ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಸಿನಿ ಜರ್ನಿ ಆರಂಭಿಸಿದ ನಟಿ ಸಂಯುಕ್ತಾ ಹೆಗ್ಡೆ ಒಂದಿಲ್ಲೊಂದು ಕಿರಿಕ್ ಮಾಡಿಕೊಳ್ಳುತ್ತಾ, ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುತ್ತಾ ಸುದ್ದಿಯಲ್ಲಿರುತ್ತಾರೆ. ಹಸಿಬಿಸಿ ಫೋಟೋಶೂಟ್, ಅತಿರೇಕದ ವರ್ತನೆಗಳಿಂದಲೇ ಸಂಯುಕ್ತಾ ಟ್ರೆಂಡಿಂಗ್ ನಲ್ಲಿರುತ್ತಾರೆ. ಸದ್ಯ ಥಾಯ್ಲಂಡ್ ಗೆ ಹಾರಿರುವ ಸಂಯುಕ್ತಾ ಅಲ್ಲಿನ ಬೀದಿ ಬದಿಯಲ್ಲಿ ಕುಳಿತು ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಟ್ರೋಲ್ ಗೆ ಗುರಿಯಾಗಿದ್ದಾರೆ. ಅಷ್ಟಕ್ಕೂ ಈ ಹುಟ್ಟುಹಬ್ಬದ ಅಸಲಿಯತ್ತೇನು?. ಇಲ್ಲಿದೆ ಡೀಟಿಯಲ್ಸ್.

ಕಿರಿಕ್ ಪಾರ್ಟಿ ಸಿನಿಮಾದ ನಂತರ ನಟಿ ಸಂಯುಕ್ತಾ ಹೆಗ್ಡೆ ಸಿನಿಮಾಗಳಲ್ಲಿ ನಟಿಸಿದ್ದು ಕಡಿಮೆ. ಬಿಗ್ ಬಾಸ್ ಮನೆಯಲ್ಲೂ ಕಿರಿಕ್ ಮಾಡಿಕೊಂಡ ಈಕೆ ಅನಂತರ ಸುದ್ದಿಯಾಗಿದ್ದೆಲ್ಲವೂ ವಿವಾದಗಳಿಂದ. ಇದೀಗ ವಿದೇಶಕ್ಕೆ ತೆರಳಿರುವ ಸಂಯುಕ್ತಾ, ಥಾಯ್ಲೆಂಡ್ ಬೀದಿಯಲ್ಲಿ ಕಂಠಪೂರ್ತಿ ಕುಡಿದು, ಗುಂಡಿನ ಮತ್ತಿನಲ್ಲಿ ನಾಯಿಯ ಪಕ್ಕ ಕುಳಿತಿರುವ ಫೋಟೋಗಳು ವೈರಲ್ ಆಗಿವೆ. ಬೀದಿ ಬದಿಯಲ್ಲಿ ಜ್ಯೂಸ್ ಬಾಟಲ್ ಹಿಡಿದು ವಿವಿಧ ಬಂಗಿಗಳಲ್ಲಿ ಫೋಟೋ ತೆಗೆಸಿಕೊಂಡಿರುವ ನಟಿ ಅವುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ.
ಸಂಯುಕ್ತಾ ಥಾಯ್ಲೆಂಡ್ ಬೀದಿಯಲ್ಲಿ ನಾಯಿಯೊಂದರ ಪಕ್ಕ ಕುಳಿತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತರಹೆವಾರಿ ಕಮೆಂಟ್ ಮಾಡಿದ್ದಾರೆ. ಕೆಲವರು ‘ಈಕೆ ಕನ್ನಡದ, ಕನ್ನಡಿಗರ ಮರ್ಯಾದೆ ಕಳೆಯುವುದಕ್ಕಾಗಿಯೇ ಹುಟ್ಟಿದ್ದಾಳೆ’ ಅಂದರೆ, ಮತ್ತೊಬ್ಬ ‘ಎರಡು ನಾಯಿಗಳು ಒಂದೇ ಫೋಟೋದಲ್ಲಿವೆ’ ಎಂದಿದ್ದಾರೆ. ಅಂತೂ-ಇಂತೂ ಸಂಯುಕ್ತಾ ಹೆಗ್ಡೆ ದಿನಕ್ಕೊಂದು ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುವ ಮೂಲಕ ಅತಿರೇಕದ ವರ್ತನೆ ತೋರುತ್ತಿರುವುದು ಸುಳ್ಳಲ್ಲ.



