ನಟ ಯಶ್ ಅವರು ಇಂದು ದೊಡ್ಡ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬೆಳೆದಿರಬಹುದು. ವಿಶ್ವಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಇವರ ಮುಂದಿನ ಸಿನಿಮಾಗಾಗಿ ದೇಶದ ಎಲ್ಲೆಡೆ ಅಭಿಮಾನಿಗಳು ಕಾಯುತ್ತಲಿದ್ದಾರೆ. ಆದರೆ ಯಶ್ ಅವರು ಎಷ್ಟೇ ಎತ್ತರಕ್ಕೆ ಬೆಳೆದರು ಕೂಡ ತಮ್ಮ ನೆಲವನ್ನು ಮರೆತಿಲ್ಲ. ಕನ್ನಡ ನಾಡು, ಕರ್ನಾಟಕದ ಜನ, ನಮ್ಮ ಊಟದ ಶೈಲಿ ಇದ್ಯಾವುದನ್ನು ಸಹ ಯಶ್ ಅವರು ಮರೆತಿಲ್ಲ, ಮರೆಯುವುದು ಇಲ್ಲ. ನಮ್ಮ ಊಟದ ಶೈಲಿ ಬಹಳ ಸ್ಪೆಶಲ್. ಕರ್ನಾಟಕದ ಊಟದ ಶೈಲಿ ಇಷ್ಟವಾಗಿ, ಹಲವು ಹೊರ ರಾಜ್ಯದವರು ಹಾಗೂ ಹೊರದೇಶದವರು ಸಹ ಇಲ್ಲಿನ ಊಟ ಸವಿದಿದ್ದಾರೆ. ಇನ್ನು ಯಶ್ ಅವರು ಸಹ ಹೊರ ರಾಜ್ಯದವರಿಗೆ ನಮ್ಮ ಊಟದ ಬಗ್ಗೆ ಹೇಳಿರುವ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇವು ಹಳೆಯ ಸಂದರ್ಶನಗಳು ಆದರೆ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ..

ನಟ ಯಶ್ ಅವರು ಕರ್ನಾಟಕದಲ್ಲಿ ಹುಟ್ಟಿ ಬೆಳೆದವರು, ಇವರ ತಂದೆ ತಾಯಿಯ ತವರು ಹಾಸನ, ಆದರೆ ಯಶ್ ಅವರು ಹುಟ್ಟಿ ಬೆಳೆದಿದ್ದು ಮೈಸೂರಿನಲ್ಲಿ. ಅಪ್ಪಟ ಮೈಸೂರಿನ ಹುಡುಗ ಅಂದ್ರೆ ನಮ್ಮ ಶೈಲಿಯ ಊಟ ಇಷ್ಟ ಆಗದೇ ಇರುತ್ತಾ ಹೇಳಿ. ನಮ್ಮ ರಾಗಿ ಮುದ್ದೆ, ನಾಟಿ ಕೋಳಿ ಸಾರು, ಬಸ್ಸಾರು ಇವುಗಳೇ ಅಲ್ಲವೇ ನಮ್ಮ ನಾಲಿಗೆಗೆ ರುಚಿಸೋದು. ನಮ್ಮ ಊಟದ ಶೈಲಿಯನ್ನ ಸವಿದವರಿಗೆ, ಬೇರೆ ಯಾವುದು ಅಷ್ಟರ ಮಟ್ಟಿಗೆ ರುಚಿಸೋದಿಲ್ಲ ಅನ್ನೋದಂತೂ ನಿಜ. ಇನ್ನು ಯಶ್ ಅವರು ಸಹ ನಮ್ಮ ಊಟದ ಪ್ರಿಯರೇ, ರಾಗಿ ಮುದ್ದೆಯನ್ನ ಇಷ್ಟಪಟ್ಟು ತಿನ್ನೋರು. ಸಂದರ್ಶನ ಒಂದರಲ್ಲಿ ಯಶ್ ಅವರು ಬಹಳ ಹೆಮ್ಮೆಯಿಂದ ರಾಗಿ ಮುದ್ದೆ ಬಗ್ಗೆ ಹೇಳಿರುವ ಮಾತು ಈಗ ವೈರಲ್ ಆಗಿದೆ.

ಕೆಜಿಎಫ್ ಚಾಪ್ಟರ್ 1 ಹಾಗೂ ಕೆಜಿಎಫ್ ಚಾಪ್ಟರ್ 2 ಸಿನಿಮಾ ಪ್ರೊಮೋಶನ್ ವೇಳೆ ಯಶ್ ಅವರು ಮುಂಬೈನ ಹಲವು ಮಾಧ್ಯಮ ಮಿತ್ರರಿಗೆ ಸಂದರ್ಶನ ನೀಡಿದ್ದಾರೆ. ಅವುಗಳಲ್ಲಿ ನಮ್ಮ ಸಂಸ್ಕೃತಿ ಬಗ್ಗೆ ಹಾಗೂ ನಮ್ಮ ನಾಡಿನ ಬಗ್ಗೆ ಸಹ ಮಾತನಾಡಿದ್ದಾರೆ. ಆ ಹಳೆಯ ಸಂದರ್ಶನದ ಹಲವು ವಿಡಿಯೋ ಕ್ಲಿಪ್ ಗಳು ಕೆಲವು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಅದು ಯಶ್ ಅವರು ಮುದ್ದೆ ಬಗ್ಗೆ ಹೇಳಿರುವ ವಿಡಿಯೋ ಆಗಿದೆ. ಹಳೆಯ ವಿಡಿಯೋ ಕ್ಲಿಪ್ ಆಗಿದ್ದರು ಸಹ, ಇದು ಎವರ್ ಗ್ರೀನ್ ಎನ್ನುವ ರೀತಿಯಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಆ ಸಂದರ್ಶನ ಮಾಡುತ್ತಿರುವ ನಿರೂಪಕರು, ಯಶ್ ಅವರು ದೋಸೆ ಅಥವಾ ಇಡ್ಲಿ ಸಾಂಬಾರ್ ಎರಡರಲ್ಲಿ ಯಾವುದನ್ನು ಆಯ್ಕೆ ಮಾಡುತ್ತೀರಿ ಎಂದು ಪ್ರಶ್ನೆ ಕೇಳಿದ್ದಾರೆ.
ಅದಕ್ಕೆ ಯಶ್ ಅವರು ಹಿಂದೂ ಮುಂದು ಯೋಚಿಸದೇ, ರಾಗಿ ಮುದ್ದೆ ಇದು ನಮ್ಮ ಕರ್ನಾಟಕದ ಊಟ ಎಂದು ಹೇಳಿದ್ದಾರೆ. ಇದೀಗ ಈ ವಿಡಿಯೋ ಮತ್ತೆ ವೈರಲ್ ಆಗಿದ್ದು, ಯಶ್ ಅವರಿಗೆ ತಾಯ್ನಾಡಿನ ಮೇಲೆ, ಇಲ್ಲಿನ ಊಟದ ಮೇಲೆ ಎಷ್ಟು ಪ್ರೀತಿ ಇದೆ ಎನ್ನುವ ಅಂಶ ಸಿಕ್ಕಾಪಟ್ಟೆ ವೈರಲ್ ಆಗಿದೆ. ಯಶ್ ಅವರು ಎಷ್ಟೇ ಎತ್ತರಕ್ಕೆ ಬೆಳೆದರೂ, ಯಾವ ರಾಜ್ಯಕ್ಕೆ, ದೇಶಕ್ಕೆ ಹೋದರೂ ನಮ್ಮತನವನ್ನು ಮರೆತಿಲ್ಲ, ಬಿಟ್ಟುಕೊಟ್ಟಿಲ್ಲ, ಇದಕ್ಕೆ ಅವರು ಎಲ್ಲರಿಗೂ ಇಷ್ಟ ಆಗೋದು, ಎಲ್ಲರ ಜೊತೆಗೂ ಕನೆಕ್ಟ್ ಆಗೋದು ಎಂದು ಹೇಳುತ್ತಿದ್ದಾರೆ ಯಶ್ ಅವರ ಫ್ಯಾನ್ಸ್. ಉತ್ತರ ಭಾರತದವರು ಸಹ ಯಶ್ ಅವರ ಈ ಉತ್ತರ ಕೇಳಿ, ರಾಗಿ ಮುದ್ದೆ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ನಮ್ಮ ಮುದ್ದೆಯ ಪವರ್ ಅದು ಎಂದರು ತಪ್ಪಲ್ಲ.

ಯಶ್ ಅವರು ಇಂದು ಈ ಮಟ್ಟಕ್ಕೆ ಬೆಳೆದು ನಿಂತಿರುವುದನ್ನು ನೋಡಿದರೆ ಬಹಳ ಸಂತೋಷ ಆಗುತ್ತದೆ. ಗಾಂಧಿನಗರಕ್ಕೆ ಬಂದು, ಇಲ್ಲಿ ಹೀರೋ ಆಗಿ ಸಾಧನೆ ಮಾಡುತ್ತೀನಿ ಎಂದು ಛಲ ತೊಟ್ಟಿದ್ದ ಯಶ್ ಅವರು ಇಂದು, ಎತ್ತರಕ್ಕೆ ಬೆಳೆದಿದ್ದಾರೆ. ಕರ್ನಾಟಕ ಹಾಗೂ ಕನ್ನಡ ಚಿತ್ರರಂಗ ಮಾತ್ರವಲ್ಲ ಭಾರತ ಚಿತ್ರರಂಗ ಅವರತ್ತ ತಿರುಗಿ ನೋಡುತ್ತಿದೆ. ಕೆಜಿಎಫ್ ಚಾಪ್ಟರ್ 1 ಹಾಗೂ ಚಾಪ್ಟರ್ 2 ಸಿನಿಮಾಗಳು ಯಶ್ ಅವರಿಗೆ ಅಷ್ಟು ದೊಡ್ಡ ಮಟ್ಟದಲ್ಲಿ ಯಶಸ್ಸನ್ನು ತಂದುಕೊಟ್ಟಿದೆ. ಇದಾದ ಬಳಿಕ ಯಶ್ ಅವರು ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ಸಿನಿಮಾ ಟಾಕ್ಸಿಕ್. ಈ ಸಿನಿಮಾಗೆ ಸಂಬಂಧಿಸಿದ ಕೆಲಸಗಳು ಭರದಿಂದ ನಡೆಯುತ್ತಿದೆ. ಯಶ್ ಅವರು ಶೂಟಿಂಗ್ ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಮುಂಬೈ, ಬೆಂಗಳೂರು ಸೇರಿದಂತೆ ಅನೇಕ ಕಡೆಗಳಲ್ಲಿ ಟಾಕ್ಸಿಕ್ ಸಿನಿಮಾ ಶೂಟಿಂಗ್ ನಡೆಯುತ್ತಿದೆ..

ಯಶ್ ಅವರು ಟಾಕ್ಸಿಕ್ ಸಿನಿಮಾ ಮೂಲಕ ಗ್ಲೋಬಲ್ ಆಡಿಯನ್ಸ್ ರೀಚ್ ಮಾಡುವ ಪ್ರಯತ್ನದಲ್ಲಿದ್ದಾರೆ. ಕನ್ನಡ ಹಾಗೂ ಇಂಗ್ಲಿಷ್ ಎರಡು ಭಾಷೆಯಲ್ಲಿ ಈ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ ಎಂದು ಮಾಹಿತಿ ಸಿಕ್ಕಿದೆ. ಬಾಲಿವುಡ್ ನಟಿ, ದಕ್ಷಿಣ ಭಾರತದ ಖ್ಯಾತ ನಟಿಯರು, ಹಾಲಿವುಡ್ ತಂತ್ರಜ್ಞರು ಎಲ್ಲರೂ ಸಹ ಈ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದು ಟಾಕ್ಸಿಕ್ ದೊಡ್ಡ ಮಟ್ಟದಲ್ಲಿ ಹೆಸರು ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ. ಇನ್ನು ಈ ಸಿನಿಮಾ ಈ ವರ್ಷವೇ ತೆರೆ ಕಾಣುತ್ತಾ ಅಥವಾ ಟಾಕ್ಸಿಕ್ ಸಿನಿಮಾ ಗೋಸ್ಕರ ಇನ್ನು ಒಂದು ವರ್ಷ ಕಾಯಬೇಕಾ ಎನ್ನುವ ಬಗ್ಗೆ ಯಶ್ ಅವರು ಇನ್ನು ಕೂಡ ಯಾವುದೇ ಸ್ಪಷ್ಟನೆ ಕೊಟ್ಟಿಲ್ಲ. ಆದರೆ ಅಭಿಮಾನಿಗಳು ಮಾತ್ರ ಟಾಕ್ಸಿಕ್ ಹೊಸ ಅಪ್ಡೇಟ್ ಗಾಗಿ ಕಾಯುತ್ತಿದ್ದಾರೆ..

ಟಾಕ್ಸಿಕ್ ಅಪ್ಡೇಟ್ ಜೊತೆಗೆ ರಾಮಾಯಣ ಅಪ್ಡೇಟ್ ಗಾಗಿ ಸಹ ಫ್ಯಾನ್ಸ್ ಕಾಯುತ್ತಿದ್ದಾರೆ. ರಾಮಾಯಣ ಸಿನಿಮಾದಲ್ಲಿ ಯಶ್ ಅವರು ರಾವಣನ ಪಾತ್ರದಲ್ಲಿ ನಟಿಸುತ್ತಾರೆ ಎಂದು ನಮಗೆಲ್ಲಾ ಗೊತ್ತೇ ಇದೆ. ಈ ಸಿನಿಮಾದಲ್ಲಿ ಯಶ್ ಅವರು ನಟನೆ ಮಾತ್ರ ಮಾಡುತ್ತಿಲ್ಲ, ನಿರ್ಮಾಣದ ಜವಾಬ್ದಾರಿ ಸಹ ಹೊತ್ತಿದ್ದಾರೆ. ರಾಮಾಯಣದಲ್ಲಿ ರಾವಣನ ಪಾತ್ರ ತುಂಬಾ ಇಂಟರೆಸ್ಟಿಂಗ್ ಆಗಿರುವ ಪಾತ್ರ ಎಂದು ಯಶ್ ಅವರು ಈಗಾಗಲೇ ಒಂದು ಸಂದರ್ಶನದಲ್ಲಿ ಹೇಳಿದ್ದು, ಮುಂದಿನ ವರ್ಷ ಈ ಸಿನಿಮಾ ತೆರೆಕಾಣುವ ಸಾಧ್ಯತೆ ಇದೆ. ಇನ್ನು ಕೆಜಿಎಫ್3 ಸಿನಿಮಾ ಕೂಡ ಮೂಡಿಬರಲಿದೆ, ಆದರೆ ಅದಕ್ಕಾಗಿ ಎಷ್ಟು ವರ್ಷಗಳು ಕಾಯಬೇಕು ಎಂದು ಗೊತ್ತಿಲ್ಲ. ಪ್ರಶಾಂತ್ ನೀಲ್ ಅವರು ಬ್ಯುಸಿ ಇದ್ದಾರೆ, ಯಶ್ ಅವರು ಬ್ಯುಸಿ ಇದ್ದಾರೆ. ಇವರಿಬ್ಬರು ಬೇರೆ ಸಿನಿಮಾಗಳನ್ನು ಮುಗಿಸಿ ಕೆಜಿಎಫ್3 ಶುರು ಮಾಡಬೇಕಿದೆ.