ಟಾಲಿವುಡ್ ಸಿನಿಮಾ ನಟಿಯರಿಗೆ ಅದೇನಾಗಿದೆಯೋ ಗೊತ್ತಿಲ್ಲ. ಒಬ್ಬರ ಹಿಂದೆ ಒಬ್ಬರಂತೆ ವಿಚ್ಚೇದನ ಮಾಡಿಕೊಂಡ ಸಾಂಸಾರಿಕ ಜೀವನಕ್ಕೆ ಅಂತ್ಯ ಹಾಡುತ್ತಿದ್ದಾರೆ. ವರ್ಷಗಳ ಹಿಂದೆ ತೆಲುಗು ನಟಿಯರಾದ ಸಮಂತಾ, ನಿಹಾರಿರ ಡಿವೋರ್ಸ್ ಹಾದಿ ಹಿಡಿದಿದ್ದರು. ಇದೀಗ ಮತ್ತೊಬ್ಬ ಸ್ಟಾರ್ ನಟಿ ಸ್ವಾತಿ ರೆಡ್ಡಿ ಡಿವೋರ್ಸ್ ಗೆ ರೆಡಿಯಾಗಿದ್ದಾರೆ. ಈ ಮಾತಿಗೆ ಪುಷ್ಟಿ ನೀಡುವಂತೆ ಸ್ವಾತಿ ರೆಡ್ಡಿ ತಮ್ಮ ಪತಿಯೊಂದಿಗಿನ ಫೋಟೋಗಳನ್ನು ಡಿಲೀಟ್ ಮಾಡಿದ್ದಾರೆ. ಅಷ್ಟಕ್ಕೂ ಈ ನಟಿಯ ಬಾಳಲ್ಲಿ ಏನಾಗಿದೆ ಗೊತ್ತಾ?

ತೆಲುಗು ‘ಡೇಂಜರ್’ ಸಿನಿಮಾ ಮೂಲಕ 2015 ರಲ್ಲಿ ನಟನಾ ಜೀವನ ಆರಂಭಿಸಿದ ಸ್ವಾತಿ ರೆಡ್ಡಿ ಅದಾದ ಬಳಿಕ ತ್ರಿಪುರ, ಕಾರ್ತಿಕೇಯ ಸೇರಿದಂತೆ ಇತರೆ ಹಿಟ್ ಚಿತ್ರಗಳಲ್ಲಿ ಮಿಂಚಿದರು. ಮುಂದೆ ತೆಲುಗು, ತಮಿಳಿ ಹಾಗೂ ಮಲೆಯಾಳಂ ಭಾಷೆಯ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿ ಬೇಡಿಕೆ ಹೆಚ್ಚಿಸಿಕೊಂಡರು. ಇದೇ ವೇಳೆ ಸ್ವಾತಿ ರೆಡ್ಟಿ ಉದ್ಯಮಿ ವಿಕಾಸ್ ವಾಸು ಅವರನ್ನು ಪ್ರೀತಿಸಿ 2018ರಲ್ಲಿ ಮದುವೆಯಾದರು. ಆದರೆ ಇದೀಗ ಇವರ ಸಾಂಸಾರಿಕ ಜೀವನ ವಿಚ್ಚೇದನದ ಹೊಸ್ತಿಲಲ್ಲಿದೆ ಎನ್ನಲಾಗಿದೆ.
ತೆಲುಗಿನ ಸ್ಟಾರ್ ನಟಿಯರಾದ ಸಮಂತಾ, ನಿಹಾರಿಕ ಅವರಂತೆಯೇ ಸ್ವಾತಿ ರೆಡ್ಡಿ ಕೂಡ ನಡೆದುಕೊಳ್ಳುತ್ತಿದ್ದಾರೆ. ಸ್ವಾತಿಯೂ ಕೂಡ ತಮ್ಮ ಸೋಶಿಯಲ್ ಮೀಡಿಯಾದಲ್ಲಿದ್ದ ಪತಿಯೊಂದಿಗಿನ ಫೋಟೋಗಳನ್ನು ಡಿಲೀಟ್ ಮಾಡುತ್ತಿದ್ದಾರೆ. ಸಮಂತಾ, ನಿಹಾರಿಕಾ ಕೂಡ ಇದೇ ರೀತಿ ಮಾಡಿ ತಿಂಗಳ ನಂತರ ಡಿವೋರ್ಸ್ ಬಗ್ಗೆ ಮಾದ್ಯಮದ ಮುಂದೆ ಹೇಳಿಕೊಂಡಿದ್ದರು.
ಸದ್ಯ, ಸ್ವಾತಿ ರೆಡ್ಡಿಯೂ ಕೂಡ ಸಮಾಂತಾ, ನಿಹಾರಿಕಾ ರೀತಿಯಲ್ಲೆ ನಡೆದುಕೊಂಡು ಪತಿ ವಾಸು ಅವರೊಂದಿಗಿನ ಫೋಟೋಗಳನ್ನು ಡಿಲೀಟ್ ಮಾಡಿದ್ದು. ಅಭಿಮಾನಿಗಳಲ್ಲಿ ಆತಂಕ ಮೂಡಿಸಿದ್ದಾರೆ. ಆದರೆ ಈ ವರೆಗೆ ಸ್ವಾತಿ ಅಥವಾ ಅವರ ಗಂಡ ವಾಸು ಎಲ್ಲಿಯೂ ಕೂಡ ವಿಚ್ಚೇದನದ ಬಗ್ಗೆ ತುಟಿ ಬಿಚ್ಚಿಲ್ಲ.



