ಭಾರತದ ಕಾರ್ಪೊರೆಟ್ ಜಗತ್ತಿನ ಅತ್ಯಂತ ದೊಡ್ಡ ವಿಲೀನವೆಂದು ಕರೆಯಲ್ಪಡುವ ಎಚ್ಡಿಎಫ್ಸಿ ಬ್ಯಾಂಕ್ ಮತ್ತು ಎಚ್ಡಿಎಫ್ಸಿ ಲಿಮಿಟೆಡ್ನ ವಿಲೀನ ಈ ತಿಂಗಳು ನಡೆದಿದೆ. ಇದೇ ಸಮಯದಲ್ಲಿ ದೀಪಕ್ ಪಾರೇಕ್ ಅವರ ಸ್ಯಾಲರಿ ಲೆಟರ್ ಕೂಡ ವೈರಲ್ ಆಗಿದೆ. ಈ ವಿಲೀನಕ್ಕೆ ಮೊದಲು ದೀಪಕ್ ಪಾರೇಕ್ ಅವರು ಎಚ್ಡಿಎಫ್ಸಿ ಲಿಮಿಟೆಡ್ಗೆ ರಾಜೀನಾಮೆ ನೀಡಿದ್ದಾರೆ. “ನನ್ನ ಬೂಟುಗಳನ್ನು ನೇತುಹಾಕುವ ಸಮಯ” ಎಂದು ರಿಸೈನ್ ಮಾಡಿದ ಸಂದರ್ಭದಲ್ಲಿ ದೀಪಕ್ ಪಾರೇಕ್ ಹೇಳಿದ್ದರು.

ಎಚ್ಡಿಎಫ್ಸಿ ಬ್ಯಾಂಕ್ನಲ್ಲಿ ಪಾರೇಕ್ ಅವರು ಸುಮಾರು 45 ವರ್ಷ ಕೆಲಸ ಮಾಡಿದ ಬಳಿಕ ರಾಜೀನಾಮೆ ನೀಡಿದ್ದಾರೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಬ್ಯಾಂಕ್ ನೇಮಕಾತಿಗೆ ಸಂಬಂಧಪಟ್ಟಂತೆ ವಯೋಮಿತಿ ನಿಯಮಗಳಿಗೆ ತಕ್ಕಂತೆ ಇವರು ರಾಜೀನಾಮೆ ನೀಡಿದ್ದಾರೆ. 1978ರ ಜುಲೈ 19ರಂದು ಇವರು ಎಚ್ಡಿಎಫ್ಸಿಗೆ ಸೇರಿದ್ದರು. ಆ ಸಂದರ್ಭದಲ್ಲಿ ಇವರಿಗೆ ಡೆಪ್ಯುಟಿ ಜನರಲ್ ಮ್ಯಾನೇಜರ್ ಹುದ್ದೆ ನೀಡಲಾಗಿತ್ತು. ಆಗ ಅವರಿಗೆ ಮೂರುವರೆ ಸಾವಿರ ವೇತನವಿತ್ತು.
ಶೇಕಡ 15ರಷ್ಟು ಎಚ್ಆರ್ಇ ಮತ್ತು ನಗರದಲ್ಲಿ ವಾಸಿಸುವ ಅಲೋವೆನ್ಸ್ ಶೇಕಡ 10 ನೀಡಲಾಗಿತ್ತು. ಇದು ಸುಮಾರು 45 ವರ್ಷಗಳ ಹಿಂದಿನ ವೇತನವಾಗಿದ್ದರೂ ಇದು ಕಡಿಮೆ ವೇತನವೆಂದೇ ಹೇಳಬಹುದು. ಆದರೆ, ನಿವೃತ್ತಿಯಾಗುವ ಮೊದಲು ಇವರ ವೇತನ ಹಲವು ಕೋಟಿಗೆ ತಲುಪಿತ್ತು. ಈ ಆಫರ್ ಲೆಟರ್ ಅನ್ನು ಟ್ವಿಟ್ಟರ್ನಲ್ಲಿ ಶಿಲ್ಪ ಎಸ್ ರಾಣಿಪೀಠ ಎಂಬವರು ಹಂಚಿಕೊಂಡಿದ್ದಾರೆ. ಈ ಆಫರ್ ಲೆಟರ್ನ ಸತ್ಯಾಸತ್ಯತೆ ಖಚಿತಗೊಂಡಿಲ್ಲ.