ಆರ್ಸಿಬಿ ಸಂಭ್ರಮಾಚರಣೆ ವೇಳೆ ಬಹಳ ಲವಲವಿಕೆಯಿಂದ ಓಡಾಡಿದ್ದರು ಡಿಸಿಎಂ ಡಿಕೆ ಶಿವಕುಮಾರ್. ಆಟಗಾರರನ್ನ ವೆಲ್ಕಮ್ ಮಾಡಲು ಏರ್ಪೋರ್ಟ್ ಗೆ ಹೋಗಿದ್ದರು ಡಿಕೆಶಿ. ಅಷ್ಟೆ ಅಲ್ಲ ವಿಧಾನಸೌಧ ಮುಂಭಾಗದಲ್ಲಿ ನಡೆದಂತಹ ಕಾರ್ಯಕ್ರಮದಲ್ಲಿ ಮುಂದೆ ನಿಂತು ಎಲ್ಲರನ್ನು ಬರಮಾಡಿಕೊಂಡಿದ್ದರು. ಇದಾದ ಬಳಿಕ ಅವರ ಜೊತೆಗೆ ತೆರಳಿ ಸ್ಟೇಡಿಯಂ ಬಳಿ ಹೋಗಿ ಸಂಭ್ರಮದಲ್ಲಿ ಭಾಗಿಯಾಗಿ ಕಪ್ ಗೆ ಮುತ್ತಿಟ್ಟಿದ್ದರು. ಇಷ್ಟೆಲ್ಲಾ ನಡೆದ ಬಳಿಕ ಅವರ ನಡವಳಿಕೆ ಹಾಗೂ ಓಡಾಡ ನೋಡಿದವರು ಇದರ ಹಿಂದೆ ಏನೋ ಇದೆ ಅನ್ನೋದನ್ನ ಊಹೆ ಮಾಡಿದ್ದರು.

ಇದೆಲ್ಲದರ ಹಿಂದೆ ಅನೇಕ ಚರ್ಚೆ ಹಾಗೂ ಕುತೂಹಲ ಹುಟ್ಟಿಕೊಂಡಿತ್ತು. ಅದೇನಪ್ಪ ಅಂದ್ರೆ ಆರ್ ಸಿ ಬಿ ಫ್ರಾಂಚೈಸಿಯನ್ನ ಡಿಕೆಶಿ ಕೊಂಡುಕೊಳ್ಳುತ್ತಾರೆ ಅನ್ನೋ ವಿಚಾರ. ಈ ಆರ್ ಸಿಬಿ ಸಂಭ್ರಮೋತ್ಸವ ಕಾರ್ಯಕ್ರಮಕ್ಕೆ ಬಿಗ್ ಟ್ವಿಸ್ಟ್ ಕೂಡ ಸಿಕ್ಕಂತಾಗಿತ್ತು. ಕನ್ನಡಿಗ ರಾಜಕಾರಣಿಯ ವಶವಾಗ್ತಾರಾ ಚಾಂಪಿಯನ್ಸ್..? ಆರ್ ಸಿಬಿಯನ್ನ ಖರೀದಿ ಮಾಡ್ತಾರಂತೆ ಆ ಮಹಾನಾಯಕ ಅಂತೆಲ್ಲಾ ಚರ್ಚೆಗೆ ಬಂದಿತ್ತು. ಅಷ್ಟೆ ಯಾಕೆ ಆರ್ ಸಿಬಿ ಆಟಗಾರರಿಗೆ ಸನ್ಮಾನ ಮಾಡಲು ಅಷ್ಟೊಂದು ತರಾತುರಿ ನಡೆಸಿದ್ದು ಇದೇ ಕಾರಣಕ್ಕೆ ಅಂತಲೂ ಗುಸು ಗುಸು ಇತ್ತು.
ಇಷ್ಟೆ ಅಲ್ಲ ಈಗಾಗಲೇ ಖರೀದಿ ಬಗ್ಗೆ ಒಂದು ಸುತ್ತಿನ ಮಾತುಕತೆ ನಡೆದಿದೆ. ಮುಂದಿನ IPL ಸೀಸನ್ ಹೊತ್ತಿಗೆ ಕನ್ನಡಿಗನ ಪಾಲಾಗುತ್ತೆ ಅಂತಲೂ ಗಾಸಿಪ್ ಕೇಳಿ ಬಂದಿತ್ತು. ಇದು ಕೇವಲ ಗಾಳಿ ಸುದ್ದಿಯಾ ಅಥವಾ ನಿಜವಾಗಲೂ ಅಂತಹದೊಂದು ಚರ್ಚೆ ನಡೆದಿದೆಯಾ ಅನ್ನೋ ಬೆನ್ನಲ್ಲೇ ಎಲ್ಲದಕ್ಕೂ ಡಿಕೆ ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಈ ಒಂದು ಸ್ಪಷ್ಟನೆ ಇದೀಗ ಎಲ್ಲಾ ಪ್ರಶ್ನೆಗಳು ಊಹಾಪೋಹಗಳಿಗೆ ತೆರೆ ಬಿದ್ದಂತಾಗಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯನ್ನು ಖರೀದಿಸುವ ವಿಚಾರವಾಗಿ ಮಾತನಾಡಿರುವ ಅವರು, ನಾನೇನು ಹುಚ್ಚನಲ್ಲ. ನಾನು ಚಿಕ್ಕಂದಿನಿಂದಲೂ ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ನ ಸದಸ್ಯನಾಗಿದ್ದೇನೆ. ಇಷ್ಟೇ ನನಗೆ ಇದ್ಯಾವುದಕ್ಕೂ ಸಮಯವಿಲ್ಲ. ನನ್ನ ಕಾಲೇಜು, ಸ್ಕೂಲ್ ವ್ಯವಹಾರ ನಡೆಸೋದಕ್ಕೆ ಸಾಧ್ಯವಾಗದೇ ನನ್ನ ಕುಟುಂಬದವರಿಗೆ ಬಿಟ್ಟು ಕೊಟ್ಟಿದ್ದೇನೆ. ನಾನು ರಾಜಕಾರಣಿ ನನಗ್ಯಾಕೆ ಬೇಕು ಆರ್ಸಿಬಿ ಎಂದಿದ್ದಾರೆ. ಅಷ್ಟೆ ಅಲ್ಲ ನಾನು ರಾಯಲ್ ಚಾಲೆಂಜರ್ಸ್ ಡ್ರಿಂಕ್ ನ ಕುಡಿಯೋದೆ ಇಲ್ಲ. ಹೀಗಿರುವಾಗ ನನಗೇನುಕ್ಕೆ ಆರ್ ಸಿಬಿ ಎಂದಿದ್ದಾರೆ.
ಸದ್ಯ ಆರ್ಸಿಬಿ ಫ್ರಾಂಚೈಸಿ ಖರೀದಿ ಕುರಿತಂತೆ ಇದ್ದಂತಹ ಎಲ್ಲಾ ಊಹಾಪೋಹಗಳಿಗೆ ಉತ್ತರ ನೀಡೋ ಮೂಲಕ ಫುಲ್ ಸ್ಟಾಪ್ ಹಾಕಿದ್ದಾರೆ. ಆದರೂ ಮತ್ತಷ್ಟು ಚರ್ಚೆಯಂತೂ ಮುಂದುವರೆದಿದೆ. ಈಗಾಗಲೇ ಆರ್ಸಿಬಿ ಫ್ರಾಂಚೈಸಿ ಮಾರಾಟ ಆಗಲಿದೆ ಅನ್ನೋದರ ಸುದ್ದಿ ಕೂಡ ಹೊರಬಿದ್ದಿತ್ತು. ಹೀಗಾಗಿಯೇ ಇದು ಡಿಕೆಶಿ ಹೆಸರಿಗೆ ತಳುಕು ಹಾಕಿಕೊಂಡಿತ್ತು. ಆದರೆ ಇದಕ್ಕೀಗ ಸ್ಪಷ್ಟನೆ ಸಿಕ್ಕಿದೆ.



