ನಟಿ ಕೀರ್ತಿ ಸುರೇಶ್ ತಮ್ಮ ಮಧುಚಂದ್ರದ ಹಲವು ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ಫೋಟೋದಲ್ಲಿ ಅವರು ಸಾಕಷ್ಟು ಎಂಜಾಯ್ ಮಾಡುತ್ತಿರುವುದನ್ನು ಕಾಣಬಹುದು. ಆದರೆ ನಟಿಯ ಕೊನೆಯ ಫೋಟೋ ಅಭಿಮಾನಿಗಳ ಟೆನ್ಷನ್ ಹೆಚ್ಚಿಸಿದೆ.
ಕೀರ್ತಿ ಸುರೇಶ್ ಇತ್ತೀಚೆಗೆ ತಮ್ಮ ಬಹುಕಾಲದ ಗೆಳೆಯ ಆಂಟೋನಿ ತಟ್ಟಿಲ್ ಅವರನ್ನು ಗೋವಾದಲ್ಲಿ ಕುಟುಂಬಸ್ಥರು ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ವಿವಾಹವಾದರು. ಹನಿಮೂನ್ಗಾಗಿ ಪತಿಯೊಂದಿಗೆ ನಟಿ ಥಾಯ್ಲೆಂಡ್ಗೆ ಹೋಗಿದ್ದಾರೆ. ಎಲ್ಲರಂತೆ ಕೀರ್ತಿ ಕೂಡ ಥಾಯ್ಲೆಂಡ್ನಲ್ಲಿ ತಮ್ಮ ಕನಸಿನ ಹನಿಮೂನ್ನ ಒಂದು ಲುಕ್ ಅನ್ನು ಅಭಿಮಾನಿಗಳಿಗಾಗಿ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಆದರೆ ಕೀರ್ತಿ ಹಂಚಿಕೊಂಡ ಅನೇಕ ಫೋಟೋಗಳಲ್ಲಿ, ಅವರು ಒಂಟಿಯಾಗಿ ಕಾಣಿಸಿಕೊಂಡಿದ್ದಾರೆ. ಬಹುಶಃ ಅವರ ಪತಿ ಆಂಟೋನಿ ಅವರ ಫೋಟೋಗಳನ್ನು ಕ್ಲಿಕ್ ಮಾಡುವುದರಲ್ಲಿ ನಿರತರಾಗಿದ್ದಾರೆ ಅನಿಸುತ್ತದೆ. ಕೀರ್ತಿ ಥಾಯ್ಲೆಂಡ್ನ ದ್ವೀಪವೊಂದರಲ್ಲಿ ಹನಿಮೂನ್ನಲ್ಲಿದ್ದಾರೆ. ಒಂದು ಫೋಟೋದಲ್ಲಿ ಅವರು ಟೋಪಿಯೊಂದಿಗೆ ನೀಲಿ ಬಣ್ಣದ ಉಡುಪಿನಲ್ಲಿ ತುಂಬಾ ಮುದ್ದಾಗಿ ಕಾಣುತ್ತಿದ್ದಾರೆ ಮತ್ತು ಅಲ್ಲಿನ ಆಹಾರವನ್ನು ಆನಂದಿಸುತ್ತಿದ್ದಾರೆ. ಹಾಗೆ ನೋಡಿದರೆ ಕೀರ್ತಿ ಈ ಅವಧಿಯಲ್ಲಿ ದ್ವೀಪದಲ್ಲಿ ಸಾಕಷ್ಟು ದೋಣಿ ವಿಹಾರವನ್ನೂ ಮಾಡಿದ್ದಾರೆ. ಏಕೆಂದರೆ ಇನ್ನೊಂದು ಫೋಟೋದಲ್ಲಿಯೂ ಕೀರ್ತಿ ಹಿಂಬದಿಯಿಂದ ಪೋಸ್ ನೀಡಿದ್ದರೂ ದೊಡ್ಡ ಟೋಪಿ ಧರಿಸಿ ದೋಣಿಯಲ್ಲಿ ಕುಳಿತಿದ್ದಾರೆ.
ಹಾಗೆಯೇ ಮತ್ತೊಂದು ಫೋಟೋದಲ್ಲಿ ಕೀರ್ತಿ ಕನ್ನಡಕ ಹಾಕಿಕೊಂಡು ಏನೋ ಯೋಚಿಸುತ್ತಿರುವಂತೆ ಕಾಣುತ್ತಿದೆ. ಅಷ್ಟೇ ಏಕೆ ಸೂರ್ಯನಿಗೆ ಮುತ್ತಿಟ್ಟ ಸೆಲ್ಫಿಯನ್ನು ಸಹ ನೀವು ಕಾಣಬಹುದು. ಇದರಲ್ಲಿ ಅವರು ತುಂಬಾ ಮುದ್ದಾಗಿ ಕಾಣುತ್ತಿದ್ದಾರೆ. ಕೀರ್ತಿ ಸಾಕಷ್ಟು ದ್ವಿಚಕ್ರ ವಾಹನ ಸವಾರಿಯನ್ನು ಮಾಡಿದ್ದಾರೆ. ಹೌದು, ಹಳದಿ ಬಣ್ಣದ ಟಾಪ್ ಧರಿಸಿ ತಲೆಯ ಮೇಲೆ ಹೆಲ್ಮೆಟ್ ಧರಿಸಿ ದ್ವಿಚಕ್ರ ವಾಹನದಲ್ಲಿ ಕುಳಿತು ರೈಡ್ ಮಾಡುತ್ತಿದ್ದಾರೆ.

ಈ ಸಮಯದಲ್ಲಿ ಕೀರ್ತಿ ಸಾಕಷ್ಟು ತೆಂಗಿನ ನೀರು ಕುಡಿದಿದ್ದು, ತನ್ನ ಹನಿಮೂನ್ನಲ್ಲಿ ಥಾಯ್ ಆಹಾರವನ್ನು ತುಂಬಾ ಆನಂದಿಸಿದ್ದಾರೆ. ಜೊತೆಗೆ ಥಾಯ್ಲೆಂಡ್ನಲ್ಲಿ ನಡೆದ ಕ್ರಿಸ್ಮಸ್ ಮತ್ತು ಹೊಸ ವರ್ಷದ ಆಚರಣೆಗಳ ಕಿರುನೋಟವನ್ನೂ ಕೀರ್ತಿ ಹಂಚಿಕೊಂಡಿದ್ದಾರೆ. ಪತಿಯೊಂದಿಗೆ ಆಕಾಶದೆತ್ತಕ್ಕೆ ಹಾರುತ್ತಿರುವ ಪಟಾಕಿಗಳನ್ನು ನೋಡಿ ಆನಂದಿಸುತ್ತಿರುವುದನ್ನು ಕಾಣಬಹುದು. ಆದರೆ ಈ ಫೋಟೋವನ್ನು ಹಿಂಭಾಗದಿಂದ ತೆಗೆಯಲಾಗಿದೆ. ಈ ಮೊದಲು ಕೂಡ ಕೀರ್ತಿ ದೀಪಾವಳಿಯ ಚಿತ್ರವನ್ನು ಇದೇ ಭಂಗಿಯಲ್ಲಿ ಪೋಸ್ಟ್ ಮಾಡಿದ್ದರು.
ಮಿರರ್ ಸೆಲ್ಫಿ ತೆಗೆದುಕೊಳ್ಳುತ್ತಿರುವುದರ ಜೊತೆಗೆ ಒಟ್ಟಾರೆ ಥೈಲ್ಯಾಂಡ್ನಲ್ಲಿ ತಮ್ಮ ಹನಿಮೂನ್ ಸಮಯದಲ್ಲಿ ಬಹಳಷ್ಟು ಎಂಜಾಯ್ ಮಾಡುತ್ತಿರುವುದನ್ನು ನೋಡಬಹುದು. ಆದರೆ ನಟಿಯ ಕೊನೆಯ ಫೋಟೋ ಮಾತ್ರ ಅಭಿಮಾನಿಗಳನ್ನು ಅಸಮಾಧಾನಗೊಳಿಸಿದೆ. ಏಕೆಂದರೆ ಅವರು ಫೋಟೋದಲ್ಲಿ ಬೆಡ್ಶೀಟ್ ಹೊದ್ದು, ಬಾಯಿಯಲ್ಲಿ ಥರ್ಮಾಮೀಟರ್ ಅನ್ನು ಹಿಡಿದಿದ್ದಾರೆ. ಹನಿಮೂನ್ ವೇಳೆ ಅನಾರೋಗ್ಯಕ್ಕೆ ತುತ್ತಾಗಿ ಜ್ವರ ಬಂದಿರುವುದಾಗಿ ಅಭಿಮಾನಿಗಳಿಗೆ ಕೀರ್ತಿ ಹೇಳಿದ್ದಾರೆ. ನಂತರ ಅವರು ವಿಶ್ರಾಂತಿ ಪಡೆಯಬೇಕಾಯಿತು ಎಂದು ಫೋಟೋ ಕೆಳಗಿನ ಶೀರ್ಷಿಕೆಯಲ್ಲಿ ಬರೆದಿದ್ದಾರೆ.