ಬಿಗ್ ಬಾಸ್ ಕನ್ನಡ ಸೀಸನ್ 11 ಶೋ ಮುಗಿದ ಬಳಿಕ ಫೈನಲಿಸ್ಟ್ ಆಗಿದ್ದ ಎಲ್ಲಾ ಸ್ಪರ್ಧಿಗಳು ಈಗ ಸಿಕ್ಕಾಪಟ್ಟೆ ಬ್ಯುಸಿ ಆಗಿದ್ದಾರೆ. ಎಲ್ಲಾ ವಾಹಿನಿಗಳಿಗೆ ಇಂಟರ್ವ್ಯೂ ಕೊಡುತ್ತಾ, ಬಿಗ್ ಬಾಸ್ ಮನೆಯ ಘಟನೆಗಳು ಅಲ್ಲಿ ಆದಂಥ ಅನುಭವಗಳು ಇದೆಲ್ಲವನ್ನು ಜನರ ಎದುರು ಹಂಚಿಕೊಳ್ಳುತ್ತಿದ್ದಾರೆ. ಹಾಗೆಯೇ ಮನೆಯ ಒಳಗಡೆ ನಡೆದ ಹಲವು ಘಟನೆಗಳ ಬಗ್ಗೆ ಕ್ಲಾರಿಟಿ ಕೂಡ ಕೊಡುತ್ತಿದ್ದಾರೆ. ಅಭಿಮಾನಿಗಳನ್ನು ಕುಟುಂಬದವರನ್ನು ಭೇಟಿ ಮಾಡುತ್ತಿದ್ದಾರೆ. ಬಿಗ್ ಬಾಸ್ ಫೈನಲಿಸ್ಟ್ ಗಳ ಈಗಿನ ಜೀವನ ಈ ರೀತಿ ಸಾಗುತ್ತಿದೆ. ಟಾಪ್ 3 ನಲ್ಲಿ ಇದ್ದ ಸ್ಪರ್ಧಿ ರಜತ್ ಜನರಿಗೆ ಬಹಳ ಇಷ್ಟವಾದ ಸ್ಪರ್ಧಿಗಳಲ್ಲಿ ಒಬ್ಬರು. ಇದೀಗ ಇವರು ಸಂದರ್ಶನ ಒಂದರಲ್ಲಿ ನೀಡಿರುವ ಸ್ಟೇಟ್ಮೆಂಟ್ ಒಂದು ಸಿಕ್ಕಾಪಟ್ಟೆ ವೈರಲ್ ಆಗಿದೆ. ತಿರುಪತಿಯಲ್ಲಿ ಗುಂಡು ಹೊಡೆಸಿಕೊಂಡು ಬರ್ತೀನಿ ಅಂತ ರಜತ್ ಹೇಳಿದ್ದು ಯಾರಿಗೆ? ಇಲ್ಲಿದೆ ಫುಲ್ ಡೀಟೇಲ್ಸ್..
ಬಿಬಿಕೆ11 ನಲ್ಲಿ ಸುದೀಪ್ ಅವರು ಸಹ ಬಹಳ ಇಷ್ಟಪಡುತ್ತಿದ್ದ ಸ್ಪರ್ಧಿಗಳಲ್ಲಿ ರಜತ್ ಸಹ ಒಬ್ಬರು. ರಜತ್ ಗೆ ಅತಿಯಾದ ಕೋಪ, ಮಾತು ಒರಟು, ನೇರ ನುಡಿ ಇದೆಲ್ಲಾ ಸ್ವಭಾವ ಹೇಗಿದೆಯೋ ಅದೇ ರೀತಿ ಬಹಳ ತಮಾಷೆ ಮಾಡುತ್ತಾ, ಎಲ್ಲರ ಜೊತೆಗೂ ಫನ್ನಿಯಾಗಿ ಮಾತನಾಡಿಕೊಂಡು ಇರುವಂತಹ ವ್ಯಕ್ತಿ ರಜತ್. ಹಲವು ಬಾರಿ ಜಗಳ ಆಡಿದರು ಮನೆಯೊಳಗೆ ಭರಪೂರ ಮನರಂಜನೆಯನ್ನಂತೂ ನೀಡಿದ್ದಾರೆ. ಬಿಗ್ ಬಾಸ್ ಜರ್ನಿ ಅರ್ಧ ಭಾಗ ಕಳೆದು, 50 ದಿನಗಳ ಪ್ರಯಾಣ ಮುಗಿದ ಬಳಿಕ ರಜತ್ ಶೋ ಗೆ ವೈಲ್ಡ್ ಕಾರ್ಡ್ ಎಂಟ್ರಿ ಸ್ಪರ್ಧಿಯಾಗಿ ಬಂದಿದ್ದು, ಇಷ್ಟು ತಡವಾಗಿ ಬಂದರೂ ಅಷ್ಟು ಒಳ್ಳೆಯ ಮನರಂಜನೆ ಕೊಟ್ಟ ರಜತ್, ಶುರುವಿನಿಂದಲೇ ಇದ್ದಿದ್ದರೆ ಬಹುಶಃ ಅವರೇ ವಿನ್ನರ್ ಆಗಿರುತ್ತಿದ್ದರು ಎನ್ನುವುದು ಎಲ್ಲರ ಅಭಿಪ್ರಾಯ ಆಗಿದೆ. ಜನರಿಗೆ ಬಹಳ ಇಷ್ಟವಾಗಿದ್ದ ಸ್ಪರ್ಧಿ ಕೂಡ ಇವರು.

ರಜತ್ ಅವರು ಬಿಗ್ ಬಾಸ್ ಶೋನಲ್ಲಿ ಚೈತ್ರಾ ಅವರ ಜೊತೆಗೆ ಇದ್ದ ಬಾಂಡಿಂಗ್, ಚೈತ್ರಾ ಅವರನ್ನು ಬಾಸ್ ಎಂದುಕೊಂಡು ತಮಾಷೆ ಮಾಡುತ್ತಿದ್ದ ರೀತಿ ಇದೆಲ್ಲವನ್ನು ಜನರು ಎಂಜಾಯ್ ಮಾಡಿದ್ದಾರೆ. ಈಗ ಫಿನಾಲೆ ಮುಗಿಸಿ ಮನೆಗೆ ಬಂದ ಬಳಿಕ ಅನೇಕ ಸಂದರ್ಶನಗಳಲ್ಲಿ ಮಾತನಾಡುತ್ತಿರುವ ರಜತ್ ಅವರಿಗೆ ದರ್ಶನ್ ಹಾಗೂ ಸುದೀಪ್ ಫ್ರೆಂಡ್ಶಿಪ್ ಬಗ್ಗೆ ಪ್ರಶ್ನೆ ಕೇಳಲಾಗಿದೆ. ಏಕೆಂದರೆ ರಜತ್ ಇವರಿಬ್ಬರ ಜೊತೆಗೆ ಕೂಡ ಬಹಳ ಚೆನ್ನಾಗಿ, ಆತ್ಮೀಯವಾಗಿ ಇರುವ ವ್ಯಕ್ತಿ. ರಜತ್ ದರ್ಶನ್ ಅವರ ಫ್ಯಾನ್, ಇವರ ರೆಸ್ಟೋರೆಂಟ್ ಉದ್ಘಾಟನೆ ಮಾಡೋಕೆ ಡಿಬಾಸ್ ಬಂದಿದ್ದರು. ಇನ್ನು ಬಿಗ್ ಬಾಸ್ ಇಂದ ಸುದೀಪ್ ಅವರು ರಜತ್ ಅವರಿಗೆ ಬಹಳ ಆತ್ಮೀಯರು. ಹಾಗಾಗಿ ರಜತ್ ಅವರಿಗೆ ವಿಷಯದ ಬಗ್ಗೆ ಪ್ರಶ್ನೆ ಕೇಳಲಾಗುತ್ತಿದೆ. ಅವರಿಬ್ಬರು ಒಂದಾಗೋಕೆ ರಜತ್ ಏನಾದರೂ ಒಂದು ಕೊಂಡಿ ಆಗೋಕೆ ಸಾಧ್ಯವೇ ಎನ್ನುವ ಮಾತು ಕೇಳಿಬರುತ್ತಿದೆ.
ಈ ಪ್ರಶ್ನೆಯನ್ನು ಒಂದು ಸಂದರ್ಶನದಲ್ಲಿ ಕೇಳಿದಾಗ ರಜತ್ ಅವರು ಉತ್ತರ ಕೊಟ್ಟಿದ್ದು, ಅವರಿಬ್ಬರು ತುಂಬಾ ಮೆಚ್ಯುರ್ ಆಗಿರುವ ವ್ಯಕ್ತಿಗಳು, ನಾವು ಆ ವಿಷಯಕ್ಕೆ ಹೋಗಿ ಮಾತಾಡೋದಕ್ಕೆ ಆಗೋದಿಲ್ಲ. ನಾನು ಕೂಡ ಅವರಿಬ್ಬರ ಅಭಿಮಾನಿ ಆಗಿ ಅವರಿಬ್ಬರು ಬೇಗ ಒಂದಾಗಲಿ ಅಂತ ಕಾಯ್ತಿದ್ದೀನಿ. ಅವರಿಬ್ಬರು ಒಂದಾದರೆ ನಾನು ತಿರುಪತಿಗೆ ಹೋಗಿ ಗುಂಡು ಹೊಡೆಸಿಕೊಂಡು ಬರ್ತೀನಿ.. ಎಂದು ಹೇಳಿದ್ದಾರೆ ರಜತ್. ಈ ಮೂಲಕ ರಜತ್ ಅವರು ಇವರಿಬ್ಬರ ಫ್ರೆಂಡ್ಶಿಪ್ ಸರಿ ಮಾಡೋ ವಿಷಯಕ್ಕೆ ನೇರವಾಗಿ ಮಾತನಾಡೋಕೆ ಆಗೋದಿಲ್ಲ ಎನ್ನುವ ವಿಷಯ ಅಂತು ಗೊತ್ತಾಗಿದೆ. ಆದರೆ ಒಬ್ಬ ಅಭಿಮಾನಿ ಆಗಿ ರಜತ್ ಸಹ ದರ್ಶನ್ ಅವರು ಹಾಗೂ ಸುದೀಪ್ ಅವರು ಒಂದಾಗೋದನ್ನ ನೋಡಲು ಕಾಯುತ್ತಿದ್ದಾರೆ. ದರ್ಶನ್ ಅವರೊಡನೆ ಮೊದಲಿನಿಂದಲೂ ರಜತ್ ಅವರಿಗೆ ಆತ್ಮೀಯತೆ ಇದೆ. ದರ್ಶನ್ ಅವರು ಒಳಗಡೆ ಇದ್ದಾಗ, ರಜತ್ ಈ ಬಗ್ಗೆ ಮಾತನಾಡಿದ್ದರು.

ದರ್ಶನ್ ಅವರ ಪರವಾಗಿ ನಿಂತು ಮಾತನಾಡಿದ್ದರು. ಆಗ ಕೂಡ ದರ್ಶನ್ ಅವರ ಮಾತುಗಳು ಸಿಕ್ಕಾಪಟ್ಟೆ ವೈರಲ್ ಆಗಿದ್ದವು. ಇನ್ನು ಬಿಗ್ ಬಾಸ್ ಶೋ ಇಂದ ಸುದೀಪ್ ಅವರ ಜೊತೆಗಿನ ಮಾತುಗಳು ವೈರಲ್ ಆಗಿದೆ. ಬಿಗ್ ಬಾಸ್ ಮನೆಯೊಳಗೇ ಇದ್ದಾಗ ರಜತ್ ಯಾವಾಗಲೂ ಸುದೀಪ್ ಅವರಿಗೆ ನಿಮ್ಮ ಜೊತೆ ಒಂದು ಸಾರಿ ಪಾರ್ಟಿ ಮಾಡಬೇಕು ಸರ್ ಎಂದು ಕೇಳುತ್ತಲೇ ಇದ್ದರು, ಆ ಪಾರ್ಟಿ ಕೂಡ ಮಾಡಲಾಗಿದೆ ಎಂದು ಮಾಹಿತಿ ಸಿಕ್ಕಿದೆ. ಪಾರ್ಟಿಯಲ್ಲಿ ಸುದೀಪ್ ಅವರ ಜೊತೆಗೆ ಒಂದಷ್ಟು ಸಮಯ ಕಳೆದು, ಒಂದಷ್ಟು ಮಾತುಗಳನ್ನಾಡಿದ್ದಾರೆ ರಜತ್. ಹಾಗೆಯೇ ರಜತ್ ಅವರ ಮಗಳ ಜೊತೆಗೆ ಸಹ ಸುದೀಪ್ ಅವರು ಸಮಯ ಕಳೆದು, ಅವರ ಮಗಳ ಜೊತೆಗೆ ಫೋಟೋಗೆ ಪೋಸ್ ನೀಡಿದ್ದಾರೆ. ಮಗಳು ಸುದೀಪ್ ಅವರ ಜೊತೆಗಿರುವ ಫೋಟೋ ಶೇರ್ ಮಾಡಿದ ರಜತ್, ಇದು ನನ್ನ ಮಗಳಿಗೆ ನಾನು ಇದುವರೆಗೂ ಕೊಟ್ಟಿರುವ ಅತ್ಯಂತ ಅಮೂಲ್ಯವಾದ ಗಿಫ್ಟ್ ಎಂದು ಹೇಳಿದ್ದಾರೆ.
ಇನ್ನು ದರ್ಶನ್ ಹಾಗೂ ಸುದೀಪ್ ಇವರಿಬ್ಬರ ಫ್ರೆಂಡ್ಶಿಪ್ ಬಗ್ಗೆ ಹೇಳುವುದಾದರೆ, ಕನ್ನಡ ಚಿತ್ರರಂಗದಲ್ಲಿ ವಿಷ್ಣು ಸರ್ ಹಾಗೂ ಅಂಬಿ ಸರ್ ಥರ ಇವರಿಬ್ಬರು ಸ್ನೇಹಕ್ಕೆ ಇನ್ನೊಂದು ಹೆಸರು ಎನ್ನುವ ಹಾಗೆ ಇರ್ತಾರೆ ಎನ್ನುವ ನಿರೀಕ್ಷೆ ಜನರಲ್ಲಿತ್ತು. ಅಭಿಮಾನಿಗಳು ಇವರಿಬ್ಬರನ್ನು ಕುಚಿಕು ಗೆಳೆಯರು ಎಂದೇ ಕರೆಯುತ್ತಿದ್ದರು. ಇವರಿಬ್ಬರ ಫ್ಯಾನ್ಸ್ ಕೂಡ ಇಬ್ಬರ ಹಾಗೆ ಒಗ್ಗಟ್ಟಿನಿಂದ ಇರುತ್ತಿದ್ದರು. ವೇದಿಕೆಗಳಲ್ಲಿ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದ ಸುದೀಪ್ ಹಾಗು ದರ್ಶನ್ ಅವರನ್ನು ನೋಡಿದರೆ ಎಲ್ಲರಿಗೂ ಖುಷಿ ಆಗುತ್ತಿತ್ತು. ಆದರೆ ಈ ಫ್ರೆಂಡ್ಶಿಪ್ ಮೇಲೆ ಯಾರ ದೃಷ್ಟಿ ಬಿದ್ದಿತೋ ಏನೋ, ಇಬ್ಬರು ದೂರವಾದರು. ಇವರಿಬ್ಬರ ಫ್ರೆಂಡ್ಶಿಪ್ ಅಂತ್ಯವಾಗಿ ಏಳೆಂಟು ವರ್ಷ ಕಳೆದು ಹೋಗಿದೆ. ಆದರೆ ಇವಾಗ ಆದರು ಇವರಿಬ್ಬರು ಒಂದಾಗಲಿ ಎಂದು ಇವರಿಬ್ಬರ ಫ್ಯಾನ್ಸ್ ಕಾಯುತ್ತಿದ್ದಾರೆ. ಆ ದಿನ ಯಾವಾಗ ಬರುತ್ತೋ ಗೊತ್ತಿಲ್ಲ.

ಸುದೀಪ್ ಅವರು ಕೆಲವು ಕಾರ್ಯಕ್ರಮಗಳಲ್ಲಿ ದರ್ಶನ್ ಅವರ ಬಗ್ಗೆ ಪ್ರಶ್ನೆ ಕೇಳಿದಾಗ, ದರ್ಶನ್ ಯಾವಾಗಲೂ ನನ್ನ ಫ್ರೆಂಡ್ ಎಂದು ಹೇಳಿದ್ದಿದೆ, ಆದರೆ ದರ್ಶನ್ ಅವರು ಮಾತ್ರ ಸುದೀಪ್ ಅವರ ಬಗ್ಗೆ ಯಾವುದೇ ಮಾತನ್ನು ಆಡಿಲ್ಲ. ದರ್ಶನ್ ಅವರು ಒಳಗಡೆ ಇದ್ದಾಗ ಸಹ ಸುದೀಪ್ ಅವರು ಮಾತನಾಡಿ, ಅವರ ಫ್ಯಾನ್ಸ್ ಹಾಗೂ ಫ್ಯಾಮಿಲಿ ತುಂಬಾ ನೋವಲ್ಲಿದ್ದಾರೆ ಅದನ್ನ ನಾವು ಅರ್ಥ ಮಾಡಿಕೊಳ್ಳಬೇಕು. ಅವರಿಗೆ ಇನ್ನಷ್ಟು ನೋವು ಕೊಡೋಕೆ ಹೋಗಬಾರದು ಎಂದಿದ್ದರು. ಹೀಗೆ ಸುದೀಪ್ ಅವರು ಒಂದರ್ಥದಲ್ಲಿ ದರ್ಶನ್ ಅವರ ಪರವಾಗಿಯೇ ನಿಂತಿದ್ದಾರೆ. ಪರೋಕ್ಷವಾಗಿ ಸಪೋರ್ಟ್ ಮಾಡುತ್ತಲು ಇದ್ದಾರೆ. ಆದರೆ ಇಬ್ಬರು ಮುನಿಸು ತೊರೆದು, ಯಾವಾಗ ಒಂದಾಗುತ್ತಾರೆ ಎನ್ನುವುದು ಗೊತ್ತಿಲ್ಲ. ಒಂದು ವೇಳೆ ಅಂಥ ಘಟನೆ ನಡೆದು ಹೋದರೆ, ಇವರಿಬ್ಬರ ಫ್ಯಾನ್ಸ್ ಫುಲ್ ಖುಷಿಯಾಗುವುದರಲ್ಲಿ ಸಂಶಯವಿಲ್ಲ.