ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಶೋಗಳಲ್ಲಿ ಮಜಾ ಟಾಕೀಸ್ ಕೂಡ ಒಂದು. ಈ ಶೋ ಇಂದ ಜನರಿಗೆ ಸಂಪೂರ್ಣ ಮನರಂಜನೆ ಸಿಗುತ್ತಿತ್ತು, ಕಳೆದ ಒಂದೆರಡು ವರ್ಷಗಳಿಂದ ಮಜಾ ಟಾಕೀಸ್ ಶೋ ನಡೆದಿರಲಿಲ್ಲ. ಆದರೆ ಇಂದು ಕಲರ್ಸ್ ಕನ್ನಡ ವಾಹಿನಿ ವೀಕ್ಷಕರಿಗೆ ಒಂದು ಗುಡ್ ನ್ಯೂಸ್ ಕೊಟ್ಟಿದೆ. ಮಜಾ ಟಾಕೀಸ್ ಮತ್ತೆ ಶುರುವಾಗ್ತಿದೆ ಅನ್ನೋದರ ಹಿಂಟ್ ಕೊಟ್ಟು ಪ್ರೊಮೋ ಕೂಡ ಬಿಡುಗಡೆ ಮಾಡಿದೆ ಕಲರ್ಸ್ ಕನ್ನಡ ಚಾನೆಲ್. ಇದರಿಂದ ಅಭಿಮಾನಿಗಳಿಗೆ ಒಂದು ಕಡೆ ಸಂತೋಷವಾಗಿದೆ, ಆದರೆ ಮತ್ತೊಂದು ಕಡೆ ಬೇಸರ ಕೂಡ ಆಗಿದೆ. ಅಪರ್ಣಾ ಅವರಿಲ್ಲದೇ ಶೋ ನೋಡೋದು ಹೇಗೆ ಅಂತಿದ್ದಾರೆ ಫ್ಯಾನ್ಸ್.

ಮಜಾ ಟಾಕೀಸ್ ನಲ್ಲಿ ಹಲವು ಪ್ರತಿಭಾನ್ವಿತ ಕಲಾವಿದರು ವಿಭಿನ್ನವಾದ ಪಾತ್ರಗಳಾಗಿ ಕಾಣಿಸಿಕೊಳ್ಳುತ್ತಿದ್ದರು. ಶ್ವೇತಾ ಚೆಂಗಪ್ಪ ಅವರು ರಾಣಿಯಾಗಿ, ಮಂಡ್ಯ ರಮೇಶ್ ಅವರು ಮುದ್ದೇಶನಾಗಿ, ವಿ ಮನೋಹರ್ ಅವರು ಭಟ್ಟರಾಗಿ ಹೀಗೆ ಹಲವು ಜನಪ್ರಿಯ ಕಲಾವಿದರು ಇದ್ದರು. ಅವರ ಪೈಕಿ ಎಲ್ಲರಿಗಿಂತ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದ್ದು ನಟಿ ಅಪರ್ಣಾ ಅವರ ಒನ್ ಅಂಡ್ ಓನ್ಲಿ ವರಲಕ್ಷ್ಮೀ ಪಾತ್ರ. ಈ ಪಾತ್ರ ಅಪರ್ಣಾ ಅವರಿಗೆ ದೊಡ್ಡ ಚಾಲೆಂಜ್ ಆಗಿತ್ತು, ಆದರೆ ಅವರು ಅದ್ಭುತವಾಗಿ ನಿಭಾಯಿಸಿಕೊಂಡು ಬಂದಿದ್ದರು. ಭಾರಿ ಜನಪ್ರಿಯತೆಯನ್ನು ಸಹ ಗಳಿಸಿಕೊಂಡಿದ್ದರು.
ವರಲಕ್ಷ್ಮಿ ಪಾತ್ರ ಶುರುವಾಗುವ ಸಮಯದಲ್ಲಿ ಅಪರ್ಣಾ ಅವರು ಹೆಚ್ಚು ಟೀಕೆಗಳನ್ನು ಸಹ ಅನುಭವಿಸಿದ್ದಾರೆ, ಅಪರ್ಣಾ ಅವರ ಕೈಯಲ್ಲಿ ಕಾಮಿಡಿ ಮಾಡೋಕೆ ಆಗುತ್ತಾ ಎಂದು ಹಲವರು ಟೀಕೆ ಮಾಡಿದರೆ, ಇನ್ನು ಕೆಲವರು ಅಪರ್ಣಾ ಅವರಿಗೆ ಇವೆಲ್ಲಾ ಬೇಕಿತ್ತಾ ಎಂದು ಕೂಡ ಹೇಳಿದ್ದುಂಟು. ಎಷ್ಟೇ ಟೀಕೆಗಳು ಎದುರಾದರೂ ಸಹ, ಅಪರ್ಣಾ ಅವರಿಗೆ ವರಲಕ್ಷ್ಮಿ ಪಾತ್ರ ಸಿಕ್ಕಾಪಟ್ಟೆ ಜನಪ್ರಿಯತೆ ತಂದುಕೊಟ್ಟಿತು..ಒಳ್ಳೆಯ ಹೆಸರು, ಕೀರ್ತಿ ಎಲ್ಲವನ್ನು ತಂದುಕೊಟ್ಟಿತು. ಎಲ್ಲರೂ ಅವರನ್ನು ಒನ್ ಅಂಡ್ ಓನ್ಲಿ ವರಲಕ್ಷ್ಮಿ ಎಂದು ಗುರುತಿಸುವುದಕ್ಕೆ ಶುರು ಮಾಡಿದ್ದರಂತೆ. ಈ ಕಾರ್ಯಕ್ರಮಕ್ಕೆ ಕೂಡ ಹೈಲೈಟ್ ಆಗಿದ್ದು ಅವರ ಪಾತ್ರವೇ.
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ವರಲಕ್ಷ್ಮಿ ಪಾತ್ರ ಶುರುವಾಗುವ ಸಮಯದಲ್ಲಿ ಅಪರ್ಣಾ ಅವರು ಹೆಚ್ಚು ಟೀಕೆಗಳನ್ನು ಸಹ ಅನುಭವಿಸಿದ್ದಾರೆ, ಅಪರ್ಣಾ ಅವರ ಕೈಯಲ್ಲಿ ಕಾಮಿಡಿ ಮಾಡೋಕೆ ಆಗುತ್ತಾ ಎಂದು ಹಲವರು ಟೀಕೆ ಮಾಡಿದರೆ, ಇನ್ನು ಕೆಲವರು ಅಪರ್ಣಾ ಅವರಿಗೆ ಇವೆಲ್ಲಾ ಬೇಕಿತ್ತಾ ಎಂದು ಕೂಡ ಹೇಳಿದ್ದುಂಟು. ಎಷ್ಟೇ ಟೀಕೆಗಳು ಎದುರಾದರೂ ಸಹ, ಅಪರ್ಣಾ ಅವರಿಗೆ ವರಲಕ್ಷ್ಮಿ ಪಾತ್ರ ಸಿಕ್ಕಾಪಟ್ಟೆ ಜನಪ್ರಿಯತೆ ತಂದುಕೊಟ್ಟಿತು..ಒಳ್ಳೆಯ ಹೆಸರು, ಕೀರ್ತಿ ಎಲ್ಲವನ್ನು ತಂದುಕೊಟ್ಟಿತು. ಎಲ್ಲರೂ ಅವರನ್ನು ಒನ್ ಅಂಡ್ ಓನ್ಲಿ ವರಲಕ್ಷ್ಮಿ ಎಂದು ಗುರುತಿಸುವುದಕ್ಕೆ ಶುರು ಮಾಡಿದ್ದರಂತೆ. ಈ ಕಾರ್ಯಕ್ರಮಕ್ಕೆ ಕೂಡ ಹೈಲೈಟ್ ಆಗಿದ್ದು ಅವರ ಪಾತ್ರವೇ.

ಮಜಾ ಟಾಕೀಸ್ ಎಂದ ತಕ್ಷಣ ನೆನಪಿಗೆ ಬರುವುದು ಅಪರ್ಣಾ ಅವರೇ. ಈಗ ಮಜಾ ಟಾಕೀಸ್ ಮತ್ತೆ ಶುರುವಾಗುತ್ತಿದೆ, ಆದರೆ ಅಪರ್ಣಾ ಅವರು ಇಲ್ಲ. ಈ ವರ್ಷ ಜುಲೈ ತಿಂಗಳಿನಲ್ಲಿ ಅಪರ್ಣಾ ಅವರು ವಿಧಿ ವಶರಾದರು. ಅವರು ಇನ್ನಿಲ್ಲ ಎನ್ನುವ ಸುದ್ದಿಯನ್ನು ಇಂದಿಗೂ ಕೂಡ ಎಲ್ಲರಿಂದ ಅರಗಿಸಿಕೊಳ್ಳಲು ಸಾಧ್ಯ ಆಗುತ್ತಿಲ್ಲ. ಆ ವೇಳೆಯಲ್ಲೇ ಮಜಾ ಟಾಕೀಸ್ ಶುರುವಾಗುವ ಬಗ್ಗೆ ಮಾಹಿತಿ ಸಿಕ್ಕಿದೆ. ಆದರೆ ಅಪರ್ಣಾ ಅವರು ಇಲ್ಲದೇ ಮಜಾ ಟಾಕೀಸ್ ನೋಡೋದು ಹೇಗೆ ಅಂತಿದ್ದಾರೆ ನೆಟ್ಟಿಗರು. ವರಲಕ್ಷ್ಮಿ ಪಾತ್ರಕ್ಕೆ ಬೇರೆ ಯಾರು ಕೂಡ ಸರಿಹೊಂದುವುದಿಲ್ಲ, ಆ ಪಾತ್ರ ಇಲ್ಲದೇ ಶೋ ಚೆನ್ನಾಗಿ ಬರುವುದು ಇಲ್ಲ ಎನ್ನುತ್ತಿದ್ದಾರೆ.
ಅಪರ್ಣಾ ಅವರು ಇಲ್ಲದ ನೋವು ಒಂದು ಕಡೆ. ಮತ್ತೊಂದು ಕಡೆ ರಾಣಿ ಪಾತ್ರ ನಿರ್ವಹಿಸುತ್ತಿದ್ದ ಶ್ವೇತಾ ಅವರು ಮತ್ತು ಕುರಿ ಪ್ರತಾಪ್ ಅವರು ಇಬ್ಬರು ಸಹ ಜೀಕನ್ನಡ ವಾಹಿನಿಯಲ್ಲಿ ಆಂಕರ್ ಗಳಾಗಿ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಅವರಿಬ್ಬರು ಮತ್ತೆ ಕಲರ್ಸ್ ಕನ್ನಡ ಶೋಗೆ ಬರುತ್ತಾರೋ ಇಲ್ಲವೋ ಎನ್ನುವ ಬಗ್ಗೆ ಇನ್ನೂ ಕೂಡ ಮಾಹಿತಿ ಸಿಕ್ಕಿಲ್ಲ. ಹಲವು ಬದಲಾವಣೆ ಆಗಿರುವ ಕಾರಣ ಈ ಬಾರಿ ಮಜಾ ಟಾಕೀಸ್ ಹೇಗಿರುತ್ತದೆ ಎನ್ನುವ ಕುತೂಹಲ ಅಂತೂ ಇದ್ದೇ ಇದೆ. ಏನೇ ಆದರೂ ಅಪರ್ಣಾ ಅವರಿಲ್ಲದೆ ಮಜಾ ಟಾಕೀಸ್ ನೋಡುವುದಂತೂ ಬಹಳ ಕಷ್ಟ.