ತನ್ನ ಸರಳ ವ್ಯಕ್ತಿತ್ವ, ಸಿನಿಮಾದಲ್ಲಿ ಆಕ್ಟಿಂಗ್, ಹಾಗೂ ಆಕ್ಷನ್ ಗಳಿಂದ ಪ್ರಸಿದ್ಧರಾದ ಶಿವಣ್ಣ ಇದೇ ಬರುವ ಜುಲೈ 12ರಂದು ತಮ್ಮ ಹುಟ್ಟಿದ ಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ. ಇವರಿಗಿಂತ ಹೆಚ್ಚು ಅಭಿಮಾನಿಗಳೇ ಹುಟ್ಟಿದ ಹಬ್ಬ ಆಚರಿಸಲು ಕಾತುರದಿಂದ ಕಾಯುತ್ತಿದ್ದಾರೆ. ಇದಕ್ಕೆ ತಯಾರಿ ಸಹ ಭರ್ಜರಿಯಾಗಿ ನಡೆಯುತ್ತಿದೆ. ಶಿವಣ್ಣನ ಅಭಿಮಾನಿಗಳು ಈ ಬಾರಿ ನೆಚ್ಚಿನ ನಟನ ಹುಟ್ಟಿದ ಹಬ್ಬವನ್ನು ಬಹಳ ಅಚ್ಚುಕಟ್ಟು ಹಾಗೂ ಅರ್ಥಪೂರ್ಣವಾಗಿ ನಡೆಸಲು ಸಿದ್ಧತೆಗಳನ್ನು ನಡೆಸುತ್ತಿದ್ದಾರೆ. ಅದರಂತೆಯೇ ಕಾರ್ಯಕ್ರಮದ ಪಟ್ಟಿಯೂ ಸಹ ತಯಾರಾಗಿದೆ.

ಜುಲೈ 11ರ ಮಧ್ಯರಾತ್ರಿ ಶಿವಣ್ಣನ ಮನೆಯ ಮುಂದೆ ಹಲವಾರು ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿ ಕೇಕ್ ಕತ್ತರಿಸಿ, ಪಟಾಕಿ ಹಾರಿಸಿ ಸಂಭ್ರಮಿಸಲಿದ್ದಾರೆ. ಅದಾದ ಬಳಿಕ ಜುಲೈ 12ರ ಬೆಳಗ್ಗೆ ಶಿವಣ್ಣ ನ ಮನೆಯಲ್ಲಿ ಮತ್ತೆ ಕೇಕ್ ಕತ್ತರಿಸಿ ಬರ್ತ್ಡೇ ಆಚರಿಸಲಿದ್ದಾರೆ. ಇದಕ್ಕಾಗಿ ವಿಶೇಷ ವ್ಯವಸ್ಥೆಯೂ ಆಗಿದೆ. ನಂತರ ಶಿವಣ್ಣ ಅವ್ರು ಡಾ. ರಾಜಕುಮಾರ್ ಅವರ ಸಮಾಧಿ ಬಳಿ ತೆರಳಿ ಆಶೀರ್ವಾದ ಪಡೆಯಲಿದ್ದಾರೆ. ತದನಂತರ ಅಭಿಮಾನಿಗಳು ಚಿತ್ರಮಂದಿರಕ್ಕೆ ತೆರಳಿ ಶಿವಣ್ಣ ನ ಹೊಸ ಸಿನಿಮಾ ಘೋಸ್ಟ್ ನ ಟೀಸರ್ ನ ವಿಶೇಷ ಪ್ರದರ್ಶನವನ್ನೂ ಮಾಡಲಿದ್ದಾರೆ. ಇದರಲ್ಲಿ ಇಡೀ ಚಿತ್ರರಂಗ ಭಾಗವಹಿಸಲಿದೆ . ಇವರ ಜೊತೆಯೂ ಶಿವಣ್ಣ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ.
ಮಧ್ಯಾಹ್ನದ ಹೊತ್ತಿಗೆ ಶಿವಣ್ಣನ ಮನೆ ಬಳಿ ಅಭಿಮಾನಿಗಳಿಗೆ ಬಿರಿಯಾನಿ ವಿತರಣೆ ನಡೆಯಲಿದೆ. ಈ ದಿನ ವಿವಿಧ ಕಡೆಗಳಲ್ಲಿ ಶಿವಣ್ಣನ ಹೆಸರಿನಲ್ಲಿ ರಕ್ತದಾನ ಶಿಬಿರಗಳೂ ನಡೆಯಲಿವೆ.
ಶಿವರಾಜ್ ಕುಮಾರ್ ಹಲವಾರು ಸಿನಿಮಾಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಈ ಪ್ರಾಯದಲ್ಲೂ ಬ್ಯುಸಿಯಾಗಿದ್ದಾರೆ. ಇದು ಅವರಿಗೆ ಚಿತ್ರರಂಗದ ಮೇಲಿರುವ ಅಭಿಮಾನವನ್ನು ಎತ್ತಿ ತೋರಿಸುತ್ತದೆ. ಡಾನ್ಸ್ ಕರ್ನಾಟಕ ಡಾನ್ಸ್ ನಲ್ಲೂ ತೀರ್ಪುಗಾರನಾಗಿ ಜನರ ಮನ ಗೆದ್ದಿದ್ದಾರೆ. ಇವರು ನಟಿಸಿದ ತಮಿಳು ಸಿನಿಮಾಗಳು ಬಿಡುಗಡೆಯ ಹಂತಕ್ಕೆ ಬಂದು ತಲುಪಿದೆ