ಶಾಸಕ ಪ್ರದೀಪ್ ಈಶ್ವರ್ ಬಿಜೆಪಿ ಹಾಗೂ ಜೆಡಿಎಸ್ ನಾಯಕರ ಕುರಿತು ವಾಗ್ದಾಳಿ ನಡೆಸೋ ಮೂಲಕ ಕಾಂಗ್ರೆಸ್ ನಲ್ಲಿ ಅವರದ್ದೇ ಆದ ಒಂದು ಇಮೇಜ್ ಸೃಷ್ಟಿ ಮಾಡಿಕೊಂಡಿದ್ದಾರೆ ಅಂದರೆ ತಪ್ಪಾಗಲ್ಲ. ಸಿಎಂ, ಡಿಕೆಶಿ, ಖರ್ಗೆ ವಿಚಾರ ಬಂತು ಅಂದರೆ ಸಾಕು ಎಲ್ಲೇ ಇರಲಿ, ಎಂತ ವೇದಿಕೆಯಲ್ಲೇ ಇರಲಿ ಮಾತು ಮುಂದುವರೆಸುತ್ತಲೇ ಇರುತ್ತಾರೆ. ಈಗ ಕುಮಾರಸ್ವಾಮಿ ವಿಚಾರವಾಗಿ ಅವರು ಹೇಳಿರೋ ಒಂದು ಮಾತು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಮಾಜಿ ಸಚಿವ ಸುಧಾಕರ್ ಮುಂದೆ ನಿಂತು ಚಿಕ್ಕಬಳ್ಳಾಪುರ ಕ್ಷೇತ್ರವನ್ನ ಮಾತಲ್ಲೇ ತಮ್ಮದಾಗಿಸಿಕೊಂಡ ಪ್ರದೀಪ್ ಈಶ್ವರ್ ಇಡೀ ರಾಜ್ಯಕ್ಕೆ ಪರಿಚಿತರಾದರು. ಈತ ತಮ್ಮ ಕ್ಷೇತ್ರದಲ್ಲಿ ಕೆಲಸವನ್ನೂ ಮಾಡ್ತಾ ಇದ್ದಾರೆ. ಇದರ ಮಧ್ಯೆ ಹೊಸ ವಿಚಾರ ಅಂದರೆ ತೀಕ್ಷ್ಣ ಮಾತಿನ ಮೂಲಕ ಬಿಜೆಪಿ ಜೆಡಿಎಸ್ ನಾಯಕರ ಮಾತು ಕಟ್ಟಾಕ್ತಾ ಇರೋ ಈ ಶಾಸಕ ಕುಮಾರಸ್ವಾಮಿ ವಿರುದ್ಧ ನೀಡಿದ ಒಂದು ಹೇಳಿಕೆ ವೈರಲ್ ಆಗ್ತಾ ಇದೆ.

ಇತ್ತೀಚೆಗೆ ಪರಮೇಶ್ವರ್ ಒಡೆತನದ ಸಂಸ್ಥೆಗಳ ಮೇಲೆ ಇಡಿ ದಾಳಿ ಮಾಡಿತ್ತು. ಇದಕ್ಕೆ ಕಾಂಗ್ರೆಸ್ ನಲ್ಲೇ ಇರುವ ಒಂದು ಗುಂಪು ಕಾರಣ ಅಂತ ಬಿಜೆಪಿ ಹಾಗೂ ಕುಮಾರಸ್ವಾಮಿ ಆರೋಪ ಮಾಡಿದ್ದರು. ಮಹಾನಾಯಕನಿಂದಲೇ ಈ ದಾಳಿ ನಡೆದಿದೆ ಅಂತ ಬಹಿರಂಗವಾಗಿ ಹೇಳಿದ್ದರು. ಈ ವಿಚಾರವಾಗಿ ಇಂದು ಪ್ರದೀಪ್ ಈಶ್ವರ್ ಮಾತನಾಡಿದ್ದಾರೆ. ಕುಮಾರಸ್ವಾಮಿಗೆ ಕುಟುಕುವ ಕೆಲಸ ಮಾಡಿದ್ದಾರೆ.
ಕುಮಾರಸ್ವಾಮಿ ನಿದ್ದೆಲೂ ಡಿಕೆಶಿ ಬರ್ತಾರೆ. ಹೆಚ್ ಡಿಕೆಗೆ ಡಿಕೆಶಿ ಅವರ ಮೇಲೆ ಪ್ಯಾರ್, ಮೊಹಬ್ಬತ್, ಕ್ರಶ್ ಆಗಿದೆ. ಎಂಥ ಕ್ರಶ್ ಆಗಿದೆ ಎಂದರೆ ಡಿಕೆಶಿ ಬಿಟ್ಟು ಯಾರೂ ನೆನಪಿಗೆ ಬರೋದಿಲ್ಲ. ಇಡಿ ಮೂಲಕ ಹೆಂಗೆ ಟಾರ್ಚರ್ ಕೊಡಬಹುದು ಅಂತಾ ಯೋಚನೆ ಮಾಡಿರ್ತಾರೆ. ಬೇರೆ ಸಮುದಾಯದವರನ್ನ ನೀವು ಬೆಳೆಯೋದಕ್ಕೆ ಬಿಡಲಿಲ್ಲ. ಡಿಕೆಶಿ ಒಕ್ಕಲಿಗರು, ಅವ್ರನ್ನೂ ಬೆಳೆಸೋಕೆ ನೀವು ಬಿಡದಿದ್ರೆ ಹೇಗೆ. ಹೊಟ್ಟೆಕಿಚ್ಚು ಪಡ್ಕೊಂಡು ಇದ್ರೆ ಹೇಗೆ. ನಂಗೆ ಐಡಿ, ಇಡಿ ಮೇಲೆ ಕೂದಲಷ್ಟು ಭಯ ಇಲ್ಲ. ಬೆಳೆಗ್ಗೆ ಡೋರ್ ಓಪನ್ ಮಾಡಿದ್ರೆ ಇಡಿಯವರು ಬರ್ತಾರೇನೋ ಅಂತಾ ನೋಡ್ತೇನೆ. ಅವ್ರು ಏನೇ ಮಾಡಿದ್ರೂ 2029 ಕ್ಕೆ ಸೆಂಟ್ರಲ್ ನಲ್ಲಿ ನಾವು ಬರ್ತೀವಿ. ರಾಹುಲ್ ಗಾಂಧಿ ಪ್ರಧಾನಿ ಆಗೋದು ನಿಶ್ಚಿತ ಅಂತ ತಿರುಗೇಟು ಕೊಟ್ಟರು.



