ನಟಿ ರಶ್ಮಿಕಾ ಮಂದಣ್ಣ ಈಗ ಪುಷ್ಪ2 ಸಿನಿಮಾದ ಸಕ್ಸಸ್ ಎಂಜಾಯ್ ಮಾಡುತ್ತಿದ್ದಾರೆ. ರಶ್ಮಿಕಾ ಅವರ ಕೆರಿಯರ್ ನಲ್ಲಿ ಅತಿದೊಡ್ಡ ಸಿನಿಮಾಗಳಲ್ಲಿ ಪುಷ್ಪ ಅಗ್ರಸ್ಥಾನದಲ್ಲಿ ನಿಲ್ಲುತ್ತದೆ. ಈ ಸಿನಿಮಾದ ನಾಯಕಿ ಶ್ರೀವಲ್ಲಿ ಪಾತ್ರದಲ್ಲಿ ರಶ್ಮಿಕಾ ಅಭಿನಯಿಸಿದ್ದು, ಈ ಪಾತ್ರಕ್ಕೆ ಜನರಿಂದ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಪುಶ್ಪ2 ಸಿನಿಮಾ ಕಳೆದ ಗುರುವಾರ ಬಿಡುಗಡೆಯಾಗಿ ದೇಶದ ಎಲ್ಲೆಡೆ ಬ್ಲಾಕ್ ಬಸ್ಟರ್ ಎನ್ನಿಸಿಕೊಂಡಿದೆ. ಪುಷ್ಪ2 ಸಿನಿಮಾ ಸಕ್ಸಸ್ ನಲ್ಲಿ ಖುಷಿಯಾಗಿರೋ ರಶ್ಮಿಕಾ ಅವರ ಬಗ್ಗೆ ಇದೀಗ ಹೊಸ ಸುದ್ದಿ ತಿಳಿದುಬಂದಿದೆ. ಅದು ರಶ್ಮಿಕಾ ಮತ್ತು ಅವರ ಫ್ಯಾನ್ಸ್ ಬಗ್ಗೆ, ತಮ್ಮ ಫ್ಯಾನ್ಸ್ ಗಾಗಿ ಯಾವತ್ತಿಗೂ ಈ ಒಂದು ವಿಷಯಕ್ಕೆ ನೋ ಎಂದು ಹೇಳೋದಿಲ್ವಂತೆ ರಶ್..

ಹೌದು, ಎಲ್ಲಾ ಕಲಾವಿದರಿಗು ಫ್ಯಾನ್ಸ್ ಅಂದ್ರೆ ಪ್ರೀತಿ ಇರುತ್ತದೆ. ಫ್ಯಾನ್ಸ್ ಇರುವುದರಿಂದಲೇ ಅವರಿಗೆ ಅಷ್ಟು ಜನಪ್ರಿಯತೆ, ಹೆಸರು ಎಲ್ಲವೂ ಸಿಕ್ಕಿರೋದು. ಫ್ಯಾನ್ಸ್ ಇಂದಲೇ ಗೌರವ, ಪ್ರೀತಿ ಎಲ್ಲವು ಸಿಗುತ್ತಿರೋದು. ಇಂಥ ಫ್ಯಾನ್ಸ್ ಗಳನ್ನು ಕುಟುಂಬದ ಹಾಗೆ ನೋಡೋ ಸ್ಟಾರ್ ಗಳು ಇದ್ದಾರೆ, ಕನ್ನಡದ ಲೆಜೆಂಡ್ ಡಾ. ರಾಜ್ ಕುಮಾರ್ ಅವರು ಅಭಿಮಾನಿಗಳನ್ನ ದೇವರು ಅಂತ ಕರೆದರು, ಫ್ಯಾನ್ಸ್ ಗಳನ್ನ ದೇವರು ಅಂದ ಮೊದಲ ಸೆಲೆಬ್ರಿಟಿ ರಾಜಣ್ಣ, ಈ ಕಾರಣಕ್ಕೆ ಅಭಿಮಾನಿಗಳಿಗೂ ಸಹ ಡಾ. ರಾಜ್ ಕುಮಾರ್ ಅಂದ್ರೆ ಅಷ್ಟು ಪ್ರೀತಿ. ಎಲ್ಲಾ ಕಲಾವಿದರಿಗು ಅವರನ್ನು ಪ್ರೀತಿಸುವ ಆರಾಧಿಸುವ ಅಭಿಮಾನಿ ಬಳಗ ಇದ್ದೇ ಇರುತ್ತದೆ. ತಮ್ಮ ಮೆಚ್ಚಿನ ಕಲಾವಿದರನ್ನು ನೋಡಿದಾಗ ಫ್ಯಾನ್ಸ್ ಫೋಟೋ ಸೆಲ್ಫಿ ಕೇಳುತ್ತಾರೆ..
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ಹೌದು, ಇದೆಲ್ಲವೂ ಕಾಮನ್. ತಮ್ಮ ಮೆಚ್ಚಿನ ಸ್ಟಾರ್ ಅನ್ನು ನೋಡಿದರೆ, ಅಭಿಮಾನಿಗಳು ಒಂದು ಫೋಟೋ, ಸೆಲ್ಫಿ, ಆಟೋಗ್ರಾಫ್ ಎಂದು ಕೇಳುತ್ತಾರೆ. ಆದರೆ ಎಲ್ಲಾ ಸ್ಟಾರ್ ಗಳು ಒಂದೇ ರೀತಿ ಇರುವುದಿಲ್ಲ, ಅವರ ಮೂಡ್ ಸಹ ಯಾವಾಗಲೂ ಒಂದೇ ಥರ ಇರೋದಿಲ್ಲ. ಕೆಲವೊಮ್ಮೆ ಕೆಲವು ಸೆಲೆಬ್ರಿಟಿಗಳು ಫೋಟೋ ಅಥವಾ ಸೆಲ್ಫಿ ಕೊಡೋಕೆ ನಿರಾಕರಿಸಬಹುದು, ಇಂಥ ಘಟನೆಗಳನ್ನು ಹಲವು ಸಾರಿ ನೋಡಿದ್ದೇವೆ. ಆದರೆ ರಶ್ಮಿಕಾ ಅವರು ಈ ವಿಷಯದಲ್ಲಿ ತುಂಬಾ ಡಿಫರೆಂಟ್, ಅವರಿಗೆ ಅಭಿಮಾನಿಗಳು ಅಂದ್ರೆ ಪ್ರಾಣ, ಅಭಿಮಾನಿಗಳಿಗು ಅಷ್ಟೇ ರಶ್ಮಿಕಾ ಅಂದ್ರೆ ಕ್ರೇಜ್ ಜಾಸ್ತಿ, ನ್ಯಾಷನಲ್ ಕ್ರಶ್ ಎಂದೇ ಕರೆಯುತ್ತಾರೆ.

ಅಭಿಮಾನಿಗಳು ಅಷ್ಟೆಲ್ಲಾ ಪ್ರೀತಿ ಕೊಟ್ಟು, ನ್ಯಾಷನಲ್ ಕ್ರಶ್ ಆಗಿ ಮಾಡಿರುವ ಕಾರಣ, ಅಭಿಮಾನಿಗಳ ಮೇಲೆ ರಶ್ಮಿಕಾ ಅವರಿಗೂ ಅಷ್ಟೇ ಗೌರವ ಇದೆ. ಅವರ ಮೂಡ್ ಹೇಗೆ ಇದ್ದರು, ಎಷ್ಟೇ ಒತ್ತಡ ಇದ್ದರೂ, ಸುಸ್ತಾಗಿದ್ದರು, ಪರಿಸ್ಥಿತಿ ಹೇಗೆ ಇದ್ದರೂ ಕೂಡ ಫ್ಯಾನ್ಸ್ ಬಂದು ಸೆಲ್ಫಿ, ಫೋಟೋ ಎಂದು ಕೇಳಿದಾಗ ಆಗಲ್ಲ ಎಂದು ಹೇಳೋದಿಲ್ಲ ರಶ್ಮಿಕಾ ಅವರು. ತಮ್ಮ ಮೂಡ್ ಹೇಗೆ ಇದ್ದರು ಸಹ ನಗುತ್ತಲೇ ಅಭಿಮಾನಿಗಳ ಸೆಲ್ಫಿಗೆ ಪೋಸ್ ಕೊಡುತ್ತಾರೆ. ಫ್ಯಾನ್ಸ್ ಅಂದ್ರೆ ತಮಗೆ ಅಷ್ಟು ಪ್ರೀತಿ ಎಂದು ಒಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ ರಶ್ಮಿಕಾ. ಇದೀಗ ರಶ್ಮಿಕಾ ಅವರ ಈ ಮಾತು ವೈರಲ್ ಆಗುತ್ತಿದೆ.
ರಶ್ಮಿಕಾ ಅವರು ಹೇಳಿದ ಮಾತು ಕೂಡ ಅಷ್ಟೇ ಸತ್ಯ, ಏಕೆಂದರೆ ಹಲವು ಸಾರಿ ರಶ್ಮಿಕಾ ಅವರು ಅಭಿಮಾನಿಗಳ ಜೊತೆಗೆ ಫೋಟೋಗೆ ಪೋಸ್ ಕೊಡೋದನ್ನ ನಾವು ಸಹ ನೋಡಿದ್ದೇವೆ. ಏರ್ಪೋರ್ಟ್ ನಲ್ಲಿ, ಹೊರಗಡೆ, ಶೂಟಿಂಗ್ ಸ್ಪಾಟ್ ಗಳಲ್ಲಿ ಹೀಗೆ ಅನೇಕ ಕಡೆಗಳಲ್ಲಿ ಅಭಿಮಾನಿಗಳು ಫೋಟೋ ಕೇಳಿದಾಗ ನಗುತ್ತಾ ಪೋಸ್ ಕೊಡುತ್ತಾರೆ ರಶ್ಮಿಕಾ. ಈ ವಿಚಾರ ನಿಜಕ್ಕೂ ಮೆಚ್ಚುವಂಥದ್ದು. ಹಾಗೆಯೇ ರಶ್ಮಿಕಾ ಅವರು ಈಗ ಕೆರಿಯರ್ ನ ಉತ್ತುಂಗದಲ್ಲಿದ್ದು, ಹಲವು ಸ್ಟಾರ್ ಹೀರೋಗಳ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನು ದೊಡ್ಡ ಸಿನಿಮಾಗಳೇ ತೆರೆ ಕಾಣಲಿದೆ.