ಕೆಜಿಎಫ್ ಸಿನಿಮಾ ಎಂದ ತಕ್ಷಣ ರಾಕಿ ಭಾಯ್ ನೆನೆಪಾಗುವುದರ ಜೊತೆಗೆ ರೀನಾ ಕೂಡ ನೆನಪಾಗುತ್ತಾಳೆ. ರೀನಾ ಅಂದ್ರೆ ಗೊತ್ತಲ್ವಾ, ನಮ್ಮ ರಾಕಿ ಭಾಯ್ ಮೆಚ್ಚಿಕೊಂಡ ಹುಡುಗಿ, ಮೊದಲಿಗೆ ರಾಕಿ ಅಂದ್ರೆ ಆಗಲ್ಲ ಅಂತ ದ್ವೇಷಿಸೋ ರೀನಾ, ನಂತರ ರಾಕಿನ ಪ್ರೀತಿಸೋಕೆ ಶುರು ಮಾಡ್ತಾಳೆ. ಈ ಪಾತ್ರದಲ್ಲಿ ಶ್ರೀನಿಧಿ ಶೆಟ್ಟಿ ಅವರು ಅಚ್ಚುಕಟ್ಟಾಗಿ ಅಭಿನಯಿಸಿದ್ದಾರೆ. ಕೆಜಿಎಫ್ ಚಾಪ್ಟರ್1 ಮತ್ತು ಕೆಜಿಎಫ್ ಚಾಪ್ಟರ್2 ಸಿನಿಮಾದಲ್ಲಿ ಇವರ ಪಾತ್ರವನ್ನ ಜನರು ಇಂದಿಗೂ ಮರೆತಿಲ್ಲ. ಸಿನಿಮಾದಲ್ಲಿ ರಾರಾಜಿಸುವ ಶ್ರೀನಿಧಿ ಶೆಟ್ಟಿ ಅವರು ನಿಜ ಜೀವನದಲ್ಲಿ ಬಹಳ ಬೇಗ ಅಮ್ಮನನ್ನು ಕಳೆದುಕೊಂಡು ಕಷ್ಟಪಟ್ಟಿದ್ದಾರೆ. ಆ ದಿನಗಳು ಆಗ ಆಗುತ್ತಿದ್ದ ಕಷ್ಟಗಳು ಇದೆಲ್ಲದರ ಬಗ್ಗೆ ಇತ್ತೀಚಿನ ಸಂದರ್ಶನದಲ್ಲಿ ಮಾತನಾಡಿದ್ದು, ಆ ವಿಚಾರ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಶ್ರೀನಿಧಿ ಶೆಟ್ಟಿ ಮೂಲತಃ ಮಂಗಳೂರಿನವರು. ಅಲ್ಲಿಯೇ ಹುಟ್ಟಿ ಬೆಳೆದವರು, ಚಿಕ್ಕ ವಯಸ್ಸಿನಿಂದಲೂ ಬಣ್ಣದ ಲೋಕದ ಬಗ್ಗೆ ಶ್ರೀನಿಧಿ ಶೆಟ್ಟಿ ಅವರಿಗೆ ಬಹಳ ಆಸಕ್ತಿ ಮತ್ತು ಆಸೆ ಇತ್ತು. ಸ್ಕೂಲ್ ಗೆ ಹೋಗುವಾಗ ಕೂಡ ನಾನು ಶಾಲೆಯ ಹೀರೋಯಿನ್ ಅನ್ನೋ ಫೀಲ್ ನಲ್ಲೇ ಹೋಗ್ತಾ ಇದ್ದರಂತೆ. ಇದೇ ಫೀಲ್ಡ್ ಗೆ ಬರಬೇಕು ಅನ್ನೋದು ಶ್ರೀನಿಧಿ ಶೆಟ್ಟಿ ಅವರ ಬಹುದೊಡ್ಡ ಆಸೆ ಆಗಿತ್ತು. ಅದೇ ನಿಟ್ಟಿನಲ್ಲಿ ಕೆಲಸ ಮಾಡುವುದಕ್ಕೆ ಶುರುಮಾಡಿ, ಇಂದು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡಿದ್ದಾರೆ. ದೊಡ್ಡ ದೊಡ್ಡ ಸ್ಟಾರ್ ಹೀರೋಗಳ ಜೊತೆಗೆ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಆದರೆ ಚಿಕ್ಕಂದಿನಲ್ಲಿ ಅಮ್ಮನನ್ನು ಕಳೆದುಕೊಂಡು ಅಷ್ಟೇ ಕಷ್ಟವನ್ನು ಅನುಭವಿಸಿದ್ದಾರೆ ಶ್ರೀನಿಧಿ ಶೆಟ್ಟಿ. ಇದು ಹೆಚ್ಚಿನ ಜನರಿಗೆ ಗೊತ್ತಿಲ್ಲದ ವಿಷಯ ಆಗಿದೆ.

ಶ್ರೀನಿಧಿ ಶೆಟ್ಟಿ ಅವರು 14 ವರ್ಷ ಇದ್ದಾಗಲೇ ತಾಯಿಯನ್ನು ಕಳೆದುಕೊಂಡರು. ಅಮ್ಮನನ್ನು ಬಹಳ ಪ್ರೀತಿಸುತ್ತಿದ್ದ ಶ್ರೀನಿಧಿ ಅವರಿಗೆ ಅಮ್ಮನನ್ನು ಕಳೆದುಕೊಂಡು ಬಹಳ ದುಃಖದಲ್ಲಿದ್ದ ಶ್ರೀನಿಧಿ ಶೆಟ್ಟಿ ಅವರಿಗೆ ಅಮ್ಮ ಇಲ್ಲದೆಯೇ ಆ ಊರಿನಲ್ಲಿ ಇರಲು ಸಾಧ್ಯ ಆಗಲಿಲ್ಲ. ಹಾಗಾಗಿ ಅವರು ಆ ಊರಿನಿಂದ ದೂರ ಇರಬೇಕು, ಅಮ್ಮ ಇದ್ದ ಕಡೆ ಇದ್ದರೆ ಆ ನೆನಪುಗಳಿಂದ ಮನಸ್ಸಿಗೆ ಜಾಸ್ತಿ ನೋವಾಗುತ್ತದೆ ಎಂದು ಆ ಊರನ್ನೇ ಬಿಟ್ಟು ಹೊರಗಡೆ ಬಂದು ಬಿಟ್ಟರು ಶ್ರೀನಿಧಿ. ಓದುವುದಕ್ಕೋಸ್ಕರ ಬೆಂಗಳೂರಿಗೆ ಬಂದು, ಇಲ್ಲಿಯೇ ಇದ್ದುಬಿಟ್ಟರು. ಚಿಕ್ಕ ವಯಸ್ಸಲ್ಲೇ ಶ್ರೀನಿಧಿ ಅವರು ಈ ರೀತಿಯ ನೋವನ್ನ ಅನುಭವಿಸಬೇಕಾಯಿತು. ಇಂದು ಅಮ್ಮನಿಗೆ ಖುಷಿ ಆಗುವ ಹಾಗೆ ಬದುಕನ್ನು ಕಟ್ಟಿಕೊಂಡಿದ್ದಾರೆ. ಅವರ ತಾಯಿ ಸಹ ಮಗಳ ಬಗ್ಗೆ ಹೆಮ್ಮೆ ಪಟ್ಟಿರುತ್ತಾರೆ.
ಶ್ರೀನಿಧಿ ಶೆಟ್ಟಿ ಅವರು ಅಮ್ಮನನ್ನು ಕಳೆದುಕೊಂಡ ನಂತರ ಬೆಂಗಳೂರಿಗೆ ಬಂದು ಇಲ್ಲೇ ಇದ್ದು ಮಾಡೆಲಿಂಗ್ ನಲ್ಲಿ ತೊಡಗಿಕೊಂಡರು. 2016ರಲ್ಲಿ ಸುಪ್ರನ್ಯಾಷನಲ್ ಬ್ಯೂಟಿ ಪೇಜೆಂಟ್ ನಲ್ಲಿ ಅವಾರ್ಡ್ ಪಡೆದರು, ನಂತರ ಇವರಿಗೆ ಕೆಜಿಎಫ್ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತು. ಕೆಜಿಎಫ್ ಚಾಪ್ಟರ್1 ಮತ್ತು ಕೆಜಿಎಫ್ ಚಾಪ್ಟರ್ 2 ಸಿನಿಮಾಗಳಲ್ಲಿ ನಟಿಸಿದರು. ಈ ಸಿನಿಮಾದಲ್ಲಿ ಇವರಿಗೆ ಪ್ಯಾನ್ ಇಂಡಿಯಾ ಹೀರೋಯಿನ್ ಆಗಿ ಗುರುತಿಸಿಕೊಳ್ಳುವ ಅವಕಾಶ ಸಿಕ್ಕಿತು. ಈ ಎರಡು ಸಿನಿಮಾಗಳು ಎಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತು, ಅದರಿಂದ ಶ್ರೀನಿಧಿ ಶೆಟ್ಟಿ ಅವರಿಗೆ ಎಷ್ಟು ದೊಡ್ಡ ಮಟ್ಟದಲ್ಲಿ ಹೆಸರು ಮತ್ತು ಜನಪ್ರಿಯತೆ ಸಿಕ್ಕಿತು ಎಂದು ನಮಗೆಲ್ಲ ಗೊತ್ತೇ ಇದೆ..ಕೆಜಿಎಫ್ ನಂತರ ದೊಡ್ಡ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಶ್ರೀನಿಧಿ ಶೆಟ್ಟಿ ಅವರು ನಂತರ ತಮಿಳು ಹಾಗೂ ತೆಲುಗು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಚಿಯಾನ್ ವಿಕ್ರಂ ಅವರ ಜೊತೆಗೆ ಕೋಬ್ರಾ ಸಿನಿಮಾದಲ್ಲಿ ನಟಿಸಿದರು. ಬಳಿಕ ಈಗ ನಾನಿ ಅವರ ಜೊತೆಗೆ ಹಿಟ್3 ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ತೆರೆಕಂಡು ಸೂಪರ್ ಹಿಟ್ ಆಗಿದೆ. ಹಿಟ್3 ಸಿನಿಮಾದಲ್ಲಿ ನಾನಿ ಅವರ ಹೀರೋಯಿನ್ ಆಗಿ ನಟಿಸಿದ್ದು, ಇವರಿಬ್ಬರು ಜೊತೆಗಿರುವ ಹಾಡು ಸಿಕ್ಕಾಪಟ್ಟೆ ವೈರಲ್ ಆಗಿದೆ. ಇನ್ನು ತಮಿಳಿನಲ್ಲಿ ಮತ್ತೊಂದು ಸಿನಿಮಾದಲ್ಲಿ ಸಹ ನಟಿಸುತ್ತಿದ್ದಾರೆ. ಇನ್ನು ಕನ್ನಡದಲ್ಲಿ ಯಾವಾಗ ನಟಿಸುತ್ತಾರೆ ಎನ್ನುವ ಪ್ರಶ್ನೆ ಇತ್ತು. ಅದಕ್ಕೆ ಸಹ ಈಗ ಉತ್ತರ ಸಿಕ್ಕಿದ್ದು, ಕಿಚ್ಚ ಸುದೀಪ್ ಅವರ ಸಿನಿಮಾಗೆ ಶ್ರೀನಿಧಿ ಶೆಟ್ಟಿ ಅವರು ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಆದರೆ ಈ ಬಗ್ಗೆ ಇನ್ನೂ ಕೂಡ ಹೆಚ್ಚಿನ ಮಾಹಿತಿ ಸಿಕ್ಕಿದೆ.
ಇನ್ನು ಶ್ರೀನಿಧಿ ಶೆಟ್ಟಿ ಅವರು ಮಂಗಳೂರು ಮೂಲದವರು ಎಂದು ನಮಗೆಲ್ಲ ಗೊತ್ತೇ ಇದೆ. ಇವರ ಇಡೀ ಕುಟುಂಬ ದೈವಭಕ್ತರು. ಚಿಕ್ಕಂದಿನಿಂದಲೂ ಮನೆಯಲ್ಲಿ ದೇವರು, ದೈವ, ಪೂಜೆ, ಕೋಲ ಇದೆಲ್ಲದರಲ್ಲೂ ಪಾಲ್ಗೊಂಡು ದೈವ ಭಕ್ತಿಯಿಂದ ಇರುವವರು. ಪರೀಕ್ಷೆ ಬರೆಯುವುದಕ್ಕೆ ಶಾಲೆಗೆ ಹೋಗುವ ಮೊದಲು ಅಪ್ಪ ಅಮ್ಮನ ಕಾಲಿಗೆ ನಮಸ್ಕಾರ ಮಾಡಿ ಹೋಗುತ್ತಿದ್ದರಂತೆ. ಈ ರೀತಿ ಶ್ರೀನಿಧಿ ಶೆಟ್ಟಿ ಅವರ ಬೆಳವಣಿಗೆ ನಡೆದಿರುವುದು. ಈ ರೀತಿಯಾಗಿ ದೇವರ ಅನುಗ್ರಹ ಇರುವ ಕಾರಣದಿಂದಲೇ ಶ್ರೀನಿಧಿ ಶೆಟ್ಟಿ ಇಂದು ಇಷ್ಟು ಎತ್ತರಕ್ಕೆ ಬೆಳೆದು, ಸ್ಟಾರ್ ನಟಿಯಾಗಿದ್ದಾರೆ..ಇವರಿಗೆ ಇನ್ನು ಹೆಚ್ಚು ಸಿನಿಮಾಗಳಲ್ಲಿ ನಟಿಸುವ ಅವಕಾಶ ಸಿಕ್ಕಿದೆ.



