ಭಾರತೀಯ ಸಿನಿಮಾ ರಂಗದಲ್ಲಿ ಪ್ಯಾನ್ ಇಂಡಿಯಾ ಹವಾ ಹೆಚ್ಚಾದ ಕಾರಣ ಸದ್ಯ ನಟ ನಟಿಯರಿಗೆ ಭಾಷೆಯ ಹಂಗಿಲ್ಲ. ಅದರಲ್ಲೂ ಕನ್ನಡದ ನಟಿಯರಾದ ರಶ್ಮಿಕಾ ಮಂದಣ್ಣ, ಶ್ರೀಲೀಲಾ ಸೇರಿದಂತೆ ಹಲವು ನಟಿಯರು ತೆಲುಗು ಚಿತ್ರರಂಗದಲ್ಲಿ ರಾಣಿಯರಂತೆ ಮೆರೆಯುತ್ತಿದ್ದಾರೆ. ಕನ್ನಡತಿ ಶ್ರೀಲೀಲಾ ಟಾಲಿವುಡ್ ಪ್ರವೇಶಿಸಿ ಕೇವಲ ಎರಡು ವರ್ಷಗಳಾಗಿದ್ದರೂ ಕೂಡ ಈಕೆಗೆ ಹೆವಿ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಸಾಲು, ಸಾಲು ಸಿನಿಮಾಗಳಲ್ಲಿ ಲೀಲಾ ಬ್ಯುಸಿ ಆಗಿದ್ದು, ಈಕೆಯ ಸಂಭಾವನೆಯೂ ಕೂಡ ದುಪ್ಪಟ್ಟಾಗಿದೆ.

ಹೌದು, ಶ್ರೀಲೀಲಾ ಸದ್ಯ ತೆಲುಗಿನ ಸೂಪರ್ ಸ್ಟಾರ್ ಗಳಾದ ಮಹೇಶ್ ಬಾಬು ನಟನೆಯ ‘ಗುಂಟುರು ಖಾರಂ, ಬಾಲಕೃಷ್ಣ ನಟನೆಯ ‘ಭಗವಂತ್ ಕೇಸರಿ’, ಪವನ್ ಕಲ್ಯಾಣ್ ನಟನೆಯ ‘ಉಸ್ತಾದ್ ಭಗತ್ ಸಿಂಗ್’ ಸೇರಿದಂತೆ ವಿಜಯ್ ದೇವರಕೊಂಡ, ರಾಮ್ ಪೋತಿನೇನಿ, ವೈಷ್ಣವ್ ತೇಜ್ ನಟನೆಯ ಸಿನಿಮಾಗಳಲ್ಲೂ ನಾಯಕಿಯಾಗಿ ನಟಿಸುವುದರೊಂದಿಗೆ ಟಾಪ್ ನಟಿ ಎನಿಸಿಕೊಂಡಿದ್ದಾರೆ.
ಶ್ರೀಲೀಲಾ ಚಿತ್ರರಂಗಕ್ಕೆ ಬಂದು ಕೇವಲ 2 ವರ್ಷಗಳಾಗಿದ್ದರೂ ಕೂಡ ಈಕೆಗೆ ಬಹುಬೇಡಿಕೆಯಿದೆ. ತೆಲುಗಿನ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಅಲ್ಪಾವಧಿಯಲ್ಲಿ ದೊಡ್ಡ ಸ್ಟಾರ್ ಗಳೊಂದಿಗೆ ಹಲವು ಸಿನಿಮಾ ಮಾಡುತ್ತಿರುವ ಲೀಲಾ ಕಾಲ್ ಶೀಟ್ ಗಾಗಿ ನಿರ್ದೇಶಕರು ಹಾಗೂ ನಿರ್ಮಾಪಕರು ಕ್ಯೂ ನಿಂತಿದ್ದಾರೆ.ಈ ಸಂಧರ್ಭವನ್ನು ಚೆನ್ನಾಗಿಯೇ ಅರಿತಿರುವ ಲೀಲಾ ಇದೀಗ ತಮ್ಮ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ.
ತಮಗಾಗಿ ಸ್ಟಾರ್ ನಟರೂ ಕೂಡ ಕಾಯುತ್ತಿದ್ದಾರೆ ಎಂಬುದು ತಿಳಿಯುತ್ತಿದ್ದಂತೆ ನಟಿ ಶ್ರೀಲೀಲಾ ಏಕಾಏಕಿ ತಮ್ಮ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ. ಆರಂಭದಲ್ಲಿ ಒಂದು ಸಿನಿಮಾಗೆ 1 ಕೋಟಿ ಸಂಭಾವನೆ ಪಡೆಯುತ್ತಿದ್ದ ಲೀಲಾ, ಡಿಮ್ಯಾಂಡ್ ಹೆಚ್ಚಾದಂತೆ ಸಂಭಾವನೆಯಲ್ಲಿ 2.5 ಕೋಟಿಗೆ ಹೆಚ್ಚಿಸಿಕೊಂಡಿದ್ದಾರಂತೆ. ಅಂತೂ ಕನ್ನಡತಿ ಶ್ರೀಲೀಲಾ ಟಾಲಿವುಡ್ನಲ್ಲಿ ಬೇಡಿಕೆ ಹೆಚ್ವಿಸಿಕೊಂಡಿದ್ದು ಮತ್ತು ಅಲ್ಲಿನ ನಂಬರ್ 1 ನಟಿಯಾಗಿ ಮೆರೆಯುತ್ತಿರುವುದು ಸಂತಸದ ವಿಚಾರವೇ ಸರಿ.