ಸದ್ಯದ ಪರಿಸ್ಥಿತಿಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ರೇಣುಕಾಚಾರ್ಯ ಕೊಲೆ ಪ್ರಕರಣದಲ್ಲಿ ಅಂದೆ ದರ್ಶನ್ ರವರು ಪ್ರತಿಯೊಂದು ಹಬ್ಬವನ್ನು ಸಡಗರ ಸಂಭ್ರಮದಿಂದ ವಿಜೃಂಭಣೆಯಾಗಿ ಆಚರಿಸುತ್ತಿದ್ದರು.
ಆದರೆ ಇದೀಗ ಸದ್ಯದ ಪರಿಸ್ಥಿತಿಯಲ್ಲಿ ಜೈಲಿನಲ್ಲಿ ಕತ್ತಲೆ ದೀಪಾವಳಿಯನ್ನು ಆಚರಿಸುತ್ತಿದ್ದಾರೆ. ಅದರ ಜೊತೆಗೆ ತೀವ್ರವಾಗಿ ಕಾಡುತ್ತಿರುವ ಬೆನ್ನು ನೋವನ್ನು ಕೂಡ ಅನುಭವಿಸುತ್ತಿದ್ದರು. ಇದು ಅವರ ಅಭಿಮಾನಿಗಳಿಗೆ ಬೇಸರದ ಸಂಗತಿಯಾಗಿದೆ.

ದರ್ಶನ್ ಯಾವುದೇ ರೀತಿಯ ಸೌಕರ್ಯಗಳು ಕೂಡ ಇಲ್ಲದ ಸೆಲ್ ನಲ್ಲಿ ವಾಸಿಸುತ್ತಿದ್ದಾರೆ. ಆದರೆ ಇದೀಗ ಜೈಲಿನ ವೈದ್ಯಾಧಿಕಾರಿಗಳು ತಪಾಸಣೆ ನಡೆಸಿ ಚಿಕಿತ್ಸೆ ನೀಡಿದ್ದರು ಕೂಡ ಅದು ಫಲಕಾರಿಯಾಗದ ಕಾರಣ ಸಿ ವಿ ರಾಮನ್ ಹಾಸ್ಪಿಟಲ್ ನ ಫಿಜಿಯೋಥೆರಫಿ ತಂಡದಿಂದ ಚಿಕಿತ್ಸೆಯನ್ನು ಕೊಡಲಾಗಿತ್ತು. ಅಗತ್ಯವಿರುವ ವರೆಗೂ ಕೂಡ ವೈದ್ಯರ ತಂಡವನ್ನು ನಿಯೋಜಿಸಲು ಜೊತೆಗೆ ಹೀಟಿಂಗ್ ಬೆಲ್ಟ್ ನೀಡಲು ಕಾನೂನು ಸೇವಾ ಪ್ರಾಧಿಕಾರದ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಎಷ್ಟೇ ಹೆಸರು ಮಾಡಿರುವ ದೊಡ್ಡ ವ್ಯಕ್ತಿಯಾದರೂ ಕೂಡ ತನ್ನ ಒಂದು ಸಣ್ಣ ದುಡುಕಿನ ಸ್ವಭಾವದಿಂದ ಜೀವನ ಅಲ್ಲೋಲ ಕಲ್ಲೋಲವಾಗಿ ಜೈಲಿನಲ್ಲಿ ಇರುವ ಪರಿಸ್ಥಿತಿ ಬಂದಿದೆ. ಅದಕ್ಕಾಗಿ ಜೀವನದಲ್ಲಿ ತಾಳ್ಮೆ ಮುಖ್ಯ. ಇನ್ನು ಮುಂದೆ ಆದರೂ ದರ್ಶನ್ ಜೀವನದಲ್ಲಿ ಬೆಳಕು ಬರಲಿ, ಆರೋಗ್ಯದಲ್ಲಿ ಚೇತರಿಕೆಯಾಗಿ ಸಂತೋಷವಾಗಿರಲಿ ಎಂದು ಹಾರೈಸೋಣ.



