ಇದೇ ಡಿಸೆಂಬರ್ಗೆ ಸಿದ್ದರಾಮಯ್ಯ ನೇತೃತ್ವದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು ಎರಡೂವರೆ ವರ್ಷವಾಗುತ್ತದೆ.. ಅಂದರೆ, ಐದು ವರ್ಷಗಳ ಅಧಿಕಾರಾವಧಿಯಲ್ಲಿ ಅರ್ಧ ಸಮಯ ಮುಗಿಯುತ್ತದೆ.. ಹೀಗಾಗಿ, ರಾಜ್ಯ ರಾಜಕೀಯದಲ್ಲಿ ಡಿಸೆಂಬರ್ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ.. ಆಡಳಿತ ಪಕ್ಷ ಕಾಂಗ್ರೆಸ್ನಲ್ಲಷ್ಟೇ ಅಲ್ಲ, ವಿರೋಧ ಪಕ್ಷಗಳಾದ ಬಿಜೆಪಿ, ಜೆಡಿಎಸ್ನಲ್ಲೂ ಡಿಸೆಂಬರ್ನಲ್ಲಿ ನಡೆಯಬಹುದಾದ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚೆಯಾಗುತ್ತಿದೆ.. ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಸೇರಿದಂತೆ ಹಲವು ನಾಯಕರು ಡಿಸೆಂಬರ್ನಲ್ಲಿ ಸಿಎಂ ಬದಲಾವಣೆಯಾಗುತ್ತದೆ. ಸಿದ್ದರಾಮಯ್ಯ ಅವರು ಡಿಸೆಂಬರ್ ವೇಳೆಗೆ ಸಿಎಂ ಸ್ಥಾನದಿಂದ ಕೆಳಗಿಳಿಯುತ್ತಾರೆ ಎಂಬ ಮಾತುಗಳನ್ನಾಡುತ್ತಿದ್ದಾರೆ.. ಹೀಗಾಗಿ ಡಿಸೆಂಬರ್ ಕುತೂಹಲ ಮುಂದುವರೆದೇ ಇದೆ..
2023ರಲ್ಲಿ ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತದೊಂದಿಗೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂತು.. ಆಗ ಕೆಪಿಸಿಸಿ ಅಧ್ಯಕ್ಷರಾಗಿದ್ದವರು ಡಿ.ಕೆ.ಶಿವಕುಮಾರ್ ಅವರು.. ಸಹಜವಾಗೇ ಅವರೂ ಕೂಡಾ ಸಿಎಂ ಸ್ಥಾನದ ಆಕಾಂಕ್ಷಿಯಾಗಿದ್ದರು.. ನ್ಯಾಯವಾಗಿ ಅಧಿಕಾರ ನೀಡಿದ್ದೇ ಆಗಿದ್ದರೆ, ಡಿ.ಕೆ.ಶಿವಕುಮಾರ್ ಅವರಿಗೇ ಸಿಎಂ ಸ್ಥಾನ ನೀಡಬೇಕಾಗಿತ್ತು.. ಆದ್ರೆ ಗೆದ್ದ ಕಾಂಗ್ರೆಸ್ ಶಾಸಕರಲ್ಲಿ ಬಹುತೇಕರು ಸಿದ್ದರಾಮಯ್ಯ ಪರವಾಗಿ ಬ್ಯಾಟ್ ಬೀಸಿದ್ದರು.. ಹೀಗಾಗಿ ಕಾಂಗ್ರೆಸ್ ಹೈಕಮಾಂಡ್ ವಿಧಿ ಇಲ್ಲದೆ ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಲ್ಲಿ ಕೂರಿಸುವಂತಾಯಿತು.. ಡಿ.ಕೆ.ಶಿವಕುಮಾರ್ಗೆ ಡಿಸಿಎಂ ಸ್ಥಾನ ನೀಡಲಾಯಿತು.. ದೆಹಲಿಯಲ್ಲಿ ನಡೆದ ಮಾತುಕತೆ ವೇಳೆ ಮೊದ ಎರಡೂವರೆ ವರ್ಷ ಸಿದ್ದರಾಮಯ್ಯ ಸಿಎಂ ಆಗಿರ್ತಾರೆ.. ನಂತರದ ಎರಡೂವರೆ ವರ್ಷ ಡಿ.ಕೆ.ಶಿವಕುಮಾರ್ ಸಿಎಂ ಆಗಬೇಕು ಎಂದು ಹೈಕಮಾಂಡ್ ಸೂಚಿಸಿತ್ತು ಎನ್ನಲಾಗಿದೆ.. ಇದಕ್ಕೆ ಸಿದ್ದರಾಮಯ್ಯ ಕೂಡಾ ಒಪ್ಪಿಗೆ ಕೊಟ್ಟಿದ್ದರು ಎಂಬ ಮಾತುಗಳಿವೆ.. ಆದ್ರೆ ಕಾಂಗ್ರೆಸ್ ಪರವಾಗಿ ಯಾರೂ ಕೂಡಾ ಈ ಬಗ್ಗೆ ಅಧಿಕೃತವಾಗಿ ಹೇಳಿಕೆ ನೀಡಿಲ್ಲ.. ಆದರೂ ಕೂಡಾ ಡಿ.ಕೆ.ಶಿವಕುಮಾರ್ ಅವರು ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ.. ಆಗಾಗ ಈ ಬಗ್ಗೆ ಅವರು ಬೇರೆ ಬೇರೆ ರೀತಿಯಲ್ಲಿ ಪ್ರಸ್ತಾಪ ಕೂಡಾ ಮಾಡಿದ್ದಾರೆ..
ಚುನಾವಣೆ ಸಮಯದಲ್ಲಿ ಪ್ರಚಾರದ ವೇಳೆ ಡಿ.ಕೆ.ಶಿವಕುಮಾರ್ ಅವರು ಒಕ್ಕಲಿಗರ ಸಂಘದ ಸಭೆಯಲ್ಲಿ ಈ ಬಾರಿ ನನಗೆ ಅವಕಾಶ ಕೊಡಿ, ಸಿಎಂ ಆಗುತ್ತೇನೆ ಎಂದು ಹೇಳಿದ್ದರು.. ಆದ್ರೆ ಅವರು ಬಯಸಿದಂತೆ ಸಿಎಂ ಆಗೋದಕ್ಕೆ ಆಗಲಿಲ್ಲ.. ಆದ್ರೆ, ಎರಡೂವರೆ ವರ್ಷದ ನಂತರ ಸಿದ್ದರಾಮಯ್ಯ ಸಿಎಂ ಸ್ಥಾನದಿಂದ ಕೆಳಗಿಳಿಯುತ್ತಾರೆ ಎಂದು ಹೇಳಲಾಗುತ್ತಿದೆ.. ಅದೂ ಕೂಡಾ ಡಿಸೆಂಬರ್ನಲ್ಲೇ ಸಿದ್ದರಾಮಯ್ಯ ಸಿಎಂ ಸ್ಥಾನ ತೊರೆಯುತ್ತಾರೆ.. ಕಾಂಗ್ರೆಸ್ ಹೈಕಮಾಂಡ್ನಲ್ಲಿ ಈ ಬಗ್ಗೆ ಮಾತು ಕೊಟ್ಟಾಗಿದೆ ಎಂದು ಹೇಳಲಾಗುತ್ತಿದೆ.. ಡಿಸೆಂಬರ್ ಹತ್ತಿರಕ್ಕೆ ಬರುತ್ತಿದ್ದಂತೆ ಈ ಬಗ್ಗೆ ಚರ್ಚೆಗಳು ಗರಿಗೆದರುತ್ತಿವೆ.. ಇನ್ನೊಂದೆಡೆ ಸರ್ಕಾರ ರಚನೆಯಾದ ಮೇಲೂ ಡಿ.ಕೆ.ಶಿವಕುಮಾರ್ ಅವರು ಹಲವು ಬಾರಿ ಸಿಎಂ ಬದಲಾವಣೆ ವಿಚಾರ ಮುನ್ನೆಲೆಗೆ ತಂದಿದ್ದರು.. ಹಲವಾರು ಕಡೆ ಸಿಎಂ ಆಗುವ ಇಂಗಿತವನ್ನು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ವ್ಯಕ್ತಪಡಿಸಿದ್ದರು.. ಆದ್ರೆ ಇತ್ತೀಚೆಗೆ ಕೆಲ ದಿನಗಳಿಂದ ಡಿ.ಕೆ.ಶಿವಕುಮಾರ್ ಆ ಬಗ್ಗೆ ಮೌನ ವಹಿಸಿದ್ದಾರೆ.. ಹಾಗಂತ ಸಿಎಂ ಬದಲಾವಣೆ ವಿಚಾರ ಮಾತ್ರ ಚಾಲ್ತಿಯಲ್ಲಿದೆ.. ಈ ವಿರೋಧ ಪಕ್ಷಗಳಾದ ಬಿಜೆಪಿ, ಜೆಡಿಎಸ್ ನಾಯಕರು ಈ ಬಗ್ಗೆ ಮಾತನಾಡುತ್ತಿದ್ದಾರೆ.. ಸಿದ್ದರಾಮಯ್ಯ ಅವರು ಡಿಸೆಂಬರ್ಗೆ ಅಧಿಕಾರದಿಂದ ಕೆಳಗಿಳಿಯುತ್ತಾರೆ ಎಂದು ಹೇಳಲಾಗುತ್ತಿದೆ..

ಕಾಂಗ್ರೆಸ್ ಹೈಕಮಾಂಡ್ನಲ್ಲಿ ಏನು ಮಾತುಕತೆ ನಡೆದಿದೆಯೋ ಗೊತ್ತಿಲ್ಲ.. ಅಂದು ಆಗಿದ್ದ ಸಂಧಾನ ಮಾತುಕತೆ ಬಗ್ಗೆ ಅಧಿಕೃತವಾಗಿ ಯಾರಿಗೂ ಗೊತ್ತಿಲ್ಲ.. ಆದ್ರೆ ಸಿದ್ದರಾಮಯ್ಯ ಅವರು ಮಾತ್ರ ಐದು ವರ್ಷವೂ ನಾನೇ ಸಿಎಂ ಆಗಿರುತ್ತೇನೆ ಎಂದು ಆಗಾಗ ಹೇಳಿಕೊಂಡು ಬಂದಿದ್ದಾರೆ.. ಹಾಗಂತ ಸಿದ್ದರಾಮಯ್ಯ ಸಿಎಂ ಆಗಿ ಮುಂದುವರೆಯಲು ಯಾವುದೇ ಅಡ್ಡಿ ಇಲ್ಲ ಎಂದು ಹೇಳೋದಕ್ಕೆ ಸಾಧ್ಯವಿಲ್ಲ.. ಬೆಳವಣಿಗೆಗಳು ನೋಡಿದರೆ ಸಿದ್ದರಾಮಯ್ಯ ಬದಲಾವಣೆ ಮಾಡಿದರೂ ಅಚ್ಚರಿ ಇಲ್ಲ.. ಇನ್ನು ಡಿ.ಕೆ.ಶಿವಕುಮಾರ್ ಹೈಕಮಾಂಡ್ಗೆ ನಿಷ್ಠೆ ಹೊಂದಿದ್ದಾರೆ.. ರಾಹುಲ್, ಪ್ರಿಯಾಂಕಾ ಹಾಗೂ ಸೋನಿಯಾ ಗಾಂಧಿ ಒಪ್ಪಿಸಿದ ಕೆಲಸಗಳನ್ನೆಲ್ಲಾ ಡಿ.ಕೆ.ಶಿವಕುಮಾರ್ ಚಾಚೂ ತಪ್ಪದೇ ಮಾಡಿದ್ದಾರೆ.. ಹೀಗಾಗಿ ಕಾಂಗ್ರೆಸ್ ಹೈಕಮಾಂಡ್ ಡಿ.ಕೆ.ಶಿವಕುಮಾರ್ಗೆ ಸಿಎಂ ಆಗುವ ಅವಕಾಶ ಕೊಡಬಹುದು..
ಇನ್ನು ಡಿ.ಕೆ.ಶಿವಕುಮಾರ್ ಸಿಎಂ ಆಗುವ ವಿಚಾರ ಬಂದಾಗಲೆಲ್ಲಾ ದಲಿತ ಸಿಎಂ ವಿಚಾರ ಮುನ್ನೆಲೆಗೆ ಬಂದಿದೆ.. ಸಿದ್ದರಾಮಯ್ಯ ಅವರ ಬೆಂಬಲಿಗರಾದ ಸತೀಸ್ ಜಾರಕಿಹೊಳಿ, ಕೆ.ಎನ್.ರಾಜಣ್ಣ ಸೇರಿದಂತೆ ಹಲವು ಸಚಿವರು ಹೈಕಮಾಂಡ್ ವರೆಗೂ ಭೇಟಿಯಾಗಿ ಬಂದಿದ್ದಾರೆ.. ಮುಂದುವರೆದರೆ ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರೆಯಲಿ, ಇಲ್ಲದಿದ್ದರೆ ದಲಿತರಿಗೆ ಸಿಎಂ ಸ್ಥಾನ ಕೊಡಿ ಅನ್ನೋದು ಇವರ ವಾದ.. ಮೇಲ್ನೋಟಕ್ಕೆ ಇದು ಬೇರೆ ರೀತಿ ಕಂಡರೂ ಕೂಡಾ, ಸಿದ್ದರಾಮಯ್ಯ ಅವರನ್ನು ಉಳಿಸಿಕೊಳ್ಳೋದಕ್ಕೆ ಈ ಕಾರ್ಡ್ ಪ್ಲೇ ಮಾಡಲಾಗಿದೆ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ.. ಇನ್ನೊಂದೆಡೆ, ಗ್ಯಾರೆಂಟಿಗಳ ಕಾರಣದಿಂದಾಗಿ ಸರ್ಕಾರ ಸರಿಯಾಗಿ ಮುನ್ನಡೆಸೋಕೆ ಆಗುತ್ತಿಲ್ಲ.. ಬೇರೆ ಬೇರೆ ಯೋಜನೆಗಳಿಗೆ ಹಣ ಹೊಂದಿಸೋದಕ್ಕೆ ಸಾಧ್ಯವಾಗುತ್ತಿಲ್ಲ.. ಗೃಹಲಕ್ಷ್ಮೀ ಸೇರಿದಂತೆ ಹಲವು ಉಚಿತ ಯೋಜನೆಗಳಿಗೂ ಹಣ ಹೊಂದಿಸಲು ಸರ್ಕಾರಕ್ಕೆ ಕಷ್ಟವಾಗುತ್ತಿದೆ.. ಇನ್ನೊಂದೆಡೆ ಸಿದ್ದರಾಮಯ್ಯ ಅವರಲ್ಲಿ ಮೊದಲಿದ್ದಷ್ಟು ಉತ್ಸಾಹ ಕಾಣಿಸುತ್ತಿಲ್ಲ.. ಈಗಾಗಲೇ ಅವರು ರಾಜಕೀಯ ನಿವೃತ್ತಿಯ ಬಗ್ಗೆ ಹೇಳಿದ್ದಾರೆ.. ಹೀಗಾಗಿ, ಸಂಕಷ್ಟದಲ್ಲಿರುವ ಸರ್ಕಾರವನ್ನು ಮುನ್ನೆಡೆಸುವ ಬದಲು ಬೇರೆ ಯಾರಾದರೂ ಸಿಎಂ ಆಗಲಿ ಎಂಬ ತೀರ್ಮಾನಕ್ಕೂ ಬಂದಿರಬಹುದು.. ಒಂದು ವೇಳೆ ಸಿದ್ದರಾಮಯ್ಯ ಅವರು ಸಿಎಂ ಸ್ಥಾನ ಬಿಟ್ಟುಕೊಡೋ ತೀರ್ಮಾನಕ್ಕೆ ಬಂದರೂ ಡಿ.ಕೆ.ಶಿವಕುಮಾರ್ ಬಿಟ್ಟು ಬೇರೆಯವರಿಗೆ ಆ ಸ್ಥಾನ ಕೇಳಲೂ ಬಹುದು.. ಸಿದ್ದರಾಮಯ್ಯ ಅವರ ನಿಷ್ಠ ಸಚಿವರಾಗಿರುವ ಸತೀಶ್ ಜಾರಕಿಹೊಳಿಗೆ ಈ ಸ್ಥಾನ ಕೇಳುವ ಸಾಧ್ಯತೆಯೇ ಹೆಚ್ಚಿದೆ.. ಇದರ ಮಧ್ಯೆ ಡಿಸಿಎಂ ಡಿ.ಕೆ.ಶಿವಕುಮಾರ್ ಹೈಕಮಾಂಡ್ ಬಳಿ ಒತ್ತಡ ಹೇರಬೇಕಿದೆ..
ಇನ್ನು ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ಪೂರ್ತಿಯಾಗಿದೆ.. ಈ ಸಂದರ್ಭದಲ್ಲೇ ಸಂಪುಟ ಪುನಾರಚನೆ ಬಗ್ಗೆ ಕೂಗು ಎದ್ದಿದೆ.. ಕಾಂಗ್ರೆಸ್ನಲ್ಲಿ ಹಲವು ಹಿರಿಯ ಶಾಸಕರು ಸಚಿವ ಸ್ಥಾನದ ಆಕಾಂಕ್ಷಿಗಳಿದ್ದಾರೆ.. ಸಂಪುಟ ಪುನಾರಚನೆಯಾದರೆ ಸಚಿವ ಸ್ಥಾನ ಸಿಗಬಹುದು ಎಂದು ಹಲವು ಕಾಯುತ್ತಿದ್ದಾರೆ.. ಇನ್ನೊಂದೆಡೆ ಸರಿಯಾಗಿ ಕಾರ್ಯನಿರ್ವಸದ ಹಲವು ಸಚಿವರು ಸಿದ್ದರಾಮಯ್ಯ ಸಂಪುಟದಲ್ಲಿದ್ದಾರೆ.. ಅವರನ್ನು ಕೈಬಿಟ್ಟು ಹೊಬರಿಗೆ ಮಣೆ ಹಾಕಬೇಕು ಎಂಬ ಕೂಗು ಎದ್ದಿದೆ.. ಹೀಗಾಗಿ ಸಿಎಂ ಬದಲಾವಣೆಯಾಗುತ್ತದಾ ಅಥವಾ ಸಂಪುಟ ಪುನಾರಚನೆಯಾಗುತ್ತಾ ಎಂಬುದರ ಬಗ್ಗೆ ದೊಡ್ಡ ಚರ್ಚೆಗಳು ನಡೆಯುತ್ತಿವೆ.. ಯಾರು ಏನೇ ಹೇಳಿದರೂ, ಒಂದು ವೇಳೆ ಸಿದ್ದರಾಮಯ್ಯ ಅಂದು ಮಾತು ಕೊಟ್ಟಿದ್ದರೆ ಸಿಎಂ ಸ್ಥಾನ ಬಿಟ್ಟುಕೊಡಬಹುದು.. ಇಲ್ಲದೇ ಹೋದರೆ ಸಿಎಂ ಬದಲಾವಣೆ ಕಷ್ಟ ಎಂದೇ ಹೇಳಬಹುದು.. ಯಾವುದಕ್ಕೂ ಡಿಸೆಂಬರ್ವರೆಗೂ ಕಾಯಲೇಬೇಕಿದೆ..



