ಜೀಕನ್ನಡ ವಾಹಿನಿಯ ಕಮಲಿ ಧಾರಾವಾಹಿ ಸೂಪರ್ ಹಿಟ್ ಧಾರಾವಾಹಿಗಳಲ್ಲಿ ಒಂದು. ಈ ಧಾರಾವಾಹಿಯ ನಾಯಕಿಯ ಪಾತ್ರದಲ್ಲಿ ಎಂಟ್ರಿ ಕೊಟ್ಟವರು ನಟಿ ಅಮೂಲ್ಯ ಓಂಕಾರ್. ಮೂಲತಃ ಮೈಸೂರಿನವರಾದ ಅಮೂಲ್ಯ ಕಿರುತೆರೆಯಲ್ಲಿ ನಟನೆಯ ಅವಕಾಶ ಸಿಕ್ಕ ಬಳಿಕ ಅಮೂಲ್ಯ ಬೆಂಗಳೂರಿಗೆ ಬಂದರು. ಅಮೂಲ್ಯ ಅವರು ಈ ಧಾರಾವಾಹಿಯ ಮೂಲಕ ಕರ್ನಾಟಕದ ಮನೆ ಮಗಳು ಎನ್ನುವ ಹಾಗೆ ಫೇಮಸ್ ಆದರು. ಕಮಲಿ ಪಾತ್ರ ಇವರಿಗೆ ಅಷ್ಟು ದೊಡ್ಡ ಮಟ್ಟದಲ್ಲಿ ಹೆಸರು ತಂದುಕೊಟ್ಟಿತು. ಕಮಲಿ ಹಾಗೂ ರಿಷಿ ಜೋಡಿ ಸಹ ಎಲ್ಲರಿಗೂ ಇಷ್ಟವಾಗಿತ್ತು..
ರಿಷಿ ಈ ಧಾರಾವಾಹಿಯ ನಾಯಕ, ಈ ಪಾತ್ರವನ್ನು ನಿರ್ವಹಿಸುತ್ತಿದ್ದವರು ನಟ ನಿರಂಜನ್. ಇವರಿಬ್ಬರ ಜೋಡಿ ಹಾಗು ಇವರ ಕೆಮಿಸ್ಟ್ರಿ ಇದೆಲ್ಲವೂ ಕೂಡ ಜನರಿಗೆ ತುಂಬಾ ಇಷ್ಟವಾಗಿತ್ತು. ಆನ್ ಸ್ಕ್ರೀನ್ ಈ ಜೋಡಿ, ಅವರ ಲವ್ ಇದನ್ನೆಲ್ಲಾ ಜೋಡಿ, ನಿಜ ಜೀವನದಲ್ಲೂ ಇವರಿಬ್ಬರು ಜೋಡಿ ಆದರೆ ಚೆನ್ನಾಗಿರುತ್ತದೆ ಎಂದು ಹಲವರು ಬಯಸಿದರು. ಜನರು ಬಯಸಿದ್ದು ನಿಜ ಆಗುವ ಹಾಗೆ ಕಾಣುತ್ತಿದೆ. ಹೌದು, ಇದಕ್ಕೆ ಒಂದು ಸೂಚನೆ ತೆಲುಗು ರಿಯಾಲಿಟಿ ಶೋ ಒಂದರಲ್ಲಿ ಸಿಕ್ಕಿದೆ. ಅಮೂಲ್ಯ ಹಾಗೂ ರಿಷಿ ಇಬ್ಬರು ಸಹ ತೆಲುಗು ಕಿರುತೆರೆಯಲ್ಲಿ ಕೂಡ ತುಂಬಾ ಬ್ಯುಸಿ ಇದ್ದಾರೆ.

ಇಬ್ಬರು ತೆಲುಗು ಧಾರಾವಾಹಿಯಲ್ಲಿ ಹೀರೋ ಹಾಗೂ ಹೀರೋಯಿನ್ ಆಗಿ ನಟಿಸುತ್ತಿದ್ದಾರೆ. ಇಬ್ಬರಿಗೂ ತೆಲುಗಿನಲ್ಲಿ ಕೂಡ ಒಳ್ಳೆಯ ಬೇಡಿಕೆ ಇದೆ. ತೆಲುಗು ಕಾರ್ಯಕ್ರಮ ಒಂದಕ್ಕೆ ಅಮೂಲ್ಯ ಅವರು ಹೋಗಿದ್ದಾಗ, ನಿರಂಜನ್ ಅವರಿಗೆ ಕರೆ ಮಾಡಬೇಕು ಎಂದು ಹೇಳಲಾಯಿತು. ನಿರಂಜನ್ ಅವರಿಗೆ ಅಮೂಲ್ಯ ಕಾಲ್ ಮಾಡುತ್ತಾರೆ. ನಿರಂಜನ್ ಅವರು ಕಾಲ್ ಪಿಕ್ ಮಾಡಿದ ತಕ್ಷಣವೇ, ನಾನು ಶೋನಲ್ಲಿ ಇದ್ದೀನಿ, ಫೋನ್ ಈಗ ಸ್ಪೀಕರ್ ನಲ್ಲಿದೆ ಎಂದು ಹೇಳುತ್ತಾರೆ. ಆಗ ನಿರಂಜನ್ ಅವರು ಹೌದಾ, ಹೇಗಿದ್ದೀರಾ ಎಂದು ಕೇಳುತ್ತಾರೆ. ತಕ್ಷಣವೇ ಕಾರ್ಯಕ್ರಮದ ಆಂಕರ್ ಮಾತನಾಡಿ, ಎಷ್ಟು ದೊಡ್ಡ ವಿಷಯವನ್ನ ನಮ್ಮಿಂದ ಮುಚ್ಚಿಟ್ಟಿದ್ದೀರಾ ಎನ್ನುತ್ತಾರೆ..
ಆಗ ನಿರಂಜನ್ ಅವರು ಹಾಗೇನು ಇಲ್ಲವಲ್ಲ ನೀವು ಯಾವ ವಿಷಯದ ಬಗ್ಗೆ ಮಾತನಾಡುತ್ತಿದ್ದೀರಿ ಎಂದು ಹೇಳುತ್ತಾರೆ. ಇತ್ತ ಅಮೂಲ್ಯ ಅವರು ನಿರಂಜನ್ ಅವರ ಮಾತನ್ನು ಕೇಳಿ, ನಾಚಿಕೆ ಪಟ್ಟುಕೊಳ್ಳುತ್ತಾರೆ. ಇವರಿಬ್ಬರ ಈ ಮಾತುಗಳನ್ನ ಕೇಳಿ, ನೆಟ್ಟಿಗರು ಇವರಿಬ್ಬರ ನಡುವೆ ಪ್ರೀತಿ ಶುರುವಾಗಿರಬಹುದು, ಇಬ್ಬರು ಒಳ್ಳೆ ಜೋಡಿ ಆಗುತ್ತಾರೆ ಎಂದು ಹೇಳುತ್ತಿದ್ದಾರೆ. ನಿರಂಜನ್ ಅವರಾಗಲಿ, ಅಮೂಲ್ಯ ಅವರಾಗಲಿ ಈ ವಿಷಯದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಇಬ್ಬರ ನಡುವೆ ಲವ್ ಇದೆ ಎನ್ನುವ ಸುದ್ದಿ ಮಾತ್ರ ಜೋರಾಗಿ ಸದ್ದು ಮಾಡುತ್ತಲೇ ಇದೆ. ಇಬ್ಬರು ತೆಲುಗು ಕಿರುತೆರೆಯಲ್ಲಿ ಕೂಡ ಶೈನ್ ಆಗುತ್ತಿದ್ದಾರೆ.

ಕನ್ನಡದ ಪ್ರತಿಭೆಗಳು ಬೇರೆ ಭಾಷೆಯಲ್ಲಿ ಇಷ್ಟು ಹೆಸರು ಮಾಡುತ್ತಿರುವುದು, ಅವಕಾಶ ಸಿಗುತ್ತಿರುವುದನ್ನು ಕಂಡು ನಾವು ಸಂತೋಷ ಪಡಬೇಕು. ನಿರಂಜನ್ ಹಾಗೂ ಅಮೂಲ್ಯ ಇಬ್ಬರಿಗೂ ಸಹ ನಟನೆಯ ಕ್ಷೇತ್ರದಲ್ಲಿ ಹೆಸರು ಮಾಡಬೇಕು, ಇನ್ನು ಎತ್ತರಕ್ಕೆ ಬೆಳೆಯಬೇಕು ಎಂದು ಆಸೆ. ಅದೇ ನಿಟ್ಟಿನಲ್ಲಿ ಇಬ್ಬರು ಕೂಡ ಹೆಜ್ಜೆ ಇಡುತ್ತಿದ್ದಾರೆ. ನಿರಂಜನ್ ಹಾಗೂ ಅಮೂಲ್ಯ ಇಬ್ಬರೂ ಸಹ ಸಿನಿಮಾಗಳಲ್ಲಿ ನಟಿಸುವ ಆಸೆಯನ್ನು ಹೊಂದಿದ್ದು, ಅವರ ಕನಸುಗಳು ನನಸಾದ ಬಳಿಕ ತಮ್ಮ ಪ್ರೀತಿಯ ಬಗ್ಗೆ ಹೇಳಬಹುದು. ಸೋಷಿಯಲ್ ಮೀಡಿಯಾದಲ್ಲಿ ಆಗಾಗ ಜೊತೆಯಾಗಿರುವ ಫೋಟೋಸ್ ಸಹ ಶೇರ್ ಮಾಡಿಕೊಳ್ಳುತ್ತಾರೆ.