ಬಿಗ್ ಬಾಸ್ ಮನೆಯಿಂದ ಹೊರಗೆ ಬಂದಿರುವ ಸ್ಪರ್ಧಿ ರಂಜಿತ್ ಎಕ್ಸ್ ಕ್ಲೂಸಿವ್ ಆಗಿ ಹೇಳಿಕೆ ನೀಡಿದ್ದಾರೆ. ಲಾಯರ್ ಜಗದೀಶ್ ಅನ್ನು ಬಿಗ್ಬಾಸ್ ಮನೆಯಿಂದ ಹೊರಗೆ ಹಾಕಲಾಗಿದೆ.ಜಗದೀಶ್ ಮೇಲೆ ಕೈ ಮಾಡಿದರೆಂದು ರಂಜಿತ್ ಅನ್ನು ಸಹ ಬಿಗ್ಬಾಸ್ ಮನೆಯಿಂದ ಹೊರಗೆ ಹಾಕಲಾಗಿದೆ.
ಜಗದೀಶ್ ಸ್ಪರ್ಧಿಗಳ ಬಗ್ಗೆ ಅವಾಚ್ಯವಾಗಿ ಮಾತನಾಡಿದ್ದಾರೆ. ಮಹಿಳೆಯರ ಬಗ್ಗೆ ಅಗೌರವವಾಗಿ ಮಾತನಾಡಿದ್ದಾರೆ ಎಂಬ ಕಾರಣಕ್ಕೆ ಜಗದೀಶ್ ಅನ್ನು ಹೊರಗೆ ಹಾಕಲಾಗಿದೆ. ಇನ್ನು ಜಗಳ ನಡೆಯುವಾಗ ಜಗದೀಶ್ ಅನ್ನು ರಂಜಿತ್ ದೂಡಿದರು, ಇದು ಬಿಗ್ಬಾಸ್ ನಿಯಮಕ್ಕೆ ವಿರುದ್ಧವಾದ ಕಾರಣಕ್ಕೆ ರಂಜಿತ್ ಅನ್ನು ಸಹ ಬಿಗ್ಬಾಸ್ನಿಂದ ಎಲಿಮಿನೇಟ್ ಮಾಡಲಾಗಿದೆ.
‘ನನಗೆ ಇಷ್ಟು ಬೇಗ ಬಿಗ್ ಬಾಸ್ ಮನೆಯಿಂದ ಹೊರಗೆ ಬಂದಿದ್ದಕ್ಕೇ ಬೇಸರ ಇದೆ. ಲಾಯರ್ ಜಗದೀಶ್ ಹೆಣ್ಣು ಮಕ್ಕಳು ಹಾಗೂ ಬಿಗ್ ಬಾಸ್ ಕಾರ್ಯಕ್ರಮದ ಬಗ್ಗೆಯೇ ಕೀಳಾಗಿ ಮಾತನಾಡಿದ್ದಾರೆ. ಆದ್ರೆ ಜನ ಹೊರಗಡೆ ಅವರನ್ನ ಈ ರೀತಿ ಪೊಟ್ರೆ ಮಾಡಿರೋದು ಸರಿಯಲ್ಲ. ಅವನು ಮಾಡಿರುವ ಎಷ್ಟೋ ವಿಷಯಗಳನ್ನು, ಆಡಿರುವ ಮಾತುಗಳನ್ನು ಬಿಗ್ಬಾಸ್ ತೋರಿಸಿಲ್ಲ. ನಾನು ಸೇರಿದಂತೆ ಸ್ಪರ್ಧಿಗಳು ಕೇಳಿಕೊಂಡೆವು, ಜಗದೀಶ್ ಮಾಡಿರುವ ಕುಕೃತ್ಯವನ್ನು ಜನರಿಗೆ ತೋರಿಸಿ ಎಂದು. ಆದರೆ ತೋರಿಸಲು ಆಗದಷ್ಟು ಕೆಟ್ಟ ಕೃತ್ಯಗಳನ್ನು ಆತ ಮಾಡಿದ್ದಾನೆ’ ಎಂದಿದ್ದಾರೆ.

ದಿನದ 24 ಗಂಟೆ ಮನೆಯಲ್ಲಿ ಜಗದೀಶ್ ಏನೆಲ್ಲಾ ಮಾತನಾಡಿದ್ದಾರೆ ಅದನ್ನ ತೋರಿಸಿಲ್ಲ. ಕೇವಲ ಒಂದೂವರೆ ಗಂಟೆ ಕಾರ್ಯಕ್ರಮ ಎಷ್ಟು ತೋರಿಸಲು ಸಾಧ್ಯ ಅಷ್ಟು ತೋರಿಸಿದ್ದಾರೆ. ಬಿಗ್ ಬಾಸ್ ಕಾರ್ಯಕ್ರಮದ ಬಗ್ಗೆನೇ ಜಗದೀಶ್ ಕೀಳಾಗಿ ಮಾತನಾಡಿದ್ದಾರೆ. ಎಲ್ಲೋ ಒಂದು ಕಡೆ ನಾನು ತಾಳ್ಮೆ ಕಳೆದುಕೊಳ್ಳಬಾರದಿತ್ತು. ಮತ್ತೆ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಮತ್ತೆ ಕರೆದ್ರೆ ಹೋಗ್ತೇನೆ..’ ಎಂದಿದ್ದಾರೆ.
‘ಹೊರಗಡೆ ಜನ ಹೇಳುತ್ತಿದ್ದಾರಲ್ಲ, ಜಗದೀಶ್ ಎಂಟರ್ಟೈನರ್, ಹಿರೋ ಎಂದೆಲ್ಲ. ಪಾಪ ಅವರಿಗೆ ಗೊತ್ತಿಲ್ಲ. ಒಳಗೆ ಜಗದೀಶ್ ಹೇಗಿದ್ದ, ಏನೇನೋ ಮಾತನಾಡಿದ್ದ, ಯಾರ್ಯಾರ ಮೇಲೆ ಏನೇನು ಮಾತನಾಡಿದ್ದ ಎಂದು. ಆತ ಈಗ ಮಾಡಿರುವುದು ತೋರಿಸಿದರೂ ಸಾಕು ಜನ ಆತನನ್ನು ವಿಲನ್ ಮಾಡುತ್ತಾರೆ. ಬೇಕೆಂದೆ ಬಂದು ಟಾಸ್ಕ್ಗಳನ್ನು ಫೇಲ್ ಮಾಡುತ್ತಿದ್ದ. ನನಗೆ ಸಿಗದೇ ಇರುವುದು ನಿಮಗ್ಯಾರಿಗೂ ಸಿಗಬಾರದು ಎಂದು ಓಪನ್ ಆಗಿ ಹೇಳುತ್ತಿದ್ದ. ರಾತ್ರಿ ಇದ್ದಕ್ಕಿದ್ದಂತೆ ಎದ್ದು ಓಡಾಡುವುದು. ಉದ್ದೇಶಪೂರ್ವಕವಾಗಿ ಇನ್ನೊಬ್ಬರಿಗೆ ತೊಂದರೆ ಕೊಡುವುದು ಮಾಡುತ್ತಿದ್ದ’ ಎಂದಿದ್ದಾರೆ ರಂಜಿತ್