ಟಿ-ಟ್ವೆಂಟಿ ವಿಶ್ವ ಕಪ್ 2022ರಲ್ಲಿ ಭಾರತೀಯ ತಂಡವನ್ನು ‘ಗ್ರೂಪ್-ಟು’ ನಲ್ಲಿ ಇರಿಸಲಾಗಿದೆ. ಈ ತಂಡವು ಇದುವರೆಗೆ ತನ್ನ ಎರಡು ಪಂದ್ಯ ವನ್ನು ಗೆದ್ದಿದ್ದು ಮೂರನೇ ಪಂದ್ಯ ನಾಳೆ ಸೌತ್ ಆಫ್ರಿಕಾದ ವಿರುದ್ಧವಾಗಿ ನಡೆಯಲಿದೆ. ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ 20 ವಿಶ್ವಕಪ್2022 ನಲ್ಲಿ ಭಾರತ ತಂಡ ಇಲ್ಲಿಯವರೆಗೆ ಉತ್ತಮ ಪ್ರದರ್ಶನವನ್ನು ನೀಡಿದೆ. ಗ್ರೂಪ್ 2 ಸ್ಥಾನ ಪಡೆದಿರುವ ಟೀಮ್ ಇಂಡಿಯಾ ಇದುವರೆಗೆ ಆಡಿದ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಇದೀಗ ಮೂರನೇ ಪಂದ್ಯ ದಕ್ಷಿಣ ಆಫ್ರಿಕಾದ ವಿರುದ್ಧ ನಡೆಯಲಿದೆ. ಪಂದ್ಯಕ್ಕೂ ಮುನ್ನ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಲ್ಯಾನ್ಸ್ ಕ್ಲೂಸೆನರ್ ಟೀಮ್ ಇಂಡಿಯಾಗೆ ಸವಾಲನ್ನು ನೀಡಿದ್ದಾರೆ.

ಇಲ್ಲಿಯವರೆಗೆ ವಿಶ್ವಕಪ್ ನಲ್ಲಿ ಭಾರತ ತಂಡವು ಪಾಕಿಸ್ತಾನ ಮತ್ತು ನೆದರ್ಲ್ಯಾಂಡ್ ಗಳನ್ನು ಸೋಲಿಸಿದೆ. ತನ್ನ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯ ತನ್ನ ಎದುರಾಳಿ ಪಾಕಿಸ್ತಾನವನ್ನು 4 ವಿಕೆಟ್ ಗಳಿಂದ ಸೋಲಿಸಿತು ಹಾಗೂ ಎರಡನೇ ಪಂದ್ಯದಲ್ಲಿ ನೆದರ್ಲ್ಯಾಂಡ್ ತಂಡವನ್ನು 56 ರನ್ ಗಳಿಂದ ಸೋಲಿಸಿತು. ಇದೀಗ ಭಾರತ ತಂಡ ಸೆಮಿ ಫೈನಲ್ ಗಾಗಿ ಸೂಪರ್- 12 ಹಂತದಲ್ಲಿ ಇನ್ನೂ ಮೂರು ಪಂದ್ಯಗಳನ್ನು ಆಡಬೇಕಿದೆ.
ಪಾಕಿಸ್ತಾನ ಹಾಗೂ ನೆದರ್ಲ್ಯಾಂಡ್ ವಿರುದ್ಧ ಟೀಮ್ ಇಂಡಿಯಾ ಹೇಗೂ ಪಂದ್ಯವನ್ನು ಗೆದ್ದುಕೊಂಡಿತು ಆದರೆ ಈಗ ಆಫ್ರಿಕಾದ ವಿರುದ್ಧ ದೊಡ್ಡ ಸವಾಲು ಎದುರಾಗಲಿದೆ. ಮಾಧ್ಯಮದೊಂದಿಗೆ ಮಾತನಾಡಿದ ಲ್ಯಾನ್ಸ್ ಕ್ಲೂಸೆನರ್ “ಪಾರ್ಥ್ ನ ಕ್ರೀಡಾಂಗಣದಲ್ಲಿ ನಾವು ಇನ್ನೊಬ್ಬ ಅತ್ಯುತ್ತಮ ಬೌಲರನ್ನು ನೋಡಬಹುದು. ಕಳೆದ ಪಂದ್ಯದಲ್ಲಿ ಅದ್ಭುತ ಬೌಲಿಂಗ್ ಮಾಡಿದ್ದ ಸ್ಪಿನ್ನರ್ ತಬ್ರೀಸ್ ಶಮ್ಸಿ ಅವರ ಕುರಿತು ನಾನು ಕೂಡ ತುಂಬಾ ಪ್ರಭಾವಿತನಾಗಿದ್ದೇನೆ. ಡ್ವೇನ್ ಪ್ರಿಟೋರಿಯಸ್ ರವರು ಗಾಯಗೊಂಡಿರುವ ಕಾರಣ ತಂಡದಲ್ಲಿ ಬದಲಾವಣೆಯ ಸಾಧ್ಯತೆಯಿದೆ.
ಈ ಪಂದ್ಯದಲ್ಲಿ ಭಾರತದ ಬ್ಯಾಟ್ಸ್ಮನ್ ಗಳು ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಗಳನ್ನು ಹೇಗೆ ಎದುರಿಸುತ್ತಾರೆ ಎಂಬುದನ್ನು ನೋಡಲು ನಾನು ತುಂಬಾ ಉತ್ಸುಕನಾಗಿದ್ದೇನೆ ” ಎಂದರು.
ಮಳೆಯ ಕಾರಣದಿಂದಾಗಿ ಇಂಗ್ಲೆಂಡ್, ಆಸ್ಟ್ರೇಲಿಯಾ ಸೇರಿದಂತೆ ಹಲವು ಪಂದ್ಯಗಳನ್ನು ರದ್ದುಗೊಳಿಸಬೇಕಾಗಿದೆ. ಆಫ್ರಿಕನ್ ತಂಡದ ಪಂದ್ಯವನ್ನು ಕೂಡಾ ನಡೆಸಲು ಸಾಧ್ಯವಾಗಲಿಲ್ಲ. ಇದರ ಕುರಿತು ಲ್ಯಾನ್ಸ್ ಕ್ಲೂಸೆನರ್ ನಿರಾಶೆಯನ್ನು ವ್ಯಕ್ತಪಡಿಸಿದರು.



