ಬಿಗ್ ಬಾಸ್ ಕನ್ನಡ ಸೀಸನ್ 11ರ ಫಿನಾಲೆ ಕಾರ್ಯಕ್ರಮ ನಿನ್ನೆಯಷ್ಟೇ ಮುಗಿದಿದೆ. ಮನೆಯೊಳಗಿದ್ದ 5 ಫೈನಲಿಸ್ಟ್ ಗಳ ಪೈಕಿ ಹನುಮಂತ ವಿನ್ನರ್ ಆಗಿ ಹೂರಹೊಮ್ಮಿದ್ದಾನೆ. ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಬಂದ ಹನುಮಂತ ಈ ಬಾರಿ ಬಿಗ್ ಬಾಸ್ ಗೆದ್ದಿರುವುದು ನಿಜಕ್ಕೂ ಬಹಳ ಸಂತೋಷದ ವಿಷಯ. ಹನುಮಂತ ಬಿಗ್ ಬಾಸ್ ಮನೆಗೆ ಬಂದಾಗ ಇಲ್ಲಿಯವರೆಗು ಬಂದು ಫಿನಾಲೆ ತಲುಪಿ, ಟ್ರೋಫಿ ಮತ್ತು 50 ಲಕ್ಷ ಎರಡನ್ನು ಗೆಲ್ಲುತ್ತಾನೆ ಎಂದು ಯಾರು ನಿರೀಕ್ಷೆ ಮಾಡಿರಲಿಲ್ಲ.. ಆದರೆ ಈ ಬಾರಿ ಹನುಮಂತ ಗೆದ್ದಿರುವುದು, ಇಡೀ ರಾಜ್ಯದ ಜನತೆಗೆ ಸಂತೋಷ ತಂದಿದೆ. ಹನುಮಂತ ಗೆಲ್ಲಬೇಕು ಎನ್ನುವುದೇ ಎಲ್ಲರ ಆಸೆ ಆಗಿತ್ತು. ಕೊನೆಗೂ ಜನರ ಆಸೆ ಮತ್ತು ನಿರೀಕ್ಷೆ ನೆರವೇರಿದೆ.
ಹನುಮಂತ ಲಂಬಾಣಿ ಕುಟುಂಬದ ಹುಡುಗ. ಇವನು ಮೊದಲಿಗೆ ಕಾಣಿಸಿಕೊಂಡಿದ್ದು ಜೀಕನ್ನಡ ವಾಹಿನಿಯ ಸರಿಗಮಪ ಕಾರ್ಯಕ್ರಮದಲ್ಲಿ. ಈ ಶೋನಲ್ಲಿ ಸಹ ಹನುಮಂತನ ಮುಗ್ಧತೆ ಮತ್ತು ಅವನ ಸರಳತೆ ಜನರಿಗೆ ತುಂಬಾ ಇಷ್ಟವಾಗಿತ್ತು. ಉತ್ತರಕರ್ನಾಟಕದ ಶೈಲಿಯಲ್ಲಿ ಹನುಮಂತನ ಮಾತುಗಳು ಯಾರಿಗೆ ತಾನೇ ಇಷ್ಟ ಆಗದೇ ಇರೋಕೆ ಸಾಧ್ಯ ಹೇಳಿ.. ಈ ಹಳ್ಳಿ ಹೈದ ಹನುಮಂತ ಬಿಗ್ ಬಾಸ್ ಮನೆಗೆ ಬಂದಿದ್ದು ಒಳಗಿದ್ದ ಜನರಿಗೆ ಶಾಕ್ ಆಗಿತ್ತು, ಹೊರಗಿನ ಜನರಿಗೆ ಇಷ್ಟವಾಗಿತ್ತು. ಬಿಗ್ ಮನೆಗೆ ಬಂದು ಬೇರೆಯವರ ಹಾಗಿರದೆ, ತನ್ನದೇ ಶೈಲಿಯಲ್ಲಿ ಆಟ ಆಡಿಕೊಂಡು ಹೋದ ಹನುಮಂತ ಎಲ್ಲರಿಗೂ ತುಂಬಾ ಇಷ್ಟವಾಗುತ್ತಾ ಹೋದ. ಇವನ ಮುಗ್ಧತೆ ನೋಡಿದರೆ ಇಷ್ಟ ಆಗದೇ ಇರೋರು ಇರೋದಕ್ಕೆ ಸಾಧ್ಯವಿಲ್ಲ..

ಅಂಥ ಒಳ್ಳೆಯ ಹುಡುಗ ಹನುಮಂತ, ಹಾಗೆಯೇ ಆ ಮುಗ್ಧತೆಯ ಜೊತೆಗೆ ಈತನಲ್ಲಿ ಚಾಣಾಕ್ಷತನ ಸಹ ಇದೆ ಎಂದು ಹೇಳಿದರೆ ತಪ್ಪಲ್ಲ. ಬುದ್ಧಿವಂತಿಕೆಯಿಂದ ಬಿಗ್ ಬಾಸ್ ಕೊಡುತ್ತಿದ್ದ ಎಲ್ಲಾ ಟಾಸ್ಕ್ ಗಳನ್ನು ಅಡುತ್ತಾ, ಗೆಲ್ಲುತ್ತಾ ಬಂದ. ಮನೆಯವರು ಏನೇ ಅಂದರು, ಅವರುಗಳು ಏನೇ ಪ್ಲಾನ್ ಮಾಡಿದರು, ಯಾವುದಕ್ಕೂ ಜಗ್ಗದೇ ತನಗೆ ಸರಿ ಅನ್ನಿಸಿದ ದಾರಿಯಲ್ಲಿ ಆಡುತ್ತಾ ಹೋದ ಹನುಮಂತ. ಇಂದಿಗೂ ಸಹ ಟ್ರೋಫಿ ಗೆಲ್ಲಬೇಕು, ದುಡ್ಡು ಗೆಲ್ಲಬೇಕು ಎಂದು ಯೋಚಿಸದೇ, ಈಗ ಆಡುತ್ತಿರುವ ಟಾಸ್ಕ್ ಗೆಲ್ಲಬೇಕು, ಇದು ಗೆದ್ದರೆ ಮುಂದಿನದು ನೋಡಿಕೊಳ್ಳೋಣ ಎಂದು, ಆ ಕ್ಷಣದಲ್ಲಿ ಬದುಕುತ್ತಿದ್ದ ಹುಡುಗ. ಇದೇ ಕಾರಣಕ್ಕೆ ಏನೋ ಹನುಮಂತನಿಗೆ ಗೆಲ್ಲುವುದಕ್ಕೆ ಸುಲಭ ಆಯಿತು.
ಗೋಲ್ಡ್ ಸುರೇಶ್ ಅವರನ್ನು ಮಾವ ಅನ್ನುತ್ತಾ, ಧನರಾಜ್ ಅವರನ್ನು ದೋಸ್ತ ಅನ್ನುತ್ತಾ, ಮನೆಯ ಹೆಣ್ಣುಮಕ್ಕಳನ್ನು ಅಕ್ಕ ಅನ್ನುತ್ತಾ ಬಿಗ್ ಬಾಸ್ ಶೋನಲ್ಲಿ ಎಲ್ಲರ ಫೇವರೆಟ್ ಆಗಿಬಿಟ್ಟಿದ್ದ ಹನುಮಂತ. ಎಲ್ಲರ ಜೊತೆಗೂ ಚೆನ್ನಗಿಯೇ ಇದ್ದ. ಸೀಸನ್ ಕೊನೆಯಲ್ಲಿ ಫಿನಾಲೆ ವೀಕ್ ತಲುಪಿದ ಮೊದಲ ಸ್ಪರ್ಧಿ ಸಹ ಹನುಮಂತನೆ.. ಟಿಕೆಟ್ ಟು ಫಿನಾಲೆ ಟಾಸ್ಕ್ ನಲ್ಲಿ ನೀಡಿದ ಬಹುತೇಕ ಟಾಸ್ಕ್ ಗಳನ್ನು ಗೆದ್ದು ಫಿನಾಲೆ ತಲುಪಿದ ಈ ಉತ್ತರ ಕರ್ನಾಟಕದ ಹುಲಿ. ಆ ವಾರ ಒಬ್ಬರನ್ನು ತನ್ನ ಜೊತೆಗೆ ಫಿನಾಲೆಗೆ ಕರೆದುಕೊಂಡು ಹೋಗಬಹುದು ಎಂದಾಗ ಹನುಮಂತ ಆಯ್ಕೆ ಮಾಡಿದ್ದು ಮೋಕ್ಷಿತಾ ಅವರನ್ನು. ತನ್ನ ಸ್ನೇಹಿತ ಧನರಾಜ್ ಇದ್ದರು ಸಹ ಹನುಮಂತ ತನ್ನ ದೋಸ್ತನನ್ನು ಆಯ್ಕೆ ಮಾಡಲಿಲ್ಲ.

ಬದಲಾಗಿ ಆ ವಾರ ಉತ್ತರ ಪ್ರದರ್ಶನ ನೀಡಿದ ಮೋಕ್ಷಿತಾ ಅವರನ್ನು ಆಯ್ಕೆ ಮಾಡಿ, ಅಲ್ಲಿ ಕೂಡ ಉತ್ತಮ ವ್ಯಕ್ತಿತ್ವವವನ್ನು ತೋರಿಸಿದ ಹುಡುಗ ಹನುಮ. ಈ ರೀತಿ ತಾನು ಮಾಡಿದ ಒಂದೊಂದು ಕೆಲಸದಲ್ಲಿಯೂ ಜನರಿಗೆ ತುಂಬಾ ಇಷ್ಟವಾಗುತ್ತಾ ಹೋದ ಹನುಮಂತ ಎಲ್ಲರ ಮೆಚ್ಚಿನ ಸ್ಪರ್ಧಿ ಆಗಿದ್ದ. ಬಿಗ್ ಬಾಸ್ ಶೋನಲ್ಲಿ ಹನುಮಂತನ ಹಾಗೆ ಯೋಚನೆ ಮಾಡಿದ ಸ್ಪರ್ಧಿ ಇರುವುದು ಬಹಳ ಕಡಿಮೆ. ಬುದ್ಧಿವಂತಿಕೆ ಎಲ್ಲರಲ್ಲೂ ಇರುವುದಕ್ಕಿಂತ ಜಾಸ್ತಿಯೇ ಈತನಲ್ಲಿ ಇತ್ತು. ಅದೇ ಕಾರಣಕ್ಕೆ ಈ ಹುಡುಗ ಗೆದ್ದಿರುವುದು ಸಹ ಹೌದು. ಹಳ್ಳಿ ಹುಡುಗ ಹನುಮಂತ ಗೆದ್ದಿರುವುದಕ್ಕೆ ಎಲ್ಲಾ ಕಡೆ ಸಂಭ್ರಮ ಮನೆ ಮಾಡಿದೆ. ಅವರ ಊರಿನಲ್ಲಿ ಭಾರಿ ಸಂತೋಷದಿಂದ ಸೆಲೆಬ್ರೇಟ್ ಮಾಡಲಾಗುತ್ತಿದೆ.
ಇನ್ನು ಉತ್ತರ ಕರ್ನಾಟಕದ ಜನರಿಗೆ ಕನ್ನಡ ರಿಯಾಲಿಟಿ ಶೋಗಳ ವಿಷಯದಲ್ಲಿ ಒಂದು ರೀತಿಯ ಅಸಮಾಧಾನ ಇತ್ತು. ಕನ್ನಡ ಶೋಗಳಲ್ಲಿ ಉತ್ತರ ಕರ್ನಾಟಕದವರಿಗೆ ಹೆಚ್ಚು ಅವಕಾಶ ಸಿಗೋದಿಲ್ಲ. ಉತ್ತರ ಕರ್ನಾಟಕದವರನ್ನು ಕಡೆಗಣಿಸುತ್ತಾರೆ ಎಂದು ಉತ್ತರ ಕರ್ನಾಟಕದ ಮಂದಿ ಬೇಸರ ವ್ಯಕ್ತಪಡಿಸಿದ್ದರು. ಪ್ರತಿ ಬಾರಿ ಹಲವು ಶೋಗಳ ಬಗ್ಗೆ ಉತ್ತರ ಕರ್ನಾಟಕದ ಜನರಿಗೆ ಈ ರೀತಿ ಅನಿಸುತ್ತಾ ಇದ್ದಿದ್ದಂತೂ ನಿಜವೇ. ಆದರೆ ಅದಕ್ಕೆಲ್ಲಾ ಈಗ ಅವರಃ ಮನಸ್ಸಿಗೆ ಖುಷಿ ಆಗುವಂಥ ಸುದ್ದಿ ಸಿಕ್ಕಿದೆ. ಹನುಮಂತ ಬಿಗ್ ಬಾಸ್ ಶೋ ವಿನ್ನರ್ ಆಗಿರುವುದು ಉತ್ತರ ಕರ್ನಾಟಕದ ಜನರಿಗೆ ಹೆಮ್ಮೆ ತಂದಿದೆ. ಉತ್ತರ ಕರ್ನಾಟಕದ ಹುಲಿ ಎಂದೇ ಹನುಮಂತನನ್ನು ಕರೆಯಲಾಗುತ್ತಿದೆ. ಉತ್ತರ ಕರ್ನಾಟಕದ ಪ್ರತಿಭೆಗಳು ಈ ರೀತಿ ಶೋಗಳಿಗೆ ಬರಬೇಕು ಎನ್ನುವುದಕ್ಕೆ ಹನುಮಂತ ಸ್ಪೂರ್ತಿ ಆಗಿದ್ದಾನೆ ಎಂದರೆ ತಪ್ಪಲ್ಲ.

ಹನುಮಂತ ಬಡವರ ಮನೆಯ ಹುಡುಗ, ಬಡವರ ಮನೆಯ ಮಕ್ಕಳು ಗೆಲ್ಲಬೇಕು ಎನ್ನುವ ಮಾತೊಂದು ಕೇಳಿಬರುತ್ತಿದೆ. ನಿಜಕ್ಕೂ ಹನುಮಂತ ಬಡವನಾ? ಎಂದು ಚೆಕ್ ಮಾಡುವುದಕ್ಕೆ ಶುರು ಮಾಡಿದಾಗ, ಕೆಲವು ವಿಷಯಗಳು ಗೊತ್ತಾಗಿದೆ. ನಿಜ ಹೇಳಬೇಕು ಎಂದರೆ ಹನುಮಂತ ಅವರ ಮನೆಯಲ್ಲಿ ಸುಮಾರು 250 ಕುರಿಗಳಿವೆ, ಹಾಗೆಯೇ ಇವರ ಬಳಿ 10 ರಿಂದ 15 ಎಕರೆ ಭೂಮಿ ಸಹ ಇದೆ ಎಂದು ಹೇಳಲಾಗುತ್ತಿದೆ. ಇದನ್ನು ಹಾಗೆ ಸುಮ್ಮನೆ ಲೆಕ್ಕ ಹಾಕಿ ನೋಡೋಣ ಎಂದರೂ, ಒಂದು ಕುರಿಗೆ 30 ಸಾವಿರ ರೂಪಾಯಿ ಎಂದರೂ, 250 ಕುರಿಗಳ ಮೌಲ್ಯ ಎಷ್ಟಿರಬಹುದು ಎಂದು ಲೆಕ್ಕ ಹಾಕಿ. ಅಷ್ಟೇ ಅಲ್ಲದೇ ಇವರ ಬಳಿ ಭೂಮಿ ಕೂಡ ಇದೆ. ಇದನ್ನೆಲ್ಲಾ ನೋಡಿದರೆ ನಿಜಕ್ಕೂ ಹನುಮಂತ ಬಡವರ ಮನೆ ಹುಡುಗನ? ಅಥವಾ ಅವನನ್ನ ಬಡವ ಅಂದುಕೊಂಡಿರೋ ನಾವು ಬಡವರಾ? ಎನ್ನುವ ಪ್ರಶ್ನೆ ಮೂಡಿಬರುವದು ಸಹಜ. ಈ ವಿಷಯಗಳೆಲ್ಲಾ ಏನೇ ಇರಲಿ, ಉತ್ತರ ಕರ್ನಾಟಕದ ಹುಡುಗ ಬಿಗ್ ಬಾಸ್ ಗೆದ್ದಿದ್ದಾನೆ ಎನ್ನುವುದಂತೂ ಸಂತೋಷದ ವಿಷಯ ಆಗಿದೆ.