ಲಕ್ಷ್ಮೀ ಬಾರಮ್ಮ ಧಾರಾವಾಹಿ ಮೂಲಕ ಜೋಡಿ ಸಾಕಷ್ಟು ಮನೆಮಾತಾಗಿತ್ತು. ಸೀರಿಯಲ್, ಸಿನಿಮಾ, ನಟನೆಯಲ್ಲಿ ಬ್ಯುಸಿಯಿರುವ ಜೋಡಿ ಇದೀಗ ಹೋಟೆಲ್ ಉದ್ಯಮದತ್ತ ಮುಖ ಮಾಡಿದೆ. ಕಳೆದ ಎರಡು ವರ್ಷಗಳ ಹಿಂದೆ ಬೆಂಗಳೂರಿನ ಸಹಕಾರ ನಗರದಲ್ಲಿ ಬಿರಿಯಾನಿ ಹೋಟೆಲ್ ತೆರೆದಿದ್ದರು. ಒಬ್ಬರನೊಬ್ಬರು ಪ್ರೀತಿಸಿ, ಹಸೆಮಣೆ ಏರಿದ್ದ ಜೋಡಿ ನಟನೆ ಮತ್ತು ಉದ್ಯಮ ಎರಡಲ್ಲೂ ಒಬ್ಬರಿಗೊಬ್ಬರು ಸಾಥ್ ನೀಡುತ್ತಾ ಸಾಗುತ್ತಿದ್ದಾರೆ. ಈ ಹಿಂದೆ ಅಷ್ಟೇ ಜೋಡಿ ಮನೆಯ ಗೃಹ ಪ್ರವೇಶದ ಫೋಟೊಗಳನ್ನು ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿತ್ತು.

ಇದೀಗ ಲಕ್ಷ್ಮೀ ಬಾರಮ್ಮ ಖ್ಯಾತಿಯ ಚಂದನ್ ಕುಮಾರ್ ಮತ್ತು ಕವಿತಾ ತಮ್ಮ ಹೋಟೆಲ್ ಒಂದನ್ನು ಶುರು ಮಾಡಿದ್ದಾರೆ. ʻಮೈಸೂರು ರೋಡ್ ಮಂಡಿಪೇಟೆ ಪಲಾವ್ʼ ಎಂಬ ಹೆಸರನ್ನು ಇಟ್ಟಿದ್ದು ಹೋಟೆಲ್ ಫೋಟೊವನ್ನು ಇನ್ಸ್ಟಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಕಳೆದ ಎರಡು ವರ್ಷಗಳ ಹಿಂದೆ ಬೆಂಗಳೂರಿನ ಸಹಕಾರ ನಗರದಲ್ಲಿ ಬಿರಿಯಾನಿ ಹೋಟೆಲ್ ತೆರೆದಿದ್ದರು. ಅವರ ಬಿರಿಯಾನಿ ಹೋಟೆಲ್ನಲ್ಲಿ ಸ್ಯಾಂಡಲ್ವುಡ್ ನಟರಿಂದ ತೊಡಗಿ ರಾಜಕೀಯ ಮುಖಂಡರೂ ಬಿರಿಯಾನಿ ಸವಿದಿದ್ದಾರೆ.
ಈಗ ಮೈಸೂರು ರೋಡ್ನಲ್ಲಿ ಮಡಿಪೇಟೆ ಪಲಾವ್ ಎಂಬ ಹೋಟೆಲ್ ತೆರೆದಿದ್ದಾರೆ. ಹೋಟೆಲ್ ಉದ್ಘಾಟನೆ ದಿನ ಕವಿತಾ ಗೌಡ ಅವರೇ ತಮ್ಮ ಕೈಯಿಂದ ಟೀ ಮಾಡಿ ಎಲ್ಲರಿಗೂ ಕೊಟ್ಟಿದ್ದಾರೆ. ಇಬ್ಬರು ತುಂಬಾ ಖುಷಿಯಾಗಿದ್ದಾರೆ. ಮೈಸೂರು ಮಂಡಿಪೇಟೆ ಹೋಟೆಲ್ ಉದ್ಘಾಟನೆ ಕಾರ್ಯಕ್ರಮಕ್ಕೆ ಆಪ್ತರು ಬಂದಿದ್ದರು. ಇಬ್ಬರ ಉದ್ಯಮಕ್ಕೆ ಒಳ್ಳೆಯದಾಗಲಿ ಎಂದು ವಿಶ್ ಮಾಡಿದ್ದಾರೆ.