ಕಿಚ್ಚ ಸುದೀಪ್ ಅವರು ಈಗ ಸ್ಯಾಂಡಲ್ ವುಡ್ ಗೆ ಮಾತ್ರ ಸೀಮಿತವಾಗಿರೋ ನಟ ಅಲ್ಲ. ಇವರು ಇಂದು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡಿರುವವರು. ಈಗಾಗಲೇ ಕೆಲವು ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಸುದೀಪ್ ನಟಿಸಿದ್ದಾರೆ. ಸುದೀಪ್ ಅವರು ನಟಿಸಿ ತೆರೆಕಂಡ ಹಿಂದಿನ ಸಿನಿಮಾ ವಿಕ್ರಾಂತ್ ರೋಣ, ಈ ಸಿನಿಮಾ ತೆರೆಕಂಡು 2 ವರ್ಷಗಳ ನಂತರ ಇದೀಗ ಸುದೀಪ್ ಅವರು ಮ್ಯಾಕ್ಸ್ ಸಿನಿಮಾ ಮೂಲಕ ತೆರೆಮೇಲೆ ಬರುತ್ತಿದ್ದಾರೆ. ಇಂದು ಮ್ಯಾಕ್ಸ್ ಸಿನಿಮಾ ತೆರೆಕಂಡಿದ್ದು, ಈಗಾಗಲೇ ಅಭಿಮಾನಿಗಳಿಂದ ಒಳ್ಳೆಯ ರಿವ್ಯೂ ಪಡೆದುಕೊಳ್ಳುತ್ತಿದೆ. ಸಿನಿಮಾ ಪ್ರೊಮೋಷನ್ ಗಳಲ್ಲಿ ಸಹ ಸುದೀಪ್ ಅವರು ಭಾಗವಹಿಸಿದ್ದರು.
ಹಲವು ಇಂಟರ್ವ್ಯೂ ಗಳು, ಈವೆಂಟ್ ಗಳಲ್ಲಿ ಕಾಣಿಸಿಕೊಂಡಿರುವ ಸುದೀಪ್ ಅವರು, ಅನುಶ್ರೀ ಯೂಟ್ಯೂಬ್ ಚಾನೆಲ್ ನ ಇಂಟರ್ವ್ಯೂ ನಲ್ಲಿ ಸಹ ಕಾಣಿಸಿಕೊಂಡಿದ್ದಾರೆ. ಅನುಶ್ರೀ ಅವರ ಶೋಗೆ ಸುದೀಪ್ ಅವರನ್ನು ಕರೆಸೋದು ಯಾವಾಗ ಎಂದು ಎಲ್ಲಾ ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದರು, ಇದೀಗ ಕೊನೆಗೂ ಮ್ಯಾಕ್ಸ್ ಸಿನಿಮಾ ಪ್ರೊಮೋಷನ್ ಗಾಗಿ ಸುದೀಪ್ ಅವರು ಅನುಶ್ರೀ ಯೂಟ್ಯೂಬ್ ಚಾನೆಲ್ ಗೆ ಇಂಟರ್ವ್ಯೂ ನೀಡಿದ್ದಾರೆ. ಈ ಇಂಟರ್ವ್ಯೂ ಬಹಳ ಫನ್ನಿ ಆಗಿ ಮೂಡಿಬಂದಿದ್ದು, ಸುದೀಪ್ ಅವರು ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ, ಕೆಲವು ಬಹಳ ನಗು ತರಿಸುವಂಥ ವಿಚಾರಗಳು ಸಹ ಇದೆ.
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ಅನುಶ್ರೀ ಸುದೀಪ್ ಅವರಿಗೆ ಒಂದು ಪ್ರಶ್ನೆ ಕೇಳಿದರು, ಆಕ್ಷನ್, ರೊಮ್ಯಾನ್ಸ್, ಡ್ಯಾನ್ಸ್ ಯಾವ ದೃಶ್ಯಗಳಲ್ಲಿ ನಟಿಸೋದು ಕಷ್ಟ ಆಗುತ್ತೆ ಎಂದು ಕೇಳಿದ್ದು, ಆ ಪ್ರಶ್ನೆಗೆ ನಗುತ್ತಲೇ ಉತ್ತರ ಕೊಟ್ಟ ಸುದೀಪ್ ಅವರು ರೊಮ್ಯಾನ್ಸ್ ದೃಶ್ಯಗಳಲ್ಲಿ ಏನೆಲ್ಲಾ ಆಗುತ್ತದೆ , ಹೇಗೆಲ್ಲಾ ಕಷ್ಟ ಆಗುತ್ತದೆ ಎಂದು ತಿಳಿಸಿದ್ದಾರೆ. ರೊಮ್ಯಾನ್ಸ್ ದೃಶ್ಯದಲ್ಲಿ ನಟಿಸೋದು ಕಷ್ಟ, ಕೆಲವು ನಟಿಯರು ಫ್ರೆಂಡ್ಸ್ ಆಗಿರುತ್ತಾರೆ, ಅವರ ಜೊತೆಗೆ ಎಲ್ಲ ದೃಶ್ಯಗಳಲ್ಲಿ ಈಸಿ ಆಗಿ ನಟಿಸಬಹುದು. ಆದರೆ ಇನ್ನೂ ಕೆಲವು ನಟಿಯರ ಜೊತೆಗೆ ಕಷ್ಟ ಆಗುತ್ತದೆ. ಮೇಕಪ್ ಹಾಳಾಗುತ್ತದೆ, ಕೂದಲು ಹಾಳಾಗುತ್ತದೆ ಅಂತ ಹೇಳ್ತಾರೆ. ಅಲ್ಲ ಮುಟ್ಟಬೇಡಿ ಅಂತ ಹೇಳ್ತಾರೆ, ಈ ಥರ ಎಲ್ಲ ಇದ್ದಾಗ ರೊಮ್ಯಾನ್ಸ್ ದೃಶ್ಯಗಳಲ್ಲಿ ನಟಿಸೋದು ಕಷ್ಟ ಅಂದಿದ್ದಾರೆ ಸುದೀಪ್.
ಇನ್ನು ಡ್ಯಾನ್ಸ್ ಬಗ್ಗೆ ಮಾತನಾಡಿದ ಸುದೀಪ್ ಅವರು, ಡ್ಯಾನ್ಸ್ ಮಾಡಬೇಕು ಅಂತ ಬಂದಾಗ ನಮ್ಮ ತಂಡ ಡ್ಯಾನ್ಸ್ ಬರದ ಹೀರೋಗಳ ಡ್ಯಾನ್ಸ್ ತೋರಿಸಿ ನೀವು ಇವರಿಗಿಂತ ಚೆನ್ನಾಗಿ ಡ್ಯಾನ್ಸ್ ಮಾಡ್ತೀರಾ ಅಂತ ಹುರಿದುಂಬಿಸ್ತಾರೆ, ಆದರೆ ನಾನು ಪುನೀತ್ ರಾಜ್ ಕುಮಾರ್ ಅವರ ಡ್ಯಾನ್ಸ್ ಎಲ್ಲ ನೋಡಿದಾಗ ನನಗೆ ಇದೆಲ್ಲ ಅಗೋದೇ ಇಲ್ಲ ಅಂದುಕೊಳ್ತೀನಿ. ಯಾವುದಾದರೂ ಹಾಡಲ್ಲಿ ಡ್ಯಾನ್ಸ್ ಚೆನ್ನಾಗಿ ಬಂದಿದೆ ಅಂದ್ರೆ, ನಮ್ಮ ತಂಡದವರು ಡ್ಯಾನ್ಸ್ ಬರದೇ ಹೀರೋಗಳ ವಿಡಿಯೋಗಳನ್ನ ತೋರಿಸಿ, ನನ್ನ ಕೈಯಲ್ಲಿ ಡ್ಯಾನ್ಸ್ ಮಾಡಿಸಿರುತ್ತಾರೆ. ಅಡವ್ಕ್ ಅದು ಚೆನ್ನಾಗಿ ಬಂದಿರುತ್ತೆ ಎಂದು ಡ್ಯಾನ್ಸ್ ವಿಷಯದ ಬಗ್ಗೆ ಕೂಡ ತಮಾಷೆಯಾಗಿ ಹೇಳಿದ್ದಾರೆ ಸುದೀಪ್.
ಇನ್ನು ಬಿಗ್ ಬಾಸ್ ಬಿಡುತ್ತಿರುವ ಬಗ್ಗೆ ಸಹ ಸುದೀಪ್ ಅವರು ಮಾತನಾಡಿದ್ದು, ಯಾವಾಗಲೂ ಎಲ್ಲರನ್ನು ತಿದ್ದುತ್ತಾ ಕೂರೋದು ನನ್ನ ಕೆಲಸ ಅಲ್ಲ, ಇನ್ನು ಎಷ್ಟು ವರ್ಷ ಅಂತ ಮಾಡಲಿ ಎಂದು ಹೇಳಿರುವ ಸುದೀಪ್ ಅವರು, ಕಳೆದ ಸೀಸನ್ ನಲ್ಲಿ ಶೂಟಿಂಗ್ ನಡೆಯುತ್ತಿದ್ದಾಗ, ಮಹಾಬಲಿಪುರಂ ಇಂದ ಪ್ರತಿ ವಾರ ಬಂದು ಹೋಗುವುದಕ್ಕೆ ಎಷ್ಟು ಕಷ್ಟ ಆಗುತ್ತಿತ್ತು ಅನ್ನೋದನ್ನ ತಿಳಿಸಿದ್ದಾರೆ. ಬಿಗ್ ಬಾಸ್ ಇಂದ ಸುದೀಪ್ ಅವರು ಹೊರಗಡೆ ಬರುತ್ತಿರುವುದಕ್ಕೆ ಅಭಿಮಾನಿಗಳಿಗೆ ಬೇಸರ ಅಂತೂ ಇದೆ. ಆದರೆ ಇಂದು ಮ್ಯಾಕ್ಸ್ ಸಿನಿಮಾದಲ್ಲಿ ಸುದೀಪ್ ಅವರನ್ನು ನೋಡಿ ಎಲ್ಲರೂ ಮೆಚ್ಚಿಕೊಂಡಿದ್ದಾರೆ.