ದು, ಸಮಂತಾ ಮೂವ್ ಆನ್ ಆಗಿದ್ದಾರೆ, ಮತ್ತೊಬ್ಬರನ್ನು ಡೇಟ್ ಮಾಡುತ್ತಿದ್ದಾರೆ, ಕೊನೆಗೂ ಸಮಂತಾ ಅವರು ಖುಷಿಯಾಗಿದ್ದಾರೆ ಎನ್ನುವ ಸುದ್ದಿ ಇದಾಗಿದೆ. ಈ ಬಾರಿ ಸಮಂತಾ ಅವರ ಹೆಸರು ಕೇಳಿಬಂದಿರುವುದು ನಿರ್ದೇಶಕ ರಾಜ್ ನೀಡಿಮೋರು ಜೊತೆಗೆ. ಹೌದು, ಕೆಲವು ದಿನಗಳಿಂದ ಈ ಸುದ್ದಿಯೊಂದು ಸಿಕ್ಕಾಪಟ್ಟೆ ವೈರಲ್ ಆಗಿದೆ.
ಇದು ಸತ್ಯ ಇರಬಹುದು ಎನ್ನುವ ಹಾಗೆ ಸಮಂತಾ ಅವರು ಇದೀಗ ರಾಜ್ ಅವರ ಜೊತೆಗೆ ಇನ್ನು ಕೆಲವು ಫೋಟೋಸ್ ಗಳನ್ನು ಶೇರ್ ಮಾಡಿದ್ದಾರೆ. ಈ ಫೋಟೋಸ್ ನೋಡಿದ ನೆಟ್ಟಿಗರು ಸಮಂತಾ ಅವರೊಡನೆ ನಿರ್ದೇಶಕರು ತುಂಬಾ ಕ್ಲೋಸ್ ಆಗಿದ್ದಾರೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಇನ್ನು ಸಮಂತಾ ಅವರ ಮುದ್ದಿನ ಶ್ವಾನಗಳ ಜೊತೆಗೆ ಸಹ ರಾಜ್ ತುಂಬಾ ಹೊಂದಿಕೊಂಡಿರುವ ಕೆಲವು ಫೋಟೋಸ್ ಕೂಡ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಸಮಂತಾ ಅವರು ಜೀವನದಲ್ಲಿ ಹೊಸ ಹೆಜ್ಜೆ ಇಡೋದಕ್ಕೆ ಸಿದ್ಧವಿರುವ ಹಾಗೆ ತೋರುತ್ತಿದೆ. ಇನ್ನು ಕೆಲವರು ಸಮಂತಾ ಅವರು ಈ ರೀತಿಯ ಫೋಟೋಸ್ ಶೇರ್ ಮಾಡಿರುವುದನ್ನು ನೋಡಿ, ಬಹುಶಃ ನಾಗಚೈತನ್ಯ ಅವರಿಗೆ ಹೊಟ್ಟೆ ಉರಿಸುವುದಕ್ಕೆ ಈ ರೀತಿ ಮಾಡುತ್ತಿರಬಹುದು ಎನ್ನಲಾಗಿದೆ.

ಇನ್ನು ಕೆಲವರು ನಾಗಚೈತನ್ಯ ಅವರು ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳುವುದಿಲ್ಲ ಎನ್ನುತ್ತಿದ್ದಾರೆ. ಇನ್ನು ಸಮಂತಾ ಅವರು ರಾಜ್ ನಿಡಿಮೋರು ಅವರನ್ನು ಮೊದಲು ಭೇಟಿ ಮಾಡಿದ್ದು ದಿ ಫ್ಯಾಮಿಲಿ ಮ್ಯಾನ್ 2 ವೆಬ್ ಸೀರೀಸ್ ನಲ್ಲಿ, ಮೊದಲಿಗೆ ಇವರಿಬ್ಬರ ರಿಲೇಶನ್ಷಿಪ್ ಕೇವಲ ನಿರ್ದೇಶಕ ಮತ್ತು ನಟಿ ಎನ್ನುವ ಸಂಬಂಧ ಮಾತ್ರ ಇತ್ತು. ನಂತರ ಎಲ್ಲವೂ ಬದಲಾಗಿದೆ, ಇನ್ನು ನಾಗಚೈತನ್ಯ ಅವರಿಂದ ವಿಚ್ಛೇದನ ಪಡೆದ ನಂತರ ಇವರಿಬ್ಬರಿಗೆ ಅನ್ಯೋನ್ಯತೆ ಬೆಳೆಯಿತು ಎನ್ನಲಾಗಿದೆ. ನಂತರ ಇವರು ಸಿಟಾಡೆಲ್ ಸೀರೀಸ್ ನಲ್ಲಿ ಮತ್ತೆ ಒಂದೇ ಪ್ರಾಜೆಕ್ಟ್ ನಲ್ಲಿ ಕೆಲಸ ಮಾಡಿದಾಗ, ಇಬ್ಬರ ನಡುವೆ ಏನೋ ಇರಬಹುದು ಎನ್ನುವ ವಿಚಾರ ಗುಲ್ಲಾಗುವುದಕ್ಕೆ ಶುರುವಾಯಿತು. ಬಳಿಕ ಇಬ್ಬರೂ ಜೊತೆಯಾಗಿ ಕಾಣಿಸಿಕೊಳ್ಳುವುದು ಹೆಚ್ಚಾಯಿತು.
ಇತ್ತೀಚೆಗೆ ರಾಜ್ ಹಾಗೂ ಸಮಂತಾ ಜೊತೆಯಾಗಿ ತಿರುಪತಿ ದೇವಸ್ಥಾನಕ್ಕೆ ಭೇಟಿ ಕೊಟ್ಟರು, ಸಮಂತಾ ಜೊತೆಗೆ ಪಿಕೆಲ್ ಕಾಲ್ ಲಾಂಚ್ ನಲ್ಲಿ ಸಹ ಕಾಣಿಸಿಕೊಂಡರು. ಈ ರೀತಿ ಇಬ್ಬರನ್ನು ಹೆಚ್ಚಾಗಿ ನೋಡಿದ ನಂತರ ಜನರು ಆ ರೀತಿ ಅಂದುಕೊಂಡಿದ್ದಾರೆ. ಇನ್ನು ರಾಜ್ ಅವರಿಗೆ ಈಗಾಗಲೇ ಮದುವೆಯಾಗಿದೆ, ಪತ್ನಿ ಜೊತೆಗು ಚೆನ್ನಾಗಿಯೇ ಇದ್ದರು, ಆದರೆ ಈಗ ಸಮಂತಾ ಅವರೊಡನೆ ಸ್ನೇಹ ಹೆಚ್ಚಾಗಿರುವ ಕಾರಣ, ಪತ್ನಿಗೆ ವಿಚ್ಛೇದನ ನೀಡಿ ಸಮಂತಾ ಅವರೊಡನೆ ಇರುತ್ತಾರಾ ಎನ್ನುವ ಪ್ರಶ್ನೆ ಶುರುವಾಗಿದೆ. ಇನ್ನು ಸಮಂತಾ ಅವರು ಇನ್ನುಮುಂದೆ ಆದರೂ ಚೆನ್ನಾಗಿರಲಿ ಎನ್ನುವುದೇ ಅವರ ಅಭಿಮಾನಿಗಳ ಆಸೆ ಆಗಿದೆ.



