ಮದುವೆ ಅಂದರೆ ಪ್ರತಿಯೊಬ್ಬರ ಬದುಕಿನಲ್ಲೂ ವಿಶೇಷವಾದ ಕ್ಷಣ. ಈ ಸಂಭ್ರಮವನ್ನು ಹೆಚ್ಚಾಗಿಸಲು ವೈವಿಧ್ಯಮಯವಾಗಿ ಮದುವೆಯಾಗಬೇಕು, ಮದುವೆಗೆ ಬಂದವರು ಖುಷಿ ಪಡಬೇಕಿ ಎಂದೆಲ್ಲ ವಧು-ವರರು ಭಾವಿಸುವುದು ಸಹಜ. ಸದ್ಯ, ಒಂದು ಮದುವೆಯ ವಿಡಿಯೋ ವೈರಲ್ ಆಗುತ್ತಿದ್ದು, ಮದುಮಗಳು ಎಲ್ಇಡಿ ಲೆಹಂಗ ತೊಟ್ಟು ಮಿಂಚಿದ್ದಾಳೆ. ವಿಷೇಶ ಎಂದರೆ ಈ ಬಟ್ಟೆಯನ್ನು ವರ ವಿನ್ಯಾಸಗೊಳಿಸಿದ್ದಾನಂತೆ.

https://www.instagram.com/reel/Cw7trioIaCs/?utm_source=ig_web_copy_link&igshid=MzRlODBiNWFlZA==
ಕಳೆದ ಕೆಲ ದಿನಗಳ ಹಿಂದಷ್ಟೇ ಈ ವಿಡಿಯೋ ಇನ್ಸ್ಟಾಗ್ರಾಂನಲ್ಲಿ ಅಪ್ಲೋಡ್ ಆಗಿದ್ದು, ಈ ವಿಡಿಯೋಗೆ ಸುಮಾರು 2,000ಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. 2.5 ಲಕ್ಷ ಜನರು ನೋಡಿದ್ದಾರೆ. ನೂರಾರು ಜನರು ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ವಧು ರೆಹಬ್ ಡೇನಿಯಲ್ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋ ಪೋಸ್ಟ್ ಮಾಡಿದ್ದಾಳೆ. ವಧು-ವರರು ವಿಶೇಷವಾದ ಬಟ್ಟೆ ತೊಟ್ಟು ಮಿಂಚಿದ್ದಾರೆ. ಮದುಮಗಳಂತೂ ಎಲ್ಇಡಿ ಲೆಹಂಗ ತೊಟ್ಟು ಸಂಭ್ರಮಿಸಿದ್ದಾಳೆ.
ಈ ಬಗ್ಗೆ ಮಾತನಾಡಿರುವ ಮದುಮಗಳು, ‘ನನ್ನ ಗಂಡನೇ ಈ ಲೆಹೆಂಗಾ ವಿನ್ಯಾಸ ಮಾಡಿದ್ದಾರೆ. ಇದನ್ನು ಧರಿಸಿದಾಗ ಜನರು ಗೇಲಿ ಮಾಡಬಹುದು ಎಂದು ಕೆಲವರು ಹೇಳಿದರು. ಆದರೆ ನಾನಿದನ್ನು ಅತ್ಯಂತ ಹೆಮ್ಮೆಯಿಂದ ಧರಿಸಿದ್ದೇನೆ. ಏಕೆಂದರೆ ಈತನಕ ಯಾವ ಮದುವಣಗಿತ್ತಿಯೂ ಇಂಥ ಪ್ರಯತ್ನವನ್ನು ಮಾಡಿಲ್ಲ.’ ಎಂದಿದ್ದಾರೆ. ವಿಡಿಯೋ ಕಂಡ ನೆಟ್ಟಿಗರು ಖುಷಿಯಾಗಿದ್ದು, ‘ನಿಮ್ಮ ಎಲ್ಇಡಿ ಲೆಹಂಗದ ರೀತಿಯೇ ನಿಮ್ಮ ಜೀವನ ಕೂಡ ಮಿಂಚುತ್ತಿರಲಿ’ ಎಂದು ಹಾರೈಸಿದ್ದಾರೆ. ಸದ್ಯ, ಈ ವಿಡಿಯೋ ಸಕ್ಕತ್ ವೈರಲ್ ಆಗುತ್ತಿದೆ.