ಬಿಗ್ ಬಾಸ್ ಸೀಸನ್ 12 ಕನ್ನಡದ ರಿಯಾಲಿಟಿ ಶೋ ಗಳಲ್ಲಿ ಅತಿ ಹೆಚ್ಚು ಪ್ರಖ್ಯಾತಿ ಹೊಂದಿರುವ ರಿಯಾಲಿಟಿ ಶೋ. ಈ ಶೋ ನಿಂದ ಕಲರ್ಸ್ ಕನ್ನಡ ವಾಹಿನಿ ಅತಿ ಹೆಚ್ಚು ಟಿಆರ್ಪಿ ಗಳಿಸಿ ನಂಬರ್ ವನ್ ವಾಹಿನಿಯೇ ಆಗಿದೆ. ಈ ಶೋ ದಿನದಿಂದ ದಿನಕ್ಕೆ ಹಲವಾರು ಟ್ವಿಸ್ಟ್ ಗಳಿಂದ ಕೂಡಿದ್ದು ದಿನದಿಂದ ದಿನಕ್ಕೆ ಜನ ಮೆಚ್ಚಿಗೆಯನ್ನು ಪಡೆದುಕೊಳ್ಳುತ್ತಿದೆ. ಇದೊಂದು ವ್ಯಕ್ತಿತ್ವದ ಆಟವಾಗಿದ್ದು
ಜನರಿಗೆ ಮನರಂಜನೆಯನ್ನು ನೀಡುತ್ತಿದೆ. ಅಲ್ಲಿರುವ ಆಟಗಾರರಲ್ಲಿ ಗಿಲ್ಲಿ ನಟ ರವರು ತಮ್ಮ ಕಾಮಿಡಿಯ ಮೂಲಕ ಜನರನ್ನು ನಗಿಸುತ್ತಿದ್ದಾರೆ. ಗಿಲ್ಲಿಗೆ ಫ್ಯಾನ್ಸ್ಗಳ ಬೆಂಬಲ ಜಾಸ್ತಿಯಾಗಿದ್ದು ಗಿಲ್ಲಿಯೇ ಗೆದ್ದು ಬರಲಿ ಎಂದು ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.
ಆದರೆ ಕಳೆದ ವಾರ ಮಿಡ್ ನೈಟ್ ಎಲಿಮಿನೇಟ್ ಆಗಿ ಹೊರಬಂದ ಮಾಳು ನೀಪನಾಳು ನೀಡಿದ ವಿವಾದಾತ್ಮಕ ಹೇಳಿಕೆಯಿಂದ ಚರ್ಚೆಗೆ ಗ್ರಾಸವಾಗಿದೆ. ಬಿಗ್ ಬಾಸ್ ಮನೆಯಲ್ಲಿ ಸೈಲೆಂಟಾಗಿ ಇದ್ದ ಮಾಳು ಈಗ ಹೊರ ಬರುತ್ತಿದ್ದಂತೆ ಜೋರಾಗಿ ಮಾತನಾಡಲು ಪ್ರಾರಂಭಿಸಿದ್ದಾರೆ. ನಾನು ಎಲಿಮಿನೇಟ್ ಆಗಿರುವುದರಿಂದ ಇಡೀ ಉತ್ತರ ಕರ್ನಾಟಕವೇ ಅಳುತಿದೆ ಎಂಬ ಹೇಳಿಕೆಯನ್ನು ಕೊಟ್ಟಿದ್ದಾರೆ. ಈ ಹೇಳಿಕೆ ಎಲ್ಲಾ ಕಡೆ ವೈರಲಾಗುತ್ತಿದ್ದು ಇದರ ಬಗ್ಗೆ ಚರ್ಚೆ ನಡೆಯುತ್ತಿದೆ. ಮನೆಯ ಒಳಗಿರುವ ಯಾವ ಸದಸ್ಯರು ಕೂಡ ಕಪ್ಪು ಗೆಲ್ಲಲು ಅರ್ಹವ್ಯಕ್ತಿಗಳಲ್ಲ ಕಪ್ಪು ಗೆಲ್ಲುವ ಅರ್ಹವಾಗಿದ್ದವನು ನಾನು ಮಾತ್ರ ಎಂಬ ಅರ್ಥದಲ್ಲಿ ಹೇಳಿಕೆ ನೀಡಿದ್ದಾರೆ.

ಈ ಹೇಳಿಕೆಯ ಹಿನ್ನೆಲೆಯಲ್ಲಿ ಮಾಳು ಭಾಗವಹಿಸಿದ ಕಾರ್ಯಕ್ರಮದಲ್ಲಿ ಗಿಲ್ಲಿ ಫ್ಯಾನ್ಸ್ ಗಿಲ್ಲಿ ಗಿಲ್ಲಿ ಎಂದು ಕೂಗಿ ಟ್ರೋಲ್ ಮಾಡುತ್ತಿದ್ದಾರೆ. ಎಲ್ಲಾ ಕಡೆ ಗಿಲ್ಲಿಯ ಅಭಿಮಾನಿಗಳು ಗಿಲ್ಲಿ ಗಿಲ್ಲಿ ಎಂದು ಕರೆಯುವ ಮೂಲಕ ಮಾಳು ರವರಿಗೆ ಮುಜುಗರವಾಗುವಂತೆ ಮಾಡುತ್ತಿದ್ದಾರೆ.
ಮಾಳು ಎಲಿಮಿನೇಟ್ ಹಾಗಿದ್ದರಿಂದ ಉತ್ತರ ಕರ್ನಾಟಕ ಅಳುತ್ತಿದೆ ಎಂಬ ಹೇಳಿಕೆ ತುಂಬಾ ತಪ್ಪು ಎಂದು ಅನೇಕರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ರೀತಿಯಾಗಿ ಗಿಲ್ಲಿಯ ಅಭಿಮಾನಿಗಳು ಮಾಳು ವಿರುದ್ಧ ಸೇಡು ತೀರಿಸಿಕೊಂಡಿದ್ದಾರೆ. ಆ ಸಂದರ್ಭದ ವಿಡಿಯೋ ಈಗ ಎಲ್ಲಾ ಕಡೆ ವೈರಲಾಗುತ್ತಿದ್ದು ಗಿಲ್ಲಿಯ ಪರವಾಗಿ ಮಾಳುವಿನ ವಿರುದ್ಧವಾಗಿ ವಾದ ವಿವಾದ ಚರ್ಚೆಗಳು ಸೋಶಿಯಲ್ ಮೀಡಿಯಾದಲ್ಲಿ ನಡೆಯುತ್ತಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯ ಗಳನ್ನು ಕಾಮೆಂಟ್ ಮಾಡಿ ತಿಳಿಸಿ.
ವಿಡಿಯೋ ಈಗ ಎಲ್ಲಾ ಕಡೆ ವೈರಲಾಗುತ್ತಿದ್ದು ಗಿಲ್ಲಿಯ ಪರವಾಗಿ ಮಾಳುವಿನ ವಿರುದ್ಧವಾಗಿ ವಾದ ವಿವಾದ ಚರ್ಚೆಗಳು ಸೋಶಿಯಲ್ ಮೀಡಿಯಾದಲ್ಲಿ ನಡೆಯುತ್ತಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯ ಗಳನ್ನು ಕಾಮೆಂಟ್ ಮಾಡಿ ತಿಳಿಸಿ.



