ಚೈತ್ರಾ ಕುಂದಾಪುರ, ಈ ಹೆಸರು ಮೊದಲೆಲ್ಲಾ ಅಷ್ಟೇನು ಚಾಲ್ತಿಯಲ್ಲಿ ಇರಲಿಲ್ಲ. ಆದರೆ ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಚೈತ್ರಾ ಕುಂದಾಪುರ ಅನ್ನೋ ಹೆಸರು ಸಿಕ್ಕಾಪಟ್ಟೆ ಸುದ್ದಿಯಾಗಿದೆ. ಉಡುಪಿ ಕಡೆಯ ಚೈತ್ರಾ ಕುಂದಾಪುರ ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದವರು. ಇವರ ಕನ್ನಡ ಭಾಷಣ ಜನರಿಗೆ ನೆನಪಿತ್ತು, ಹಾಗೆಯೇ ರಾಜಕೀಯ ಕ್ಷೇತ್ರದ ಬಗ್ಗೆ ಇವರು ಆಡಿರುವ ಮಾತುಗಳಿಂದ ವೈರಲ್ ಆಗುತ್ತಿದ್ದರು. ಆದರೆ ಇದೀಗ ಚೈತ್ರಾ ಅವರು ಎಂಟರ್ಟೈನ್ಮೆಂಟ್, ಟಿವಿ ಶೋಗಳಿಂದ ಸುದ್ದಿಯಾಗುತ್ತಾರೆ. ಅಷ್ಟೇ ಅಲ್ಲ, ಈಗ ಚೈತ್ರಾ ಕುಂದಾಪುರ ಅವರ ಮದುವೆ ಸುದ್ದಿ ಮುನ್ನಲೆಗೆ ಬಂದಿದೆ. ಶೀಘ್ರದಲ್ಲೇ ಪ್ರೀತಿಸಿದ ಹುಡುಗನ ಜೊತೆಗೆ ಮದುವೆ ಆಗಲಿದ್ದಾರೆ ಚೈತ್ರಾ ಕುಂದಾಪುರ. ಇವರದ್ದು ಸಾಮಾನ್ಯವಾದ ಲವ್ ಸ್ಟೋರಿ ಅಂತು ಅಲ್ಲ.

ಬಿಗ್ ಬಾಸ್ ಶೋ ಅನ್ನೋದೇ ಹೀಗೆ. ಈ ಶೋಗೆ ಬರುವ ಮುಂಚೆ ಯಾರು ಏನಾಗಿದ್ದರೋ, ಎಷ್ಟು ಸಾಧನೆ ಮಾಡಿದ್ದರೋ, ಆದರೆ ಈ ಶೋಗೆ ಒಂದು ಸಾರಿ ಬಂದುಬಿಟ್ಟರೆ, ಅವರಿಗೆ ಇರುವ ಜನಪ್ರಿಯತೆಯ ಲೆವೆಲ್ ಡಬಲ್ ಆಗುತ್ತದೆ. ಚೈತ್ರಾ ಅವರ ಕೇಸ್ ನಲ್ಲಿ ಆಗಿದ್ದು ಕೂಡ ಅದೇ ರೀತಿ. ಬಿಗ್ ಬಾಸ್ ಗಿಂತ ಮೊದಲು ಬೇರೆ ರೀತಿಯ ವಿವಾದಗಳಿಗೆ ಚೈತ್ರಾ ಕುಂದಾಪುರ ಸುದ್ದಿಯಾಗಿದ್ದರು. ಹಲವು ವಿಚಾರಗಳ ಬಗ್ಗೆ ತಮ್ಮ ನಿಲುವುಗಳನ್ನು ವ್ಯಕ್ತಪಡಿಸಿ, ಆ ಕಾರಣಕ್ಕೆ ಹೆಚ್ಚು ಸುದ್ದಿಯಾಗಿದ್ದರು. ಇವರು ಬಿಗ್ ಬಾಸ್ ಶೋಗೆ ಬಂದಿದ್ದಾರೆ ಎನ್ನುವುದೇ ಹೆಚ್ಚು ಜನರಿಗೆ ಶಾಕ್ ನೀಡಿತ್ತು, ಈ ಮನೆಯಲ್ಲಿ ಕೂಡ ಇವರು ಹೆಚ್ಚು ದಿವಸಗಳ ಕಾಲ ಇರುತ್ತಾರೆ ಎಂದು ಯಾರು ಅಂದುಕೊಂಡಿರಲಿಲ್ಲ. ಆದರೆ ಬಿಗ್ ಬಾಸ್
ಮನೆಯ ಒಳಗೆ ಫಿನಾಲೆ ವೀಕ್ ವರೆಗು ತಲುಪಿದರು.
ಇವರ ಜರ್ನಿಯನ್ನು ಕೂಡ ಯಾರು ಮರೆಯುವ ಹಾಗಿಲ್ಲ. ಬಿಗ್ ಬಾಸ್ ಮನೆಯ ಒಳಗೆ ಅತಿಯಾದ ಮಾತು ಮತ್ತು ಜಗಳದ ಕಾರಣಕ್ಕೆ ಚೈತ್ರಾ ಅವರು ಹೆಚ್ಚು ಸುದ್ದಿಯಾಗಿದ್ದು. ಮನೆಯ ಎಲ್ಲಾ ಸ್ಪರ್ಧಿಗಳ ಜೊತೆಗೆ ಚೈತ್ರ ಜಗಳ ಆಡುತ್ತಿದ್ದರು. ಜೋರಾಗಿ ಕಿರಿಚುತ್ತಿದ್ದರು. ಈ ಕಾರಣಕ್ಕೆ ಜಾಸ್ತಿ ಸುದ್ದಿಯಾಗುತ್ತಿದ್ದರು. ಟಾಸ್ಕ್ ಗಳಲ್ಲಿ ಉಸ್ತುವಾರಿ ವಹಿಸಿ, ಅದರಲ್ಲಿ ಕೂಡ ತಪ್ಪು ಮಾಡಿ ಸುದೀಪ್ ಸರ್ ಇಂದ ಬೈಸಿಕೊಂಡಿದ್ದು ಇದೆ. ಹುಷಾರಿಲ್ಲ ಎಂದು ಹೊರಗಡೆ ಹೋಗಿ, ಅಲ್ಲಿ ವೈದ್ಯಕೀಯ ಸಿಬ್ಬಂದಿಗಳ ಜೊತೆಗೆ ಬಿಗ್ ಬಾಸ್ ಬಗ್ಗೆ ಮಾತನಾಡಿ, ಆ ಕಾರಣಕ್ಕೆ ಸುದೀಪ್ ಅವರು ಚೈತ್ರಾ ಅವರಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದರು. ಇದಷ್ಟೇ ಅಲ್ಲ, ನಾಮಿನೇಷನ್ ಮಾಡುವ ವೇಳೆಗೆ ಹುಷಾರು ತಪ್ಪುತ್ತಾರೆ, ಬೇಕು ಎಂದೇ ಇದನ್ನೆಲ್ಲಾ ಮಾಡುತ್ತಾರೆ ಎನ್ನುವ ವಿಚಾರಕ್ಕೆ ಕೂಡ ಸುದ್ದಿಯಾಗಿದ್ದರು.

ಇವರ ಮಾತನ್ನ ಕೇಳಿ ಕೇಳಿ ಸುದೀಪ್ ಅವರಿಗೆ ಮತ್ತು ಮನೆಯ ಒಳಗಿದ್ದ ಸ್ಪರ್ಧಿಗಳಿಗೆ ಸಾಕಾಗಿ ಹೋಗಿತ್ತು. ಅಷ್ಟರ ಮಟ್ಟಿಗೆ ಇರುತ್ತಿತ್ತು ಚೈತ್ರಾ ಅವರ ಮಾತುಗಳು. ಯಾರು ಎಷ್ಟೇ ಹೇಳಿದರೂ ಚೈತ್ರ ಅವರ ಮಾತು ಮಾತ್ರ ನಿಲ್ಲುತ್ತಲೇ ಇರಲಿಲ್ಲ. ಇನ್ನು ಬಿಗ್ ಬಾಸ್ ಮನೆಯ ಒಳಗೆ ಇರುವಾಗ ಚೈತ್ರಾ ಹಾಗೂ ರಜತ್ ಜೋಡಿ ಎಲ್ಲರಿಗೂ ಭಾರಿ ಮನರಂಜನೆ ಕೊಟ್ಟಿತ್ತು. ರಜತ್ ಚೈತ್ರಾ ಅವರನ್ನು ನಮ್ಮ ಬಾಸ್ ಎಂದು ಕರೆದು ತಮಾಷೆ ಮಾಡುತ್ತಿದ್ದರು. ಹಾಗೆಯೇ ಇವರಿಬ್ಬರ ನಡುವೆ ನಡೆಯುವ ಕೋಳಿ ಜಗಳ ಜನರಿಗೆ ಸಖತ್ ಇಷ್ಟವಾಗಿತ್ತು. ರಜತ್ ಬಹಳಷ್ಟು ಸಾರಿ ಚೈತ್ರಾ ಅವರ ಕಾಲೆಳೆಯುತ್ತಿದ್ದರು. ವೀಕ್ಷಕರಿಗೆ ಇದೆಲ್ಲವೂ ಕೂಡ ಸಿಕ್ಕಾಪಟ್ಟೆ ಮಜಾ ಕೊಡುತ್ತಿತ್ತು. ಬಿಗ್ ಬಾಸ್ ಶೋ ಇಂದ ಹೊರಗಡೆ ಬಂದಮೇಲೆ ಕೂಡ ಬಾಯ್ಸ್ ವರ್ಸಸ್ ಗರ್ಲ್ಸ್ ಶೋ ನಲ್ಲಿ ಇವರಿಬ್ಬರು ಜೊತೆಯಾಗಿ ಕಾಣಿಸಿಕೊಂಡಿದ್ದರು.

ಇಂದು ಚೈತ್ರಾ ಅವರು ತಾವು ಬಹಳ ವರ್ಷಗಳ ಕಾಲ ಪ್ರೀತಿಸಿದ ಹುಡುಗನ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನಿನ್ನೆಯಷ್ಟೇ ಮೆಹೆಂದಿ ಶಾಸ್ತ್ರದ ಫೋಟೋಸ್ ಮತ್ತು ವಿಡಿಯೋಗಳು ವೈರಲ್ ಆಗಿದ್ದವು, ಇದೀಗ ಇವರಿಬ್ಬರ ಮದುವೆ ನಡೆದಿದ್ದು, ಮದುವೆಯ ವಿಡಿಯೋ ಸಹ ವೈರಲ್ ಆಗಿದೆ. ಇವರದ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್ ಅಂದ್ರೆ ನಂಬೋದಕ್ಕೆ ಕಷ್ಟ. ಚೈತ್ರಾ ಅವರೇ ಹೇಳಿರುವ ಹಾಗೆ, 12 ವರ್ಷಗಳ ಹಿಂದೆ ಕಾಲೇಜು ದಿನಗಳಲ್ಲಿ ಇವರಿಬ್ಬರ ಪ್ರೀತಿ ಶುರುವಾಗಿತ್ತು. ಚೈತ್ರಾ ಅವರನ್ನು ಕಂಡರೆ ಕೋಪ ಮಾಡಿಕೊಳ್ಳುತ್ತಿದ್ದ ಇರಿಟೇಟ್ ಆಗುತ್ತಿದ್ದ ಹುಡುಗನಿಗೆ ಕೊನೆಗೆ ಆಕೆಯ ಮೇಲೆಯೇ ಪ್ರೀತಿ ಶುರುವಾಯಿತು. ಕಾಲೇಜ್ ಕ್ಯಾಂಟೀನ್ ನಲ್ಲಿ ಚೈತ್ರಾ ಅವರನ್ನು ಬೈಕೊಂಡು ಓಡಾಡುತ್ತಿದ್ದರಂತೆ, ಅವರನ್ನು ಕಂಡರೆ ನನಗೆ ಆಗೋದಿಲ್ಲ ಎಂದು ಹೇಳುತ್ತಿದ್ದರಂತೆ ಆ ಹುಡುಗ..
ನಂತರ ಅದು ಪ್ರೀತಿಯಾಗಿ ಬದಲಾಗಿದೆ. ಇಷ್ಟು ವರ್ಷಗಳ ಕಾಲ ಈ ಜೋಡಿ ಪ್ರೀತಿಸಿದ್ದು, ಇವರಿಬ್ಬರ ಪ್ರೀತಿಯನ್ನು ಮನೆಯವರು ಒಪ್ಪಿಕೊಂಡಿದ್ದು, ಮದುವೆ ಆಗುವುದಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಇವರಿಬ್ಬರ ಮದುವೆ ಇಂದು ನಡೆದಿದ್ದು, ಕುಟುಂಬದವರು ಹಾಗೂ ಸ್ನೇಹಿತರ ಸಮ್ಮುಖದಲ್ಲಿ ಚೈತ್ರಾ ಅವರ ಮದುವೆ ನಡೆದಿದೆ. ಇನ್ನು ಚೈತ್ರಾ ಅವರು ಮದುವೆ ಆಗಿರುವ ಹುಡುಗನ ಬಗ್ಗೆ ಹೆಚ್ಚು ಡೀಟೇಲ್ಸ್ ಇದುವರೆಗೂ ಸಿಕ್ಕಿರಲಿಲ್ಲ, ಇದೀಗ ಇವರು ಪತಿಯ ಬಗ್ಗೆ ಮಾಹಿತಿ ಸಿಕ್ಕಿದ್ದು, ಇವರ ಹೆಸರು ಶ್ರೀಕಾಂತ್ ಕಶ್ಯಪ್. ಇವರು ಉಡುಪಿ ಜಿಲ್ಲೆಯ ಹಿರಿಯಡ್ಕ ಎನ್ನುವ ಊರಿನವರು. ಶ್ರೀಕಾಂತ್ ಅವರು ಅನಿಮೇಷನ್ ಓದಿದ್ದಾರೆ. ಆದರೆ ಇವರಿಗೆ ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರದಲ್ಲಿ ಹೆಚ್ಚು ಆಸಕ್ತಿ ಇದ್ದು, ಅದನ್ನೇ ವೃತ್ತಿಯಾಗಿ ಮಾಡಿಕೊಂಡಿದ್ದಾರೆ..

12 ವರ್ಷಗಳ ಕಾಲ ಚೈತ್ರಾ ಅವರನ್ನು ಲವ್ ಮಾಡಿ ಈಗ ಮದುವೆಯಾಗಿದ್ದಾರೆ. ಕೊನೆಗೂ ಚೈತ್ರಾ ಅವರು ಜೀವನದಲ್ಲಿ ದೊಡ್ಡ ಹಂತವನ್ನು ತಲುಪಿದ್ದು, ಮುಂದಿನ ಅವರ ದಾಂಪತ್ಯ ಜೀವನ ಸುಖಕರವಾಗಿರಲಿ ಎಂದು ಹಾರೈಸೋಣ. ಬಿಗ್ ಬಾಸ್ ಮನೆಯ ಸ್ಪರ್ಧಿಗಳು ಮದುವೆಗಿಂತ ಮೊದಲೇ ಶ್ರೀಕಾಂತ್ ಕಶ್ಯಪ್ ಅವರನ್ನು ಭೇಟಿಯಾಗಿದ್ದರು, ಹುಡುಗ ತುಂಬಾ ಸಾಫ್ಟ್ ಚೈತ್ರಾ ಅವರ ಹಾಗೆ ಮಾತನಾಡೋದಿಲ್ಲ ಎಂದು ಮಜಾ ಟಾಕೀಸ್ ಕಾರ್ಯಕ್ರಮದಲ್ಲಿ ಅನುಷಾ ರೈ ಮತ್ತು ಧರ್ಮ ಕೀರ್ತಿರಾಜ್ ತಿಳಿಸಿದ್ದರು. ಚೈತ್ರಾ ಅವರು ಲವ್ ಮಾಡಿ ಮದುವೆ ಆಗುತ್ತಿದ್ದಾರೆ ಎನ್ನುವುದು ಹಲವರಿಗೆ ಅರಗಿಸಿಕೊಳ್ಳಲು ಸಾಧ್ಯ ಆಗದ ವಿಷಯ ಆಗಿದ್ದು, ಮದುವೆ ಅಂತೂ ಇಂದು ನಡೆದಿದೆ.



