ಬಾಲಿವುಡ್ ಕಿಂಗ್ ಖಾನ್ ಎಂದೆ ಖ್ಯಾತಿ ಪಡೆದಿರುವ ಶಾರುಖ್ ಖಾನ್ ಸದಾ ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿರುವವರು. ಇದೀಗ ದುಬಾರಿ ಕಾಫಿ ಮಗ್ ಜೊತೆಗೆ ಕಾಣಿಸಿಕೊಂಡಿರುವ ಶಾರುಖ್ ಖಾನ್ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಕಾಫಿ ಮಗ್ ಬೆಲೆ ಕೇಳಿದ್ರೆ ನೀವು ದಂಗಾಗೋದು ಗ್ಯಾರಂಟಿ. ಅಷ್ಟಕ್ಕೂ ಈ ಮಗ್ ನಲ್ಲಿರುವ ವಿಶೇಷತೆಗಳು ಏನೇನ್ ಗೊತ್ತಾ?

ಇತ್ತೀಚೆಗಷ್ಟೇ 10 ಕೋಟಿ ಬೆಲೆಯ ಕಾರು ಖರೀದಿ ಮಾಡಿರುವ ಶಾರುಖ್ ಖಾನ್ ಜೊತೆಗೆ ಇರುವ ವಸ್ತುಗಳೆಲ್ಲವೂ ದುಬಾರಿ. ಇದೇ ವಿಚಾರಕ್ಕೆ ಖಾರುಖ್ ಸುದ್ದಿಯಲ್ಲಿರುತ್ತಾರೆ. ಸದ್ಯ, ಶಾರುಖ್ ಖಾನ್ ಬಳಸುವ ಕಾಫಿ ಮಗ್ ನ ಬೆಲೆ ಬರೋಬ್ಬರಿ 35,862 ರೂ. ಇದು ಇಷ್ಟೊಂದು ದುಬಾರಿಯಾಗಲು ಇದರಲ್ಲಿರುವ ಫೀಚರ್ ಗಳು ಕಾರಣ ಎನ್ನಲಾಗಿದೆ.
ಹೌದು, ಈ ದುಬಾರಿ ಕಾಫಿ ಮಗ್ ಹೀಟರ್ ಮತ್ತು ಎಲ್.ಇ.ಡಿ. ಲೈಟಿಂಗ್ ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಹಾಗೆಯೇ ಈ ಮಗ್ ನಲ್ಲಿ ಯಾವುದೇ ಪಾನೀಯವನ್ನು ನಿಗದಿತ ತಾಪಮಾನದಲ್ಲಿ ಇರಿಸುವ ಸೌಲಭ್ಯವೂ ಇದೆ. ಒಮ್ಮೆ ಚಾರ್ಜ್ ಮಾಡಿ ಮೂರು ಗಂಟೆಗಳ ಕಾಲ ನಿರಂತರ ಬಳಸಬಹುದಾಗಿದೆ. ಮಗ್ ಜೊತೆಗೇ ಚಾರ್ಜಿಂಗ್ ಕೋಸ್ಟರ್ ಲಭ್ಯವಿದೆ. ಮಗ್ ನಲ್ಲಿರುವ ಪ್ಲಸ್ ಮತ್ತು ಮೈನಸ್ ಚಿಹ್ನೆಯನ್ನು ಸ್ಪರ್ಶಿಸುವ ಮೂಲಕ ಪಾನೀಯ ನಿಮಗೆ ಬೇಕಾದ ತಾಪಮಾನಕ್ಕೆ ಹೊಂದಿಸಿಕೊಳ್ಳಬಹುದು. ಈ ಎಲ್ಲಾ ಕಾರಣದಿಂದ ಈ ಕಾಫಿ ಮಗ್ ಬಲು ದುಬಾರಿ.