ನಮ್ಮ ಮತ್ತು ರಕ್ಷಿತಾ ಮಧ್ಯೆ ಬಂದು ನೀನು ಚಪ್ಪಾಳೆ ಗಿಟ್ಟಿಸಿಕೊಂಡೆ, ಇಬ್ಬರ ಜಗಳದಲ್ಲಿ ಗಿಲ್ಲಿ ಲಾಭ ಮಾಡಿಕೊಂಡೆ ಎಂದು ಕಿಚ್ಚನ ಚಪ್ಪಾಳೆ ಗಿಲ್ಲಿಗೆ ಸಿಕ್ಕ ಬಗ್ಗೆ ಜಾನ್ವಿಹೇಳಿದರು. ಗಿಲ್ಲಿ ಉಳಿದ ಯಾವುದೇ ಜಗಳ ಆದಾಗ್ಲೂ ಯಾರ ಪರವಾಗಿಯೂ ಹೋಗ್ಲಿಲ್ಲ…ಸ್ಟ್ಯಾಂಡ್ ತಗೋಳ್ಲಿಲ್ಲ. ಆದರೆ ನಮ್ಮ ವಿಷಯದಲ್ಲಿ ರಕ್ಷಿತಾ ಪರ ನಿಂತ ಎಂದು ಅಶ್ವಿನಿ ಗೌಡ ಹೇಳಿದ್ದರೆ, ʼಅವನಿಗೆ ಕಿಚ್ಚನ ಚಪ್ಪಾಳೆ ಸಿಕ್ಕಿದ್ದೇ ನಮ್ಮಿಂದʼ ಎದು ಜಾನ್ವಿ ಹೇಳಿದರು.

ಬಿಗ್ಬಾಸ್ ಶೋಗೆ ಹೊಸ ಸ್ಪರ್ಧಿಗಳ ಎಂಟ್ರಿ ಆಗಿದ್ದು, ಅಶ್ವಿನಿ ಮತ್ತು ಜಾನ್ವಿ ಅವರದ್ದು ನೆಗೆಟಿವ್ ಆಟ, ನೆಗೆಟಿವ್ ವ್ಯಕ್ತಿತ್ವ ಎಂಬ ಅಭಿಪ್ರಾಯ ಪ್ರೇಕ್ಷಕರಲ್ಲಿ ಮೂಡುತ್ತಿದ್ದು, ನೆಗೆಟಿವ್ ಅಭಿಪ್ರಾಯಗಳು ಮೂಡುತ್ತಿರುವುದು ಜಾನ್ವಿಯ ಅರಿವಿಗೆ ವೈಲ್ಡ್ ಕಾರ್ಡ್ ಎಂಟ್ರಿಯಾದ ರಿಶಾ ತಿಳಿಸಿದ್ದಾರೆ, ರಿಷಾ ಅವರು ಜಾನ್ವಿಯನ್ನು ಸಪರೇಟ್ ಆಗಿ ಕರೆದು ಅವರಿಗೆ ತಮ್ಮ ತಪ್ಪಿನ ಕುರಿತು ಅರಿವು ಮೂಡಿಸಿದ್ದಾರೆ.ಇದರಿಂದ ಘಾಸಿಕೊಂಡ ಜಾಹ್ನವಿ ಗಳ-ಗಳನೆ ಅತ್ತ ಪ್ರೋಮೋ ಬಿಡುಗಡೆಯಾಗಿದೆ. ಕಲರ್ಸ್ ಕನ್ನಡ ಶೇರ್ ಮಾಡಿರುವ ಪ್ರೊಮೋದಲ್ಲಿ ಜಾಹ್ನವಿ ತಮ್ಮ ನೋವುಗಳನ್ನು ಹೇಳಿಕೊಂಡು ಕಣ್ಣೀರು ಇಟ್ಟಿದ್ದಾರೆ.
ನೀವು ಕನಸು ಕಟ್ಟಿಕೊಂಡು ಬಂದಿರ್ತೀರಿ. ನಿಮಗೆ ನೀವೇ ಮುಳ್ಳಾಗ್ತೀದ್ದೀರಿ ಅನಿಸುತ್ತೆ ಎಂದು ರಿಷಾ ಗೌಡ ಹೇಳಿದರು. ಅದನ್ನು ನೆಲದ ಮೇಲೆ ಕೂತ ಕೇಳಿಸಿಕೊಳ್ತಿದ್ದ ಜಾಹ್ನವಿ , ಅಶ್ವಿನಿ ಗೌಡ ಮುಂದೆ ಅಳಲು ತೋಡಿಕೊಂಡಿದ್ದಾರೆ.
ಸುಮ್ನೆ ನೆಗೆಟೀವ್ ಮಾಡಿಕೊಂಡು ಹೋದ್ರೆ, ನಮ್ಮ ಗುಂಡಿನ ನಾವೇ ತೋಡಿಕೊಂಡು..’ ಅಂತಾ ಅತ್ತಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಇರೋರು ಯಾರೂ ತಪ್ಪೇ ಮಾಡಿಲ್ವಾ? ಎಂದು ಅಶ್ವಿನಿ ಗೌಡ ಸಮಾಧಾನ ಮಾಡಿದ್ದಾರೆ. ಜಾಹ್ನವಿ ತಮ್ಮ ನೋವುಗಳನ್ನು ಹೇಳಿಕೊಂಡು ಕಣ್ಣೀರು ಇಟ್ಟಿದ್ದಾರೆ.ರಿಷಾ ಮಾತಿನಿಂದ ಜಾನ್ವಿಗೆ ಭಯ ಶುರುವಾಗಿದೆ. ಹೊರಗಡೆ ನಾನು ತುಂಬಾ ನೆಗೆಟಿವ್ ಆಗಿ ಕಾಣಿಸಿಕೊಂಡಿದ್ದೇನೆ ಎಂದು ಅನಿಸತೊಡಗಿದೆ.



