ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಾಮೀನಿನ ಮೇಲೆ ಹೊರಗಿರುವ ನಟ ದರ್ಶನ್, ಪತ್ನಿ ಜೊತೆ ವಿದೇಶ, ಫಾರ್ಮ್ ಹೌಸ್ ಅಂತ ಎಂಜಾಯ್ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ವಿದೇಶದಲ್ಲಿ ಮದುವೆ ಮಹೋತ್ಸವ ಆಚರಿಸಿಕೊಂಡಿದ್ದರು. ಬಹಳ ಅದ್ಧೂರಿಯಾಗಿ ನಡೆದ ಈ ಕಾರ್ಯಕ್ರಮದಲ್ಲಿ ಪತ್ನಿ ಜೊತೆ ಡಾನ್ಸ್ ಮಾಡುವ ಮೂಲಕ ಅಭಿಮಾನಿಗಳಿಗೆ ರಸದೌತಣ ನೀಡಿದ್ದರು.
ಈಗಾಗಲೇ ಈ ಕೇಸ್ ಕೋರ್ಟ್ ನಲ್ಲಿ ಇದೆ. ಅಷ್ಟೆ ಅಲ್ಲ ಈ ಕೇಸ್ ಸಂಬಂಧ ಕರ್ನಾಟಕ ಪೊಲೀಸರು ಸುಪ್ರೀಂ ಕೋರ್ಟ್ ಮೆಟ್ಟಿಲು ಏರಿದ್ದಾರೆ. ದರ್ಶನ್ ಅಂಡ್ ಗ್ಯಾಂಗ್ ಗೆ ನೀಡಿರುವ ಜಾಮೀನು ರದ್ದು ಕೋರಿ ಅರ್ಜಿ ಹಾಕಿದ್ದಾರೆ. ಇದರ ಮಧ್ಯೆ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಆರಾಮಾಗಿ ದಿನಗಳನ್ನ ಎಂಜಾಯ್ ಮಾಡ್ತಾ ಇದ್ದಾರೆ. ಹಾಗೆಯೇ ಸಿನಿಮಾದಲ್ಲೂ ಬ್ಯುಸಿ ಆಗ್ತಾ ಇದ್ದಾರೆ ದರ್ಶನ್.

ಇನ್ನೇನಪ್ಪ ಒಂದು ಕಂಟಕ ಮುಗೀತು, ಹೇಗೋ ಜಾಮೀನು ಸಿಕ್ಕಿದೆ ಅಂತ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದ ನಟ ದರ್ಶನ್ ಅಂಡ್ ಫ್ಯಾಮಿಲಿಗೆ ಈಗ ಮತ್ತೊಂದು ಕಾನೂನು ಸಂಕಷ್ಟ ಎದುರಾಗಿದೆ. ದರ್ಶನ್ ಹಾಗೂ ಅವರ ಪತ್ನಿ ವಿಜಯಲಕ್ಷ್ಮಿ, ಫಾರ್ಮ್ ಹೌಸ್ ಮ್ಯಾನೇಜರ್ ಗೆ ತಿ.ನರಸೀಪುರ ನ್ಯಾಯಾಲಯದಿಂದ ಸಮನ್ಸ್ ಜಾರಿಯಾಗಿದೆ. ನಟ ದರ್ಶನ್ ಫಾರಂ ಹೌಸ್ ನಲ್ಲಿ ವಿದೇಶಿ ಬಾತು ಕೋಳಿ ಹಾಗೂ ನಿಷಿದ್ಧ ಪ್ರಾಣಿ ಸಾಕಿದ್ದಕ್ಕೆ ಕೇಸ್ ದಾಖಲಾಗಿದ್ದು, ವಿಚಾರಣೆಗೆ ಹಾಜರಾಗಲು ಸಮಸ್ಸ್ ಜಾರಿ ಮಾಡಿದೆ.
ಬಾರ್ ಹೆಡೆಡ್ ಗೂಸ್ ಎಂಬ 4 ವಿಶಿಷ್ಟ ಪ್ರಭೇದದ ಬಾತುಕೋಳಿಗಳನ್ನು ಸಾಕಿದ್ದರಂತೆ ನಟ ದರ್ಶನ್. ಈ ಹಿಂದೆ ಕೆಂಪಯ್ಯನ ಹುಂಡಿಯಲ್ಲಿ ಇರುವ ನಟ ದರ್ಶನ್ ತೋಟದ ಮೇಲೆ ದಾಳಿ ಮಾಡಿದ್ದರು ಅರಣ್ಯಾಧಿಕಾರಿಗಳು. ಈ ವೇಳೆ ವಿದೇಶಿ ಪ್ರಭೇದದ ಬಾತು ಕೋಳಿ ಇರೋದನ್ನ ನೋಡಿ ಅವುಗಳನ್ನ ವಶಕ್ಕೆ ಪಡೆದಿದ್ದರು. ಈ
ಬಾರ್ ಹೆಡೆಡ್ ಗೂಸ್ ಪ್ರಭೇದದ ಬಾತುಕೋಳಿಯನ್ನ ಸಾಕುವ ಹಾಗಿಲ್ಲ. ಈ ಬಾತುಕೋಳಿ ಹೆಚ್ಚಾಗಿ ಮಧ್ಯ ಏಷ್ಯಾ ಪ್ರದೇಶದ್ದಾಗಿದ್ದು, ವಲಸೆ ಬಂದಿದ್ದವು ಎನ್ನಲಾಗಿದೆ. ಇವುಗಳನ್ನು ಸಾಕುವುದು ವನ್ಯಜೀವಿ ಸಂರಕ್ಷಣೆಯ ಕಾಯ್ದೆಯಡಿ ಅಪರಾಧ ಎನ್ನಲಾಗಿದ್ದು, ಈ ಹಿನ್ನೆಲೆ ಕೇಸ್ ದಾಖಲಾಗಿತ್ತು.

ಇನ್ನು ಬಾತುಕೊಳಿಗಳನ್ನ ಸ್ನೇಹಿತರು ನೀಡಿದ್ದರು ಎಂದು ಸ್ಪಷ್ಟನೆ ನೀಡಿದ್ದರಂತೆ ನಟ ದರ್ಶನ್. ಆದರೂ ಈ ಬಾತುಕೋಳಿಗಳು ಸಾಕಿದ್ದರಿಂದ ನಟ ದರ್ಶನ್ ವಿರುದ್ಧ ನಿಷೇಧಿತ ವನ್ಯ ಪಕ್ಷಿಗಳ ಸಾಕಣೆಗಾಗಿ ಪ್ರಕರಣ ದಾಖಲಾಗಿದೆ.
ಇದೀಗ ವಿಚಾರಣೆಗೆ ಸಮನ್ಸ್ ನೀಡಿರೋ ನ್ಯಾಯಾಲಯ ವಿಚಾರಣೆಗೆ ಬರುವಂತೆ ಹೇಳಿದೆ.
ಸದ್ಯ ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಸಾಕಾಗಿದ್ದ ನಟ ದರ್ಶನ್ ಗೆ ಇದೀಗ ಬಾತುಕೋಳಿಯಿಂದ ಮತ್ತೊಂದು ಸಂಕಷ್ಟ ಎದುರಾಗಿದೆ. ಕೊಲೆ ಕೇಸ್, ಜೈಲು ಅಂತ ಬೇಸತ್ತಿದ್ದ ನಟ ದರ್ಶನ್ ಅವರಾಗಿಯೇ ಈಗ ಕಾನೂನಿನ ಕುಣಿಕೆಯನ್ನ ಮೈಮೇಲೆ ಎಳೆದುಕೊಂಡಂತಾಗಿದೆ.



