ಜನಪ್ರಿಯ ಆನ್ಲೈನ್ ಚಲನಚಿತ್ರ ಮತ್ತು ಟಿವಿ ಡೇಟಾಬೇಸ್ 2023ರ ಪಟ್ಟಿಯನ್ನು ಐಎಂಡಿಬಿ ಬಿಡುಗಡೆ ಮಾಡಿದೆ. ಅತ್ಯಂತ ಜನಪ್ರಿಯವಾದ ಭಾರತೀಯ ಚಲನಚಿತ್ರಗಳು ಮತ್ತು ವೆಬ್ ಸಿರೀಸ್ ಗಳ ಪಟ್ಟಿಯನ್ನು ಅನಾವರಣಗೊಂಡಿದ್ದು, ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ನಟನೆಯ ಮೂಲಕ ಕಾಣಿಸಿಕೊಂಡಿರುವ ‘ಪಠಾನ್’ ಚಲನಚಿತ್ರಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ನಾಲ್ಕು ವರ್ಷದ ದೊಡ್ಡ ಬ್ರೇಕ್ ನಂತರ ಶಾರುಖಾನ್ ಮತ್ತೆ ಪಠಾಣ್ ಸಿನಿಮಾದ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದರು. ಜನವರಿ 25ರಂದು ತೆರೆಗಪ್ಪಳಿಸಿದ ಸಿನಿಮಾ ಸಿನಿ ಪ್ರಿಯರ ಮನ ಗೆದ್ದಿತ್ತು. ಈ ಸಿನಿಮಾದಲ್ಲಿ ಶಾರುಖ್ ಖಾನ್ ಸೈನಿಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಪಾಕಿಸ್ತಾನ ನೇಮಿಸಿದ ಕಾಂಟ್ರಾಕ್ಟ್ ಟೆರರಿಸ್ಟ್ ಗಳು ಮಾಡಿರುವ ರಕ್ತ ಬೀಜ ಎಂಬ ವೈರಸ್ ನ್ನು ಭೇಧಿಸೋದು ಈ ಚಿತ್ರದ ಕಥೆಯಾಗಿತ್ತು.

ಮಾಜಿ ಸೈನಿಕನಾಗಿರುವ ಪಠಾಣ್ ಪಾಕಿಸ್ತಾನದ ಓರ್ವ ಟೆರರಿಸ್ಟ್ ಜಿಮ್ ತಯಾರಿಸಿದ ವೈರಸನ್ನು ಭಾರತದಲ್ಲಿ ಹರಡಿಸದಂತೆ ಮಾಡಲು ಮುಂದಾಗುತ್ತಾನೆ. ಈ ಮಿಷನ್ ನಲ್ಲಿ ಪಠಾಣ್ ಹೇಗೆ ಯಶಸ್ವಿಯಾಗುತ್ತಾನೆ? ಜಿಮ್ ಗೆ ಭಾರತದ ಮೇಲೆಕೆ ದ್ವೇಶ? ಪಠಾಣ್ ನ ಹೋರಾಟ ಎಲ್ಲವೂ ಈ ಸಿನಿಮಾದ ಟ್ವಿಸ್ಟ್. ಇಂತಹದ್ದೊಂದು ಸೈನಿಕನ ದೇಶಪ್ರೇಮದ ಕಥೆಯನ್ನು ಆಕ್ಷನ್ ಮೂಲಕ ತೆರೆಗಿಳಿಸಿದ್ದರು ನಿರ್ದೇಶಕ ಸಿದ್ದಾರ್ಥ್ ಆನಂದ್. ಸಿನಿಮಾದಲ್ಲಿ ಶಾರುಖ್ ಖಾನ್ ಆಕ್ಷನ್ ಸೀನ್ ಗಳು, ಹೆಲಿಕಾಫ್ಟರ್ ನಲ್ಲಿ ಫೈಟಿಂಗ್, ಅವರ ಫಿಟ್ನೆಸ್, ಹಿಮ ಸರೋವರದಲ್ಲಿ ಬೈಕ್ ಚೇಸ್, ಟ್ರೈನ್ ಫೈಟ್, ಜೆಟ್ ಫೈಟ್ ಎಲ್ಲವೂ ನಿಜವಾಗಿಯೂ ರೋಮಾಂಚಕವಾಗಿತ್ತು.
ಆಕ್ಷನ್ ಗಾಗಿ ಹೊಸ ಹೊಸ ಶೈಲಿಯನ್ನು ಸಿದ್ದಾರ್ಥ್ ಆನಂದ್ ಅನುಸರಿಸಿದ್ದರು. ಈ ಸಿನಿಮಾದಲ್ಲಿ ಯಾವ ಮಟ್ಟದ ಆಕ್ಷನ್ ಇದೆ ಎಂದರೆ ಮೊದಲು ಸಾಹಸ ಸನ್ನಿವೇಶಗಳನ್ನು ಬರೆದುಕೊಂಡು ಆಮೇಲೆ ಸಿನಿಮಾ ಸ್ಕ್ರಿಪ್ಟ್ ಬರೆದಿದ್ದಾರೋ ಎಂಬ ಅನುಮಾನ ಮೂಡುತ್ತಿತ್ತು. ಸಿನಿಮಾದಲ್ಲಿ ಟೈಗರ್ ರಾಥೋರಾಗಿ ಸಲ್ಮಾನ್ ಖಾನ್ ಗೆಸ್ಟ್ ಅಪಿರೆನ್ಸ್ ಮಾಡಿದ್ದು ಟೈಗರ್ ನ ಆರ್ಭಟಕ್ಕೂ ಜನ ಬಹಳ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಸಿನಿಮಾದ ನಾಯಕಿಯಾಗಿ ದೀಪಿಕಾ ಪಡುಕೋಣೆ ಕಾಣಿಸಿಕೊಂಡಿದ್ದು ಅವರು ಕೂಡ ತಮ್ಮ ಸ್ಟಂಟ್ ನಿಂದ ಅಚ್ಚರಿ ಮೂಡಿಸಿದ್ದರು.
ಅಭಿಜಿತ್ ನಲಾನಿ ಮತ್ತು ಮೇಘದೀಪ್ ಬೋಸ್ ರವರ ಸಂಗೀತದಲ್ಲಿ ಮೂಡಿಬಂದ ಸಿನಿಮಾ ಆಕ್ಷನ್ ಪ್ರಿಯರಿಗೆ ಹಾಗೂ ಶಾರುಖಾನ್ ಅಭಿಮಾನಿಗಳಿಗೆ ಹೆಚ್ಚು ಇಷ್ಟವಾಗಿತ್ತು. ಇದೀಗ ಈ ಸಿನಿಮಾ ಐಎಂಡಿಬಿ 2023ರ ಜನಪ್ರಿಯ ಸಿನಿಮಾಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ. ಮಾತ್ರವಲ್ಲದೆ ಈ ಸಿನಿಮಾ ಅಗ್ರ ಸ್ಥಾನದಲ್ಲಿದೆ. ಸಿನಿಮಾದಲ್ಲಿ ಮಾಡಿದ ಅಕ್ಷನ್ಸ್, ಆಕ್ಟಿಂಗ್ ಗಳಿಗೆ ಇದು ಒಳ್ಳೆಯ ಪ್ರತಿಫಲ. ಪ್ರಯತ್ನಕ್ಕೆ ತಕ್ಕ ಫಲ ಎಂದಿಗೂ ಸಿಗುತ್ತದೆ. ಪಠಾಣ್ ಸಿನಿಮಾ ಪ್ರೇಕ್ಷಕರೆಲ್ಲರಲ್ಲಿ ರೋಮಾಂಚನವನ್ನು ಸೃಷ್ಟಿಸಿತ್ತು. ಸಿನಿಮಾ ಎಲ್ಲಿಯೂ ಬೋರ್ ಎನಿಸಿರಲಿಲ್ಲ.
ಆ ಮೂರು ಗಂಟೆಯಲ್ಲಿ ನಡೆದ ಆಕ್ಷನ್, ಆಕ್ಟಿಂಗ್, ಸಾಂಗ್, ಕಾಮಿಡಿ, ಸ್ಟೋರಿ ಎಲ್ಲವೂ ಅತ್ಯದ್ಭುತ. ನಾಲ್ಕು ವರ್ಷದ ಧೀರ್ಘ ಬ್ರೇಕ್ ನ ನಂತರ ಶಾರುಖ್ ಖಾನ್ ಇಷ್ಟು ಒಳ್ಳೆ ಸಿನಿಮಾದ ಮೂಲಕ ಬರುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಆದರೆ ಶಾರುಖ್ ಖಾನ್ ಇದನ್ನು ಸುಳ್ಳು ಮಾಡಿದ್ದಾರೆ. ಕಲಾವಿದ ಯಾವಾಗಲೂ ಕಲಾವಿದನೇ ಎಂಬುದನ್ನು ನಿಜ ಮಾಡಿದ್ದಾರೆ. ಪಟ್ಟ ಶ್ರಮಕ್ಕೆ ಕೊನೆಗೂ ಒಳ್ಳೆಯ ಪ್ರತಿಕ್ರಿಯೆ ದೊರೆಯಿತು.