ಇತ್ತೀಚೆಗಷ್ಟೇ, ಮಿಲ್ಕಿ ಬ್ಯೂಟಿ ತಮನ್ನಾ ‘ಲಸ್ಟ್ ಸ್ಟೋರಿಸ್2’ ವೆಬ್ ಸೀರಿಸ್ ನಲ್ಲಿ ದಶಕಗಳ ನಂತರ ಲಿಪ್ ಲಾಕ್ ಮಾಡಿ ಭಾರೀ ಸುದ್ದಿಯಾಗಿದ್ದರು. ಇದೀಗ ಅವರ ಸಾಲಿಗೆ ಬಾಲಿವುಡ್ ನಟಿ ಕಾಜೋಲ್ ಸೇರ್ಪಡೆಯಾಗಿದ್ದಾರೆ. ಏಕಾಏಕಿ ತಮ್ಮ ಹಲವು ವರ್ಷಗಳ ‘ನೋ ಲಿಪ್ ಕಿಸ್ಸಿಂಗ್’ ರೂಲ್ ಬ್ರೇಕ್ ಮಾಡಿರುವ ಕಾಜೋಲ್, ತಮ್ಮ ಸಹ ನಟನೊಂದಿಗೆ ಡೀಪ್ ಲಿಪ್ ಲಾಕ್ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಪರ-ವಿರೋಧ ಚರ್ಚೆಗಳಾಗುತ್ತಿವೆ.
ತಮ್ಮ ಸಿನಿ ಜರ್ನಿಯ ಆರಂಭದ ದಿನಗಳಲ್ಲಿ ಕೆಲವೊಂದು ಹಸಿಬಿಸಿ ಸೀನ್ ಗಳಲ್ಲಿ, ಲಿಪ್ ಲಾಕ್ ಸೀನ್ ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಕಾಜೋಲ್, ಬೇಡಿಕೆ ಹೆಚ್ಚಾದಂತೆ ಅಂತಹ ದೃಶ್ಯಗಳಿಂದ ದೂರವಾದರು. ಆದರೆ ಇದೀಗ ದಶಕಗಳ ನಂತರ ಮತ್ತೆ ಕಾಜೋಲ್ ತೆರೆಯ ಮೇಲೆ ಮಿಂಚಲು ಆರಂಭಿಸಿದ್ದು, ನಟಿಸುರುವ ಹೊಸ ಸಿನಿಮಾಗಳಲ್ಲಿ ಸಕ್ಕತ್ ಹಾಟ್&ಗ್ಲಾಮರ್ ಆಗಿ ಕಾಣಿಸುತ್ತಿದ್ದಾರೆ.
ಕಾಜೋಲ್ ಇತ್ತೀಚೆಗೆ ನಟನೆಯ ಲಸ್ಟ್ ಸ್ಟೋರಿಸ್-2 ವೆಬ್ ಸೀರಿಸ್ ನಂತರ ಇದೀಗ ಮತ್ತೆ ದಿ ಟ್ರಯಲ್ ಸೀರಿಸಿ ರಾಬರ್ಟ್ ಕಿಂಗ್ ಹಾಗೂ ಮಿಚೆಲ್ ಕಿಂಗ್ ಅವರ ಗುಡ್ ವೈಫ್ ಎಂಬ ಕಾರ್ಯಕ್ರಮದ ರೂಪಾಂತರದಲ್ಲಿ ನಟಿಸುತ್ತಿದ್ದಾರೆ. ಸುಪರ್ಣ್ ವರ್ಮಾ ನಿರ್ದೇಶನ ಮಾಡುತ್ತಿರಿವ ಈ ಸೀರಿಸ್ ನಲ್ಲಿ ಜಿಶು ಸೇನ್ ಗುಪ್ತ, ಅಲಿ ಖಾನ್, ಶಿಬಾ ಚಡ್ಡ ಮುಂತಾದವರು ನಟಿಸಿದ್ದಾರೆ. ಸದ್ಯ ಇದೇ ವೆಬ್ ಸೀರಿಸ್ ನಲ್ಲಿ ಕಾಜೋಲ್ ತನ್ನ ಸಹ ನಟನೊಂದಿಗೆ ಲಿಪ್ ಕಿಸ್ಸಿಂಗ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಲಿಪ್ ಕಿಸ್ಸಿಂಗ್ ಸೀನ್ ಸೋಶಿಯಲ್ ಮೀಡಿಯಾದಲ್ಲಿ ಕಾಡ್ಗಿಚ್ಚಿನಂತೆ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಕಮೆಂಟ್ ಸುರಿಮಳೆ ಸುರಿಸುತ್ತಿದ್ದಾರೆ.