ಯುವಕ-ಯುವತಿಯ ರೀಲ್ಸ್ ಹುಚ್ಚು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇದರಿಂದಾಗಿ ಕೆಲವೊಮ್ಮೆ ಪ್ರಾಣ ಹಾನಿ, ಮಾನ ಹಾನಿಯೂ ಸಂಭವಿಸುತ್ತದೆ. ಆದರೆ ಇದೀಗ ಯುವತಿಯೊಬ್ಬಳ ಅತಿರೇಕದ ವರ್ತನೆಯಿಂದಾಗಿ ಪವಿತ್ರ ನದಿಯೊಂದಕ್ಕೆ ಕಳಂಕ ಬಂದಿದೆ. ಹೌದು, ಯುವತಿಯೊಬ್ಬಳು ಅಯೋಧ್ಯೆಯ ಪವಿತ್ರ ನದಿಯಲ್ಲಿ ಹಸಿಬಿಸಿ ಡ್ಯಾನ್ಸ್ ಮಾಡಿದ್ದು, ಈ ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋ ಕಂಡು ನೆಟ್ಟಿಗರು ಸಿಕ್ಕಾಪಟ್ಟೆ ಗರಂ ಆಗಿದ್ದಾರೆ.
ಉತ್ತರ ಪ್ರದೇಶದ ಸರಯೂ ನದಿಯ ದಡದಲ್ಲಿರುವ ರಾಮ್ ಕಿ ಪೈಡಿ ಘಾಟ್ನಲ್ಲಿರುವ ಅಯೋಧ್ಯೆಯ ಪವಿತ್ರ ಕೊಳದಲ್ಲಿ ನಿಂತುಕೊಂಡು ಯುವತಿಯೊಬ್ಬಳು ಬಾಲಿವುಡ್ ಹಾಡೊಂದಕ್ಕೆ ರೀಲ್ಸ್ ಮಾಡಿರುವುದು ವೈರಲ್ ಆಗಿದೆ. ಈ ರಾಮ್ ಕಿ ಪೈಡಿ ಘಾಟ್ ನಲ್ಲಿ ಭಕ್ತರು ಸ್ನಾನ ಮಾಡುತ್ತಾರೆ. ಇಂತಹ ಪವಿತ್ರ ಕೊಳದಲ್ಲಿ ಯುವತಿಯೊಬ್ಬಳು ಬಾಬಿ ಡಿಯೋಲ್-ರಾಣಿ ಮುಖರ್ಜಿ ‘ಜೀವನ್ ಮೇ ಜಾನೆ ಜಾನಾ’ ಎನ್ನುವ ಹಾಡಿಗೆ ಬೋಲ್ಡ್ ಆಗಿ ಸೊಂಟ ಬಳುಕಿಸಿ ರೀಲ್ಸ್ ಮಾಡಿದ್ದಾಳೆ.
ಇದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ವೈರಲ್ ವಿಡಿಯೋ ನೋಡಿ ಪೊಲೀಸರು ಪ್ರತಿಕ್ರಿಯೆ ನೀಡಿದ್ದು, ಸೂಕ್ತ ಕ್ರಮ ಕೈಗೊಳ್ಳುವುದಾಗಿ ಟ್ವೀಟ್ ಮೂಲಕ ತಿಳಿಸಿದ್ದಾರೆ. ವರ್ಷದ ಆರಂಭದಲ್ಲಿ, ಜೂನ್ನಲ್ಲಿ, ಅಯೋಧ್ಯೆಯ ಸರಯೂ ನದಿ ಘಾಟ್ನಿಂದ ಇದೇ ರೀತಿಯ ಘಟನೆ ನಡೆದಿತ್ತು. ʼಪಾನಿ ಮೇ ಆಗ್ ಲಗಾನಿ ಹೈ’ ಹಾಡಿಗೆ ಹುಡುಗಿಯೊಬ್ಬಳು ಕುಣಿಯುತ್ತಿರುವುದನ್ನು ತೋರಿಸುವ ವಿಡಿಯೋ ವೈರಲ್ ಆಗಿತ್ತು.