ಭಾರತ್ ಚಿತ್ರರಂಗದಲ್ಲಿ ಕೆಜಿಎಫ್ ಚಾಪ್ಟರ್1 ಮತ್ತು ಕೆಜಿಎಫ್ ಚಾಪ್ಟರ್2 ಸಿನಿಮಾ ಎಷ್ಟು ದೊಡ್ಡ ಮಟ್ಟದಲ್ಲಿ ಕ್ರೇಜ್ ಸೃಷ್ಟಿಸಿತು ಎನ್ನುವ ವಿಷಯ ಗೊತ್ತೇ ಇದೆ. ಪ್ರಶಾಂತ್ ನೀಲ್ ಅವರ ನಿರ್ದೇಶನದಲ್ಲಿ ನಟ ಯಶ್ ಹಾಗೂ ಹಲವು ಅದ್ಭುತ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ನಟಿಸಿದ ಸಿನಿಮಾ ಇದು. ಕೆಜಿಎಫ್ ಚಾಪ್ಟರ್1 ಸಿನಿಮಾವನ್ನ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಎಲ್ಲಾ ಭಾಷೆಗಳಲ್ಲಿ ಬಿಡುಗಡೆ ಮಾಡಲಾಯಿತು. ಈ ಸಿನಿಮಾ ಇಂದ ಯಶ್ ಅವರಿಗೆ ಮಾತ್ರವಲ್ಲದೇ ಕನ್ನಡ ಚಿತ್ರರಂಗಕ್ಕೂ ಒಳ್ಳೆಯ ಹೆಸರು ಬಂತು. ಯಶ್ ಅವರು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡರು. ಸಿನಿಮಾದ ಸಕ್ಸಸ್ ಕೆಜಿಎಫ್2 ಅನ್ನು ಸಾವಿರ ಕೋಟಿ ಗಳಿಕೆ ಮಾಡುವತ್ತ ಕೊಂಡೊಯ್ಯಿತು. ಕನ್ನಡ ಚಿತ್ರರಂಗದ ತಾಕತ್ತು ಏನೆನ್ನುವುದು ಭಾರತ ಚಿತ್ರರಂಗಕ್ಕೆ ತಿಳಿಯಿತು..

ಕೆಜಿಎಫ್ ಚಾಪ್ಟರ್2 ಇನ್ನು ದೊಡ್ಡ ಮಟ್ಟದಲ್ಲಿ ಬಿಡುಗಡೆ ಕಂಡಿತು. ಬಾಲಿವುಡ್ ನ ಸ್ಟಾರ್ ಕಲಾವಿದರಾದ ಸಂಜಯ್ ದತ್ ಹಾಗೂ ರವೀನಾ ಟಂಡನ್, ತೆಲುಗಿನ ರಾವ್ ರಮೇಶ್ ಹಾಗೂ ಈಶ್ವರಿ ರಾವ್ ಸೇರಿದಂತೆ ಎಲ್ಲಾ ಭಾಷೆಯ ಕಲಾವಿದರು ಕೆಜಿಎಫ್2 ನಲ್ಲಿ ಇದ್ದರು. ಆದರೆ ಕೆಜಿಫ್2 ನಲ್ಲಿ ಅನಂತ್ ನಾಗ್ ಅವರು ಇರಲಿಲ್ಲ. ಅವರ ಬದಲಾಗಿ ಪ್ರಕಾಶ್ ರಾಜ್ ಅವರು ಪಾತ್ರಕ್ಕೆ ಬಂದರು. ಇನ್ನು ನಾಗಾಭರಣ ಅವರು, ಅಶೋಕ್ ಶರ್ಮಾ ಅವರು ಸೇರಿದಂತೆ ಬೇರೆ ಎಲ್ಲಾ ಕಲಾವಿದರು ಸಹ ಕೆಜಿಎಫ್2 ನಲ್ಲಿ ಇದ್ದರು. 2022ರಲ್ಲಿ ತೆರೆಕಂಡ ಕೆಜಿಎಫ್2 ಸಿನಿಮಾ ಆಲ್ ಇಂಡಿಯಾ ಬ್ಲಾಕ್ ಬಸ್ಟರ್ ಹಿಟ್ ಆಯಿತು. ಆ ಸಿನಿಮಾದ ಕ್ರೇಜ್ ಇನ್ನು ಸಹ ಕಡಿಮೆ ಆಗಿಲ್ಲ, ಈಗಲು ಕೆಜಿಎಫ್2 ಅಂದರೆ ಜನ ಆ ಸಿನಿಮಾವನ್ನು ನೋಡುವ ರೀತಿಯೇ ಬೇರೆ.

ಎಲ್ಲರೂ ರಾಕಿ ಭಾಯ್ ಫ್ಯಾನ್ಸ್ ಆಗಿರೋರೆ. ರಾಕಿ ಭಾಯ್ ಪಾತ್ರದಲ್ಲಿ ಯಶ್ ಅವರು ಎಷ್ಟು ಚೆನ್ನಾಗಿ ನಟಿಸಿದ್ದಾರೆ ಎಂದು ಗೊತ್ತೇ ಇದೆ. ಇಂಡಿಯಾ ಬಾಕ್ಸ್ ಆಫೀಸ್ ಸುಲ್ತಾನ್ ಎಂದೇ ಯಶ್ ಅವರನ್ನು ಕರೆಯಲಾಗುತ್ತಿದೆ. ಯಶ್ ಅವರ ಮುಂದಿನ ಸಿನಿಮಾ ಟಾಕ್ಸಿಕ್. ಈ ಸಿನಿಮಾ ಶೂಟಿಂಗ್ ಭರದಿಂದ ಸಾಗುತ್ತಿದೆ ಆದರೆ ಟಾಕ್ಸಿಕ್ ಸಿನಿಮಾ ಈ ವರ್ಷ ಬಿಡುಗಡೆ ಆಗುವ ಹಾಗೆ ಕಾಣುತ್ತಿಲ್ಲ. ಇನ್ನು ಕೆಜಿಎಫ್2 ನಂತರ ಯಶ್ ಅವರ ಅಭಿಮಾನಿಗಳು ಮತ್ತು ಸಿನಿಮಾ ಪ್ರಿಯರು ಕೆಜಿಎಫ್3 ಬರೋದು ಯಾವಾಗ ಅನ್ನೋ ಚಿಂತೆಯಲ್ಲಿದ್ದಾರೆ. ಕೆಜಿಎಫ್2 ಮುಗಿಯುವ ವೇಳೆ ಚಾಪ್ಟರ್3 ಇರುವುದಾಗಿ ಒಂದು ಸಣ್ಣ ಸುಳಿವನ್ನು ಚಿತ್ರತಂಡ ನೀಡಿದೆ. ಸಿನಿಮಾ ತೆರೆಕಂಡು 3 ವರ್ಷ ಆಗುತ್ತಿದೆ, ಇಷ್ಟು ದಿನಗಳವರೆಗು ಕೆಜಿಎಫ್3 ಬಗ್ಗೆ ಹೊಸ ಅಪ್ಡೇಟ್ ಸಿಕ್ಕಿರಲಿಲ್ಲ. ಎಲ್ಲರೂ ಬೇರೆ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ.

ನಿರ್ದೇಶಕ ಪ್ರಶಾಂತ್ ನೀಲ್ ಅವರು ಜ್ಯೂನಿಯರ್ ಎನ್ಟಿಆರ್ ಅವರ ಜೊತೆಗಿನ ಸಿನಿಮಾದಲ್ಲಿ ಬ್ಯುಸಿ ಇದ್ದು, ಮುಂದೆ ಸಲಾರ್2 ಮಾಡಲಿದ್ದಾರೆ ನಂತರ ಇನ್ನೊಂದು ಸಿನಿಮಾ ಸಹ ಇದೆ ಎಂದು ಮಾಹಿತಿ ಸಿಕ್ಕಿದೆ. ಇನ್ನು ಯಶ್ ಅವರು ಟಾಕ್ಸಿಕ್ ಹಾಗೂ ರಾಮಾಯಣ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಹೊಂಬಾಳೆ ಪ್ರೊಡಕ್ಷನ್ಸ್ ಸಂಸ್ಥೆ ಸಾಲು ಸಾಲು ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದೆ. ಹೀಗೆ ಎಲ್ಲರೂ ಬ್ಯುಸಿ ಇರುವಾಗ ಕೆಜಿಎಫ್3 ಸಧ್ಯಕ್ಕೆ ಬರುವುದಿಲ್ಲ, ಸಿನಿಮಾ ಬಗ್ಗೆ ಯಾವುದೇ ಅಪ್ಡೇಟ್ಸ್ ಕೂಡ ಇಲ್ಲ ಎಂದು ಅಭಿಮಾನಿಗಳಿಗೆ ಬೇಸರ ಆಗಿತ್ತು, ಆದರೆ ನಟಿ ಮಾಳವಿಕಾ ಅವರು ಕೆಜಿಎಫ್ ಫ್ಯಾನ್ಸ್ ಗೆ ಗುಡ್ ನ್ಯೂಸ್ ನೀಡಿದ್ದಾರೆ. ಈಗಾಗಲೇ ಕೆಜಿಎಫ್3 ನ ಕೆಲವು ದೃಶ್ಯಗಳ ಚಿತ್ರೀಕರಣ ನಡೆದಿದೆಯಂತೆ. ಇತ್ತೀಚಿನ ಸಂದರ್ಶನ ಒಂದರಲ್ಲಿ ಈ ವಿಷಯ ರಿವೀಲ್ ಮಾಡಿದ್ದಾರೆ ನಟಿ ಮಾಳವಿಕಾ.

ಕೆಜಿಎಫ್ ಚಾಪ್ಟರ್1 ಮತ್ತು ಚಾಪ್ಟರ್2 ಎರಡರಲ್ಲೂ ಮಾಳವಿಕಾ ಅವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಮಾಳವಿಕಾ ಅವರದ್ದು ಜರ್ನಲಿಸ್ಟ್ ಪಾತ್ರ, ಈ ಪಾತ್ರ ಸಹ ಸಖತ್ ಸೌಂಡ್ ಮಾಡಿತ್ತು. ಸಂದರ್ಶನ ಒಂದರಲ್ಲಿ ಕೆಜಿಎಫ್ ಹಾಗೂ ಕೆಜಿಎಫ್3 ಬಗ್ಗೆ ಅಪ್ಡೇಟ್ ಏನಾದರು ಇದೆಯಾ ಎಂದು ಕೇಳಿದ್ದಕ್ಕೆ ಉತ್ತರ ಕೊಟ್ಟಿರುವ ಮಾಳವಿಕಾ ಅವರು, ಕೆಜಿಎಫ್2 ಶೂಟಿಂಗ್ ನಡೆಯೋವಾಗಲೇ ಕೆಜಿಎಫ್3 ಸಿನಿಮಾದ ಕೆಲವು ದೃಶ್ಯಗಳನ್ನು ಚಿತ್ರೀಕರಣ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಮಾಳವಿಕಾ ಹಾಗೂ ಪ್ರಕಾಶ್ ರಾಜ್ ಅವರ ಪೋರ್ಶನ್ ನ ಒಂದೆರಡು ದೃಶ್ಯಗಳನ್ನು ಈಗಾಗಲೇ ಶೂಟಿಂಗ್ ಮಾಡಲಾಗಿದೆ ಎಂದಿದ್ದಾರೆ. ಈ ಹೊಸ ಅಪ್ಡೇಟ್ ಕೇಳಿ ಯಶ್ ಅವರ ಫ್ಯಾನ್ಸ್ ಫುಲ್ ಖುಷಿಯಾಗಿದ್ದು, ಅಧಿಕೃತ ಅಪ್ಡೇಟ್ ಆಗಿ ಕಾಯುತ್ತಿದ್ದಾರೆ.