ಕನ್ನಡ ಚಿತ್ರರಂಗದ ಯುವ ನಾಯಕರ ಪೈಕಿ ಬೆಸ್ಟ್ ಫ್ರೆಂಡ್ಸ್ ಆಗಿ ಕುಚಿಕುಗಳು ಎಂದು ಗುರುತಿಸಿಕೊಂಡಿದ್ದವರು ನಟರಾದ ದರ್ಶನ್ ಹಾಗೂ ಸುದೀಪ್ ಅವರು. ವಿಷ್ಣು ಸರ್ ಹಾಗೂ ಅಂಬಿ ಅಣ್ಣನ ಕುಚಿಕು ಗೆಳೆತನ ಬಿಟ್ಟರೆ ಇವರಿಬ್ಬರೇ ಫ್ರೆಂಡ್ಶಿಪ್ ನ ಉಳಿಸಿಕೊಂಡು ಹೋಗೋದು ಎನ್ನುವುದು ಅವರಿಬ್ಬರ ಅಭಿಮಾನಿಗಳ ಆಸೆ ಆಗಿತ್ತು. ಆದರೆ ಕಾರಣಾಂತರಗಳಿಂದ ಇಬ್ಬರ ಫ್ರೆಂಡ್ಶಿಪ್ ಮುರಿದು ಹೋಯಿತು, ಇಬ್ಬರು ದೂರವಾಗಿ ಸುಮಾರು 8 ವರ್ಷ ಆಗುತ್ತಿದೆ. ಆದರೆ ಇಬ್ಬರನ್ನು ಇಷ್ಟಪಡುವ ಫ್ಯಾನ್ಸ್ ದಚ್ಚು ಕಿಚ್ಚ ಮತ್ತೆ ಒಂದಾಗಲಿ ಎಂದು ಕಾಯುತ್ತಿದ್ದಾರೆ. ಆ ದಿನ ಯಾವಾಗ ಬರುತ್ತೋ ಗೊತ್ತಿಲ್ಲ, ಆದರೆ ಇದೀಗ ಅಭಿಮಾನಿಗಳಿಗೆ ಸಂತೋಷ ಆಗುವಂಥ ಒಂದು ಸುದ್ದಿ ಇದೆ..

ಹೌದು, ಇದೀಗ ದರ್ಶನ್ ಅವರು ಮತ್ತು ಸುದೀಪ್ ಅವರು ಮತ್ತೆ ಒಂದಾಗುವ ಕಾಲ ಹತ್ತಿರ ಬಂದಿದೆ ಎನ್ನುವ ಸುದ್ದಿಯೊಂದು ಭಾರಿ ಸದ್ದು ಮಾಡುತ್ತಿದೆ. ಈ ವಿಷಯದ ಬಗ್ಗೆ ದರ್ಶನ್ ಅವರಾಗಲಿ, ಸುದೀಪ್ ಅವರಾಗಲಿ ಮಾತನಾಡಿಲ್ಲ. ಇಬ್ಬರು ಎಲ್ಲಿಯೂ ಒಟ್ಟಾಗಿ ಕಾಣಿಸಿಕೊಂಡು ಇಲ್ಲ. ಆದರೆ ಇವರಿಬ್ಬರು ಒಂದಾಗುತ್ತಾರೆ ಅನ್ನೋ ಸುದ್ದಿ ಕೇಳಿ ಬರುತ್ತಾ ಇರೋದು ಒಬ್ಬರು ಜ್ಯೋತಿಷಿ ಇಂದ. ಪ್ರಶಾಂತ್ ಕಿಣಿ ಎನ್ನುವ ಜ್ಯೋತಿಷಿ ದಚ್ಚು ಮತ್ತು ಕಿಚ್ಚ ಒಂದಾಗುವ ಬಗ್ಗೆ ಭವಿಷ್ಯ ಮೂಡಿಸಿ ಅಚ್ಚರಿ ಮೂಡಿಸಿದ್ದಾರೆ. ಎಕ್ಸ್ ನಲ್ಲಿ ಪ್ರಶಾಂತ್ ಕಿಣಿ ಎನ್ನುವ ಜ್ಯೋತಿಷಿ ಕಿಚ್ಚ ಸುದೀಪ್ ಅವರು ದರ್ಶನ್ ಅವರು ಒಂದಾಗುವ ಬಗ್ಗೆ ಭವಿಷ್ಯ ನುಡಿದು ಪೋಸ್ಟ್ ಮಾಡಿದ್ದಾರೆ..
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ಹೌದು, ದರ್ಶನ್ ಅವರು ಮತ್ತು ಸುದೀಪ್ ಅವರು ಒಂದಾಗೋದು ಯಾವಾಗ ಎನ್ನುವ ಪ್ರಶ್ನೆಗೆ ಈ ಜ್ಯೋತಿಷಿ ಉತ್ತರ ನೀಡಿದ್ದು, 2026ರ ಫೆಬ್ರವರಿ ನಂತರ ಇವರಿಬ್ಬರು ಬೆಸ್ಟ್ ಫ್ರೆಂಡ್ಸ್ ಒಂದಾಗುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ. ಇವರಿಬ್ಬರನ್ನು ಜೊತೆಯಾಗಿ ನೋಡಬೇಕು ಎಂದು ಅನ್ನಿಸಿರುವ ಅಭಿಮಾನಿಗಳಿಗೆ ಈ ಭವಿಷ್ಯ ನುಡಿದಿರುವ ವಿಷಯ ಬಹಳ ಸಂತೋಷ ತಂದಿದ್ದು, ಇಷ್ಟು ವರ್ಷ ಕಾದಿದ್ದೀವಿ ಇನ್ನೊಂದು ವರ್ಷ ಕಾಯೋದು ಕಷ್ಟ ಅಲ್ಲ ಅಂತಿದ್ದಾರೆ ಫ್ಯಾನ್ಸ್. ನಿಜಕ್ಕೂ ದರ್ಶನ್ ಅವರು ಸುದೀಪ್ ಅವರು ಮುನಿಸು ಬಿಟ್ಟು ಒಂದಾಗ್ತಾರಾ ಅನ್ನುವ ಬಗ್ಗೆ ಯಾವುದೇ ಸುಳಿವು ಇಲ್ಲ. ಆದರೆ ಇಬ್ಬರು ಕೆಲ ದಿನಗಳ ಹಿಂದೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರು.

ದರ್ಶನ್ ಅವರಿಗೂ ಸದೀಪ್ ಅವರಿಗೂ ಸುಮಲತಾ ಅಂಬರೀಶ್ ಅವರ ಬಗ್ಗೆ ಎಷ್ಟು ಗೌರವ ಇದೆ ಎಂದು ಗೊತ್ತೇ ಇದೆ. ಸುಮಲತಾ ಅವರು ಹಾಗೂ ಅಂಬರೀಶ್ ಅವರು ಹಾಗೂ ಅವರ ಕುಟುಂಬದ ಜೊತೆಗೆ ದರ್ಶನ್ ಅವರು ಸುದೀಪ್ ಅವರು ಇಬ್ಬರು ಸಹ ಆತ್ಮೀಯವಾಗಿದ್ದರು. ಇವರಿಬ್ಬರು ಒಂದಾಗೋದನ್ನ ನೋಡುವುದು ಅಂಬರೀಶ್ ಅವರ ಆಸೆ ಕೂಡ ಆಗಿತ್ತು. ಆದರೆ ಅಂಬರೀಶ್ ಅವರು ಇದ್ದಾಗ ಅದು ನಡೆಯಲೇ ಇಲ್ಲ. ಆದರೆ ಕಳೆದ ವರ್ಷ ಸುಮಲತಾ ಅವರ ಹುಟ್ಟುಹಬ್ಬದಂದು ದರ್ಶನ್ ಮತ್ತು ಸುದೀಪ್ ಇಬ್ಬರು ಸಹ ಒಂದೇ ವೇದಿಕೆಯಲ್ಲಿ ಬಹಳ ವರ್ಷಗಳ ನಂತರ ಕಾಣಿಸಿಕೊಂಡಿದ್ದರು. ಇದನ್ನು ನೋಡಿ ಅಭಿಮಾನಿಗಳಿಗೆ ಇಬ್ಬರು ಒಂದಾಗೋ ಸಮಯ ಹತ್ತಿರವಿದೆ ಅನ್ನಿಸಿತ್ತು.
ಆದರೆ ಆ ಸಮಯ ಬಂದಿಲ್ಲ. ಸುಮಲತಾ ಅವರ ಹುಟ್ಟುಹಬ್ಬ ಆಗಿ ಒಂದು ವರ್ಷದ ಮೇಲಾಗಿದೆ. ಆದರೆ ಇನ್ನೂ ಇವರಿಬ್ಬರು ಒಂದಾಗಿಲ್ಲ. ಇದರ ಬೆನ್ನಲ್ಲೇ ಈಗ ಪ್ರಶಾಂತ್ ಕಿಣಿ ಎನ್ನುವ ಸ್ವಾಮೀಜಿ ದರ್ಶನ್ ಹಾಗೂ ಸುದೀಪ್ ಇಬ್ಬರು 2026ರಲ್ಲಿ ಒಂದಾಗುತ್ತಾರೆ ಎಂದು ಹೇಳಿರುವುದು ಅಭಿಮಾನಿಗಳಲ್ಲಿ ಇರುವ ಕುತೂಹಲ ಮತ್ತು ಆಸೆ ಎರಡನ್ನು ಸಹ ಜಾಸ್ತಿ ಮಾಡಿದೆ.. ದರ್ಶನ್ ಅವರು ಈಗ ಹೊರಗಡೆ ಬಂದಿದ್ದು, ಶೀಘ್ರದಲ್ಲೇ ಸಿನಿಮಾ ಶೂಟಿಂಗ್ ನಲ್ಲಿ ಪಾಲ್ಗೊಳ್ಳಲಿದ್ದಾರೆ. ಹಾಗೆಯೇ ಎಲ್ಲವೂ ನಾರ್ಮಲ್ ಆಗಿ, ಅದೇ ರೀತಿ ಎಲ್ಲವೂ ಮೊದಲಿನ ಹಾಗೆ ಆಗಿ, ದರ್ಶನ್ ಅವರು ಸುದೀಪ್ ಅವರು ಮತ್ತೆ ಒಂದಾಗಲಿ..