ಜಗತ್ತಿನಾದ್ಯಂತ ಡಿಜಿಟಲಿಕರಣ ವೇಗ ಪಡೆದುಕೊಂಡಂತೆ ಎಲ್ಲರೂ ಕೂಡ ಇದಕ್ಕೆ ಒಗ್ಗಿಕೊಂಡಿದ್ದಾರೆ.ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಒಂದಲ್ಲ ಒಂದು ಸೋಶಿಯಲ್ ಮೀಡಿಯಾ ಬಳಸುತ್ತಾರೆ ಹಾಗೂ ಚಾಟಿಂಗ್ ನಲ್ಲಿ ತೊಡಗುತ್ತಾರೆ. ಆದರೆ ಇನ್ಮುಂದೆ ಈ ಚಾಟಿಂಗ್ ಮೂಲಕ ಯಾವುದೇ ಹುಡುಗಿಯರಿಗೆ, ಮಹಿಳೆಯರಿಗೆ ಹಾರ್ಟ್ ಸಿಂಬಲ್ ಕಳುಹಿಸುವ ಮುನ್ನ ಎಚ್ಚರ ವಹಿಸಬೇಕು. ಆ ತೀತಿ ಹಾರ್ಟ್ ಕಳುಹಿಸಿದರೆ. ಪೊಲೀಸರು ಅಂತಹವರನ್ನು ಜೈಲಿಗೆ ಕಳುಹಿಸುತ್ತಾರೆ. ಅದೃಷ್ಟಕ್ಕೆ ಇಂತಹದ್ದೊಂದು ರೂಲ್ಸ್ ಬಂದಿರುವುದು ಸೌದಿ ಅರೇಬಿಯಾದಲ್ಲಿ!

ಮುಸಲ್ಮಾನ್ ರಾಷ್ಟ್ರಗಳಾದ ಸೌದಿ ರಾಷ್ಟ್ರಗಳಲ್ಲಿ ಕಾನೂನು ಎಂಬುವುದು ಮತ್ತೆಲ್ಲ ದೇಶಗಳಿಂದಲೂ ಅತ್ಯಂತ ಕಠಿಣ. ಇದೀಗ, ಮೆಸೇಜ್ ಮೂಲಕ ಕಳುಗಿಸುವ ಇಮೋಜಿಗೆ ಕೂಡ ರೂಲ್ಸ್ ಜಾರಿಯಾಗಿದೆ. ಸೋಶಿಯಲ್ ಮೀಡಿಯಾ ಮೂಲಕ ‘ಹಾರ್ಟ್ ಸಿಂಬಲ್’ ಕಳುಹಿಸುವವರಿಗೆ 2-5 ವರ್ಷಗಳ ಕಾಲ ಜೈಲು ಶಿಕ್ಷೆ ಹಾಗೂ 2000 ಕುವೈತ್ ದಿನಾರ್ ದಂಡ ವಿಧಿಸಲಾಗುತ್ತದೆ.
ಚಾಟಿಂಗ್ ಸಮಯದಲ್ಲಿ ಯಾವುದೇ ಪುರುಷರು ಮಹಿಳೆ ಅಥವಾ ಯುವತಿಯರಿಗೆ ‘ಹಾರ್ಟ್ ಸಿಂಬಲ್’ ಕಳುಗಿಸಿದರೆ, ಅಂತಹವರ ವಿರುದ್ಧ ಹುಡುಗಿಯರು ದೂರು ನೀಡಿದರೆ 5 ವರ್ಷ ಜೈಲು ಶಿಕ್ಷೆ, 3 ಲಕ್ಷ ಸೌದಿ ರಿಯಾಲ್ ಗಳನ್ನು ದಂಡ ಕಟ್ಟಬೇಕಾಗುತ್ತದೆ ಎಂದು ಸೌದಿ ಅರೇಬಿಯಾದ ವಂಚನೆಯ ವಿರೋಧಿ ಸಂಘದ ಸದಸ್ಯ ತಿಳಿಸಿದ್ದಾರೆ. ಭವಿಷ್ಯದಲ್ಲಿ ಇಂತಹ ರೂಲ್ಸ್ ಭಾರತದಲ್ಲಿ ಜಾರಿಯಾದರೂ ಅಚ್ಚರಿ ಪಡಬೇಕಿಲ್ಲ.