ಕರುನಾಡ ಚಕ್ರವರ್ತಿ ಶಿವ ರಾಜ್ ಕುಮಾರ್ ಅವರು ಕ್ಯಾನ್ಸರ್ ಗೆದ್ದು ತವರಿಗೆ ಮರಳಿದ್ದಾರೆ. ಕಳೆದ ವರ್ಷ ಡಿಸೆಂಬರ್ ತಿಂಗಳಿನಲ್ಲಿ ಶಿವಣ್ಣ ಅಮೆರಿಕಾಗೆ ಸರ್ಜರಿಗಾಗಿ ತೆರಳಿದ್ದರು. ಸರ್ಜರಿ ಮಾಡಿಸಿ, ಟ್ರೀಟ್ಮೆಂಟ್ ತೆಗೆದುಕೊಂಡು, ಅಲ್ಲಿಯೇ ಒಂದಷ್ಟು ದಿವಸ ರೆಸ್ಟ್ ಮಾಡಿ ಕಳೆದ ಭಾನುವಾರ ಜನವರಿ 26ರಂದು ಭಾರತಕ್ಕೆ ಮರಳಿ ಬಂದಿದ್ದಾರೆ. ಶಿವಣ್ಣ ಆದಷ್ಟು ಬೇಗ ವಾಪಸ್ ಬರಲಿ ಎನ್ನುವುದು ಎಲ್ಲರ ಆಶಯ ಆಗಿತ್ತು. ಅಭಿಮಾನಿಗಳು, ಚಿತ್ರರಂಗದ ಗಣ್ಯರು ಎಲ್ಲರೂ ಸಹ ಶಿವಣ್ಣನ ಬರುವಿಕೆಗಾಗಿ ಕಾಯುತ್ತಿದ್ದರು. ಅದೇ ರೀತಿ ಶಿವಣ್ಣ ಬಂದಿದ್ದಾರೆ. ಕೆಲವೇ ಕೆಲವು ದಿನಗಳು ರೆಸ್ಟ್ ಮಾಡಿ, ಶೂಟಿಂಗ್ ಗೆ ವಾಪಸ್ ತೆರಳಲಿದ್ದಾರೆ ಶಿವಣ್ಣ. ಕ್ಯಾನ್ಸರ್ ಮುಕ್ತರಾಗಿ ಬಂದಿರುವ ಶಿವಣ್ಣ ಅವರಿಗೆ ಈ ವಿಷಯ ಗೊತ್ತಾಗಿದ್ದು ಹೇಗೆ? ಇದನ್ನ ಹೇಗೆ ತೆಗೆದುಕೊಂಡರು ಎನ್ನುವ ಕುತೂಹಲ ಜನರಲ್ಲಿದೆ. ಅದಕ್ಕೆ ಇಂದು ಉತ್ತರ ತಿಳಿಸುತ್ತೇವೆ.
ಕಳೆದ ವರ್ಷ ನವೆಂಬರ್ 15ರಂದು ಶಿವಣ್ಣ ಅಭಿನಯದ ಭೈರತಿ ರಣಗಲ್ ಸಿನಿಮಾ ತೆರೆಕಂಡಿತು. ಈ ಸಿನಿಮಾವನ್ನು ಗೀತಕ್ಕ ನಿರ್ಮಾಣ ಮಾಡಿದರು. ಶಿವಣ್ಣನ ಕೆರಿಯರ್ ನ ಬಹಳ ಮುಖ್ಯವಾದ ಸಿನಿಮಾ ಇದು. ಭೈರತಿ ರಣಗಲ್ ಸಿನಿಮಾ ಪ್ರೊಮೋಷನ್ ವೇಳೆ ಶಿವಣ್ಣ ಅವರಿಗೆ ಆರೋಗ್ಯದಲ್ಲಿ ಸಮಸ್ಯೆ ಇದೆ, ಟ್ರೀಟ್ಮೆಂಟ್ ಪಡೆಯುತ್ತಿದ್ದಾರೆ, ಡಿಸೆಂಬರ್ ನಲ್ಲಿ ಅಮೆರಿಕಾಗೆ ಹೋಗುತ್ತಾರೆ ಎನ್ನುವ ವಿಷಯ ಎಲ್ಲರಿಗೂ ಗೊತ್ತಾಯಿತು. ಶಿವಣ್ಣ ಅವರಿಗೆ ಕ್ಯಾನ್ಸರ್ ಇದೆಯಾ ಎಂದು ಹಲವರಿಗೆ ಆಶ್ಚರ್ಯ ಆಯಿತು. ಶಿವಣ್ಣ ಬೇಗ ಹುಷಾರಾಗಿ ಬರಲಿ ಎಂದು ಹಾರೈಸಿದರು, ಅಭಿಮಾನಿಗಳು ಬೇಗ ಬಂದುಬಿಡಿ ಎಂದು ಹೇಳಿದರು. ಎಲ್ಲರ ಹರಕೆ, ಹಾರೈಕೆ, ಪ್ರೀತಿ, ಪ್ರಾರ್ಥನೆ ಎಲ್ಲವೂ ಶಿವಣ್ಣನ ಜೊತೆಯಲ್ಲಿತ್ತು ಎಂದರೆ ತಪ್ಪಲ್ಲ.

ಡಿಸೆಂಬರ್ 18ರಂದು ಅಮೆರಿಕಾಗೆ ಹೋದ ಶಿವಣ್ಣ ಅವರಿಗೆ ಡಿಸೆಂಬರ್ 24ರಂದು ಸರ್ಜರಿ ನಡೆಯಿತು. ಬಳಿಕ ಮನೆಯವರು ಶಿವಣ್ಣ ಅವರಿಗೆ ಸರ್ಜರಿ ಸಕ್ಸಸ್ ಫುಲ್ ಆಗಿ ನಡೆದಿದೆ ಎಂದು ತಿಳಿಸಿದ್ದರು. ಹೊಸ ವರ್ಷದ ದಿವವ ಶಿವಣ್ಣ ಹಾಗೂ ಗೀತಕ್ಕ ಇಬ್ಬರು ಸಹ ವಿಡಿಯೋ ಒಂದನ್ನು ಪೋಸ್ಟ್ ಮಾಡಿ, ಆರೋಗ್ಯವಾಗಿರುವುದಾಗಿಯೂ, ಡಾಕ್ಟರ್ ಕೆಲವೊಂದು ಟೆಸ್ಟ್ ಗಳನ್ನು ಮಾಡಿ, ಶಿವಣ್ಣ ಈಗ ಕ್ಯಾನ್ಸರ್ ಫ್ರೀ ಎಂದು ಅಧಿಕೃತವಾಗಿ ತಿಳಿಸಿದ್ದಾರೆ ಎಂದು ಸಂತೋಷದ ಸುದ್ದಿಯನ್ನು ಹಂಚಿಕೊಂಡರು. ಇದಾದ ಬಳಿಕ ಕೆಲವು ದಿನಗಳ ಕಾಲ ಶಿವಣ್ಣ ಅವರು ಅಮೆರಿಕಾದಲ್ಲಿಯೇ ವಿಶ್ರಾಂತಿ ಪಡೆದು, ಜನವರಿ 26ರಂದು ಭಾರತಕ್ಕೆ ಮರಳಿ ಬಂದಿದ್ದಾರೆ. ಶಿವಣ್ಣ ಅವರು ಬಂದಿದ್ದು ಅವರ ಅಭಿಮಾನಿಗಳಿಗೆ ತುಂಬಾ ಸಂತೋಷ ಆಗಿದೆ.
ಕ್ಯಾನ್ಸರ್ ಫ್ರೀ ಆಗಿ ಶಿವಣ್ಣ ಬಂದಿದ್ದಾರೆ, ಇನ್ನೇನು ಕೆಲವು ದಿನಗಳ ರೆಸ್ಟ್ ಪಡೆದು, ಮತ್ತೆ ಚಿತ್ರೀಕರಣಕ್ಕೆ ಬರುತ್ತಾರೆ, ಮೊದಲಿನ ಹಾಗೆ ಎನರ್ಜಿ ಇಂದ ಇರುತ್ತಾರೆ ಎನ್ನುವ ಸಂತೋಷ ಸಮಾಧಾನ ಎಲ್ಲರಲ್ಲೂ ಇದೆ. ಜೊತೆಗೆ ಶಿವಣ್ಣ ಅವರು ಈ ವಾರದ ಸರಿಗಮಪ ಕಾರ್ಯಕ್ರಮಕ್ಕೆ ಬಂದು ತಾವು ಚೆನ್ನಾಗಿರುವುದಾಗಿ ತಿಳಿಸಿದ್ದಾರೆ. ಇದೆಲ್ಲವೂ ಒಂದು ಕಡೆಯಾದರೆ, ಅಮೆರಿಕಾ ಇಂದ ಬಂದ ಬಳಿಕ ಮೊದಲ ಬಾರಿಗೆ ಶಿವಣ್ಣ ಹಾಗೂ ಗೀತಕ್ಕ ಇಬ್ಬರು ಸಹ ಕನ್ನಡದ ಹಿರಿಯ ಪತ್ರಕರ್ತರಾದ ಬಿ. ಗಣಪತಿ ಅವರಿಗೆ ಸಂದರ್ಶನ ನೀಡಿದ್ದು, ಇದರಲ್ಲಿ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಕ್ಯಾನ್ಸರ್ ಇರುವ ವಿಚಾರ ಗೊತ್ತಾಗಿದ್ದು ಹೇಗೆ, ಶಿವಣ್ಣ ಈ ವಿಷಯವನ್ನ ತೆಗೆದುಕೊಂಡರು ಎನ್ನುವುದನ್ನು ಗೀತಕ್ಕ ಹಂಚಿಕೊಂಡಿದ್ದು ಅವರು ಹೇಳುವ ಅನುಸಾರ ಶಿವಣ್ಣ ಅವರಿಗೆ ಶುರುವಿನಲ್ಲಿ ಕ್ಯಾನ್ಸರ್ ಇರುವ ವಿಚಾರವನ್ನು ತಿಳಿಸಿರಲಿಲ್ಲ.

ಶಿವಣ್ಣ ಅವರು ಕಳೆದ ವರ್ಷ ಮಾರ್ಚ್ ನಲ್ಲಿ ಕುಟುಂಬದ ಜೊತೆಗೆ ಕೊಲ್ಲೂರು ದೇವಸ್ಥಾನಕ್ಕೆ ಹೋಗಿದ್ದಾಗ, ಅಲ್ಲಿ ಮೂತ್ರದ ಕಲರ್ ಬೇರೆ ಆಗಿರುವ ವಿಚಾರವನ್ನು ಗಮನಿಸಿ, ಟೆಸ್ಟ್ ಮಾಡಿಸಿದಾಗ, ವೈದ್ಯರು ರಿಪೋರ್ಟ್ ನೋಡಿ, ವಿಚಾರ ಈ ರೀತಿ ಇದೆ ಬೇಗ ಟ್ರೀಟ್ಮೆಂಟ್ ತೆಗೆದುಕೊಳ್ಳಿ ಎಂದು ಹೇಳಿ, ಶಿವಣ್ಣ ಅವರಿಗೆ ಈ ರೀತಿ ಆಗಿದೆ ಎಂದು ಅವರಿಗೆ ಬೇಸರವಾಗಿ ಕಣ್ಣೀರು ಹಾಕಿ ಹೊರಟು ಹೋದರಂತೆ. ಬಳಿಕ ಶಿವಣ್ಣ ಅವರ ಅಳಿಯ ದಿಲೀಪ್ ಅವರು ರಿಪೋರ್ಟ್ ನೋಡಿ. ಕ್ಯಾನ್ಸರ್ ಆಗಿದೆ, ಇದಕ್ಕೆ ಟ್ರೀಟ್ಮೆಂಟ್ ಇದೆ ಎಂದು ಹೇಳಿದರಂತೆ. ಮೊದಲಿಗೆ ಒಂದೆರಡು ಆಪರೇಷನ್ ಮಾಡಿಸಿದಾಗ ಕ್ಯಾನ್ಸರ್ ಇಲ್ಲ ಎಂದು ಬಂದು ನಂತರ ಮತ್ತೆ ಇರೋದಕ್ಕೆ ಗೊತ್ತಾಯಿತಂತೆ. ಇಷ್ಟೆಲ್ಲಾ ಆದ ನಂತರ ಶಿವಣ್ಣ ಅವರಿಗೆ ವಿಚಾರ ತಿಳಿಸಿದ್ದಾರೆ ಗೀತಕ್ಕ. ಈ ವಿಷಯ ಗೊತ್ತಾದಾಗ ಶಿವಣ್ಣ ತುಂಬಾ ಅಪ್ಸೆಟ್ ಆಗಿದ್ದರಂತೆ.
ಬಳಿಕ ಎಲ್ಲರೂ ಸೇರಿ ಏನು ಆಗೋದಿಲ್ಲ, ಟ್ರೆಟ್ಮೆಂಟ್ ಇದೆ ಎಂದು ಹೇಳಿ ಶಿವಣ್ಣ ಅವರಿಗೆ ಸಮಾಧಾನ ಮಾಡಿದರಂತೆ. ಬಳಿಕ ಶಿವಣ್ಣ ಸಹ ಧೈರ್ಯ ತಂದುಕೊಂಡರಂತೆ. ಶಿವಣ್ಣ ಅವರು ಒಂದಷ್ಟು ದಿವಸಗಳ ಕಾಲ ಬೆಂಗಳೂರಿನಲ್ಲಿ ಅಗತ್ಯವಿರುವ ಟ್ರೀಟ್ಮೆಂಟ್ ಎಲ್ಲವನ್ನು ತೆಗೆದುಕೊಂಡರು. ಬಳಿಕ ಸರ್ಜರಿಯಾಗಿ ಅಮೆರಿಕಾಗೆ ಹೋಗಿ ಈಗ ಸುರಕ್ಷಿತವಾಗಿ ಬಂದಿದ್ದಾರೆ. ಶಿವಣ್ಣ ಅವರಿಗೆ ಈ ರೀತಿ ಆಗಿದೆ ಅಮೆರಿಕಾಗೆ ಹೋಗುತ್ತಿದ್ದಾರೆ ಎಂದು ಗೊತ್ತಾದ ಕೂಡಲೇ ಅವರ ಅಭಿಮಾನಿಗಳಲ್ಲಿ ಆತಂಕ ಶುರುವಾಗಿತ್ತು, ಶಿವಣ್ಣ ಅವರಿಗೆ ಸರ್ಜರಿ ನಡೆದ ದಿವಸ ಅಭಿಮಾನಿಗಳು ರಾಜ್ಯದ ಹಲವು ದೇವಸ್ಥಾನಗಳಲ್ಲಿ ಪೂಜೆ ಪುನಸ್ಕಾರ ಹೋಮ ಹವನ ಎಲ್ಲವನ್ನು ಮಾಡಿಸಿ, ಶಿವಣ್ಣನಿಗಾಗಿ ಪ್ರಾರ್ಥನೆ ಮಾಡಿದರು. ಎಲ್ಲರ ಪ್ರೀತಿ, ಪ್ರಾರ್ಥನೆ ಶಿವಣ್ಣ ಅವರನ್ನು ಸುರಕ್ಷಿತವಾಗಿ ಕರೆದುಕೊಂಡು ಬಂದಿದೆ.

ಶಿವಣ್ಣ ಈಗಾಗಲೇ ಪ್ರೆಸ್ ಮೀಟ್ ನಡೆಸಿ, ಮಾಧ್ಯಮದವರ ಜೊತೆಗೆ ಇರುವ ವಿಚಾರವನ್ನು ತಿಳಿಸಿ, ತಾವು ಹುಷಾರಾಗಿ ಬಂದಿರುವುದಾಗಿ ಹೇಳಿದ್ದಾರೆ. ಸಣ್ಣ ಪುಟ್ಟ ಕಾರ್ಯಕ್ರಮಗಳಲ್ಲಿ ಸಹ ಪಾಲ್ಗೊಳ್ಳುತ್ತಿದ್ದಾರೆ. ಶಿವಣ್ಣ ಅವರು ಕೆಲವು ದಿನಗಳ ಬಳಿಕ ಶೂಟಿಂಗ್ ನಲ್ಲಿ ಪಾಲ್ಗೊಳ್ಳಲಿದ್ದು, ಅಭಿಮಾನಿಗಳು ಮತ್ತೆ ಶಿವಣ್ಣ ಅವರನ್ನು ನೋಡುವುದಕ್ಕಾಗಿ, ಅವರನ್ನು ಭೇಟಿ ಮಾಡುವುದಕ್ಕಾಗಿ ಕಾಯುತ್ತಿದ್ದಾರೆ. ಇನ್ನು ಕ್ಯಾನ್ಸರ್ ಮುಕ್ತವಾಗಿ ಬಂದಿರುವ ಶಿವಣ್ಣ ಇನ್ನು ಮುಂದೆ ಆರೋಗ್ಯವಾಗಿರಲಿ ಮೊದಲಿಗಿಂತ ಚೆನ್ನಾಗಿರಲಿ, ಸದಾ ಸಂತೋಷವಾಗಿರಲಿ ಎನ್ನುವುದೇ ಅಭಿಮಾನಿಗಳ ಆಸೆ. ಶಿವಣ್ಣ ಅವರ 45 ಸಿನಿಮಾ ಬಿಡುಗಡೆಗೆ ರೆಡಿ ಇದ್ದು, ಆಗಸ್ಟ್ ನಲ್ಲಿ ಬಿಡುಗಡೆ ಆಗಲಿದೆ ಎಂದು ರಿಲೀಸ್ ಡೇಟ್ ಅನೌನ್ಸ್ ಮಾಡಿದೆ ಚಿತ್ರತಂಡ.