ಇನ್ಸ್ಟಾಗ್ರಾಮ್ ಸರ್ವರ್ ಮತ್ತೆ ಡೌನ್ ಆಗಿದೆ ಎನ್ನುವ ಮಾಹಿತಿ ಲಭ್ಯವಾಗಿದ್ದು, ಏಕಕಾಲದಲ್ಲಿ ಅನೇಕ ಬಳಕೆದಾರರ ಖಾತೆ ಅಮಾನತುಗೊಳಿಸಲಾಗಿದೆ ಎಂದು ದೂರುತ್ತಿದ್ದಾರೆ.
ಫೋಟೋ ಶೇರಿಂಗ್ ಅಪ್ಲಿಕೇಶನ್ನ ಬಳಕೆದಾರರು ತಮ್ಮ ಖಾತೆಗಳನ್ನ ಯಾವುದೇ ವಿವರಣೆಯಿಲ್ಲದೇ ಇದ್ದಕ್ಕಿದ್ದಂತೆ ಅಮಾನತುಗೊಳಿಸಲಾಗುತ್ತಿದೆ ಎಂದು ಹೇಳುತ್ತಿರುವುದರಿಂದ ಇನ್ಸ್ಟಾಗ್ರಾಮ್ ಬಳಕೆದಾರರು ಸಮಸ್ಯೆಗಳನ್ನ ಅನುಭವಿಸುತ್ತಿದ್ದಾರೆ. ಇನ್ನು ಬಳಕೆದಾರರು ತಮ್ಮ ಖಾತೆಗಳನ್ನ ಅಮಾನತುಗೊಳಿಸಲಾಗಿದೆ ಎಂದು ಎಚ್ಚರಿಕೆಯ ಸಂದೇಶದೊಂದಿಗೆ ನೀಡಲಾಗಿದೆ ಎಂದು ವರದಿ ಮಾಡಿದ್ದಾರೆ.
ಇನ್ಸ್ಟಾಗ್ರಾಮ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ‘ನಿಮ್ಮಲ್ಲಿ ಕೆಲವರು ನಿಮ್ಮ Instagram ಖಾತೆಯನ್ನ ಪ್ರವೇಶಿಸಲು ಸಮಸ್ಯೆಗಳನ್ನ ಹೊಂದಿದ್ದಾರೆ ಎಂದು ನಮಗೆ ತಿಳಿದಿದೆ. ನಾವು ಅದನ್ನು ನೋಡುತ್ತಿದ್ದೇವೆ ಮತ್ತು ಅನಾನುಕೂಲತೆಗಾಗಿ ಕ್ಷಮೆಯಾಚಿಸುತ್ತಿದ್ದೇವೆ’ ಎಂದಿದೆ.