ಹಾವು ಎಂದರೆ ಎಲ್ಲರಿಗೂ ಭಯ ಇದ್ದದ್ದೇ ದೂರದಲ್ಲಿ ನಿಂತು ಹಾವು ಹೆಡೆ ಎತ್ತಿದ್ದರೂ ನಮ್ಮ ಜಂಘಾಬಲವೇ ಕುಸಿದಂತಾಗುತ್ತದೆ. ಆದರೆ, ಈ ಊರಲ್ಲಿ ಹಾಗಲ್ಲ. ಇಲ್ಲಿ ಹಾವು ಎಂದರೆ ಜನರ ಸ್ನೇಹಿತರು! ಕುಟುಂಬದ ಸದಸ್ಯರು! ಇಲ್ಲೊಂದು ಊರಿದೆ. ಇಲ್ಲಿ ಹಾವೆಂದರೆ ಯಾರಿಗೂ ಭಯವೇ ಇಲ್ಲ…!
ದೊಡ್ಡವರಿಗೆ, ಎಳೆಯ ಮಕ್ಕಳಿಗೂ ಹಾವಿನ ಬಗ್ಗೆ ಕಿಂಚಿತ್ತೂ ಹೆದರಿಕೆಯಿಲ್ಲ. ಇಲ್ಲಿನ ಪ್ರತಿ ಮನೆ ಮನೆಗಳಲ್ಲೂ ಹಾವುಗಳು ಸಂಚರಿಸುತ್ತವೆ. ಇಂತಹ ವಿಶಿಷ್ಟ ಊರು ಇರುವುದು ಮಹಾರಾಷ್ಟ್ರದಲ್ಲಿ. ಪುಣೆಯಿಂದ 200 ಕಿಲೋ ಮೀಟರ್ ದೂರ ಸಾಗಿದರೆ ಶೋಲಾಪುರ ಎಂಬ ಜಿಲ್ಲೆ ಸಿಗುತ್ತದೆ. ಈ ಶೋಲಾಪುರದಲ್ಲೊಂದು ಹಳ್ಳಿ ಇದೆ. ಆ ಹಳಿಯೇ ಶೆಟ್ಪಾಲ್. ಈ ಶೆಟ್ಪಾಲ್ ಒಂದರ್ಥದಲ್ಲಿ ಹಾವುಗಳ ಊರಾಗಿದೆ.

ಶೇತ್ಪಾಲ್ ಎಂಬ ಹಳ್ಳಿಯಲ್ಲಿ ಸಾಕುಪ್ರಾಣಿಯಾಗಿ ಸರ್ಪವನ್ನು ಸಾಕಲಾಗುತ್ತದೆ.ಇಲ್ಲಿನ ಪುಟ್ಟ ಪುಟ್ಟ ಮಕ್ಕಳು, ನಮ್ಮ ಮಕ್ಕಳೆಲ್ಲ ಬೆಕ್ಕು-ನಾಯಿಯ ಜೊತೆ ಆಡಿದಂತೆ, ಸರ್ಪದ ಜೊತೆ ಆಟವಾಡುತ್ತಾರೆ. ಆದರೆ ಇಲ್ಲಿಯವರೆಗೂ ಇಲ್ಲಿ ಯಾವ ಸರ್ಪವೂ, ಮನುಷ್ಯನಿಗೆ ಮತ್ತು ಯಾವ ಮನುಷ್ಯನೂ ಸರ್ಪಕ್ಕೆ ತೊಂದರೆ ಕೊಟ್ಟಿಲ್ಲ.
ಶೇತ್ಪಾಲ್ ಎಂಬುದು ಮಹಾರಾಷ್ಟ್ರದ ಸೋಲ್ಹಾಪುರದಲ್ಲಿರುವ ಒಂದು ಹಳ್ಳಿಯ ಹೆಸರು. ಇದನ್ನು ಸರ್ಪಗಳ ಹಳ್ಳಿ ಅಂತಲೇ ಕರೆಯುತ್ತಾರೆ. ಇಲ್ಲಿ ಯಾರಾದರೂ ಹೊಸ ಮನೆ ಕಟ್ಟಿದರೆ, ಸರ್ಪ ಬಂದರೆ, ಇರಿಸಲೆಂದೇ, ಅದಕ್ಕೊಂದು ಜಾಗ ಮೀಸಲಿಡುತ್ತಾರೆ. ನಾವು ಬೆಕ್ಕು ನಾಯಿಗಳಿಗೆ ಅನ್ನ ಹಾಕುವಂತೆ, ಇಲ್ಲಿನ ಜನ ಸರ್ಪಕ್ಕೆ ಆಹಾರ ತೆಗೆದಿಡುತ್ತಾರೆ. ಏಕೆಂದರೆ, ಇಲ್ಲಿನ ಜನರಿಗೆ ಸರ್ಪವೆಂದರೆ, ಅಷ್ಟು ಪ್ರೀತಿ ಮತ್ತು ಭಕ್ತಿ .
ಈ ಊರಿನಲ್ಲಿ ಸುಮಾರು 2,600ಕ್ಕೂ ಅಧಿಕ ಗ್ರಾಮಸ್ಥರಿದ್ದಾರೆ. ಆದರೂ ಹಾವುಗಳ ಸಂಚಾರಕ್ಕೆ ಇಲ್ಲಿ ಎಂದೂ ಅಡ್ಡಿ ಎದುರಾಗಿದ್ದೇ ಇಲ್ಲ. ಇಲ್ಲಿನ ಪ್ರತೀ ಮನೆಯಲ್ಲೂ ಹಾವನ್ನು ಸಾಕಲಾಗುತ್ತದೆ. ಅಲ್ಲದೇ ಅದನ್ನು ಪೂಜಿಸಲಾಗುತ್ತದೆ. ಸರ್ಪ ತಾವು ಉದ್ಧಾರವಾಗಲು ಮುಖ್ಯ ಕಾರಣ ಅಂತಲೇ ಇಲ್ಲಿನ ಜನ ನಂಬಿದ್ದಾರೆ. ಅಲ್ಲದೇ ಈ ಊರಿನಲ್ಲಿ ಗಲ್ಲಿಗೊಂದು ನಾಗರ ಕಟ್ಟೆ, ನಾಗನ ದೇವಸ್ಥಾನ ಕಾಣಸಿಗುತ್ತದೆ